Skip to main content

ಶುಕ್ರವಾರ 20 September 2019

ಇತ್ತೀಚೆಗೆ ಸೇರಿಸಿದ ಪುಟಗಳು

ಕೊಳಲು

ಬೆಳಕು

ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು

ಮುಡಿಯಲೇರಿಹ  ನವಿಲ ಗರಿಯ ಮೆರುಗು

ಸೆಳೆವ ನೀಲಕೆ  ಸಿಗ್ಗು ತಂದವನ  ಮೈಬಣ್ಣ

ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ!

 

ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿ, ಪದ್ಯ ೧೨):

ಅಧರಾಹಿತ ಚಾರು ವಂಶ ನಾಳಾಃ

ಮುಕುಟಾಲಂಬಿ ಮಯೂರ ಪಿಂಛಮಾಲಾಃ

ಹರಿನೀಲಶಿಲಾ ವಿಭಂಗ ನೀಲಾಃ

ಪ್ರತಿಭಾಃ ಸಂತು ಮಮ ಅಂತಿಮ ಪ್ರಯಾಣೇ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಎಳೆಯನ ಚೆಲುವು

ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು ಕೊಳಲ ನಾದದಿ ತಂಪನೆರೆಯುತಿಹ ಮೊಗದ ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ ತಿಳಿಸುತಲಿವನ ಸೊಗವ ತುಸುವಾದರೂ! ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಮೊದಲ ಆಶ್ವಾಸ, ಪದ್ಯ ೭) :

 

 

ಕಮನೀಯ ಕಿಶೋರ ಮುಗ್ಧ ಮೂರ್ತೇಃ

ಕಲವೇಣುಕ್ವಣಿತಾರ್ದ್ರಾನನೇಂದೋಃ

ಮಮ ವಾಚಿ ವಿಜೃಂಭತಾಂ ಮುರಾರೇಃ

ಮಧುರಿಂಣಃ ಕಣಿಕಾಪಿ ಕಾಪಿ ಕಾಪಿ

 

-ಹಂಸಾನಂದಿ

 

 

ಚಿತ್ರ ಕೃಪೆ: ಪೂರ್ಣಿಮಾ ರಾಮಪ್ರಸಾದ್ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಕೊಳಲನೂದುವ ಚದುರನಿಗೆ

 ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೊಳಲ ಬಗ್ಗೆ ಒಂದೆರೆಡು ಮಾತು.

ಕೊಳಲು ನುಡಿಸುವುದು ವೃತ್ತಿಯೇ ಆಗಬೇಕೆಂದೇನಿಲ್ಲ. ಹವ್ಯಾಸವೂ ಆಗಬಹುದು.ಬೇಸರ ಆದಾಗ ಖುಷಿಯಾದಾಗ ಹೀಗೆ ಎಲ್ಲಾ ಸಮಯಕ್ಕೂ ಸ್ಯೂಟ್ ಆಗೋತರ ಟೋನ್ ಬದಲಿಸಿ ಕೊಳಲು ನುಡಿಸಬಹುದು. ಏಕಾಂತದಲ್ಲಿ, ಪ್ರತಿದ್ವನಿಸುವ ಕೋಣೆಯಲ್ಲಿ, ಗುಡ್ಡದ ತುದಿಯಲ್ಲಿ, ಸಮುದ್ರದ ಬದಿಯಲ್ಲಿ ಹೀಗೆ ನಿಶ್ಶಬ್ಧ ಸ್ಥಳಗಳಲ್ಲಿ ಕೊಳಲು ನುಡಿಸುವಾಗ ಪ್ರಕೃತಿಯ ಭಾವಕ್ಕೆ ತಕ್ಕಂತೆ ಹೊರಡುವ ನಾದ ಅನುಭವಿಸಿಯೇ ತಿಳಿಯಬೇಕು. ಕೊಳಲ ದ್ವನಿಗೆ ನುಡಿಸದ ಜೀವಿಯೇ ಇಲ್ಲ. ಮಹಾಭಾರತದ ಕೃಷ್ಣನ ಕೊಳಲ ನಾದಕ್ಕೆ ಗೋಪಿಯರು, ದನ ಕರುಗಳು, ಪ್ರಾಣಿ ಪಕ್ಷಿಗಳು ಪ್ರತಿಕ್ರಿಯಿಸುತಿದ್ದದ್ದು ಅತಿರೇಕವಾಗಿಕಂಡರೂ ಅದು ನಿಜ ಕೊಳಲ ದ್ವನಿಯೇ ಅಂತದ್ದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ನಂದನ ಕಂದನಿಗೆ

ಪೊಂಗೊಳಲ ರಂಧ್ರಗಳ

ಚೆಂಬೆರಳ ತುದಿಗಳಲಿ

ಮುಚ್ಚುತಾ ತೆರೆಯುತಿಹನತಿರುತಿರುಗಿ ಮರಮರಳಿ

ತನ್ನುಸಿರ ಗಾಳಿಯನು

ಕೊಳಲಿನಲಿ ತುಂಬುವವನಅರಳಿದ ತಾವರೆಯ

ಹೋಲುವಾ ಕಂಗಳಿಹ

ಚೆಂದದಾ ನಿಲುವಿನವನವಂದಿಸುವೆ ನಾನೀಗ

ಬೃಂದಾವನದಿ ನಲಿವ

ನಂದಗೋಪನ ಕಂದನ

 

 

 
ಸಂಸ್ಕೃತ ಮೂಲ ( ಲೀಲಾ ಶುಕನ ಕೃಷ್ಣಕರ್ಣಾಮೃತದಿಂದ):
 

ಅಂಗುಲ್ಯಗ್ರೈಃ ಅರುಣಕಿರಣೈಃ ಮುಕ್ತಸಂರುದ್ಧರಂಧ್ರಂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪಿಳ್ಳಂಗೋವಿಯ ಚೆಲ್ವ ಕೃಷ್ಣನ...

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕೊಳಲಿಗೆ

ಓ ಕೊಳಲೇ,
ನೀನಿರುವೆ
ನಸುನಗುವ ಮುಕುಂದನ
ಮೊಗದಾವರೆಯ ಬಳಿಯೇ;

ಅವನುಸಿರನೇ ಸವಿದು
ನಲಿವ ನಿನಗೆ
ನಾ ಕೈಯ ಮುಗಿವೆ;
ಬೇಡಿಕೊಳುವೆ.

ಆ ನಂದ ಕಂದನ
ರನ್ನದಾ ತುಟಿಗಳ ಬಳಿಸಾರಿ
ನೀ
ಹೇಗೋ ನನ್ನಳಲನ್ನು
ಅವನ ಕಿವಿಯಲ್ಲಿ
ಮೆಲ್ಲಗುಸಿರೇ!ಸಂಸ್ಕೃತ ಮೂಲ: (ಶ್ಲೋಕ ೧೧ - ಲೀಲಾಶುಕನ ಕೃಷ್ಣಕರ್ಣಾಮೃತ)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕನಸುಗಳ ನನಸಾಗಿಸುತ್ತ - ೩ - ಮಾರ್ನಿಂಗ್ ರಾಗ

 

img_2786

 

ನನ್ನ ಈ ದಿನದ ಬೆಳಗನ್ನ ಸಂಗೀತದಲೆಯಲಿ ತೇಲಿಸಿದ ಕೊಳಲು

img_2771

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಂಸನಾದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೃಷ್ಣನ ಕೊಳಲಿನಾ ಕರೆ

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲದೇ, ಕುಶಲವರು ವೀಣೆಯನ್ನು ನುಡಿಸುತ್ತ, ರಾಮನ ಮುಂದೆ ರಾಮಾಯಣವನ್ನು ಹಾಡಿದರೆಂಬ ಸಂಗತಿ ರಾಮಾಯಣದ ಉತ್ತರಕಾಂಡದಲ್ಲಿದೆ. ಹಾಗಾಗಿ, ನಮ್ಮ ಸಂಗೀತದ ಆದಿಯನ್ನು ಕಡಿಮೆಯೆಂದರೆ ಎರಡುಸಾವಿರ ವರ್ಷಗಳ ಹಿಂದೆ ಎಂದಾದರೂ ಊಹಿಸಬೇಕಾಗುತ್ತೆ. ಏಕೆಂದರೆ, ವಾಲ್ಮೀಕಿರಾಮಾಯಣದ ಪ್ರಕ್ಷಿಪ್ತಭಾಗಗಳೂ (ಬಾಲಕಾಂಡ, ಉತ್ತರಕಾಂಡ) ಸುಮಾರು ಕ್ರಿಸ್ತನ ಕಾಲದ ಆಸುಪಾಸಿನವು ಎಂಬುದು ಗೊತ್ತಿರುವ ವಿಚಾರವೇ.

ಆದರೆ ಪುರಾಣ-ಪ್ರಸಿದ್ಧರಲ್ಲಿ ಸಂಗೀತಗಾರನೆಂದು ಜನಜನಿತವಾಗಿರುವುದು ಕೃಷ್ಣ. ಕೃಷ್ಣನ ಕೊಳಲು ವಾದನದ ಕೌಶಲ ಮಹಾಭಾರತದಲ್ಲಿ (ನನಗೆ ತಿಳಿದ ಮಟ್ಟ್ಟಿಗೆ) ಹೆಚ್ಚಾಗಿಲ್ಲವಾದರೂ, ನಂತರ ಬಂದ ಭಾಗವತ - ಗೀತಗೋವಿಂದದಿಂದ ಹಿಡಿದು ಕಳೆದ ಶತಮಾನದ ಗೋಕುಲನಿರ್ಗಮನ (ಪುತಿನ) ದ ವರೆಗೂ ಹಲವಾರು ಕವಿಗಳು ಕೃಷ್ಣನ ಕೊಳಲಿನ ಕರೆಯನ್ನು ಬಣ್ಣಿಸಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಕೊಳಲು

ಆಯ್ದ ಬರಹಗಳು

Sampada is a community of people passionate about literary activities in Kannada. Sampada is one of the largest Kannada communities on the Internet. ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು.

Powered by Drupal. Technology support by : Saaranga