ಬರಹ

ಎಲ್ಲರಲೂ ಓರ್ವ ಬರಹಗಾರ.

ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳುತ್ತದೆ.

ಪ್ರತಿಯೊಬ್ಬರಲ್ಲೂ ವೈವಿಧ್ಯವುಳ್ಳ ವಿಚಿತ್ರ ಮನಸ್ಸು ಇರುತ್ತದೆ. ಆ ಮನಸ್ಸು ಹಲವು ರೀತಿ ಯೋಚಿಸಿ, ಅಂತೆಯೇ ಹಲವು ರೀತಿಯ ಸಲಹೆ, ಸೂಚನೆ, ಅನಿಸಿಕೆಗಳನ್ನು ನೀಡುತ್ತಿರುತ್ತವೆ. ಆದರೆ, ನಾವು ಆ ಮನಸ್ಸನ್ನು ನಿಯಂತ್ರಿಸಿ, ನಮ್ಮ ಪ್ರತಿಭೆಗಳನ್ನು ಹೊರಹೊಮ್ಮಲು ಬಿಡುವುದೇ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೌವ್ವನದ ಪ್ರೀತಿಗಳು....ಮತ್ತು ಮದುವೆ

 ಇಷ್ಟಬಂದಾಗ ಹೋಗಿ ಇರಬಹುದು...

ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...

ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ!

 

ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದ

ಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!

ಯೌವ್ವನದ ಪ್ರೀತಿಗಳು....ಮದುವೆ ಇದಕ್ಕಿಂತ ಹೊರತಲ್ಲ ಅನ್ನೋ ಸತ್ಯ ಮತ್ತೊಂದೆಡೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ

 ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ. 

 

ನವರಾತ್ರಿಯ ದಿನಗಳು: http://sampada.net/books/5976

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಪದ ಹೊಸ ಮಾದರಿಯಲ್ಲಿ

ಸಂಪದ ಹೊಸ ರೂಪದೊಂದಿಗೆ ರಾಜ್ಯೋತ್ಸವ ಸಮಯದಲ್ಲಿ ಪ್ರಕಟಗೊಂಡಿರುವುದು ಸಂತಸ ತಂದಿದೆ. ಹಲವಾರು ದೇಶಗಳ ಕನ್ನಡ ಅಭಿಮಾನಿಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಪದ ನಿಜಕ್ಕೂ ಪ್ರಶಂಸನಾರ್ಹವಾಗಿದೆ. ಎಷ್ಟೇ ಹೊಸ ಬ್ಲಾಗ್್ಗಳು ಹಾಗೇ ಕನ್ನಡದ ವೆಬ್ ಸೈಟ್್ಗಳು ಬಂದಿದ್ದರೂ ಸಂಪದ ತನ್ನ ಸೊಗಡನ್ನೇ ಉಳಿಸಿಕೊಂಡು ಹೋಗುತ್ತಿರುವುದೇ ಇಂದು ಅದರ ಪ್ರಸಿದ್ದಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹರಿಪ್ರಸಾದ್ ನಾಡಿಗರ ಶ್ರಮ ಉಪಯುಕ್ತವಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ ಬ್ಲಾಗ್ ಗಳಿಗೆ ಜಾಹೀರಾತು ಇಲ್ಲವೆ.

ಇಂಗ್ಲೀಷ್ ಬ್ಲಾಗ್ ಗಳಲ್ಲಿ ಸಾಕಷ್ಟು ಜಾಹೀರಾತು ಕಾಣಸಿಗುತ್ತದೆ.  ಆದರೆ ಕನ್ನಡ ಬ್ಲಾಗ್ ಗಳಿಗೆ ಜಾಹೀರಾತುದಾರರೇ ಇಲ್ಲ. ಗೂಗಲ್ ನವರು ಆಡ್ ಕೊಟ್ಟರೂ, ಮಾರನೆಯ ದಿನವೇ ಅದು ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಉತ್ತರ ಬರುತ್ತದೆ. ಪತ್ರಿಕೆಗಳಿಗಿಂತ ಹೆಚ್ಚು ಪ್ರಭಾವ ಬೀರುತ್ತಿರುವ ಬ್ಲಾಗ್ ಗಳಿಗೆ ಜಾಹೀರಾತಿನ ಕೊರತೆಯಾದರೂ ಏಕೆ ಎನ್ನುವುದು ಅರ್ಥವಾಗುತ್ತಿಲ್ಲ. ಪತ್ರಿಕೆಗಳಲ್ಲಿ ಸಾವಿರಾರು ರೂ ಖರ್ಚು ಮಾಡಿ ಹಾಕಿಸಿದಂತಹ ಜಾಹಿರಾತು ಅದು ಒಂದು ದಿನಕ್ಕೆ ಮಾತ್ರ ಸೀಮಿತ. ಅದೇ ಬ್ಲಾಗ್ ಗಳಲ್ಲಿಯಾದರೆ ದಿನ ನಿತ್ಯವೂ ಓದುಗರು ನೋಡುತ್ತಾರೆ. ಕನಿಷ್ಟ ಶೇ.40 ಭಾಗವಾದರೂ ಆಡ್ ಗೆ ಮೊರೆ ಹೋಗಬಹುದು. ಇದರ ಬಗ್ಗೆ ಆಡ್ ಕಂಪೆನಿಯವರು ಚಿಂತಿಸಿಲ್ಲವೆ. ಎಲ್ಲಾ ಬ್ಲಾಗ್ ಗಳಿಗೂ ಕೊಡಬೇಕಂತಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿಟ್ಟು ಬಂದಾಗ ಮೌನವೇ ಒಳ್ಳೆಯದು

ಕಳೆದ ಒಂದು ವಾರದ ಹಿಂದೆ. ನಮ್ಮ ಮನೆಯಲ್ಲಿನ ಎರಡು ಮೊಬೈಲ್ ಕಳೆದು ಹೋಗಿತ್ತು. ಮನೆಯಲ್ಲಿ ಎಲ್ಲೋ ಇರಬೇಕು ಎಂದುಕೊಂಡು ಮಡದಿ, ಅಪ್ಪ, ನಾನು ಮನೆಯಲ್ಲಿನ ಮೂಲೆ ಮೂಲೆಯನ್ನೂ ಶೋಧಿಸಿದೆವು. ಆದರೆ ಎಲ್ಲೂ ಸಿಗಲಿಲ್ಲ. ದಿನ ನಿತ್ಯ ಮನೆಗೆ ಹಲವರು ಬರುವುದರಿಂದ ಯಾರೋ ತೆಗೆದುಕೊಂಡು ಹೋಗಿರಬೇಕು, ಹೋಗಲಿ ಬಿಡು ಎಂದು ಮಡದಿಗೆ ತಿಳಿಸಿದೆ. ನಿಮಗೆ ದುಡ್ಡು ಹೆಚ್ಚಾಗಿದೆ ಅದಕ್ಕೆ ನೀವು ಹಾಗೆ ಹೇಳ್ತೀರಾ ಅಂದು ಮಂಚದ ಅಡಿಯಲ್ಲಿ, ಸೋಫಾದ ಅಡಯಲ್ಲಿ ಶೋಧದ ಕಾರ್ಯ ಮುಂದುವರೆಸಿದ್ದಳು. ಇದರ ಮಧ್ಯೆ ನನ್ನ ಚಿಕ್ಕ ಮಗಳು ಅಲ್ಲಿದೆ, ಇಲ್ಲಿದೆ ಎನ್ನುತ್ತಿದ್ದಳು. ಅವಳು ಹೇಳಿದ ಕಡೆಯೆಲ್ಲಾ ನೋಡಿದ್ದಾಯಿತು. ಅಂತೂ ಎಲ್ಲೂ ಸಿಗಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (11 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೈ ಎಂದ ಬಾಲಕ ಅಂಗವಿಕಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (13 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೋ ಹತ್ಯೆ ಒಂದು ಇಶ್ಯೂ ಆಗಬಾರದು

ಸನಾದಿಕಾಲದಿಂದಲೂ ಗೋವನ್ನು ಪೂಜಿಸುತ್ತಿರುವ ಹಿಂದೂಗಳು, ಆರಾಧ್ಯದೈವವನ್ನಾಗಿಸಿಕೊಂಡಿದ್ದಾರೆ. ಅದರ ದೇಹದಲ್ಲಿ ನೂರಾರು ದೇವತೆಗಳು ಇದ್ದಾರೆ ಎನ್ನುವ ನಂಬಿಕೆ. ಅದರ ಸಗಣಿ, ಗಂಜಲ ಎಲ್ಲಾ ಕೂಡ ಉಪಯುಕ್ತ.ಇದು ಇವತ್ತಿನ ವಿಜ್ಞಾನ ಯುಗದಲ್ಲಿ ಪ್ರೂವ್ ಆಗಿದೆ ಕೂಡ. ಇದೀಗ ಸಾಕಷ್ಟು ಔಷಧಿಗಳಿಗೆ ಬಳಕೆಯಾಗುತ್ತಿದೆ. ವಿದೇಶಿಯರು ಕೂಡ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಗೋ ಹತ್ಯೆ ಅನ್ನುವುದು ಇಂದು ನೆನ್ನೆಯದಲ್ಲ. ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇದೆ. ಕೆಲವರು ರಾಜಾರೋಷವಾಗಿ ತಿಂದರೆ, ಮತ್ತಿತರರು ಕದ್ದು ತಿನ್ನುತ್ತಲೇ ಇದ್ದಾರೆ. 1964r ಕಾಯ್ದೆಯ ಪ್ರಕಾರ ಗೋವುಗಳನ್ನು ಹಿಂಸಿಸಿದರೆ 25ಸಾವಿರ ದಂಡ ಹಾಗೂ 7ವರ್ಷ ಸಜೆ ಎಂದು ಇದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೋ ಹತ್ಯೆ ಕೇವಲ ಇಶ್ಯೂ ಆಗಬಾರದು

ಎರಡು ಬಾರಿ ಪ್ರಕಟವಾಗಿದೆ. ಹಾಗಾಗಿ ಇದನ್ನು ಅಳಿಸಿರುತ್ತೇನೆ. ಕ್ಷಮೆ ಇರಲಿ.

ಮತ್ತೊಂದು ಲೇಖನವಿದೆ ಓದಿ. 10 ಪದಗಳು ಇರಬೇಕು ಎನ್ನುವ ಕಾರಣಕ್ಕೆ ಮತ್ತಷ್ಟು ಸೇರಿಸಿದ್ದೇನೆ.

ಸುರೇಶ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮೂಹ ಸನ್ನಿ

ಇದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಅದಕ್ಕೆ ಮನೋ ವೈದ್ಯರ ಮಿತ್ರರಿಂದ ಕೆಲವು ಕಾರಣಗಳು ಸಿಕ್ಕಿದೆಯಾದರೂ ಸಂಪದದಲ್ಲಿ ಮತ್ತಷ್ಟು ವಿಷಯಗಳು ದೊರೆಯಬಹುದೆಂಬ ಭರವಸೆ ಇದೆ. ಕೆಲವು ದೇವಸ್ಥಾನಗಳಲ್ಲಿ ದೆವ್ವಗಳನ್ನು ಬಿಡಿಸುವಂತಹ ಕಾರ್ಯ ನಡೆಯುತ್ತಲೇ ಇರುತ್ತದೆ. ದೆವ್ವ ಬಂದಿದೆ ಎಂದು ಹುಚ್ಚುಚ್ಚಾಗಿ ಆಡುವವರ ಮೇಲೆ ಬೂದಿ ಎರುಚುವುದು, ಬೇವಿನ ಸೊಪ್ಪಿನಲ್ಲಿ ಹೊಡೆಯುವುದು, ಕೊಡಗಟ್ಟಲೆ ತಣ್ಣೀರು ಹಾಕುವುದು ನಡೆಯುತ್ತಿರುತ್ತದೆ. ಆದರೆ ಅದೇ ಸಮಯದಲ್ಲಿ ದೇವಸ್ಥಾನದ ಆವರಣದಲ್ಲೇ ಇದ್ದಂತಹ ಕೆಲವರು ಕೂಡ ಈ ತರಹ ಸನ್ನಿಗೆ ತಕ್ಷಣವೇ ಒಳಗಾಗಿ ಅವರ ಹುಚ್ಚಾಟಗಳು ಆರಂಭವಾಗಿರುತ್ತದೆ. ಮತ್ತದೇ ಅದೇ ರೀತಿ ಅವರಿಗೆ ಹೊಡೆಯುವುದು, ಬಡೆಯುವುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇದುವೆ ಜೀವನನಾ........

ಕೆಲವೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇನ್ನಿಲ್ಲದ ಮುತುವರ್ಜಿ. ಆದರೂ ಆರೋಗ್ಯ ಹದಗೆಡತ್ತೆ. ಅದೇ ರಸ್ತೆಯ ಬದಿಯಲ್ಲಿನ ಮಕ್ಕಳ ಪೋಷಕರಿಗೆ ದಿನದ ಕೂಳು ನೋಡಿದರೆ ಸಾಕು ಎನ್ನುವಂತಿರುತ್ತಾರೆ. ಅವರ ಮಕ್ಕಳು ಎಲ್ಲೆಲ್ಲೋ ಬಿದ್ದು ಹೊರಳಾಡಿ, ಗಲೀಜಾಗಿದ್ದರೂ ಯಾವುದೇ ಖಾಯಿಲೆ ಕಸಾಲೆ ಹತ್ತಿರ ಸುಳಿದಿರುವುದಿಲ್ಲ. ಹಾಗೇ ವಿದ್ಯಾಭ್ಯಾದ ಕನಸು ಹೊತ್ತು ಮಕ್ಕಳಿಗೆ ಇನ್ನಿಲ್ಲದಂತೆ ಮನೆ ಪಾಠ, ನೂತನ ಪುಸ್ತಕಗಳು, ಓದುವಾಗ ಹಾಲು, ಹಣ್ಣು, ಓದಲಿಕ್ಕೆ ಇನ್ನಿಲ್ಲದ ವ್ಯವಸ್ಥೆ ಕಲ್ಪಿಸಿದರೂ ಮಗ ಪರೀಕ್ಷೆಯಲ್ಲಿ ಢುಂಕಿ. ಅದೇ ಮನೆಯಲ್ಲಿ ಯಾವುದೇ ಕೇರ್  ತೆಗದುಕೊಳ್ಳದ ವಿದ್ಯಾರ್ಥಿ ಡಿಸ್ಟಿಂಕ್ಷನ್.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸತಾಗಿತ್ತು. ಯಾವುದೇ ಪ್ರವಾಸದಲ್ಲಾಗಲಿ, ಅಥವಾ ಸಭೆ ಸಮಾರಂಭಗಳಲ್ಲಾಗಲಿ ನಮಗೆ ಮೊದಲು ಯಾರ ಪರಿಚಯವೂ ಇಲ್ಲದಿದ್ದರೂ ಅಲ್ಲಿಂದ ಹೊರ ನಡೆವಾಗ ಯಾರದ್ದಾದರೂ ಪರಿಚಯ ಆಗಿರುತ್ತದ್ದೆ.

ನನಗೆ ನಿನ್ನ ಪರಿಚಯವೂ ಹಾಗೇ ಆದದ್ದು. ನಾವೆಲ್ಲಾ ಅಂದು ರಾತ್ರಿ ಬೆಂಗಳೂರಿನಿಂದ ಹೊರಟು ನಮ್ಮ ಪ್ರವಾಸದ ತಾಣದೆಡೆಗೆ ತೆರಳುವಾಗ ನೀನಾರೋ ನಾನಾರೋ... ಆ ಬಸ್ಸಿನ ಒಂದು ಮೂಲೆಯಲ್ಲಿ ನಾನು ಕುಳಿತಿದ್ದರೆ ನೀನೆಲ್ಲಿದ್ದೆಯೋ ನನಗಂತೂ ನೆನಪಿಲ್ಲ. ನಾನು ನನ್ನಷ್ಟಕ್ಕೆ ಕಿಟಕಿಯಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಕುಳಿತಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಲ್ಕನೆಯ ವರ್ಷ

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ.

ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು ಒಳ್ಳೆಯವು. ಕೆಲವು ಕೆಟ್ಟವು. ಅಂತಹುದರಲ್ಲಿ ಮತ್ತೊಂದು ಗಲಭೆ ನಮ್ಮೂರಿನಲ್ಲಿ ನಡೆಯುತ್ತಿದೆಯಂತೆ. ಕೇಳಿದೊಡನೆಯೇ ಮನೆಗೆ ಮಾತನಾಡಿ, ಏನೂ ತೊಂದರೆಯಿಲ್ಲ ಅನ್ನುವುದನ್ನು ತಿಳಿಯುವವರೆಗೆ ಮನಸ್ಸು ತಡೆಯಲೇ ಇಲ್ಲ. ಇಂತಹ ಘಟನೆ ಹಿಂದೆಯೂ ಆಗಿದ್ದು, ನೋಡಿದ್ದು, ಯಾವುದೇ ತಪ್ಪು ಇಲ್ಲದವರೇ ತೊಂದರೆಗೊಳಗಾಗಿದ್ದು ಎಲ್ಲ ನೋಡಿದ್ದೇನೆ. ಇವಕ್ಕೆ ಕೊನೆ ಎಲ್ಲಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬರೆಯದವರ ಮನದ ತಲ್ಲಣ!

ಬರೆಯೋಣು ಅಂತ ಹೊರಟಾಗ ಏನೂ ಮನಸ್ಸಿಗೆ ಬಾರದೆ ಮತ್ತೆ ಯಾವಾಗಲೋ ಪುಸ್ತಕ ಹಿಡಿದು ಕುಳಿತಾಗ, ಫೋನಿನಲ್ಲಿ ಮಾತನಾಡುತ್ತಿರುವಾಗ ತಟ್ಟನೆ ಹೊಳೆಯುವುದು. ಆಗ ಬರೆಯಲಾಗದೆ ನಂತರಕ್ಕಿಟ್ಟು ಕೊನೆಗೆ ಏನೂ ಬರೆಯದೇ ಇರುವುದು ಒಂದು ವಿಚಿತ್ರ ರೀತಿಯದೇ ಆದ ತಮಾಷೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬರೆಯಲು ವಿಷಯವಿಲ್ಲೆಂಬವರಿಗೆ!

ವಿಷಯವಿಲ್ಲವೆಂದೆನ ಬೇಡಿ ಸ್ವಾಮಿ, ವಿಷಯಗಳು ಸಾಕಷ್ಟಿವೆ
ನಿಮ್ಮ ಕಾರ್ಯಬಾಹುಳ್ಯದಿಂದ ಈಗ ಪುರುಸೊತ್ತಿಲ್ಲದಿರಬಹುದು

ಕೆಲಸವೆಷ್ಟೇ ಇದ್ದರೂ ಬರೆಯಬೇಕೆಂದಾಗ ಬರೆದೇ ಬರೆಯುವಿರಿ
ಹವ್ಯಾಸಗಳೇ ಹಾಗೆ ಸ್ವಾಮಿ, ನಮ್ಮನ್ನರಿವಿಲ್ಲದೇ ಬಂಧಿಸಬಹುದು

ಕೈಯಲ್ಲಿ ಕಾಸಿಲ್ಲದಿದ್ದರೂ ಕುಡುಕ ಕುಡಿಯದೇ ಉಳಿಯಲಾರ
ಬರೆಯುವ ಗೀಳು ಅಂಟಿಸಿಕೊಂಡವ ಬರೆಯದೇ ಇರಲಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಮಂತ್ರಣ

ನಾನು ಈ ಹಿಂದೆ ಬರೆದ ಒಂದು ಪುಟ್ಟ ಬ್ಲಾಗ್ ಪುಟಕ್ಕೆ ಪ್ರತಿಕ್ರಿಯೆ ಬರೆದು ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಆ ಪ್ರತಿಕ್ರಿಯೆಗಳನ್ನು ಓದುವಾಗ ಆದ ಖುಷಿ, ತದನಂತರ ಅದಕ್ಕೆ ಪ್ರತಿಕ್ರಿಯೆ ಬರೆಯಲು ಸಮಯ ಮಾಡಿಕೊಳ್ಳಲಾಗಲಿಲ್ಲ ಎಂಬ ಅಳುಕಿನ ನಡುವೆ ಕೆಲವರು ಮುಂದಿಟ್ಟ ವಿಚಾರಗಳನ್ನು ಓದುವಾಗ, ಕೇಳುವಾಗ - "ಹೌದಲ್ವ, ಈ ಬಗ್ಗೆ ಯೋಚನೆ ಕೂಡ ಮಾಡಲಿಲ್ವಲ್ಲ" ಅನಿಸಿದ್ದುಂಟು.

ಅದರಲ್ಲಿ ಒಂದು ವಿಚಾರ - ಒಬ್ಬರು ಫೋನಿನಲ್ಲಿ ತಿಳಿಸಿದ್ದು, "ಎಂಥ ಒಳ್ಳೆಯ ಚಿತ್ರ ಹರಿ. ಎಷ್ಟು ಚೆನ್ನಾಗಿ ಏನೆಲ್ಲ ಬರೆಯಬಹುದಿತ್ತು" ಎಂಬುದು. ಚಿತ್ರ ಅಷ್ಟು ಚೆನ್ನಾಗಿದೆ ಎಂದು ನನಗನಿಸಲಿಲ್ಲವಾದರೂ ಬೇರೆ ರೀತಿಯಲ್ಲಿ ಬರೆಯಬಹುದಿತ್ತು ಎನ್ನುವ ಮಾತು ಹೌದೆನಿಸಿತು. ನನಗೆ ಮಾತ್ರ ಆ ಸಮಯ ಬೇರೆ ರೀತಿ ಬರೆಯುವುದಕ್ಕೆ ಆಗುತ್ತಿರಲಿಲ್ಲ. ಈಗಲೂ ಬಹುಶಃ ಆಗಲಿಕ್ಕಿಲ್ಲ. ಆದರೆ ನಾನಲ್ಲದಿದ್ದರೂ ಬೇರೆ ಯಾರಾದರೂ ಬೇರೆ ರೀತಿ ಬರೆಯಬಹುದು ಎನಿಸಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅರಿತು ಸಿರಿ ಕನ್ನಡವನಾಡು ಮಂಕುತಿಮ್ಮ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಚ್ಚಳವಿಲ್ಲದ ಪೆನ್ನು

ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೆವ್ವ..............ದೆವ್ವ....................!

ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬರಹ