malenadiga

ಮರಳಿ ನೆನಪಿಗೆ..

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ ನನ್ನ ಕೆಲಸದ ರೀತಿ ರಿವಾಜುಗಳನ್ನರಿತ ನನ್ನ ಮ್ಯಾನೇಜರ್ ನನಗೆ ರಜೆ ಅಂತ ಕೊಡದಿದ್ದರೂ, ಇಂಟರ್ನೆಟ್ ನೆಟ್ವರ್ಕ್ ಇರುವಂಥ ಜಾಗದಿಂದ ಕುಳಿತು ಕೆಲಸ ಮಾಡಲು ಅನುಮತಿ ನೀಡಿದ್ದಳು. ಒಂದೇ ವಾರದಲ್ಲಿ ಮೂರು ಮದುವೆ ಇದ್ದ ಕಾರಣ ನಾಲ್ಕು ದಿನಗಳ ಮುಂಚೆಯೇ ನಮ್ಮೂರ ಕಡೆ ಧಾವಿಸಿದ್ದೆ. ಮಾವನ ಮನೆ ಇರುವುದು ತೀರ್ಥಹಳ್ಳಿಯಲ್ಲಿ. ಅಲ್ಲೇ ಕುಳಿತು ಸಂಜೆಯ ನಂತರ ಅಮೇರಿಕ ಕಚೇರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿನಿಮಾ ಓದುವುದು ಹೇಗೆ? ಸಂವಾದ ಶಿಬಿರದ ಸುತ್ತಾ

ಸಿನಿಮಾ ಓದುವುದು ಹೇಗೆ? ದೃಶ್ಯ ಮಾಧ್ಯಮವಾದ ಸಿನಿಮಾವನ್ನು ನೋಡುವುದರ ಬದಲು ಓದುವುದು ಎಂಬ ಶೀರ್ಷಿಕೆ ವಿಚಿತ್ರ/ವಿಶಿಷ್ಟ ಎನಿಸಿದ್ದು ಸಹಜ. ಬಹುಶಃ ಕಾವ್ಯಮಯವಾಗಿ ಹೇಳುವಾಗ ಕಣ್ಣಿನಲ್ಲೇ ಅಳೆದ, ಓದಿದ ಎನ್ನುವಂತೆ ಕಣ್ಣಿಗೆ ಕಂಡದ್ದನ್ನು ತಿಳಿಸುವುದಕ್ಕೆ ಹೀಗೆ ಕರೆದಿರಬಹುದು ಎಂದೆನಿಸಿದ್ದು ಸಂವಾದ ಡಾಟ್ ಕಾಂನ ಇತ್ತೀಚಿನ ಕಾರ್ಯಕ್ರಮಕ್ಕೆ ಹೋಗುವ ಮುಂಚೆ.

ಕಾರ್ಯಕ್ರಮಕ್ಕೆ ಅಪರ ವೇಳೆಯಲ್ಲೇ ಎಂಟ್ರಿ ಕೊಟ್ರೂ ಊಟೋಪಚಾರಕ್ಕೆನೂ ತೊಂದರೆಯಿರಲಿಲ್ಲ. ಹಾಗೆ ನೋಡಿದರೆ ಎರಡೂವರೆ ದಿನದಲ್ಲಿ ಏನನ್ನೋ ಕಲಿಯುವ ಹಸಿವು ಇಟ್ಟುಕೊಂಡು ಬಂದಿದ್ದ ಶಿಬಿರಾರ್ಥಿಗಳ ಹಸಿವು ಇಂಗಿಸುವಲ್ಲಿ  ಸಂವಾದ ಡಾಟ್ ಕಾಂನ ಪ್ರಯತ್ನ ಒಂದಷ್ಟು ಫಲ ಕೊಟ್ಟಿದೆ ಎಂದೇ ಹೇಳಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು'

'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು' ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಕಾಳಜಿ ಕಡಿಮೆಯಾಗಿರುವುದು ಕಂಡು ಬರುತ್ತದೆ.

ಕೇವಲ ಪದವಿ ಸಂಪಾದನೆಗಾಗಿ ಓದುವ ವಿದ್ಯಾರ್ಥಿಗಳು, ಹಣದ ಮೋಹಕ್ಕೋ ಅಥವಾ ಒಣಪ್ರತಿಷ್ಠೆಗಾಗಿಯೊ ಪಾಠ ಮಾಡುವ ಶಿಕ್ಷಕರು ಹೆಚ್ಚಾಗಿದ್ದಾರೆ. ಇವೆಲ್ಲದರ ನಡುವೆ ಬದಲಾವಣೆಯೇ ಕಾಣದ ಪಠ್ಯಕ್ರಮ. ಒಟ್ಟಿನಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆ ಅಧೋಗತಿ ಕಾಣುತ್ತಿರುವುದಂತೂ ಸತ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
Subscribe to malenadiga