ಮನುಜ ಕುಲ ಅಂತವಾಗದಿರಲಿ..!

5

ಮನುಷ್ಯನಾಗಿ ಅಮಾನುಷವಾಗಿ ಹುಟ್ಟುಗಮ್ಯವನ್ನು ಮರೆತು ಸಾವಿನ ನಡೆಗೆ ಮುನ್ನಡೆಯುವ ಈ ಮನುಜ ಕುಲಕ್ಕೆ.. ಏನು ಹೇಳಲಿ... ನಾನೇನು ಹೇಳಲಿ..!

ನೀತಿ, ನ್ಯಾಯ, ಧರ್ಮ, ಸತ್ಯಗಳನ್ನು ಮರೆಮಾಚಿ ಸ್ವಾರ್ಥ, ಕೋಪ, ಅಸೂಯೆ, ಸಾರ್ವಭೌಮತ್ವಗಲಿಗಾಗಿ ತಾನೊಂದು ಬುದ್ಧಿಜೀವಿಯೆಂದು ಮರೆತು ನಿರ್ಜೀವಿಯಾಗಿ ಬಾಳುತ್ತಿರುವ ಈ ಮನುಜ ಕುಲಕ್ಕೆ.. ಏನು ಹೇಳಲಿ..ನಾನೇನು ಹೇಳಲಿ..!

ಕುಲ, ಜಾತಿ, ಧರ್ಮ, ಭೇದಗಳನ್ನು ಮರೆತು ಪ್ರೀತಿ, ವಿಶ್ವಾಸ, ನಂಬಿಕೆ, ತ್ಯಾಗಗಳನ್ನು ಬೆಳೆಸಿದರೆ... ನೀ 

ಮನುಷ್ಯನಾಗಲ್ಲವೇ, ಈ ಮನುಜ ಕುಲಕ್ಕೆ ಆದರ್ಶ ಪುರುಷನಾಗಲ್ಲವೇ.. ಏನು ಹೇಳಲಿ..ಮುಂದೇನು ಹೇಳಲಿ...!

ಹೆಣ್ಣು, ಹೊನ್ನು, ಮಣ್ಣುನ್ನು ತೊರೆದು, ಕಾಮ, ಕ್ರೋದ, ದ್ವೇಷಗಳನ್ನು ಜಯಸಿದರೆ...ನೀ

ಯುಗಪುರುಷನಾಗಲ್ಲವೇ.. ಈ ಮನುಜ ಕುಲಕ್ಕೆ ವರ್ಷಗಳ ಹರ್ಷ ತರುವವನಾಗಲ್ಲವೇ...!

ಏನು ಹೇಳಲಿ... ಮುಂದೇನು ಹೇಳಲಿ...ಮನುಜ ಕುಲವು ತನ್ನಲ್ಲಿ ತಾನೇ... ಅಂತವಾಗದಿರಲಿ..!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):