ಮರೆಯದಿರಿ ಕರುಳು ಬಳ್ಳಿ

0

ಅವ್ವ ನಿನ್ನ ಮರೆತುಬಿಟ್ಟೆ
ಪ್ರೀತಿನಂಬಿ ನಾನು ಕೆಟ್ಟೆ
ನಿನ್ನ ನೆನೆದು ಕಣ್ಣೀರಿಟ್ಟೆ
ತಿಳಿದಾಯಿತೇ ಈ ಪ್ರೀತಿ ಬಣ್ಣದ ಚಿಟ್ಟೆ......

ನೆಲಕ್ಕೆ ಹೆಜ್ಜೆ ತಾಕದಂತೆ
ಎತ್ತಿ ಹಾಡಿಸಿ ಮುದ್ದಿಸಿದ್ದೆ
ನೀಗಿಸಿದ್ದೇ ಅಪ್ಪನಿಲ್ಲದ ಕೊರತೆ
ಭೀತಿ ಓಡಿಸಿ ಜೊತೆಯಲ್ಲಿದ್ದೆ.....

ನಾನೇ ನಿನ್ನ ಜಗವೆಂದೇ
ಹುಟ್ಟುವ ಸೂರ್ಯ ನನ್ನ ಮೊಗವೆಂದೇ
ಮಗ ನಿನ್ನ ನೋಡೇ ಕಣ್ಣು ತೆರೆಯಬೇಕು
ನೀನು ದೂರವಾದಾಗ ಕಣ್ಣು ಮುಚ್ಚಬೇಕು......

ಬೆಳೆದು ನಿಂತ ಮೇಲೆ
ಬೀಸಿತ್ತು ಪ್ರೇಮದ ಅಲೆ
ಪ್ರೀತಿ ಒಂದಾಗಲು ಬಿಡಲ್ಲಾ ಯಾರು
ಬಿಟ್ಟುಬಿಡೋಣ ಅಂದುಕೊಂಡು ಊರು.....

ಅಮ್ಮ ಹೋಗಿ ಮಲಗಲು
ನಾ ಹೋರಬಂದು ಮುಚ್ಚಿದೆ ಬಾಗಿಲು
ಹೆಜ್ಜೆ ಹಾಕಿದ್ದೇ ಸರಸರ
ಕೇಳಿಸದಾಯ್ತೇ ಅಮ್ಮನ ಸ್ವರ.....

ಬಸ್ ನಿಲ್ದಾಣದಲ್ಲಿ ಕಾದೆ
ಎದುರಿಗೆ ಮುಗ್ಧ ಮಗುವ ನೋಡಿದೆ
ಅಮ್ಮ ತುಂಬಾ ಚಳಿ ಎನಲು
ಮಗುವಿಗೆ ಹೊದ್ದಿಸಿದಳು ತಾನೊದ್ದ ಶಾಲು.....

ಅಳುತ್ತಿತ್ತು ಒಂದು ಮಗು
ಎತ್ತಿ ಮಗುವ ಹಾಲನುಣಿಸಿ
ತರಿಸಿದಳು ಮಗುವಿಗೆ ಚಂದ್ರನ ನಗು
ಅಲ್ಲೇ ಮೂಲೆಯಲ್ಲಿ ವಿರಮಿಸಿ.....

ಹೊತ್ತು ಜಾರಿತ್ತು
ಬೆಳಕು ಹರಿದಿತ್ತು
ಮೋಸದ ಪ್ರೀತಿ ಬಯಲಾಗಿತ್ತು
ಅಮ್ಮನ ನುಡಿಗಳು ನೆನಪಾಗಿತ್ತು.....

ನಿನ್ನ ನೋಡದ ಮೋಗ
ನಾ ಬಿಟ್ಟುಬಿಡುವೆ ಜಗ
ಹೆಜ್ಜೆ ಮನೆ ಕಡೆ ಹಾಕಿತ್ತು
ಅಮ್ಮನ ಕಣ್ಣು ಮುಚ್ಚಿತ್ತು......

ನಂಬಿ ಯಾವುದರ ಹಿಂದೆ ಹೋಗದಿರು
ಇರುವುದರಲ್ಲೇ ಸುಖವಾಗಿರು
ಮರೆಯದಿರು......

*✍ಐಎಸ್ ಬಬಲೇಶ್ವರ*

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.