ಮಳೆಯ ಮೊದಲ ಹನಿಯಲ್ಲಿ ಮೂಡಿದ ಮೋಹ ..

4
ಅಂದು ನಾವು ಗೆಳೆಯರೆಲ್ಲರು ಹೋಟೆಲ್ ವೊಂದರಲ್ಲಿ ಕುಳಿತಿದ್ದೆವು ,ಆ ಕಡೆಯಿಂದ ವಿಶ್ವ ಓಡಿ ಬಂದ ನಾನು ಜೋಕ್ ನಿಂದ ಸವಕಾಶ ತಂದೆ ಇಲ್ಲಿ ಯಾರು ವೈಕುಂಠಕ್ಕೆ ಹೋಗಿಲ್ಲಾ ಎಂದೆ ನಂತರ ವಿಶ್ವನಿಗೆ ಸಂತೈಸಿ ಕೂಡಿಸಿ ವಿಚಾರಿಸಿದೇವು ಎಲ್ಲರು ಕುತುಹಲಕಾರಿಯಾಗಿ ಅವನ ಪ್ರೇಮ ಕಥೆ ಕೇಳಿದೇವು. ಅದರ ಸಾರಾಂಶ ಇಲ್ಲಿದೆ. “ ವಿಶ್ವ ತುಂಬಾ ಓದಬೇಕು, ಸರಕಾರಿ ನೌಕರಿ ಮಾಡಬೇಕು, ಎನ್ನುವ ಹಂಬಲದ ಹುಡುಗ ಅವನ ಮನೆಯಲ್ಲಿ ತಂದೆ ತಾಯಿ ಅಕ್ಕ ತಮ್ಮ ಇದ್ದರು.ವಿಶ್ವ ಒಂದು ತುಂಬಿದ ಮನೆಯ ಮಗನಾಗಿದ್ದು ಅಪ್ಪ ನಿವೃತ್ತ ಶಿಕ್ಷಕ ಅಕ್ಕ ಕೂಡಾ ಈಗಾಗಲೇ ಒಂದು ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅಮ್ಮ ಗೃಹಿಣಿ ತನ್ನ ಮಗ ಚಿಕ್ಕಂದಿನಿಂದಲೂ ಚೆನ್ನಾಗಿ ಓದಬೇಕು, ಬರೆಯಬೇಕು, ಯಾವಾಗಲು ಮೊದಲನೆ ಸ್ಥಾನದಲ್ಲಿ ನನ್ನ ಮಗ ಇರಬೇಕು ಎನ್ನುವ ಆಸೆಯವರು. ಹಾಗಯೆ ಮಗ ಕೂಡಾ ಚೆನ್ನಾಗಿ ತಂದೆ ತಾಯಿಯ ಆಸೆಯಂತೆ ಓದಿದ ಆತನಿಗೆ ಮೈಸೂರಿನ ಪ್ರತಿಷ್ಠಿತ ಇಂಜಿನಿಯರಿಂಗ ಕಾಲೇಜಿನಲ್ಲಿ ಸೀಟ್ ಸಿಕ್ಕಿತ್ತು. ಸರಿಯಾಗಿ ಓದತೊಡಗಿದ. ಇಲ್ಲಿಯವರೆಗೂ ಅರಾಮವಾಗಿ ಓದಿದ ವಿಶ್ವ ಆಕಸ್ಮಿಕವಾಗಿ ಈ ಕಾಲೇಜಿಗೆ ಬಂದಮೇಲೆ ವಿಚಿತ್ರವಾಗಿ ಆಡತೊಡಗಿದ. ಆತ ಕಾಲೇಜಿಗೆ ಹೋದ ಮೊದಲನೆ ದಿನವೆ ಅದೇ ಕಾಲೇಜಿಗೆ ಆಗತಾನೆ ಸೇರಿದ ಹುಡುಗಿ ಸೌಮ್ಯ ಅವಳೊಂದಿಗಿನ ಪ್ರೇಮಕಥೆ ಈ ಸಾಹೆಬರದ್ದು. ಇನ್ನು ಸೌಮ್ಯ ಸದ್ಗುಣ ಸಂಪನ್ನೆ ಅವಳದು ಬಡಕುಟುಂಬವೆ ಆಗಿದ್ದರು ತಕ್ಕಮಟ್ಟಿಗೆ ಬದುಕುವ ಸಾಮರ್ಥ್ಯದ ಕುಟುಂಬವಾಗಿತ್ತು. ತಂದೆ ತಾಯಿಗೆ ಒಬ್ಬಳೆ ಮಗಳಾದ ಸೌಮ್ಯ ಅವರ ಬಯಕೆಯಂತೆ ಮೈಸೂರಿನ ವಿಶ್ವ ಓದುತ್ತಿರುವ ಕಾಲೇಜಿನಲ್ಲಿ ಓದತೊಡಗಿದಳು. ಆಕೆ ಮುಗ್ದೆ, ಮೃದು, ನಯ ವಿನಯದ ಹುಡುಗಿಯಾಗಿದ್ದಳು. ವಿಶ್ವ ಮತ್ತು ಸೌಮ್ಯ ಒಂದೆ ಕಾಲೇಜ ಆದರು ಇಬ್ಬರು ಬೇಟಿಯಾದ ಸಂದರ್ಭವೆ ವಿಚಿತ್ರವಾದದ್ದು. ಅದನ್ನು ಹೇಳಲೇಬೇಕು. “ ಕಾಲೇಜಿನ ಮೊದಲನೆ ದಿನಗಳು ಸೌಮ್ಯ ಇದು ಮೊದಲನೆಯ ದಿನ ಬೇಗಾ ಹೋಗಬೇಕು ಅಂತಾ ಅಟೋ ಹತ್ತುತ್ತಾಳೆ. ಅಟೋ ಹತ್ತಿದ ಸೌಮ್ಯ ಅಟೋಚಾಲಕನಿಗೆ ಹೀಗೆ ಹೇಳಿದಳು ನೋಡಿ ಸಮಯವಾಗಿದೆ ಧಾರಾಕಾರವಾಗಿ ಮಳೆ ಬೇರೆ ಬರತಿದೆ ನೀವು ಅಟೋ ಎಲ್ಲಿಯು ನಿಲ್ಲಿಸದೆ ಒಯ್ಯಬೇಕು. ಬೇಗಾ ಕರೆದುಕೊಂಡು ಹೋಗತ್ತೀರಾ ಎಂದಳು ಅದಕ್ಕೆ ಅಟೋ ಚಾಲಕ ಹಣ ಜಾಸ್ತಿ ಆಗುತ್ತೆ ಮೇಡಂ ಅಂದಾ ಅದಕ್ಕೆ ಸೌಮ್ಯ ಆಗಲಿ ಅಂದಳು. ಈ ವೇಳೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು ಎಲ್ಲೆಲ್ಲಿಯು ಟ್ರಾಫಿಕ್ ಜಾಮ್ ಈಗಾಗಲೇ ತೊಯ್ದ ಸೌಮ್ಯ ಅಟೋದಲ್ಲಿಯು ನಡುಗುತ್ತಿದ್ದಳು. ಆಕೆಯು ಈ ಮಳೆಯ ಅಬ್ಬರಕ್ಕೆ ತಾಳದಾದಳು. ಒಂದು ಕಡೆ ಆಟೋ ಓಡುತ್ತಿದ್ದ ವೇಗದಲ್ಲಿ ಸ್ವಲ್ಪ ಬಿಸಿ ಗಾಳಿ ಹಿತ ಅನಿಸಿತು. ಅಟೋ ಸ್ವಲ್ಪ ಮುಂದೆ ಹೋದಮೇಲೆ ರಸ್ತೆಯ ಮಧ್ಯದೊಳಗೆ ಒಬ್ಬ ಹುಡುಗ ತನ್ನ ಬೈಕ್ ಪಕ್ಕಕ್ಕೆ ನಿಲ್ಲಸಿ ಬರುತ್ತಿರುವ ಅಟೋಗೆ ಕೈ ಮಾಡುತ್ತಾ ನಿಂತಿದ್ದ. ಅಟೋ ಚಾಲಕ ದೂರದಿಂದಲೆ ನೋಡಿ ಸೌಮ್ಯಳಿಗೆ ಹೇಳಿದ ನೋಡಿ ಮೇಡಂ ಯಾರೋ ಹುಡುಗ ಬೈಕ್ ಇದ್ದರು ಅಟೋಗೆ ಕೈ ಮಾಡುತ್ತಿದ್ದಾನೆ ಈ ಯುವಕರು ವಿಚಿತ್ರ ಅಲ್ಲವಾ? ಅಂದಾ ಆಗ ಆ ಹುಡುಗನಿಗೆ ನೋಡಿದ ಸೌಮ್ಯ ಅವರಿಗೇನು ತೊಂದರೆಯೆಂದು ಅರ್ಥಮಾಡಿಕೊಳ್ಳದೆ ನಾವು ಮಾತಾನಾಡುವದು ತಪ್ಪು ಮೊದಲು ನಿಲ್ಲಿಸಿ ಅವರಿಗೆ ಕೇಳಿ ಗೊತ್ತಾಗಬಹುದು ಮಳೆ ಬೇರೆ ಬರತ್ತಾಯಿದೆ. ಎಲ್ಲವು ದೂರದಿಂದಲೆ ಹೇಳುವುದು ತಪ್ಪು ಅಂದಾಗ ಆಯಿತು ಅಂತಾ ಅಟೋ ಚಾಲಕ ಅಟೋ ಆ ಹುಡುಗನ ಹತ್ತಿರ ಅಟೋ ನಿಲ್ಲಿಸಿದ. ಈಗ ಅಟೋ ಹತ್ತಿರ ನಿಂತಿರುವ ಹುಡುಗ ತೊಯ್ದು ಹೋಗಿದ್ದ ಅವನ ಮೈಯಲ್ಲಾ ಬಟ್ಟೆ ತುಂಬಾ ಒದ್ದೆಯಾಗಿದ್ದವು. ಸುಂದರ ದೇಹ ಕಾಯದ ಹುಡುಗ ಚಿಗುರು ಮಿಸೆಯ ಆ ಹುಡುಗ ತನ್ನ ವಿನಮೃ ಧ್ವನಿಯಿಂದ ಸರ್ ನಾನು ಒಬ್ಬ ಇಂಜಿನಿಯರಿಂಗ ವಿಧ್ಯಾರ್ಥಿ ಇಂದು ಕಾಲೇಜಿಗೆ ಮೊದಲನೆ ದಿನ ನನ್ನ ಬೈಕ್ ಬೇರೆ ಕೆಟ್ಟಿದೆ ಹಾಳಾದ ಈ ಮಳೆ ಇಲ್ಲಿ ನಿಂತು ತುಂಬಾ ಕಷ್ಟ ಆಗತ್ತಿದೆ ಇತ್ತ ಕಾಲೇಜಿನ ಸಮಯವಾಗತ್ತಾಯಿದೆ. ದಯವಿಟ್ಟು ಕರಕೊಂಡು ಹೋಗತ್ತಿರಾ. ಅಂದಾ ಇಷ್ಟು ಕೇಳಿದ ಅಟೋ ಚಾಲಕ ಸೌಮ್ಯಳ ಕಡೆಗೆ ತಿರುಗಿ ನೋಡಿದ ಅದಕ್ಕೆ ಸೌಮ್ಯ ಸ್ಪಂದಿಸಿದಂತೆ ಸೂಚನೆ ಕೊಟ್ಟಳು ನಂತರ ಇಬ್ಬರು ಅಟೋ ಹತ್ತಿ ನಡೆದರು. ಈಗ ಈ ಸಾಹೇಬರು ಸುಮ್ಮನೆ ಅಟೋದಲ್ಲಿ ಕೂಡಲೇ ಇಲ್ಲಾ ಒಂದೇ ಸಮನೆ ಮಾತಾಡಲು ಶುರು ಮಾಡಿದರು ಮೈಸೂರು ಸರಿಯಿಲ್ಲಾ ಹಾಗೆ ಹೀಗೆ ಬೆಳೆಗ್ಗೆಯಿಂದ ನಿಂತಿದ್ದೀನಿ ಒಂದು ಆಟೋ ಇಲ್ಲಾ ಯಾರು ಕೇಳೋರಿಲ್ಲಾ ಒಂದು ಬಸ್ ಇಲ್ಲಾ ನಮ್ಮ ಅಪ್ಪಾ ಈ ಮೈಸೂರು ಹಾಗೆ ಹೀಗೆ ಅಂತಾ ಹೇಳತ್ತಾರೆ ಆದರೆ ನನಗಂತು ನನ್ನ ಕಾಲೇಜಿನ ಮೊದಲ ದಿನವೇ ನಾನು ತಡವಾಗಿ ಹೋಗುತ್ತಿದ್ದೇನೆ ನನಗೆ ಇದು ಜೀವನದ ಮೊದಲನೆಯ ದಿನ ತುಂಬಾ ಕಷ್ಟ ಅನಿಸುತ್ತಿದೆ. ನಾನು ದೊಡ್ಡ ಶ್ರೀಮಂತನ ಮಗ ನಮ್ಮಪ್ಪಾ ಏನು ಕಡಿಮೆ ಮಾಡಿಲ್ಲಾ ಆದರೆ ಈ ಮೈಸೂರಿಗೆ ಬಂದು ವಿಚಿತ್ರ ಅನಿಸುತ್ತಿದೆ. ತುಂಬಾ ಟ್ರಾಫಿಕ್ ಸಿಗ್ನಲ್ ಸರಿಯಿಲ್ಲಾ ಇಲ್ಲಿನ ವ್ಯವಸ್ಥೆ ಸರಿಯಿಲ್ಲಾ ಹಾಗೆ ಹೀಗೆ ಅಂತಾ ತುಂಬಾ ಒಂದೆ ಸಮನೆ ಮಾತಾಡುತ್ತಾ ಕುಳಿತಾ ಸೌಮ್ಯ ಮತ್ತು ಅಟೋಚಾಲಕ ಒಂದು ಮಾತಾಡಲಿಲ್ಲಾ ಇವನ ಕಥೆ ಕೇಳತ್ತಾನು ಇಲ್ಲಾ ಆದರೆ ಈ ಬಾಯಿಬಡಕಾ ಮಾತ್ರ ಬಿಡತಾನೆಯಿಲ್ಲಾ ಅವರಿಬ್ಬರಿಗೂ ಹೂಂ ಊಂ ಅನ್ನೊಕ್ಕು ಬಿಡುವಲ್ಲಾ ತಾನೆ ತನ್ನ ಪರಿಚಯಾ ಯಾವ ಕಾಲೇಜು ಏನ ಮಾಡತಾನೆ ಹೇಳಿಯೇ ಬಿಟ್ಟ ಯಾರು ಕೇಳದೆ. ಅಷ್ಟರಲ್ಲಿ ಕಾಲೇಜು ಬಂತು ನಿಲ್ಲಿಸಿ ಸರ್ ಅಂದಾ ಕೆಳಗಿಳಿದು ಕೊನೆಗೆ ನಿಮ್ಮದು ಇದೆ ಕಾಲೇಜಾ ಮೇಡಂ ಹೇಳಲೇ ಇಲ್ಲಾ ಅಂದಾ ಆಗ ಸೌಮ್ಯ ತಾವು ಯಾವತ್ತಾದರು ಮತ್ತೊಬ್ಬರಿಗೆ ಮಾತಾಡಲು ಬಿಟ್ಟರೆ ತಾನೆ ಹೇಳುವುದು ಅಂತಾ ಹೇಳಿ ಅಟೋ ಚಾಲಕನಿಗೆ ದುಡ್ಡು ಕೊಟ್ಟು ಮುಂದೆ ನಡೆದಳು ಈತ ಅವಳ ಮಾತು ಕೇಳಿ ಅವಳನ್ನೆ ನೋಡುತ್ತಾ ನಿಂತ ಆಗ ಅಟೋ ಚಾಲಕ ಸರ್ ಅವರು ಹೋದರು ಇನ್ನು ಅಲ್ಲೆ ಏನು ನೋಡತ್ತಿರಾ ದುಡ್ಡು ಕೊಡಿ ನಾನು ಹೋಗಬೇಕು ಅಂದಾ ಆಗ ಎಚ್ಚತ್ತು ಓ ಸ್ವಾರಿ ತೊಗೊಳ್ಳಿ ಅಂತಾ ದುಡ್ಡು ಕೊಟ್ಟ ಅಟೋ ಚಾಲಕ ಸರ್ ಇಷ್ಟು ದೊಡ್ಡ ನೋಟಿಗೆ ಚಿಲ್ಲರೆಯಿಲ್ಲಾ ಸರ್ ಅಂದಾ ಆಗ ವಿಶ್ವ ಪರವಾಗಿಲ್ಲಾ ಇಟ್ಟುಕೊಳ್ಳಿ ಅಂದು ಕಾಲೇಜ್ ಕಡೆಗೆ ಓಡಿದ.
ಹೀಗೆ ಸೌಮ್ಯ ಮತ್ತು ವಿಶ್ವ ಒಂದೆ ಕಾಲೇಜಿನ ಕ್ಯಾಂಪಸ್ ಲ್ಲಿ ಇದ್ದು ತಮ್ಮ ಇಂಜಿನಿಯರಿಂಗ್ ಇಂಜಿನಿಯರ ಪಯಣ ಶುರುವಾಯಿತು . ಅವರಿಬ್ಬರ ಮೊದಲ ಬೇಟಿಯೆ ಇಬ್ಬರ ಮೊದಲ ಪ್ರೀತಿಗೆ ನಾಂದಿಯಾಯಿತು. ಸುಮಾರು ದಿನಗಳು ಇಬ್ಬರು ಮಾತಾಡದೆ ಮನಸ್ಸಲೆ ಪ್ರಿತಿಸಿದರು. ವಿಶ್ವ ಅವಳನ್ನು ಮನಸಾರೆ ತುಂಬಾ ಪ್ರೀತಿಸತೊಡಗಿದ ಆಕೆಯ ಬಗ್ಗೆಯೆ ಹಗಲುಗನಸು ಕಾಣತೊಡಗಿದ ದಿನೆ ದಿನೆ ಅವರ ಮಾತು ರೀತಿ ಎಲ್ಲವು ಹೆಚ್ಚಾಯಿತು ಆದರೆ ಇದು ಪ್ರೀತಿ ಅಂತಾ ಅವನು ಹೇಳಲ್ಲಿಲ್ಲಾ ಇವಳು ಹೇಳಲೇ ಇಲ್ಲಾ ಹೀಗೆ ಮೊದಲೆ ಸೆಮ್ ನ ಪರೀಕ್ಷೆ ಮುಗಿದೆ ಹೋದವು. ಹೀಗೆ ಒಂದು ದಿನ ಸೌಮ್ಯ ತರಗತಿ ಕೋಣೆಯಲ್ಲಿ ತರಗತಿ ಮುಗಿದ ಮೇಲು ಹಾಗೆ ಕುಳಿತಿರುತ್ತಾಳೆ. ಒಬ್ಬಳೆ ಏನೋ ಚಿಂತೆ ಮಾಡಿದಂತೆ ತೋರುತ್ತದೆ ಇದನ್ನು ನೋಡಿದ ವಿಶ್ವ ನಿಧಾನವಾಗಿ ಅವಳ ಹತ್ತಿರ ಹೋಗಿ ಅವಳನ್ನು ಹೆದರಿಸಿದಂತಡ ಮಾಡುತ್ತಾನೆ . ಆಗ ಸೌಮ್ಯ ತುಂಬಾ ಬೇಜಾರಾದಂತೆ ತೋರುತ್ತದೆ. ಅದಕ್ಕೆ ಸೌಮ್ಯ Don't be joke I am very sereuos ಅಂತಾಳೆ ಆಗ ಈತ ಓಕೆ ಓಕೆ ಅಂತಾ ಸಿರಿಯೆಸ್ ಏನು ಅಂದಾಗ ನಿನಗೆ ಹೇಳಬೇಕು ವಿಶ್ವ ಆದರೆ ಇಲ್ಲಿ ಹೇಗೆ ಹೇಳುವುದು. ನೀನು ನನಗೆ ಹೊರಗಡೆ ಕರಕೊಂಡು ಹೋಗು ನಿನ್ನ ಜೊತೆ ತುಂಬಾ ಮಾತಾಡಬೇಕು. ಅದಕ್ಕೆ ಆಗುತ್ತಾ ಅಂತಾಳೆ ಆಗ ತುಂಬಾ ಖುಷಿಯಾದ ವಿಶ್ವ ಓ ಶೋರ್ ಆಗಲಿ ಯಾವಾಗ ಅಂತಾ ಕೇಳತ್ತಾನೆ ನಾಳೆ ಸಾಯಂಕಾಲ ಕ್ಲಾಸ್ ಮುಗಿದ ತಕ್ಷಣ ಹೋಗೋಣಾ ಅಂತಾಳೆ. ಆಗಲಿ ಎಂದು ಒಪ್ಪುತ್ತಾನೆ. ವಿಶ್ವನಿಗೆ ಎಲ್ಲಿಲ್ಲದ ಸಂತೋಷ ಆ ರಾತ್ರಿ ಬರಿ ಅವಳದೆ ನೆನಪು ಅವಳು ಏನು ಹೇಳಬಹುದು ನನಗೆ ಪ್ರೀತಿಯ ವಿಷಯ ಏನಾದರು ಹೇಳತಾಳಾ ಅಥವಾ ಬೇರೆ ಏನಾದರು ಹೇಳತಾಳ ಇಲ್ಲಾ ನನಗೆ ನೀನು ಅಂದರೆ ಇಷ್ಟಾ ಅಂತಾ ಜೋರಾಗಿ ತಬ್ಬಿಕೊಳ್ಳುತ್ತಾಳಾ ಹಾಗೆ ಹೀಗೆ ಇವನು ತುಂಬಾ ಕನಸ್ಸು ಕಂಡಾ. ಈ ಮಾಹಾಶಯ ತನ್ನ ದಾಟಿಯಲ್ಲೆ ಯೋಚಿಸಿ ತಾನಾಗಿಯೆ ವಿಚಿತ್ರ ಯೋಚನೆಗಳಿಗೆ ಎಡಮಾಡಿಕೊಟ್ಟ. ಅಂದು ಬೆಳೆಗ್ಗೆ ಎಥಾ ಪ್ರಕಾರ ತರಗತಿಯಲ್ಲಿ ಕುಳಿತಾ ಆದರೆ ಬರಿ ಸಮಯ ತೋರಿಸುವ ಗಡಿಯಾರದ ಕಡೆಗೆ ಅವನ ಚಿತ್ತ ಕಾರಣ ಸೌಮ್ಯ ಸಾಯಂಕಾಲ ಕ್ಲಾಸ್ ಮುಗಿದ ಮೇಲೆ ಅಂತಾ ಹೇಳಿದಳಲ್ಲಾ ಅವತ್ತು ಅದು ಒಂದು ಬಿಟ್ಟು ಬೇರಾವ ಚಿಂತೆಯೆ ಇರದ ವಿಶ್ವ ಈಡಿ ದಿನ ಮತ್ತು ರಾತ್ರಿ ಅವಳು ಏನು ಹೇಳಬಹುದು ಹೇಗೆ ಹೇಳಬಹುದು ಅಂತಾ ಕಳೆದ. ಆ ಸಮಯ ಒದಗಿ ಬಂದಿತು. ಈಗ ಸಂಜೆ ಐದರ ಸಮಯ ಇಬ್ಬರು ಮೈಸೂರಿನ ಒಂದು ಉದ್ಯಾನವನದಲ್ಲಿ ಚಾಟ್ಸ್ ತಿನ್ನುತ್ತಾ ವಿಶ್ವ ಕುಳಿತ್ತಿದ್ದಾನೆ ಅದರಂತೆ ಅವನ ದೂರದಲ್ಲಿ ಸೌಮ್ಯ ಹಾಗೆ ತಿಂದಂತೆ ಮಾಡುತ್ತಾ ಮನಸ್ಸಿಲ್ಲದ ಮನಸ್ಸಿನಿಂದ ತಿನ್ನುತ್ತಾ ಕುಳಿತ್ತಿದ್ದಾಳೆ. ಆಗ ವಿಶ್ವ ಹೇಳು ಏನೋ ತಲೆ ಮೇಲೆ ಬಿದ್ವಳಂತೆ ಆಡತಾಯಿದ್ದಿಯಲ್ಲಾ ನಿನಗೆ ಏನಾಗಿದೆ ಅಂದಾ ಆಗ ಸೌಮ್ಯ ಹೇಗೆ ಹೇಳಲಿ ವಿಶ್ವ ನನಗೆ ನಮ್ಮ ಅಪ್ಪಾ ಅಮ್ಮ ಗಂಡು ನೋಡತ್ತಿದ್ದಾರೆ. ನನಗೆ ಮಧುವೆ ಮಾಡುತ್ತಾರಂತೆ ಆದರೆ ನನಗೆ ಮಧುವೆ ಇಷ್ಟು ಬೇಗಾ ಇಷ್ಟಾಯಿಲ್ಲಾ. ಏನುಮಾಡಲಿ ತಿಳಿಯುತ್ತಿಲ್ಲಾ. ಅವನು ಹೇಗೆ ಇರುತ್ತಾನೋ ಏನೂ ಗೊತ್ತಿಲ್ಲಾ. ನನಗೆ ಇದೆ ದೊಡ್ಡ ಚಿಂತೆಯಾಗಿದೆ ಯಾರಿಗೆ ಹೇಳಲಿ ತಿಳಿಯದಾಗಿದೆ. ಅಂದಾಗ ಇಷ್ಟು ಕೇಳಿದ ವಿಶ್ವ ದಿಗಿಲು ಬಡದಂತಾದನು ಒಂದು ಕ್ಷಣ ಮತ್ತೆ ಸುಧಾರಿಸಿಕೊಂಡು ಹಾಗೆ ಸುಮ್ಮನೆ ನಟನೆ ಮಾಡುತ್ತಾ. ವಾವ್ ಎಂತಹ ಸಂತೋಷದ ಸುದ್ದಿ ಇದಕ್ಕೆ ಸ್ವೀಟ್ ಕೊಡೊ ಬದಲು ಕಷ್ಟಾ ಯಾಕೆ ಅಂತಾ ಮಧುವೆ ಅಂದ್ರೆ ಸುಖ ನೀನು ನೋಡಿದರೆ ಕಷ್ಟ ಅಂತಿಯಾ ಅಂದಾ. ಹೂಂ ಹುಡುಗಿಯರ ಮನಸ್ಸು ನಿಮಗೇನು ಅರ್ಥವಾಗಬೇಕು ಹೇಳು ಎಲ್ಲಾ ಗಂಡಸರ ಅಭ್ಯಾಸ ಇಷ್ಟೆ ಅಲ್ಲವೆ? ಅಂದಾ ಆದರೆ ಇವನ ಒಳಗೆ ಪ್ರೀತಿಯ ಜ್ವಾಲೆ ಉರಿಯುತ್ತಲೆ ಇತ್ತು ಇಬ್ಬರು ಅತಿಯಾಗಿ ಪ್ರೀತಿಸಿದರು ಇಬ್ಬರು ಹೇಳಲು ಆಗದೆ ಅವನೇ ಹೇಳಲಿ ಇತ್ತ ಇವನು ಸಮಯ ಬರಲಿ ಅಂತಾ ಎರಡು ವರ್ಷ ಹಾಗೆ ಕಳಿದಿದ್ದರು. ಕೊನೆಗೆ ಒಂದು ದಿನ ವಿಶ್ವ ಧೈರ್ಯಮಾಡಿ ಅವಳನ್ನು ಕುರಿತು ಒಂದು ಪ್ರೇಮ ಪತ್ರ ಗೀಚಿಯೇ ಬಿಟ್ಟ. “ ನನ್ನ ಪ್ರೀತಿಯನ್ನು ಸದ್ದಿಲ್ಲದೆ ಕದ್ದ ಹುಡುಗಿ ಸೌಮ್ಯ ನಾನು ನಿನಗೆ ಸುಮಾರು ದಿನಗಳಿಂದ ಪ್ರೀತಿಸುತ್ತೀನಿ ನಿನಗೆ ನನ್ನ ಮನ ಮಂದಿರದಲ್ಲಿ ಇಟ್ಟು ಪೂಜಿಸುತ್ತಿದ್ದೀನಿ. ನಾನು ನಿನ್ನನೆ ಮಧುವೆ ಆಗಬೇಕು ಅಂತಾ ನಿರ್ಧಾರ ಮಾಡಿದ್ಧಿನಿ ಯಾರೆ ಅಡ್ಡ ಬಂದರು ನಿನ್ನ ಬಿಡಲಾರೆ ನಿನ್ನ ಅಭಿಪ್ರಾಯ ತಿಳಿಸು " ಈ ಪತ್ರ ಓದಿದ ಸೌಮ್ಯ ತುಂಬಾ ಸಂತೋಷಗೊಂಡಳು ಇಷ್ಟಕ್ಕು ಇವನಿಗೆ ಈಗಾದರು ಧೈರ್ಯ ಬಂತಲ್ಲಾ ಅಂತಾ ಅವನು ಒಂದು ಕ್ಷಣ ತನ್ನ ಕನಸಿನ ಲೋಕಕ್ಕೆ ಜಾರಿ ಅವನೊಂದಿಗ ಸ್ನೇಹ ಪ್ರೀತಿ ಹೇಗೆ ಇರಬಹದು ಎಂದು ಸಂತೋಷಪಟ್ಟಳು ಈಗಾಗಲೆ ಇಷ್ಟಪಟ್ಟಾ ಹುಡುಗಾನೆ ಸಿಕ್ಕ ಅಂತಾ ತುಂಬಾ ಸಂತೋಷಗೊಂಡಳು. ಹಾಗೆ ಅವನಿಗೆ ಫೋನ್ ಹಚ್ಚಿದಳು ವಿಶ್ವನಿಗೆ ಆತ ರಿಸಿವ್ ಮಾಡಿದ ತಕ್ಷಣ ತುಂಬಾ ಸಿಟ್ಟಿನಿಂದ ನಾಳೆ ನಿನ್ನ ಜೊತೆಗೆ ಮಾತಾಡಬೇಕು. ಅದೇ ಪಾರ್ಕನಲ್ಲಿ ಬೇಟಿಯಾಗು ಎಂದು ಫೋನ್ ಕಟ್ ಮಾಡಿದಳು ಇತ್ತ ಇಷ್ಟು ಸುಮ್ಮನೆಯಿದ್ದು ಕೇಳಿದ ವಿಶ್ವ ತುಂಬಾ ಭಯಬೀತನಾದ ನಾಳೆ ನನಗೆ ಸರಿಯಾಗಿ ಬೈತಾಳೆ ಸೌಮ್ಯ ನಾನು ನನ್ನ ಪ್ರೀತಿ ಅವಳಿಗೆ ಇಷ್ಟವಾಗಲಿಲ್ಲಾ ಅನಿಸುತ್ತೆ ಅದಕ್ಕೆ ಅವಳು ಸಿಟ್ಟಿನಲ್ಲಿ ಮಾತಾಡಿದಳು. ಅಂತಾ ಬೇರೆ ಬೇರೆಯೆ ಯೋಚಿಸಿದ. ಇಡಿ ರಾತ್ರಿ ಮತ್ತೆ ಅವಳ ನೆನಪಲ್ಲೆ ಕಳಿದ ಅವನ ಆ ದುಗುಡ ದುಮ್ಮಾನ ಯಾರಿಗೂ ಹೇಳದಂತಿತ್ತು. ಅದರ ಬೆನ್ನಲೆ ಅವಳನ್ನು ಪ್ರೀತಿಸಿ ತಪ್ಪು ಮಾಡಿರುವೆ ಎಂಬ ಭಯವಿತ್ತು. ಮರುದಿನ ಬೆಳೆಗ್ಗೆ ಅವನ ಕಾಲು ನಿಲ್ಲಲೇ ಇಲ್ಲಾ ಯಾವಾಗ ಸಾಯಾಂಕಾಲ ಆಗುತ್ತೋ ಯಾವಾಗ ನಾನು ಸೌಮ್ಯಳನ್ನು ಬೇಟಿ ಮಾಡತ್ತೀನಿ ಅಂತಾ ಒಂದೆ ಯೋಚನೆ. ಸರಿಯಾಗಿ ಸಾಯಂಕಾಲ ಸೂರ್ಯ ಮುಳಗುವ ಸಮಯ ದಿನ ಕಳಿಯುವ ಸಮಯ ಪಾರ್ಕ ನಲ್ಲಿ ವಿಶ್ವ ತಲೆ ಕೆಳಗೆ ಮಾಡಿ ಕೋರ್ಟ್ ನಲ್ಲಿ ತಪ್ಪು ಮಾಡಿದವರಂತೆ ನಿಂತಿದ್ದಾನೆ. ಅತ್ತ ಸೌಮ್ಯ ತನ್ನ ಮನಸ್ಸಿನಲ್ಲಿಯೆ ನಗುತ್ತಾ ಅವನತ್ತ ನೋಡುತ್ತಾ ನಿಂತಿದ್ದಾಳೆ ಆದರೆ ವಿಶ್ವ ಮಾತ್ರ ತಲೆ ಎತ್ತಲಿಲ್ಲಾ ಅವಳ ಮುಖ ನೋಡಲೇ ಇಲ್ಲಾ. . ಆಗ ಸೌಮ್ಯ ಹೇಳಿದಳು ನಿನಗೆ ಯಾರು ಸಿಗಲಿಲ್ಲವೆ? ಪ್ರೀತಿ ಮಾಡೊಕ್ಕೆ ನಾನೆ ಆಗಬೇಕಿತ್ತ ನನ್ನ ತಂದೆ ತಾಯಿ ವಿಷಯ ಗೊತ್ತಿಲ್ಲವಾ? ನಿನಗೆ ಯಾಕ ಹೀಗೆ ಮಾಡಿದಿ ವಿಶ್ವ ಇದು ಸರೀನಾ ತಪ್ಪಾ ಒಮ್ಮೆ ಯೋಚಿಸು ಇದರ ಪರಿಣಾಮವೇನು ಹೇಳು. ಆಗ ವಿಶ್ವ ನನಗೇನು ಗೊತ್ತಿಲ್ಲಾ ನಾನು ನಿನ್ನ ಇಷ್ಟ ಪಟ್ಟಿದ್ದೀನಿ ಮತ್ತು ನಿನ್ನ ಮಧುವೆ ಆಗತ್ತೀನಿ ಅಷ್ಟೆ . ಇಷ್ಟು ಮಾತಾಡಿ ಅವಳ ಕೈ ಹಿಡಿದು ಪ್ಲೀಸ್ ಸೌಮ್ಯ ಒಪ್ಪಿಕೊ ಅಂತಾನೆ ಆಗ ಸೌಮ್ಯ ನನಗೆ ಸಮಯ ಕೊಡು ಹೇಳುತ್ತೇನೆ. ಅಂತಾ ಹೇಳಿ ಅಲ್ಲಿಂದ ಹೊರಟಳು. ಅಂದಿನಿಂದ ಇವರ ಪ್ರೇಮ ಪಯಣದ ಹಾದಿ ಮುಂದುವರೆಯಿತು ಈಗ ಮುಬೈಲ್ ಮೆಸೆಜ್ ನಿಂದ ಅವಳ ಮನಸ್ಸುಗಳಿಗೆ ಈ ಪ್ರೀತಿ ಹರಿದಾಡಿತು. ಹೀಗೆ ಈ ಪ್ರೀತಿ ಅವರಿಬ್ಬರ ಇಂಜಿನಿಯರಿಂಗ ಮುಗಿಯುವ ವರೆಗೆ ನಡೆಯಿತು. ಇಂಜಿನಿಯರಿಂಗ ಮುಗಿದ ಮೇಲೆ ಅವರವರ ಮನೆಗೆ ಹೋದರು ಹಾಗೆ ಪ್ರೀತಿ ಮಾತ್ರ ಮುಂದುವರಿತು.
ಸೌಮ್ಯಳ ಮನೆಯಲ್ಲಿ ಅವಳ ಮಧುವೆಯ ಬಗ್ಗೆ ಚಿಂತನೆ ಶುರುವಾಗುತ್ತೆ ಆಗ ಸೌಮ್ಯಳಿಗೆ ಹೆದರಿಕೆ ಶುರುವಾಯಿತು ಆಗ ವಿಶ್ವ ನನ್ನು ಕಂಡು ಮಾತಾಡುತ್ತಾಳೆ. ಅದಕ್ಕೆ ವಿಶ್ವನ ಉತ್ತರ ಹೀಗಿರುತ್ತೆ. ಈಗ ನಾವಿಬ್ಬರು ಮಧುವೆ ಆಗೋಣಾ ಆದರೆ ಅದು ನಿಮ್ಮ ಮನೆಯಲ್ಲಿ ಆಗಲಿ ನಮ್ಮ ಮನೆಯಲ್ಲೇ ಆಗಲಿ ತಿಳಿಯ ಕೂಡದು ಅದಕ್ಕಾಗಿ ನನ್ನ ಹತ್ತಿರ ಒಂದು Idea ಇದೆ ಅದರಂತೆ ನೀನು ನಡೆದುಕೊಳ್ಳಬೇಕು ನಾವಿಬ್ಬರು ಮಧುವೆಯಾದಮೇಲೆ ಎಲ್ಲಾ ಸರಿ ಹೋಗುತ್ತೆ ಅಂತಾ ಅವಳಿಗೆ ಸಾಂತ್ವನ ಹೇಳಿದ ಸ್ವಲ್ಪ ದಿನಗಳು ಕಳೆದವು. ಈಗ ಸಮಸ್ಯೆ ಎದುರಾಗಿದೆ ಗೆಳೆಯರೆ ಏನು ಮಾಡುವುದು. ಅಂದಾಗ ಅವನ ಕಣ್ಣಂಚಲ್ಲಿ ಒಂದು ಚಿಕ್ಕ ವೇಧನೆ ಮತ್ತು ಅವಳನ್ನು ಪಡೆಯಲೇಬೇಕು ಎಂಬ ದಿಟ್ಟ ಮಾತು ಸ್ಪಷ್ಟವಾಗಿ ಕಂಡುಬರುತ್ತಿತ್ತು. ತನ್ನ ಈ ಕಥೆ ಮುಗಿಸಿ ನಮಗೆಲ್ಲಾ ಹೇಳಿದ ನನಗೆ ಈಗ ನಿಮ್ಮ ಸಾಹಾಯ ಬೇಕು ನನಗೂ ಸೌಮ್ಯಳಿಗೆ ಮಧುವೆ ಮಾಡಿಸಿ ಅದಕ್ಕಾಗಿ ಏನು ಮಾಡಬೇಕು ತೋಚುತ್ತಿಲ್ಲಾ ಎಂದ ವಿಶ್ವ ಇದನ್ನು ಆಲಿಸಿದ ನಾವು ಗೆಳೆಯರೆಲ್ಲಾ ಅವನಿಗೆ ಹೇಳಿದೇವು ಸರಿ ನೀನು ಹುಡುಗಿಯನ್ನು ತಯಾರಿಗೊಳಿಸು ನಾವು ಉಳಿದ ವ್ಯವಸ್ಥೆ ಮಾಡುತ್ತೇವೆ. ಎಂದೇವು ಮಾರನೆ ದಿನ ಅವರಿಬ್ಬರ ಮಧುವೆ ನಾವು ಐದು ಜನ ಗೆಳೆಯರು ಸೇರಿ ಶುರು ಮಾಡಿದೇವು. ಅದು ಒಂದು ದೊಡ್ಡ ಕಾಡಿನಲ್ಲಿ ಚಿಕ್ಕ ದೇವಸ್ತಾನ ಅದರ ನಡುವೆ ನಮ್ಮ ತಂಡ ಮೊದಲೇ ಹೋಗಿ ಅಲ್ಲಿ ಯಾರು ಇದ್ದಾರೆ ಇಲ್ಲಾ ನೋಡಿ ಬಂದಿತ್ತು ಅದೇ ಪ್ರಕಾರ ಮಧುವೆಗೆ ಬೇಕಾದ ಸಾಮಾನುಗಳು ಇನ್ನೊಬ್ಬ ಗೆಳೆಯ ತಂದಿದ್ದ ಈ ಮಧುವೆ ಪ್ರಾಕೃತಿಕ ವೈಭವದ ಮದ್ಯೆ ನಡೆದೆ ಹೋಯಿತು ಅವರಿಬ್ಬರು ನವದಂಪತಿಗಳಾಗಿ ತಮ್ಮ ಹೊಸ ಬದುಕಿಗೆ ಕಾಲಿಟ್ಟರು. ಈಗ ಸದ್ಯ ಇಬ್ಬರು ಸುಂದರ ಜೀವನ ನಡೆಸುತ್ತಿದ್ದಾರೆ. ಆದರೆ ಇನ್ನು ಒಂದು ನಿಘೂಡ ರಹಸ್ಯವೇನೆಂದರೆ. ಇಬ್ಬರ ಮನೆಯಲ್ಲೂ ಯಾರಿಗೂ ಪರಿಚಯವಿಲ್ಲಾ ಯಾವುದೆ ಸುಳಿವಿಲ್ಲಾ ವಿಶ್ವನ ಮನೆಯಲ್ಲಿ ಆತ ಬೇರೆ ಊರಲ್ಲಿ ಕೆಲಸಾ ಮಾಡುತ್ತಿದ್ದಾನೆ. ಇನ್ನು ನಮ್ಮ ಸೌಮ್ಯ ಮನೆಯವರ ಪ್ರಕಾರ ಇಂಜಿನಿಯರಿಂಗ ಮುಗಿಸಿ ಕಂಪನಿಯೊಂದರಲ್ಲಿ ಇಂಟರಶಿಪ್ ಮಾಡುತ್ತಿದ್ದಾಳೆ . ಏಕೆಂದರೆ ಇದು ಮುಗಿದ ಮೇಲೆ ಅವಳು ಸರಕಾರಿ ನೌಕರಳಾಗುತ್ತಾಳೆ. ಅಂತಾ ಅವರ ಮನೆಯಲ್ಲಿ ತಿಳಿದಿದ್ದಾರೆ.
ಹೀಗೆ ಇವರಿಬ್ಬರು ಈಗ ಬದುಕಿದ್ದು ಅವರಿಗೆ ಹೆತ್ತ ಎರಡು ಕುಟುಂಬಕ್ಕೆ ಹಸಿ ದ್ರೋಹವನ್ನು ತುಸು ತುಸುವಾಗಿ ನಮ್ಮ ಇಂದಿನ ಯುವ ಪಿಳಿಗೆ ನೀಡುತ್ತಿದೆ. ಇವರಿಬ್ಬರನ್ನು ನೋಡಿದರೆ ನನಗೆ ನಮ್ಮ ಯುವ ಶಕ್ತಿಯ ಮೇಲೆ ತುಂಬಾ ಬೇಸರವಿದೆ ಅನಿಸುತ್ತೆ. ನಾವೆಲ್ಲಿ ನಮ್ಮ ತಂದೆ ತಾಯಿಯರಿಗೆ ಮನವಲಿಸುವಲ್ಲಿ ಎಡವುತ್ತಿದ್ದೇವೊ ಅನಿಸುತ್ತಿಲ್ಲವೆ? ನಮ್ಮ ತಂದೆ ತಾಯಿಗೆ ನಮ್ಮ ಬದುಕು ಹೀಗೆ ಹಾಗೆ ಅಂತಾ ಕನಸು ಕಾಣುವುದು ಸಾಮಾನ್ಯ ಆದರೆ ಅದನ್ನು ಸಾಕಾರಗೊಳಿಸುವುದು ನಮ್ಮ ಜವಾಬ್ದಾರಿ. ನಾವು ತಪ್ಪೆ ಮಾಡಿದರು ಅದನ್ನು ನಮ್ಮ ಹೆತ್ತವರ ಮುಂದೆ ಹೇಳಿಕೊಳ್ಳಬೇಕಾದ ಅಗತ್ಯವಿದೆ ಅನಿಸುತ್ತದೆ. ಅದಕ್ಕಾಗಿ ನಾವು ನಮ್ಮ ಹೆತ್ತವರಿಗೆ ಮೋಸ ಮಾಡುವುದನ್ನು ಅವರ ಆಸೆಗಳನ್ನು ಆಕಾಂಕ್ಷೆಗಳನ್ನು ಬಲಿಕೊಡುವ ಹಕ್ಕು ನಮಗಿಲ್ಲಾ. ಬನ್ನಿ ಸ್ನೆಹಿತರೆ ಸತ್ಯವ ಹೇಳಿ ಅವರ ಮನಗೆದ್ದು ಅವರೊಂದಿಗೆ ಪ್ರೀತಿಯ ಯುದ್ಧದಲ್ಲಿ ನಾವೆಲ್ಲಾ ಗೆದ್ದು ಬರೋಣ. ನಾವೆಲ್ಲ ಪ್ರೀತಿಸಬೇಕು ನಿಜ ಆದರೆ ಬರಿ ಭೋಗಕ್ಕಾಗಿ ಅಲ್ಲಾ ಅಪ್ಪ, ಅಮ್ಮ, ಅಣ್ಣ, ತಂಗಿ, ಸಂಬಂದಿಕರು, ಗೆಳೆಯರು ಎಲ್ಲರನ್ನು ಪ್ರೀತಿಸೋಣ ಇವರೊಂದಿಗಿನ ಪ್ರೀತಿಯು ನಮಗೆ ತುಂಬಾ ಅಮೂಲ್ಯ ಅಲ್ಲವೆ ? ಒಮ್ಮೆ ಯೋಚಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):