ಮಾತು ...........

5

               ಮಾತು ...........
ಕತ್ತಿಯಂತೆ ಘಾಸಿಗೊಳಿಸುವ ವೇದನ 
ಹತ್ತಿಯಂತೆ ನಯವಾಗಿಸುವ ಸಂವೇದನ...
ಮುತ್ತಿನಂತೆ ಹೊಳಪು 
ಚಿಪ್ಪಿನಂತೆ ಒರಟು....
ಜಿನುಗುವ ಸೋನೆಯ  ಜೀವಕಳೆ 
ಭೋರ್ಗರೆವ ಮುಸಲಧಾರೆಯ ಜೀವ ಕೊಲೆ...
ಬೆಚ್ಚಿ ನೋಯಿಸುವ ಚುಚ್ಚು ಮುಳ್ಳು
ಮೆಚ್ಚಿ ನೇವರಿಸುವ ಕೋಮಲ ಹೂವು...
ಕಂಪಿನ ತಂಪು ತಂಗಾಳಿ 
ಬಿರುಸಿನ ವರಸೆಯ ಬಿರುಗಾಳಿ....
ನಂದಾದೀಪದ ಚಂಬೆಳಕಿನ ಪ್ರಜ್ವಲ 
ಕಾಡ್ಗಿಚ್ಚಿನ ಕಂಗಾಲು ಜ್ವಾಲ....
ಜುಳು ಜುಳನೆ ಹರಿವ ನದಿಯ ಸುನಾದ ಬೊಬ್ಬಿರಿದು ಅಬ್ಬರಿಸುವ ಅಲೆಯ ಸುನಾಮಿ.....
ಮಾತಿನ ಈ  ಯಾನ ನಿರಂತರ 
ಮೇರೆ ಮೀರಿದ ಅನಂತ ಅಂತರ...
—-Rukku  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.