ಮಿಡಿತ

3.5

 ಓ ಪ್ರೀತಿಯೇ, ನೀನೇಕೆ ಬಂದು ಉದ್ಬವಿಸಿದೆ
ಈ ಪುಟ್ಟ ಹೃದಯದಲಿ ನನಗರಿವಿಲ್ಲದಂತೆ
ಕಾತರಿಸಿ ನರಳಾಡಿಸಿ
ಸತಾಯಿಸುತ್ತಿರುವೆಯಲ್ಲ ಈ ಮನಸ್ಸನ್ನ।।
 
ಮಕರಂದ ಹೀರಲು ಮತ್ತೆ ಮತ್ತೆ ಹಾರಿ ಬರುವ 
ಚಿಟ್ಟೆಯಂತೆ, ಹೃದಯದಲಿ ಬಂದು ಬೀಡು ಬಿಟ್ಟೆ
ಕೊನೆಗು ಅವಕಾಶ ಸಿಕ್ಕಿತು ವ್ಯಕ್ತಪಡಿಸಲು 'ಪ್ರೀತಿಯನ್ನ'
ಹೇಳಿಯೇ ಬಿಟ್ಟೆ ನನ್ನಿ ಭಾವನೆಯನ್ನ ನನ್ನವಳಮುಂದೆ।।
 
ಹೃದಯದ ಮಿಡಿತ ಢವ ಢವ ಬಡಿಯುತ
ನನ್ನವಳ ಸಿಹಿಯಾದ ಉತ್ತರಕ್ಕೆ ಕಾತರಿಸುತ
ಪ್ರೀತಿಯ ನಿರೀಕ್ಷೆಯಲ್ಲೆ ತೊಳಲಾಡುತ
ನನ್ನ ನಾ ಸಮದಾನಿಸುತ।।
 
ಇನ್ನೇನು ನನ್ನ ಪ್ರಶ್ನೆಗ ಉತ್ತರ ಸಿಕ್ಕತೆಂದು, ಅವಳ 
ಸ್ವರವನ್ನೆ ಆಲಿಸುತಿದ್ದೆ, ಹೃದಯ ಬಿಗಿ ಹಿಡಿದು
ಹೃದಯ ಹಕ್ಕಿಯಂತೆ ಹಾರಾಡುತ್ತದೆ, ನದಿಯಂತೆ
ಹರಿದಾಡುತ್ತದೆ ಅನ್ನುವ ಎಂತದೊ ಹುಚ್ಚು ಕಲ್ಲನೆ।।
 
ನನ್ನವಳ ಮೌನ, ನನ್ನ ಹೃದಯದ ಬಡಿತ ಹೆಚ್ಚುತಲಿತ್ತು
ಅವಳಿಂದ ಯಾವುದೇ ಸಿಹಿಯಾದ ಮಾತು ಹೊರಡಲಿಲ್ಲ
ನಾ ಗೊಂದಲದಲ್ಲಿಯೇ ಮುಳುಗಿದ್ದೆ।।
 
ಇದು ನನ್ನ ಪ್ರೀತಿಗೆ ಸಮ್ಮತಿಯೋ! ಅವನತಿಯೋ!
ಕೊನೆಗು ನಿರೀಕ್ಷೆಯಲ್ಲಿಯೇ ಕಾಯುತಲಿರುವೆನು
ಹೃದಯದಲಿ ಬೀಡು ಬಿಟ್ಟ ನನ್ನೀ ಪ್ರೀತಿಗಾಗಿ।।।
 
 
 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (6 votes)
To prevent automated spam submissions leave this field empty.