ಮೀಸಲಾತಿ ಬರಿ ಹೆಸರಾಗಿ ಉಳಿಯದೆ, ಹಸಿರಾಗಿ ಮೂಡಿ ಬರಲಿ

2

ಬಹುದೊಡ್ಡ ಭಾರತ ಬಹುಸಂಖ್ಯಾತರೆ ಇದಕ್ಕೆ ಬಂಡವಾಳ , ಆದರೆ ಅವರನ್ನೆ ಕಡೆಗಣಿಸಲಾಗುತ್ತಿದೆ . ಎನಿಸುತ್ತಿದೆ ಭಾರತದ ಬಡತನ ರೇಖೆಯ ಕೆಳಗಿರುವ ಜನವರ್ಗದ ಜಾತಿ ಮತ್ತು ಸಮುದಾಯಗಳ ಪಟ್ಟಿಯನ್ನು ಸಾಚಾರ ಆಯೋಗದಲ್ಲಿ ಉಲ್ಲೇಖಿಸಲಾಗಿದೆ. ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ, ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.

ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ. ಈ ಮೀಸಲಾತಿ ಸೂತ್ರವನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಭಾರತದ ಸಂಸತ್ತಿನಲ್ಲೂ ಪಾರ್ಲಿಮೆಂಟ್ ಆಫ್ ಇಂಡಿಯಾದಲ್ಲಿಯೂ ಪ್ರತಿನಿಧಿತ್ವ ವಹಿಸಲು ನೀಡಿದೆ.

ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಮತ್ತು ಇನ್ನಿತರ ಸೌಲಭ್ಯಕ್ಕಾಗಿ 27% ಮೀಸಲಾತಿ ನೀಡಿದೆ.ಆಯಾ ರಾಜ್ಯಗಳು ತಮಗೆ ಅನುಕೂಲಕರ ಪ್ರಮಾಣದಲ್ಲಿ ಕೊಟಾವನ್ನು ನಿಗದಿ ಮಾಡಿಕೊಳ್ಳಬಹುದು. ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಈ ಮೀಸಲಾತಿ ಪ್ರಮಾಣವು ಶೇ.50 ಕ್ಕಿಂತ ಹೆಚ್ಚಾಗಬಾರದು. ಆದರೆ ಭಾರತದ ರಾಜಸ್ಥಾನದಂತಹ ರಾಜ್ಯಗಳಲ್ಲಿ ಇದು 68% ರಷ್ಟಿದೆ, ಯಾಕೆಂದರೆ ಇದರಲ್ಲಿ 14% ಪ್ರಮಾಣವನ್ನು ಮುಂದವರೆದ ಜನಾಂಗದವರಿಗೂ ಕಲ್ಪಿಸಲಾಗಿದೆ.

ಮೀಸಲಾತಿ ಉದ್ದೇಶವು ಸಾಮಾಜಿಕ ವೈವಿಧ್ಯದಲ್ಲಿ ತಾರತಮ್ಯ ಅನುಭವಿಸುವ ಜನಾಂಗಗಳ ಹಕ್ಕು ರಕ್ಷಿಸುವ ಪ್ರಮುಖ ಉದ್ದೇಶವಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಪ್ರಾತಿನಿಧ್ಯ ಕಂಡ ಸಮುದಾಯವನ್ನು ಸಾಮಾನ್ಯ ಸರಾಸರಿಯೊಂದಿಗೆ ಮೇಳೈಸುವುದೇ ಇದರ ಪ್ರಮುಖ ಗುರಿಯೂ ಆಗಿದೆ. ಕಡಿಮೆ ಪ್ರಾತಿನಿಧ್ಯ ಕಂಡು ಹಿಡಿಯಲು ಜಾತಿ ಅತ್ಯಂತ ಸೂಕ್ತ ಮಾನದಂಡವಾಗಿದೆ. ಇದೂ ಅಲ್ಲದೇ ಅತ್ಯಂತ ಕಡಿಮೆ ಪ್ರಾತಿನಿಧ್ಯ ಪಡೆದ ಇನ್ನೂ ಹಲವು ವರ್ಗಗಳಿವೆ. ಅದರಲ್ಲೂ ಲಿಂಗ ತಾರತಮ್ಯವಿದೆ.(ಮಹಿಳೆಯರ ಪ್ರಾತಿನಿಧ್ಯವೂ ಕಡಿಮೆಯೇ)ರಾಜ್ಯದ ಸ್ಥಳೀಯ ಜನಸಂಖ್ಯೆಗೆ ಹೋಲಿಸಿದರೆ,(ಈಶಾನ್ಯ ರಾಜ್ಯಗಳು ಅದಲ್ಲದೇ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರಾತಿನಿಧ್ಯದ ಸರಾಸರಿ ಕಡಿಮೆ.)ಗ್ರಾಮೀಣ ಭಾಗದಲ್ಲಿನ ಜನರ ಪಾಲ್ಗೊಳ್ಳುವಿಕೆ ವಿರಳ,ಎಂಬುದನ್ನು ನ್ಯಾಶನಲ್ ಫೆಮಿಲಿ ಹೆಲ್ತ್ ಅಂಡ್ ನ್ಯಾಶನಲ್ ಸ್ಯಾಂಪಲ್ ಸರ್ವೆ ಇದನ್ನು ಅಧ್ಯಯನ ಮಾಡಿ ಪತ್ತೆ ಹಚ್ಚಿದೆ.

ಇಲ್ಲಿ ಕಡಿಮೆ ಪ್ರಾತಿನಿಧ್ಯ ಅಂದರೆ ಅವರು ಪ್ರಮುಖ ವಾಹಿನಿಯಲ್ಲಿ ಬರದಿರುವುದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಜಾತಿ ಪದ್ದತಿಯೆಂದು ಸುಲಭವಾಗಿ ಗುರುತಿಸಬಹುದು. ಭಾರತದ ಸ್ವಾತಂತ್ರ್ಯಾನಂತರ,ತನ್ನ ಸಂವಿಧಾನ ಕಾನ್ ಸ್ಟಿಟುಶನ್ ಆಫ್ ಇಂಡಿಯಾ ದಲ್ಲಿ ಕೆಲವು ನಿರ್ಧಿಷ್ಟ ಜಾತಿ-ವರ್ಗಗಳನ್ನು ಗುರುತಿಸಿದೆ.ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳು (ST)ಇತ್ಯಾದಿ. ಹೀಗೆ ಸಂವಿಧಾನ ರಚನೆಗಾರರು SCs ಮತ್ತು STs ಎಂಬ ಗುಂಪು ಈ ಜಾತಿ ಪದ್ದತಿಯಿಂದ ಹುಟ್ಟಿಕೊಂಡಿದ್ದು,ಇದು ಐತಿಹಾಸಿಕವಾಗಿ ಈ ವರ್ಗವು ಶೋಷಣೆಗೊಳಗಾಗಿದ್ದು ಅದಕ್ಕಾಗಿ ದೇಶ ಕಟ್ಟುವ ಚಟುವಟಿಕೆಗಳಲ್ಲಿ ಈ ಸಮುದಾಯ ಪಾಲ್ಗೊಳ್ಳದಿರಲು ಆಗಲಿಲ್ಲ,ಇಂತಹ ಒಂದು ಕಾರಣದಿಂದ ವಿಶೇಷ ಸೌಲಭ್ಯ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಂವಿಧಾನವು 15% ಮತ್ತು 7.5% ರಷ್ಟು ಮೀಸಲಾತಿಯನ್ನು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ/ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ನೀಡಿದೆ.SCs ಮತ್ತು STs ಈ ಪಟ್ಟಿಯಲ್ಲಿನ ಸಮುದಾಯಕ್ಕೆ ಮೊದಲ ಐದು ವರ್ಷಗಳ ವರೆಗೆ ನಿಗದಿ ಮಾಡಿ ಅದನ್ನು ಆಯಾ ಸಂದರ್ಭಕ್ಕೆ ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯು ಇದುವರೆಗೂ ಅಡಳಿತ ಮಾಡಿದ ಸರ್ಕಾರಗಳಿಂದ ಮುಂದುವರೆಸುತ್ತಲೇ ಬರಲಾಗಿದೆ.

ನಂತರ ಈ ಮೀಸಲಾತಿಯನ್ನು ಇತರ ವರ್ಗಗಳಿಗೂ ವಿಸ್ತರಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಈ ಮೀಸಲಾತಿಯು 50% ಕ್ಕಿಂತ ಹೆಚ್ಚಾಗಬಾರದೆಂಬ ನಿಯಮ ರೂಪಿಸಿ ಸಮಾನವಕಾಶದ ಮಾರ್ಗ ಸೂಚಿಸಿದೆ.(ಸಂವಿಧಾನವು ಸಮಾನ ಅವಕಾಶದ ಉಲ್ಲಂಘನೆಗೆ ಅವಕಾಶ ನೀಡಿಲ್ಲ)ಆದರಿಂದ ಮೀಸಲಾತಿ ಮೇಲೆ ಒಂದು ನಿರ್ಭಂದ ವಿಧಿಸಿದೆ. ಕೆಲವು ರಾಜ್ಯಗಳಲ್ಲಿ ಈ 50% ಪರಿಧಿಯನ್ನು ಮೀಸಲಾತಿ ನೀಡಿದ ನಿದರ್ಶನಗಳು ಇದ್ದು ಅದರ ಬಗ್ಗೆ ವಿಚಾರಣೆ-ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಉದಾಹರಣೆಗೆ ತಮಿಳುನಾಡಿನಲ್ಲಿ ಈ ಮೀಸಲಾತಿ ಪ್ರಮಾಣವು 69% ಮತ್ತು 87% ರಷ್ಟನ್ನು ಆಯಾ ವರ್ಗಗಳಿಗೆ ಅನ್ವಯಿಸುವಂತೆ ನೀಡಲಾಗುತ್ತಿದೆ.
ಆಚರಣೆಯ ಇತಿಹಾಸ

ಹಿಂದುಳಿದ ವರ್ಗಗಳಿಗೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ವಿಶಾಲ ಪ್ರದೇಶದಲ್ಲಿ ಪ್ರೆಸಿಡೆನ್ಸಿ ಆಡಳಿತ ಪ್ರದೇಶಗಳಲ್ಲಿ ಮತ್ತು ವಿಂಧ್ಯ ಪ್ರದೇಶದಲ್ಲಿದ ರಾಜರ ಆಡಳಿತಾವಧಿಯಲ್ಲಿ ಈ ಸವಲತ್ತು ನೀಡಲಾಗಿತ್ತು. ಛತ್ರಪತಿ ಶಾಹುಜಿ ಮಹಾರಾಜ,ಮಹಾರಾಷ್ಟ್ರದಲ್ಲಿನ ಮಹಾರಾಜಾ ಆಫ್ ಕೊಲ್ಲಾಪುರ್ ಇವರುಗಳು 1902 ರ ಮುಂಚೆಯೇ ರಾಜ್ಯಾಡಳಿತಗಳಲ್ಲಿ ಹಿಂದುಳಿದವರ ಪಾಲನ್ನು ನೀಡಲು ಮೀಸಲಾತಿ ನೀತಿ ರೂಪಿಸಿದ್ದರು. ಆಗಿನ 1902 ರ ಒಂದು ಸೂಚನಾ ಪತ್ರವು ಕೊಲ್ಹಾಪುರ್ ದ ಆಡಳಿತದಲ್ಲಿ 50% ರಷ್ಟು ಮೀಸಲಾತಿಯನ್ನು ಹಿಂದುಳಿದ ಸಮುದಾಯದವರಿಗೆ ನೀಡಿತ್ತು, ಭಾರತದಲ್ಲಿನ ಶೋಷಿತ ವರ್ಗದ ಕಲ್ಯಾಣಕ್ಕೆ ಮಾಡಿದ ಮೊದಲ ನೋಟಿಫಿಕೇಶನ್ ಇದಾಗಿದೆ.

ಆದರೆ ಅಸ್ಪ್ರಶ್ಯತೆಯು ಎಲ್ಲೆಡೆಗೂ ಒಂದೇ ತೆರನಾಗಿ ಇರಲಿಲ್ಲವಾದ್ದರಿಂದ ಹಿಂದುಳಿದವರನ್ನು ಗುರುತಿಸುವುದು ಸುಲಭವಾಗಿರಲಿಲ್ಲ. ಇನ್ನೂ ಹೆಚ್ಚೆಂದರೆ ಈ ಅಸ್ಪ್ರಶ್ಯತೆ ಮತ್ತು ವಿಭಾಗಿಕರಣವು ಉತ್ತರ ಭಾರತಕ್ಕಿಂತ ದಕ್ಷಿಣದಲ್ಲೇ ಹೆಚ್ಚು ಪ್ರಚಲಿತವಾಗಿತ್ತು. ಅದಲ್ಲದೇ ಒಂದು ಪ್ರದೇಶದಲ್ಲಿ ಅಸ್ಪ್ರಶ್ಯವೆನಿಸಿದ ಸಮುದಾವು ಇನ್ನೊಂದು ಪ್ರದೇಶದಲ್ಲಿ ಅದೇ ವಿಧದಲ್ಲಿ ಅನುಸರಣೆಯಾಗುತ್ತಿರಲಿಲ್ಲ. ಕೆಲವು ಸಾಂಪ್ರದಾಯಿಕ ವೃತ್ತಿಪರತೆ ಹೊಂದಿದ ಜಾತಿಗಳು ಹಿಂದು ಮತ್ತು ಹಿಂದುಯೇತರ ವರ್ಗಗಳಲ್ಲಿ ಸ್ಥಾನ ಪಡೆದಿದ್ದವು. ಈ ಜಾತಿಗಳನ್ನು ಮನುಕಾಲದ ಆರಂಭದಿಂದಲೂ ಅದೇ ವಿಧವಾದ ವೃತ್ತಿಗಳಲ್ಲಿ ಕಾಣಬಹುದಾಗಿದೆ. ಮಧ್ಯಕಾಲೀನ ಅನುಕ್ರಮಣ ಸಮಯದಲ್ಲಿ ದೇಶದಲ್ಲಿನ ವಿವಿಧ ಸಮುದಾಯಗಳ ವಿವರ ನೀಡಲಾಗಿತ್ತು. ಬ್ರಿಟಿಷ ವಸಾಹತು ಕಾಲದಲ್ಲಿ 1802 ರ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಈ ಜಾತಿವಾರು ಪಟ್ಟಿ ಮಾಡುವ ಕಾರ್ಯ ನಡೆಯಿತು. ಇದು 1881 ರಿಂದ 1931 ರ ವರೆಗೆ ನಡೆದ ಜನಗಣತಿ ಅವಧಿಯಲ್ಲಿ ಹೆಚ್ಚು ಪ್ರಚಲಿತವಾಯಿತು.

ಅದೇ ತೆರನಾಗಿ ಹಿಂದುಳಿದ ವರ್ಗಗಳ ಚಳವಳಿಯು ಅದೇ ಕಾಲದಲ್ಲಿ ತನ್ನ ತಲೆ ಎತ್ತಿ ಪ್ರತಿಭಟಿಸಿದ್ದು ಮೊದಲು ತಮಿಳುನಾಡಿನಲ್ಲಿ. ಹೀಗೆ ಸಮಾಜ ಸುಧಾರಕರ ನಿರಂತರ ಪ್ರಯತ್ನಗಳು ನಡೆದವು,ಅವರೆಂದರೆ: ರೆಟ್ಟಮಲೈ ಸ್ರಿನಿವಾಸ್ ಪರೈಯಾರ್ ,ಅಯೊತಿದಾಸ್ ಪಂಡಿತರ್ ಜ್ಯೋತಿಬಾ ಪುಲೆ ಬಾಬಾಸಾಹೇಬ ಅಂಬೇಡ್ಕರ್, ಛತ್ರಪತಿ ಸಾಹು ಜಿ ಮಹಾರಾಜ ಮತ್ತು ಇನ್ನಿತರರು,ಮೇಲ್ವರ್ಗ ಮತ್ತು ಅಸ್ಪ್ರಶ್ಯರ ನಡುವೆ ನಿರ್ಮಿಸಿದ್ದ ಗೋಡೆಯನ್ನು ಕೆಡವಿಹಾಕಿದರು.ಭಾರತವು ಹಲವಾರು ಸ್ವಗೋತ್ರ ಸಮುದಾಯಗಳಲ್ಲಿ ವಿಂಗಡಣೆಯಾಗಿದೆ.. ಇಲ್ಲಿ ಜಾತಿಗಳು ಮತ್ತು ಉಪಜಾತಿಗಳು ಶತಮಾನಗಳಿಂದಲೂ ಸಾಮಾಜಿಕ ವರ್ಗಗಳ ದರ್ಜೆಗಳನ್ನು ಜಾತಿ ಪದ್ದತಿ ಎಂದು ಕರೆಯಲಾಗುತ್ತಿದೆ. ಈ ಮೀಸಲಾತಿ ಪ್ರತಿಪಾದಕರು ಈ ಸಾಂಪ್ರದಾಯಿಕ ಜಾತಿ ಪದ್ದತಿಯಿಂದ ಗಂಭೀರ ಪ್ರಮಾಣದ ಶೋಷಣೆ ಮತ್ತು ಬಹಿಷ್ಕಾರಗಳು ಕೆಳಜಾತಿಗಳಲ್ಲಿ ನಡೆಯುತ್ತವೆ. ಎಂದು ಅಭಿಪ್ರಾಯಪಟ್ಟರು.ಇದರಿಂದ ಅಂತಹ ವರ್ಗಗಳು ಹಲವು ಸ್ವಾತಂತ್ರ್ಯಗಳಿಂದ ವಂಚಿತರಾಗುತ್ತಾರೆ,ಶಿಕ್ಷಣವನ್ನೊಳಗೊಂಡಂತೆ ಇದು ಪರಿಣಾಮ ಬೀರುತ್ತದೆ. ಜಾತಿಯನ್ನು ಪ್ರಾಚೀನ ಗ್ರಂಥಗಳಲ್ಲಿಯೂ ಅಂದರೆ "ಮನುಸ್ಮೃತಿ"ಯಲ್ಲಿ "ವರ್ಣಾಶ್ರಮ ಧರ್ಮ"ದಡಿ ವಿಂಗಡಿಸಲಾಗಿದೆ.

ಇದರಲ್ಲಿ ಅವರವರ ವೃತ್ತಿಗಳ ಮೇಲೆ ಅವರಿಗೆ ಸಮಾಜದಲ್ಲಿ ಸ್ಥಾನಮಾನ ನೀಡಲಾಗಿತ್ತು. "ವರ್ಣ "ಎಂಬುದನ್ನು ವರ್ಣಾಶ್ರಮದಲ್ಲಿ (ವರ್ಣ+ಆಶ್ರಮ)ಎಂಬುದನ್ನು 'ಬಣ್ಣ'ಕ್ಕೆ ಹೋಲಿಸಿ ಅರ್ಥೈಸಬಾರದು. ಭಾರತದಲ್ಲಿನ ಜಾತಿ ಪದ್ದತಿ ಆಚರಣೆಯು ಈ ನಿಯಮವನ್ನು ಪಾಲಿಸುತಿತ್ತು.    1882 - ಹಂಟರ್ ಆಯೋಗ ನೇಮಕ. ಮಹಾತ್ಮಾ ಜ್ಯೊತಿರಾವ್ ಫುಲೆ ಅವರು ಉಚಿತ ಶಿಕ್ಷಣ ಮತ್ತು ಸರ್ಕಾರಿ ಕೆಲಸಗಳಲ್ಲಿ ಅಗತ್ಯ ಮೀಸಲಾತಿ ನೀಡುವಂತೆ,ಅದು ಜಾತಿಗೆ ಸರಾಸರಿ ಪ್ರಾತಿನಿಧ್ಯ ನೀಡುವಂತೆ ಅವರು ಒತ್ತಾಯಿಸಿದರು.

    ಆಗ 1891-ರಲ್ಲಿ ಸರ್ಕಾರಿ ಕೆಲಸಗಳಲ್ಲಿ ಮೀಸಲಾತಿ ಬೇಕೆಂಬ ಬೇಡಿಕೆಯು 1891 ರ ಆರಂಭದಲ್ಲೇ ಕೇಳಿ ಬಂತು.ಟ್ರ್ಯಾವಂಕೂರ್ ರಾಜಮನೆತನದ ಆಡಳಿತದಲ್ಲಿ ಸ್ಥಳೀಯರಲ್ಲದವರನ್ನು ಕೆಲಸಗಳಲ್ಲಿ ನೇಮಕ ಮಾಡಿಕೊಂಡು ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಯಿತೆಂದು ಹೋರಾಟ ಮಾಡಲಾಯಿತು.

    ನಂತರ 1901-ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ರಾಜ ಶಾಹು ಮಹಾರಾಜರ ಆಡಳಿತದಲ್ಲಿ ಮೀಸಲಾತಿಗಳನ್ನು ಜಾರಿಗೊಳಿಸಲಾಯಿತು. ಅದಾಗಲೇ ಬರೋಡಾ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಮೀಸಲಾತಿ ಜಾರಿಯಲ್ಲಿತ್ತು.

    ಮುಂದೆ 1908- ರ ಹೊತ್ತಿಗೆ ಹಲವಾರು ಜಾತಿಗಳು ಮತ್ತು ಸಮುದಾಯಗಳಿಗೆ ಬ್ರಿಟಿಷ್ ಆಡಳಿತದಲ್ಲಿ ಕಡಿಮೆ ಪ್ರಾತಿನಿಧ್ಯದ ಇವುಗಳಿಗೆ ಮೀಸಲಾತಿ ಕಲ್ಪಿಸಲಾಯಿತು.

    ಹೀಗೆ 1909- ರಲ್ಲಿ ಗವರ್ಮೆಂಟ್ ಆಫ್ ಇಂಡಿಯಾ ಆಕ್ಟ್ 1909 ರ ಭಾರತೀಯ ಸರ್ಕಾರದ ಕಾನೂನಿನಲ್ಲಿ ಸವಲತ್ತುಗಳನ್ನು ಕಲ್ಪಿಸಲಾಯಿತು.

    ಅದರ ಹಿಂದೆಯೇ 1919 -ರಲ್ಲಿ ಮೊಂಟ್ಯಾಗು-ಚೆಲ್ಮ್ಸ್ ಫೊರ್ಡ್ ರಿಫಾರ್ಮ್ಸ್ ಅಂದರೆ ಚೆಲ್ಮ್ಸ್ ಫೊರ್ಡ್ ಅವರ ಸುಧಾರಣೆಗಳು ಜಾರಿಯಾದವು.

    1919-ರಲ್ಲಿ ಗವರ್ನ್ ಮೆಂಟ್ ಆಫ್ ಇಂಡಿಯಾ ಆಕ್ಟ್ 1919 ರಲ್ಲಿ ಭಾರತೀಯ ಕಾನೂನು ರೀತ್ಯಾ ಸವಲತ್ತುಗಳನ್ನು ಒದಗಿಸುವಲ್ಲಿ ಸಫಲವಾಯಿತು.

    1921-ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕೋಮುಸಮುದಾಯಕ್ಕಾಗಿ ,ಸರ್ಕಾರಿ ಆದೇಶವೊಂದನ್ನು ಹೊರಡಿಸಿ ಬ್ರಾಹ್ಮಣೇತರರಿಗೆ ಶೇಕಡಾ 44,ಬ್ರಾಹ್ಮಣರಿಗೆ ಶೇಕಡಾ 16,ಶೇಕಡಾ 16 ಮುಸ್ಲಿಮ್ ರಿಗೆ,ಶೇಕಡಾ 16 ಆಂಗ್ಲೊಇಂಡಿಯನ್ಸ/ಕ್ರಿಶ್ಚಿಯನ್ ರಿಗೆ ಮತ್ತು ಎಂಟರ ಶೇಕಡಾವನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಕಟಿಸಿತು.

    ಮುಂದೆ 1935-ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದು ಪೂನಾ ಎನ್ನುವ ಒಪ್ಪಂದ ಮಾಡಿ ಕೆಳದರ್ಜೆಯ ಮತ್ತು ತುಳಿತಕ್ಕೊಳಗಾದವರಿಗಾಗಿ ಪ್ರತ್ಯೇಕ ಮತಕ್ಷೇತ್ರಗಳ ಹಂಚಿಕೆ ಬಗ್ಗೆ ಕಾರ್ಯಕ್ರಮ ಹಾಕಿಕೊಂಡಿತು.

    1935 - ರಲ್ಲಿ ಗವರ್ನೆ ಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಇದು ಭಾರತ ಸರ್ಕಾರದ ಕಾನೂನನ್ನು ಜಾರಿಗೊಳಿಸಿತು.

    1942- ರಲ್ಲಿ ಬಿ.ಆರ್ ಅಂಬೇಡ್ಕರ್ ಅವರು ಅಖಿಲ ಭಾರತ ತುಳಿತಕ್ಕೊಳಗಾದ ವರ್ಗಗಳ ಒಕ್ಕೂಟವನ್ನು ರಚಿಸಿ ಪರಿಶಿಷ್ಟ ಜಾತಿಯವರ ಮುಂದುವರಿಯುವಿಕೆಗೆ ಒತ್ತು ನೀಡಿದರು. ಅವರೂ ಕೂಡಾ ಸರ್ಕಾರಿ ಕೆಲಸ-ಸೇವೆಗಳಲ್ಲಿ

ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವಂತೆ ಬೇಡಿಕೆಯೊಡ್ಡಿದರು.

    1946-ರಲ್ಲಿ 1946 ಕ್ಯಾಬಿನೆಟ್ ಮಿಶನ್ ಟು ಇಂಡಿಯಾ ತನ್ನ ನಿಯೋಗದಲ್ಲಿ ಆಯಾ ಜನಸಂಖ್ಯೆ ಅನುಪಾತಕ್ಕನುಗುಣವಾಗಿ ಪ್ರಾತಿನಿಧ್ಯ ನೀಡಲು ಆಗ್ರಹಿಸಿ ಹಲವಾರು ಶಿಫಾರಸ್ಸುಗಳನ್ನು ಮಾಡಿತು.

    1947-ಭಾರತ ಸ್ವಾತಂತ್ರ್ಯ ಪಡೆಯಿತು. ಡಾ.ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಭಾರತದ ಸಂವಿಧಾನವು ಧರ್ಮ, ಜನಾಂಗ,ಜಾತಿ, ಲಿಂಗ ಮತ್ತು ಜನನದ ಸ್ಥಳದ ಮೇಲೆ ತಾರತಮ್ಯ ಮಾಡುವುದನ್ನು ಕಡಾಖಂಡಿತವಾಗಿ ನಿರಾಕರಿಸಿತು. ಅವಕಾಶಗಳಲ್ಲಿ ಸಮಾನತೆ ನೀಡುವಲ್ಲಿ ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನತೆಯೊಂದಿಗೆ "ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರಿಗಾಗಿ ಅಥವಾ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಗಳಿಗಾಗಿ ವಿಶೇಷ ನಿಯಮಾವಳಿಗಳನ್ನು ರಚಿಸಿತು".ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ದೊರಕಿಸಲು 10 ವರ್ಷಗಳ ಕಾಲ ಪ್ರತ್ಯೇಕ ಮತಕ್ಷೇತ್ರಗಳನ್ನು ಹಂಚಿಕೆ ಮಾಡಿತು. ಇವುಗಳು ಬರಬರುತ್ತಾ ಪ್ರತಿ 10 ವರ್ಷಕ್ಕೊಮ್ಮೆ ಸಾಂವಿಧಾನಿಕ ತಿದ್ದುಪಡಿ ಗಳ ಮೂಲಕ ಹಾಗೆಯೇ ವಿಸ್ತರಿಸಲಾಯಿತು.

ಯಾರು ವಾರ್ಷಿಕ 250,000 ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುತ್ತಾರೋ ಅವರು ಮೀಸಲಾತಿ ಪರಿಧಿಗೆ ಬರಲಾರರು. ಅದಲ್ಲದೇ ವೈದ್ಯರ ಮಕ್ಕಳು,ಎಂಜನೀಯರ್ ಗಳು,ಚಾರ್ಟರ್ಡ್ ಅಕೌಂಟಂಟ್ ಗಳು,ನಟರು,ಮಾಧ್ಯಮ ವೃತ್ತಿಪರರು,ಬರೆಹಗಾರರು,ಅಧಿಕಾರಿಗಳು,ರಕ್ಷಣಾ ಇಲಾಖೆ ಅಧಿಕಾರಿಗಳು,ಕರ್ನಲ್ ದರ್ಜೆ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆ,ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಮಕ್ಕಳು ಮತ್ತು ಕೇಂದ್ರ-ರಾಜ್ಯ ಸರ್ಕಾರದಲ್ಲಿ A ಮತ್ತು B ವರ್ಗದ ಅಧಿಕಾರಿಗಳ ಮಕ್ಕಳು MP ಗಳು ಮತ್ತು MLA ಗಳ ಮಕ್ಕಳಿಗೂ ಮೀಸಲಾತಿ ಕೋಟಾಗಳನ್ನು ತೆಗೆದು ಹಾಕುವಂತೆ ಅದು ಸಂಸತ್ತಿಗೆ ಮನವಿ ಮಾಡಿತು.

ಭಾರತೀಯ ಜಾತಿ ಪದ್ದತಿ ಯು ಸಾಮಾಜಿಕ ಶ್ರೇಣೀಕರಣವನ್ನು ವಿವರಿಸುತ್ತದೆ.ಅದಲ್ಲದೇ ಸಾಮಾಜಿಕ ನಿರ್ಭಂಧಗಳಡಿ ಭಾರತ ಉಪಖಂಡದ ಸಾವಿರಾರು ಪಂಗಡದ ಪ್ರವರ್ಗಗಳನ್ನು, ವಂಶವಾಹಿನಿಗಳ ಸಮೂಹವನ್ನು ವ್ಯಾಖ್ಯಾನಿಸುತ್ತದೆ.ಇದನ್ನೇ ಜಾತಿ ಗಳು ಅಥವಾ ಕೋಮುಗಳೆಂದು ಹೇಳಲಾಗುತ್ತದೆ. ಈ ಜಾತಿಯಲ್ಲಿಯೇ ಅನ್ಯಗೋತ್ರ ಗುಂಪುಗಳ ಅಸ್ತಿತ್ವ ಇದೆ,ಇದನ್ನು ಗೋತ್ರಗಳು,ವಂಶವಾಹಿನಿ ಅಥವಾ ಕುಟುಂಬದ ಕುಲಗೋತ್ರವನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಲಾಗುತ್ತದೆ. ಹಲವಾರು ಉಪ-ಜಾತಿಗಳಲ್ಲಿ ಶಾಕಾದ್ವಿಪಿ,ಕೂಡಾ ಒಂದು,ಒಂದೇ ಗೋತ್ರದಲ್ಲಿ ವಿವಾಹ ಅನುಮತಿಸಿದ್ದರೂ ಅದನ್ನು ಪರ್ಯಾಯ ನಿರ್ಭಂದಿತ ಸಗೋತ್ರ ವಿವಾಹಕ್ಕೆ ಪರಿಗಣಿಸಲಾಗುತ್ತದೆ..

ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವ ಇತರ ಮುಸ್ಲಿಮರ ಕೆಲವು ಗುಂಪುಗಳು ಮತ್ತು ಕ್ರಿಶ್ಚನ್ ರು ಕೂಡಾ ಇದೇ ತೆರನಾದ ಗುಂಪು ಪ್ರಭೇದವನ್ನು ಹೊಂದಿರುವುದು ಭಾರತದ ಉಪಖಂಡದಲ್ಲಿ ಕಾಣುತ್ತದೆ. ಆದರೆ ದೊಡ್ಡ ದೊಡ್ಡ ನಗರಗಳಲ್ಲಿ ಜಾತಿಯ ನಿರ್ಭಂಧಗಳು ಅಷ್ಟೊಂದು ಬಿಗಿಯಾಗಿಲ್ಲ;ಇದು ಗ್ರಾಮೀಣ ವಲಯದಲ್ಲಿ ಕಟ್ಟು ನಿಟ್ಟಿನ ಕ್ರಮದಲ್ಲಿ ಚಾಲ್ತಿಯಲ್ಲಿದೆ., ಆದರೆ ಭಾರತದ 72% ರಷ್ಟು ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತಾರೆ .ಹಿಂದು ಧರ್ಮದ ಯಾವುದೇ ಗ್ರಂಥವು ಜಾತಿ ಆಧಾರದ ಭೇದಭಾವವನ್ನು ಅನುಮೋದಿಸುವುದಿಲ್ಲ,ಅಲ್ಲದೇ ಭಾರತದ ಸಂವಿಧಾನ ಕೂಡಾ ಜಾತಿ ಆಧಾರದ ಭೇದಭಾವವನ್ನು ಪುಷ್ಟಿಕರಿಸಲಾರದು,ಅದು ಸಮಗ್ರ ಜಾತ್ಯಾತೀತತೆಯನ್ನು ಪ್ರಜಾಪ್ರಭುತ್ವದ ತತ್ವಗಳ ಮೇಲೆ ದೇಶದ ಆಡಳಿತಕ್ಕೆ  ಮಾರ್ಗದರ್ಶಿಯಾಗಿದೆ. ಏನೇಯಾದರೂ ಆಧುನಿಕ ಭಾರತದಲ್ಲಿ ಜಾತಿ ಪದ್ದತಿಯು ವಿವಿಧ ಸ್ತರಗಳಲ್ಲಿ ಮುಂದುವರೆದಿದೆ ಎನ್ನಬಹುದು. ಯಾಕೆಂದರೆ ಇದಕ್ಕೆ ರಾಜಕೀಯ ಕಾರಣಗಳು ಮತ್ತು ಸಾಮಾಜಿಕ ಗ್ರಹಿಕೆಗಳು ಮತ್ತು ನಡವಳಿಕೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.
ಜಾತಿ ಪದ್ದತಿಯ ಆಧುನಿಕ ಸ್ಥಾನ-ಮಾನ

ಗ್ರಾಮೀಣ ಪ್ರದೇಶ ಮತ್ತು ಸಣ್ಣ ಪಟ್ಟಣಗಳಲ್ಲಿ ಜಾತಿ ಪದ್ದತಿಯು ಇನ್ನೂ ಪ್ರಬಲವಾಗಿದೆ. ಭಾರತದ ರಾಜಕಾರಣದಲ್ಲಿ ಜಾತಿಯು ಪ್ರಮುಖ ಅಂಶವಾಗಿದೆ ಭಾರತ ಸರ್ಕಾರವು ಜಾತಿ ಮತ್ತು ಉಪಜಾತಿಗಳನ್ನು ಅಧಿಕೃತವಾಗಿ ದಾಖಲಿಸಿ ಅದರ ಮೂಲಕ ಪ್ರಾಥಮಿಕವಾಗಿ ಶಿಕ್ಷಣ ಮತ್ತು ಉದ್ಯೋಗಳಲ್ಲಿ ಮೀಸಲಾತಿನೀಡಲು (ಧನಾತ್ಮಕ ತಾರತಮ್ಯ-ವಿಭಜನೆ)ಮಾಡಿ ಜನಗಣತಿಯನ್ನು ಮೂಲಾಧಾರವಾಗಿಸಿದೆ. ಭಾರತದ ಮೀಸಲಾತಿ ಪದ್ದತಿಯ ವ್ಯಾಪ್ತಿ ಸೀಮಿತವಾಗಿದ್ದರೂ ಅದು ಸಂಪೂರ್ಣವಾಗಿ ಹಕ್ಕುಳ್ಳ ಪಾಲನ್ನು ಅವಲಂಬಿಸಿದೆ. ಸರ್ಕಾರವು ಪರಿಶಿಷ್ಟ ಜಾತಿಗಳು,ಪರಿಶಿಷ್ಟ ಪಂಗಡಗಳು ಮತ್ತು ಇನ್ನಿತರ ಹಿಂದುಳಿದ ವರ್ಗಗಳನ್ನು ಅವಲಂಬಿಸಿದೆ:

ಪರಿಶಿಷ್ಟ ಜಾತಿಗಳು (ಎಸ್ .ಸಿ) ಪರಿಶಿಷ್ಟ ಜಾತಿಗಳು ಬಹುತೇಕವಾಗಿ ಹಿಂದಿನ"ಅಸ್ಪೃಶ್ಯರನ್ನು"ಒಳಗೊಂಡಿದೆ. ಸದ್ಯ "ದಲಿತ" ಎಂಬ ಪದವನ್ನು ಪರಿಗಣಿಸಲಾಗುತ್ತದೆ. ಸದ್ಯದ ಜನಸಂಖ್ಯೆಯು ಭಾರತದಲ್ಲಿ 16% ರಷ್ಟಿದ್ದು (ಸುಮಾರು 160 ದಶಲಕ್ಷ) ಉದಾಹರಣೆಗಾಗಿ ದೆಹಲಿ ರಾಜ್ಯದಲ್ಲಿ 49 ಜಾತಿಗಳನ್ನು ಎಸ.ಸಿ ಎಂದು ಪಟ್ಟಿ ಮಾಡಲಾಗಿದೆ.
ಪರಿಶಿಷ್ಟ ಪಂಗಡಗಳು(ಎಸ್ .ಟಿ) ಪರಿಶಿಷ್ಟ ಪಂಗಡಗಳು ಸಾಮಾನ್ಯವಾಗಿ ಬುಡಕಟ್ಟು ಜನಾಂಗದ ಗುಂಪನ್ನು ಹೊಂದಿವೆ. ಸದ್ಯ ಭಾರತದ ಒಟ್ಟು ಜನಸಂಖ್ಯೆಯ 7% ರಷ್ಟು ಇದೆ,ಅಂದರೆ 70 ದಶಲಕ್ಷದಷ್ಟು. ಇನ್ನಿತರ ಹಿಂದುಳಿದ ವರ್ಗಗಳು.
    ಮಂಡಲ್ ಆಯೋಗವು ಸುಮಾರು 3000ಕಿಂತಲೂ ಅಧಿಕ ಜಾತಿಗಳನ್ನು ಒಬಿಸಿಗಳೆಂದು ಪರಿಗಣಿಸಿದೆ.ಒಟ್ಟು ಜನಸಂಖ್ಯೆಯ 52% ರಷ್ಟನ್ನು ಇದು ಒಳಗೊಂಡಿದೆ. ಆದರೆ ರಾಷ್ಟ್ರೀಯ ಮಾದರಿ ಸರ್ವೇಕ್ಷಣೆಯು ಇದನ್ನು 32% ಎಂದು ತೋರಿಸಿದೆ. ಭಾರತದಲ್ಲಿ ಎಷ್ಟು ಒಬಿಸಿಗಳಿದ್ದಾರೆಂಬ ಬಗ್ಗೆ ವ್ಯಾಪಕ ಚರ್ಚೆಗಳಿವೆ;ಇದು ಸುಮಾರಾಗಿ ಹೆಚ್ಚೇ ಇದೆ ಆದರೆ ಇನ್ನು ಕೆಲವರು ಇದು ಕಡಿಮೆ ಪ್ರಮಾಣ ಎನ್ನುತ್ತಾರೆ.ಮಂಡಲ್ ಆಯೋಗ ಮತ್ತು ರಾಷ್ಟ್ರೀಯ ಸರ್ವೇಕ್ಷಣಾ ವರದಿಗಳ ನೀಡಿರುವ ಪ್ರಕಾರ ಇದು ಸಮಂಜಸ ಸಂಖ್ಯಾಬಲವಲ್ಲ ಎಂಬ ವಾದವೂ ಇದೆ.


ಭಾರತದಲ್ಲಿನ ಜಾತಿ ಆಧಾರಿತ ಮೀಸಲಾತಿಗಳು ವ್ಯಾಪಕ ವಿರೋಧವನ್ನು ಪಡೆದಿವೆ.ಉದಾಹರಣೆಗೆ 2006 ರಲ್ಲಿನ ಮೀಸಲಾತಿ ವಿರೋಧಿ ಪ್ರತಿಭಟನೆಗಳು,ಇದರಿಂದಾಗಿ ಮುಂದುವರೆದ ಜಾತಿಗಳ ವಿರುದ್ದದ ಭೇದಭಾವ ಇದು ಹಿಮ್ಮುಖ ತಾರತಮ್ಯ ಎಂಬ ವಾದವೂ ಇದೆ. ಹಲವರ ಪ್ರಕಾರ ಮುಂದುವರೆದ ಜಾತಿಗಳ ಬಗೆಗೆ ಸಾಮಾಜಿಕ ವಿಭಜನೆಯು ಋಣಾತ್ಮಕವಲ್ಲದೇ ಇದರೊಂದಿಗೆ ಸಮನಾಗಿ ತಪ್ಪು ಅರ್ಥ ಹೊಂದಿದೆ ಎನ್ನಲಾಗುತ್ತಿದೆ.
ಜಾತಿ ರಾಜಕಾರಣ

ಬಿ.ಆರ್ ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ಅವರ ನಡುವೆ ಜಾತಿ ಬಗೆಗಿನ ತತ್ವದ ಬಗ್ಗೆ ತಾತ್ವಿಕ ಅಂತರ ಮೂಡಿತ್ತು.ವಿಶೇಷವಾಗಿ ಸಾಂವಿಧಾನಿಕ ರಾಜಕೀಯ ಮತ್ತು ಅಸ್ಪೃಶ್ಯತೆ ಸ್ಥಾನ-ಮಾನದ ಬಗ್ಗೆ ಭಿನ್ನಾಭಿಪ್ರಾಯ ಬಂತು. ಸುಮಾರು 1980 ರ ವರೆಗೆ ಜಾತಿಯು ಭಾರತದ ರಾಜಕಾರಣದಲ್ಲಿ ಪ್ರಮುಖ ವಿಷಯವಾಯಿತು.

ಇದೇ ಕಾರಣಕ್ಕಾಗಿ 1979ರಲ್ಲಿ ಮಂಡಲ್ ಕಮೀಶನ್  ಸ್ಥಾಪನೆಯಾಗಿ "ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸ್ಥಾನ ಮೀಸಲಾತಿ ಮತ್ತು ಕೋಟಾಗಳ ನಿಗದಿ ಮಾಡಿ ಆ ಜನರ ಜಾತಿ ತಾರತಮ್ಯವನ್ನು ನಿವಾರಿಸುವಲ್ಲಿ ಸಫಲವಾಯಿತು. ಮುಂದೆ 1980 ರಲ್ಲಿ ಈ ಆಯೋಗದ ವರದಿಯು ಭಾರತೀಯ ಕಾನೂನಿನನ್ವಯ ಸಮರ್ಥನಾ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತು.ಇದರಿಂದ ಕೆಳದರ್ಜೆಯ ಜಾತಿಯ ಜನರಿಗೆ ಮೀಸಲಾದ ಸರ್ಕಾರಿ ಕೆಲಸಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಸ್ಥಳ ಕಾಯ್ದಿರಿಸುವ ಕ್ರಮವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲಾಯಿತು. ವಿ.ಪಿ ಸಿಂಗ್ ಅವರ ಆಡಳಿತಾವಧಿಯ 1989ರಲ್ಲಿ ಮಂಡಲ್ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಯತ್ನಿಸಿದಾಗ ದೇಶಾದ್ಯಂತ ವ್ಯಾಪಕ ವಿರೋಧ ಕಂಡುಬಂತು. ರಾಜಕಾರಣಿಗಳು ಜಾತಿ ಮೂಲದ ಮೇಲೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಹಲವರು ಟೀಕಿಸಿದರು,ಇದು ಚುನಾವಣಾ ಉದ್ದೇಶದಿಂದ ಕೈಗೊಂಡ ನಿರ್ಧಾರವೆಂದು ವಾದ ಮಂಡಿಸಲಾಯಿತು.

ಭಾರತದಲ್ಲಿನ ಹಲವಾರು ಪಕ್ಷಗಳು ಬಹಿರಂಗವಾಗಿಯೇ ಜಾತಿ ಆಧಾರದ ಮತ ಬ್ಯಾಂಕ್ ಗಳ ಮೇಲೆ ಅವಲಂಬಿತವಾದವು. ಉದಾಹರಣೆಗೆ ಬಹುಜನ ಸಮಾಜ ಪಕ್ಷ (ಬಿ.ಎಸ್ .ಪಿ),ಸಮಾಜವಾದಿ ಪಕ್ಷ ಮತ್ತು ಜನತಾ ದಳ ಪಕ್ಷಗಳು ತಾವು ಹಿಂದುಳಿದ ಜಾತಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡವಲ್ಲದೇ ಆಗಿದ್ದಾಗೆ ದಲಿತರು ಮತ್ತು ಮುಸ್ಲಿಮ್ ರ ಬೆಂಬಲದೊಂದಿಗೆ ಗೆದ್ದು ಬರುತ್ತಿರುವುದಾಗಿ ಹೇಳಲು ಆರಂಭಿಸಿದವು.

ಭಾರತದ ಇತಿಹಾಸದಲ್ಲೇ ಕಂಡರಿಯದ ಬೆಳವಣಿಗೆಯೊಂದು ಚುನಾವಣಾ ಇತಿಹಾಸದಲ್ಲಿ ಸಂಭವಿಸಿತು,ಅದೆಂದರೆ ಭಾರತದ ಬಹುದೊಡ್ಡ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವು ಬ್ರಾಹ್ಮಣ ಸಮಾಜದ ಬೆಂಬಲದೊಂದಿಗೆ ರಾಜ್ಯ ಶಾಸಕಾಂಗದಲ್ಲಿ ಬಹುಮತ ಪಡೆಯಲು ಸಮರ್ಥವಾಯಿತು.

ಆದರೆ ನಮ್ಮ ಕರ್ನಾಟಕದ ಪಾಲಿಗೆ ಮಾತ್ರ ಈ ಮಾತು ಇಲ್ಲವಾಗಿದೆ. ನಮ್ಮ ರಾಜ್ಯದಲ್ಲಿ ಇಲ್ಲಿಯವರೆಗೂ ಒಬ್ಬ ಮುಖ್ಯಮಂತ್ರಿ ಹಿಂದೂಳಿದ ವರ್ಗ ಪರಿಶಿಷ್ಟ ಜಾತಿ ಪಂಗಡದ ವ್ಯಕ್ತಿಯನ್ನು ಆರಿಸಲು ನಮ್ಮ ರಾಜ್ಯ ರಾಜಕಾರಣ ಹಿಂದೇಟು ಹಾಕುತ್ತಿದೆ. ಈ ಮೇಲ್ವರ್ಗದ ಜನರ ತುಳಿತಕ್ಕೆ ಒಳಗಾಗಿ ಅನೇಕ ಉತ್ತಮ ಜನರನ್ನು ಹಿಂದೇಟು ಹಾಕುತ್ತಿದೆ. ಭಾರತದಲ್ಲಿ ಮೀಸಲಾತಿ, ಕರ್ನಾಟಕದ ರಾಜಕೀಯದಲ್ಲಿ ಖಲಾಸ್ ಆಗುತ್ತಿದೆ .

ಇನ್ನಾದರು ನಮ್ಮ ರಾಜಕೀಯದಲ್ಲಿ ಉಳಿದ ಜಾತಿಗಳಿಗೆ ಅವಕಾಶ ಸಿಗಲಿ ಅವರ ಆಶೋತ್ತರಗಳಿಗೆ ಮನ್ನಣೆ ಸಿಗಲಿ ಎಂಬುವುದೆ ಬಲವಾದ ಆಸೆ ಏಕೆಂದರೆ ನಮ್ಮ ಸಂವಿಧನಾನ ಎಲ್ಲರಿಗೂ ಸಮಾನಾವಾದ ಅವಕಾಶ ಕಲ್ಪಿಸಿದೆ. ಎಲ್ಲರು ಬೆಳಿಯಲು ಅವಕಾಶ ನೀಡಿದೆ. ಒಮ್ಮೆ ಅವರ ಕೈಯಲ್ಲಿ ಆಡಳಿತ ಕೊಟ್ಟು ನೋಡಲಿ ಅನುಭವದ ಆಗರ ಇರುವ ಎಷ್ಟೊ ಜನರು ಮುಂದೆ ಬರಲಿ .ಮೀಸಲಾತಿ ಬರಿ ಹೆಸರಾಗಿ ಉಳಿಯದೆ , ಹಸಿರಾಗಿ ಹೊರಬರಲಿ.ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.

B.Sc.B.Ed.

ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪುರಸ್ಕೃತರು. 9620633104

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):