ಮೂರ್ತಿ ಪೂಜೆ ಬೇಕೆ ಬೇಡವೇ?

0

ಮೊನ್ನೆ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ಆರ್ಯಸಮಾಜದ ಮಳಿಗೆಯಿಂದ ಮೂರ್ತಿ ಪೂಜೆ ಒಂದು ಜಿಜ್ನಾಸೆ ಎಂಬ ಪುಸ್ತಕ, ಸುಧಾಕರ  ಚತುರ್ವೇದಿಯವರದು, ಕೊಂಡುಕೊಂಡೆ

ಮೊತ್ತಮೊದಲಿಗೆ ಪರಮಾತ್ಮನಿದ್ದಾನೆ ಎಂಬ ಪ್ರತಿ ಪಾದನೆಯಿಂದ ಶುರುವಾಗುವ ಆ ಪುಸ್ತಕದಲ್ಲಿ ಮೂರ್ತಿ ಪೂಜೆ ಒಂದು ಮೂರ್ಖ . ಆಚರಣೆ ಹಾಗು ಅದರಿಂದ ಆಗುವ ಆನಾಹುತಗಳು ಇವುಗಳ ಬಗ್ಗೆ ವಿವರಿಸಿದ್ದಾರೆ 

ನಿಮ್ಮಗಳ ಅಭಿಪ್ರಾಯವೇನು?

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ರೂಪ ಅವರೇ ಸುಳ್ಳು, ಕಪಟ, ಮೋಸ, ಮಾಡುವ ಕಳ್ಳ ಬಾಬಾಗಳ ವ್ಯಕ್ತಿಪೂಜೆಯಂತಹ ಮೂರ್ಖತನವೇ ನಿರಂತರವಾಗಿ ಸಾಗಿರಬೇಕಾದರೆ ಮೂರ್ತಿ ಪೂಜೆ ಮಾಡುವುದರಲ್ಲಿ ತಪ್ಪಿಲ್ಲ ಹಾಗೂ ಅದು ಮೂರ್ಖತನವಲ್ಲ ಎಂದು ನನ್ನ ಅನಿಸಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೂರ್ತಿ ಪೂಜೆ ತಪ್ಪು (Ignorance) ಅಂತ ಅನಿಸಿಕೆ ನನ್ನದೂ. ಆದರೆ ಕೆಲವು ಮತಗಳು (semitic) ಹೇಳುವಂತೆ ಅಪರಾಧ ಅಂತೂ ಅಲ್ಲ. Ignorance ಗೂ ಅಪರಾಧಕ್ಕೂ ವ್ಯತ್ಯಾಸ ಇದೆ ತಾನೆ. http://www.agniveer.com ಈ ವೆಬ್ ಸೈಟ್ ನೋಡಿ. ಆರ್ಯಸಮಾಜಿಗಳು ಬರ್ದಿರೋದು. ಮೂರ್ತಿ ಪೂಜೆ ಸೇರಿದಂತೆ ಇನ್ನೂ ಹತ್ತು ಹಲವು ವಿಷಯಗಳ ಬಗ್ಗೆ ಸುದೀರ್ಘ ಲೇಖನಗಳು ಅಲ್ಲಿವೆ (ಇಂಗ್ಲೀಷಿನಲ್ಲಿ). ಆದರೆ ಸರಿಯಾದ ರೀತಿಯಲ್ಲಿ ಮಾಡಿದ ಮೂರ್ತಿ ಪೂಜೆಯಲ್ಲಿ ಫಲ ಕಾಣಬಹುದೇನೋ (ದೇವಸ್ಥಾನಗಳಲ್ಲಿರುವ ಮೂರ್ತಿಗಳಂತೆ ಆವಾಹನೆ ಮೂಲಕ)? ಗೊತ್ತಿಲ್ಲ. ತಿಳಿದವರು ಹೇಳಬೇಕು. ಇನ್ನು ಮೇಲೆ ಹೇಳಿದ ಕಾಮೆಂಟಿನಂತೆ ವ್ಯಕ್ತಿಪೂಜೆಯಷ್ಟು ಹಾನಿಯಿಲ್ಲ ಬಿಡಿ ಮೂರ್ತಿಪೂಜೆಯಿಂದ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೂರ್ತಿಪೂಜೆಯ ಎಂತು-ಎತ್ತಗಳ ಬಗ್ಗೆ ಸುಬದ್ಧ ಜಿಜ್ಞಾಸೆ ಅದೇ ಪುಸ್ತಕದಲ್ಲಿದೆ. ಇದು ಆ ಗ್ರಂಥದ ವಿಮರ್ಶೆಯಲ್ಲ. Independent ಆಗಿ ಆಲೋಚಿಸುವುದಾದರೆ, ಮೂಲಭೂತವಾಗಿ “ಮೂರ್ಖ”ರಾದವರು ದೈವಮೂರ್ತಿಗಳನ್ನು ಪೂಜಿಸಿದರೂ ಮೂರ್ಖ ಆಚರಣೆಯಾಗುತ್ತದೆ; ಆ ಪೂಜೆಯನ್ನು ಖಂಡಿಸಿದರೂ ಮೂರ್ಖ ಆಚರಣೆಯಾಗುತ್ತದೆ! ಶಾಸ್ತ್ರಗ್ರಂಥಗಳನ್ನು ಓದಲು ಅವಕಾಶವಾಗದೆ ಅದನ್ನು ಓದದೆ ಉಳಿದವರು ಮೂರ್ಖರಾಗುವುದಿಲ್ಲ! ಎಲ್ಲರೂ ಎಲ್ಲವನ್ನೂ “ಓದಿ”ಕೊಂಡಿರುವುದು ಸಾಧ್ಯವಿಲ್ಲ. ಒಂದು ವಿಭಾಗದಲ್ಲಿನ ಅಧ್ಯಯನ ನಿಪುಣರು ಮಿಕ್ಕೆಲ್ಲಾ ವಿಷಯಗಳಲ್ಲಿ “ಅಜ್ಞಾನಿ”ಗಳೇ! ಹಾಗೆಯೇ ವೇದಸೂಕ್ತಗಳನ್ನೂ, ಮಂತ್ರಸ್ತೋತ್ರಗಳನ್ನೂ “ಪಾಠ” ಮಾಡಿ ನಿರರ್ಗಳವಾಗಿ ಉಚ್ಚರಿಸುವವರನ್ನೆಲ್ಲಾ “ಜ್ಞಾನಿ”ಗಳೆಂದು ನಂಬಲಾಗುವುದಿಲ್ಲ. ಯಾರನ್ನು ಏನು ಎಂದು ತಿಳಿದುಕೊಳ್ಳಲಾಗದವರೇ “ಮೂರ್ಖ”ರು. ಇಂಥವರು ದೇವರೆಂಬ “ಅನಿರ್ವಚನೀಯ”ವನ್ನು ತಿಳಿಯುವುದು ದೂರವೇ ಉಳಿಯುತ್ತದೆ. ಅಂಥವರು ಮಾಡುವ ಮೂರ್ತಿಪೂಜೆಯ ಬಗ್ಗೆ ಬೇರೆಯವರು ಎಚ್ಚರದಿಂದಿರಬೇಕಾಗುತ್ತದೆ! ಮಂತ್ರಕ್ಕಾಗಲೀ ಕಣ್ಣಮುಂದಿನ ಮೂರ್ತಿಗಾಗಲೀ ಇರುವ Objective ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಆನಂತರ ಅದನ್ನು ಅನುಸಂಧಾನ ಮಾಡಿ ಮನದಾಳದೊಳಗೆ ಭಾವದ ಒಂದು ಬೋಧೆ ಉಂಟುಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಆ ಭಾವವೇ ಮುಂದೆ ಅನುರಣಿಸುವ ಅನುಭಾವವೂ ಅಗಿ ಒದಗಿಬರುತ್ತದೆ! ಪಾತಾಳದಿಂದತ್ತ ಸಿರಿಪಾದವನ್ನೂ, ಬ್ರಹ್ಮಾಂಡದಿಂದತ್ತ ಸಿರಿ ಮುಕುಟವನ್ನೂ ಉಳ್ಳ ಅನಂತ, ಅಪ್ರತಿಮ, ಅಗ್ರಾಹ್ಯ ಕೂಡಲಸಂಗಮ ದೇವನನ್ನು ಚುಳುಕಾಗಿ ಕರಸ್ಥಲಕ್ಕೆ ತಂದುಕೊಳ್ಳುವ ’ಅಣ್ಣ’ನ ಪೂಜಾ ವೈಖರಿ ಎಂದಿಗಾದರೂ ’ಮೂರ್ಖ ಆಚರಣೆ’ ಆದೀತೇ? ಬಿಂದುವಿನಲ್ಲಿ ಸಿಂಧುವನ್ನು ಕಾಣಬಲ್ಲ, ಕಂಡು ’ಅನುಭವಿಸ’ಬಲ್ಲ ಸಾಧಕರಿಗೂ, ಅವರನ್ನು ನಂಬಿ ಆದರಿಸುವ ಸಜ್ಜನರಿಗೂ ಮೂರ್ತಿಪೂಜೆಯಿಂದ ಖಂಡಿತಾ ಹಾನಿಯಿಲ್ಲ. ಅಂತಹ ವಿಶಾಲ ದೃಷ್ಟಿ, ಭಾವಾನುಭಾವಯುಕ್ತ ಹೃದಯ ಸಂಪನ್ನತೆ ಬೆಳೆಸಿಕೊಳ್ಳುವ ಆಸೆ, ಇಚ್ಛೆ, ಹಂಬಲ ಮತ್ತು ಸಂಕಲ್ಪಗಳನ್ನು ಪ್ರಯತ್ನಪೂರ್ವಕವಾಗಿಯೇ ಬೆಳೆಸಿಕೊಳ್ಳಬೇಕಾಗುತ್ತದೆ. ಅದಿಲ್ಲದೆ, ಅಕ್ಕ-ಪಕ್ಕದ ಜನ ಬಾಂಧವರಿಗೊಂದಿಷ್ಟು ಸೇವಾ-ಕೈಂಕರ್ಯ ಮಾಡದ ಮಂದಿ, ಸಾವಿರ ಸಾವಿರ ದೇವಸ್ಥಾನಗಳಿಗೆ ಎಡತಾಕಿ ಬಂದರೂ ಅವರಿಗೂ ಬೇರೆಯವರಿಗೂ ಪೂಜೆ-ಅರ್ಚನೆಗಳಿಂದ ಏನೇನೂ ಐಹಿಕಾಮುಷ್ಮಿಕ ಫಲಗಳು ದೊರೆಯುವುದು ಸಾಧ್ಯವಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗನ್ನಿಸುವ ಪ್ರಕಾರ ಧ್ಯಾನ ಉಪಾಸನೆಗಳ ಮೊದಲ ಹಂತವಾಗಿ ಈ ಮೂರ್ತಿ ಪೂಜೆ ಪದ್ದತಿ ಬಂದಿದೆ. ಬಹಳಷ್ಟು ಸಾಧಿಸಿರುವ ಋಷಿ ಮುನಿಗಳ್ಯಾರೂ ಮೂರ್ತಿ ಪೂಜೆ ಇಂದಲೇ ಅವೆಲ್ಲವನ್ನು ಸಾಧಿಸಿಲ್ಲ. ಆದರೆ ಸಾಮಾನ್ಯರಿಗೆ ದೈವತ್ವದ ಅರಿವು ಮೂಡಿಸಲು , ಒಳ್ಳೆಯ ಹಾಗು ಕೆಟ್ಟ ವಿಚಾರಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಲು ಈ ದೇವರು, ಆಚಾರ, ಸಂಪ್ರದಾಯಗಳನ್ನು ಬಳಕೆಗೆ ತಂದಿದ್ದಾರೆ ಅನ್ನಿಸುತ್ತದೆ. ಇದೇ ಅವರ ಉದ್ದೇಶ ಆಗಿದ್ದಲ್ಲಿ ನಾವು ಸ್ವಲ್ಪ ವಿಚಾರ ಮಾಡಿ ನಮಗೆ ನಿಜವಾಗಲೂ ಸರಿ ಅಥವಾ ಈಗಿನ ಕಾಲಕ್ಕೆ ಸರಿ ಅನ್ನಿಸುವ ಆಚರಣೆಗಳನ್ನು ರೂಢಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ಉಳಿದಂತೆ ಮೂರ್ತಿ ಪೂಜೆ ಅವರವರ ನಂಬಿಕೆಗಳಿಗೆ ಬಿಟ್ಟಿದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪೂಜೆಗಾಗಿ ಮೂರ್ತಿ ಬೇಕೆನಿಸುವವರು ಮೂರ್ತಿಯನ್ನು ಪೂಜಿಸಲಿ ಇನ್ನು ತನಗೆ ಮೂರ್ತಿ ಬೇಡವೆಂದೆನಿಸಿದಾಗ ಮೂರ್ತಿಯ ತ್ಯಜಿಸಲಿ! -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾನೂ ಇದನ್ನೇ ಹೇಳಬಯಸಿದ್ದು ಹೆಗಡೆಯವರೇ. ಏಕಗ್ರತೆಗಾಗಿ ಮೊದ ಮೊದಲು ಮೂರ್ತಿ ಬೇಕಾಗಬಹುದು. ಆಮೇಲೆ ಮನಸು ಧ್ಯಾನದಲ್ಲಿ ನಿರತವಾದಾಗ ಮೂರ್ತಿಯ ಅಗತ್ಯ ಕಾಣದೆ ಹೋಗಬಹುದು. ಹಾಗಾಗಿ ಅವರವರ ಇಷ್ಟಕ್ಕೆ ಬಿಡುವುದು ಉತ್ತಮ. ಸರಳ ಮಾತುಗಳಲ್ಲಿ ತಿಳಿಸಿದ್ದಕ್ಕೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರತಿಕ್ರಿಯಿಸಿದವರಿಗೆಲ್ಲಾ ವಂದನೆಗಳು ಧ್ಯಾನ ಶಿಬಿರವೊಂದರಲ್ಲಿ ಕೇವಲ ಗೋಡೆಯತ್ತ ನೋಡಿಕೊಂಡು ಇಷ್ಟದೇವರನ್ನು ಪ್ರಾರ್ಥಿಸುತ್ತಾ ಅವರ ರೂಪವನ್ನು ಗೋಡೆಯಲ್ಲಿ ಕಂಡುಕೊಳ್ಳುವ ತರಬೇತಿ ನೀಡಿದ್ದರು. ಕೆಲವೇ ಕೆಲವು ಜನಕ್ಕೆ ಮಾತ್ರ್ತ ಮನಸನ್ನು ಕೇಂದ್ರಿಕರಿಸಿ ಧ್ಯಾನ ಮಾಡಲು ಸಾಧ್ಯವಾಗಿತ್ತು. ಅಂದರೆ ಶೂನ್ಯದಲ್ಲಿ ದೇವರ ಚಿತ್ರವನ್ನು ಊಹಿಸಿಕೊಳ್ಳಲು ಶಕ್ಯವಾಗಲಿಲ್ಲ ನಂತರ ದೇವರಫೋಟೊ ಮುಂದೆ ನೋಡುತ್ತಾ ಧ್ಯಾನ ಮಾಡಲು ಹೇಳಿದರು ಅದರಲ್ಲೂ ಕೆಲವರಿಗೆ ಮಾತ್ರ ಸಾಧ್ಯವಾಯಿತು. ಮತ್ತುಳಿದ ಜನರು ಕಣ್ಣು ಮುಚ್ಚಿದರೆ ಮಾತ್ರ ಮನಸನ್ನು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ ಎಂದರು ಅವರಲ್ಲಿ ನಾನೂ ಒಬ್ಬಳು ಕಣ್ಣು ಮುಚ್ಚಿ ಇಷ್ಟದೇವರನ್ನು ಪ್ರಾರ್ಥಿಸಲು ಪ್ರಯತ್ನಿಸಿದೆ ಆಗ ಸ್ವಲ್ಪ ಮಟ್ಟಿಗೆ ಮನಸನ್ನು ಕೇಂದ್ರೀಕರಿಸಲು ಸಾಧ್ಯವಾಯ್ತು . ಪಂಡಿತರಿಗೆ ಯೋಗಿಗಳಿಗೆ ದೇವರನ್ನು ನಿರಾಕಾರವಾಗಿಯೇ ಪ್ರಾರ್ಥಿಸುವ , ಧ್ಯಾನಿಸುವ ಶಕ್ತಿ ಇರುತ್ತದೆ . ಆದರೆ ನಮ್ಮಂಥ ಸಾಮಾನ್ಯರಿಗೆ ನಿರಾಕಾರಿಯಾದ ದೇವರ ಇರುವಿಕೆಯನ್ನು ಕಲ್ಪಿಸಲೂ ಸಾಧ್ಯವಿಲ್ಲ. ಹಾಗಿದ್ದೇ ಮೂರ್‍ತಿ ಪೂಜೆಯ ಸರ್ವ ವ್ಯಾಪಿಯಾಗಿದ್ದಿರಬೇಕು ಎಂದನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>>ಧ್ಯಾನ ಶಿಬಿರವೊಂದರಲ್ಲಿ ಕೇವಲ ಗೋಡೆಯತ್ತ ನೋಡಿಕೊಂಡು ಇಷ್ಟದೇವರನ್ನು ಪ್ರಾರ್ಥಿಸುತ್ತಾ ಅವರ ರೂಪವನ್ನು... >>> ಕೆಲವೇ ಕೆಲವು ಜನಕ್ಕೆ ಮಾತ್ರ್ತ ಮನಸನ್ನು ಕೇಂದ್ರಿಕರಿಸಿ ಧ್ಯಾನ ಮಾಡಲು ಸಾಧ್ಯವಾಗಿತ್ತು. >>>ಮತ್ತುಳಿದ ಜನರು ಕಣ್ಣು ಮುಚ್ಚಿದರೆ ಮಾತ್ರ ಮನಸನ್ನು .. -ಯಾಕೆ ಈ ಎಲ್ಲಾ ಸರ್ಕಸ್ ಮಾಡಬೇಕು? ಅದ್ವೈತವಾದದ ಒಂದು ಉದಾಹರಣೆಯೊಂದಿಗೆ ಪ್ರಾರಂಭಿಸೋಣ- " ಪ್ರಾಸಾದೇ ಸಾ ದಿಶಿದಿಶಿ ಚ ಸಾ ಪೃಷ್ಠತಃ ಸಾ ಪುರಃ ಸಾ ಪರ್ಯಂಕೇ ಸಾ ಪಥಿಪಥಿ ಚ ಸಾ...............ಸಾ ಸಾ ಸಾ ಸಾ....ಅಯಂ ಅದ್ವೈತವಾದ!" ಕನ್ನಡದಲ್ಲಿ ಇದೇ ಅರ್ಥ ಬರುವ ಒಂದು ಸುಂದರ ಹಾಡು ಇದೆ- "ನಿಂತಲ್ಲೂ ಅವಳೇ, ಕುಳಿತಲ್ಲೂ ಅವಳೇ, ನೋಡಿದಾ ಕಡೆಯೆಲ್ಲಾ ಅವಳೇ ಅವಳು..." ಕೈಯಲ್ಲಿ ಪೇಪರ್,ಕಣ್ಣು ಅಕ್ಷರಗಳ ಮೇಲೆ, ಆದರೆ ಮನಸ್ಸು ಅವಳಲ್ಲಿ; ರಸ್ತೆಯಲ್ಲಿ ಓಡಾಡುತ್ತೇವೆ, ಮನಸ್ಸು ಅವಳಲ್ಲಿ; -ಇದು "ಏಕಾಗ್ರಚಿತ್ತ" ಹೌದಲ್ವಾ? ಆದರೆ ಎಲ್ಲಾ ದಿನನಿತ್ಯದ ಕೆಲಸ ಮಾಡುತ್ತಿದ್ದೇವೆ ಅಲ್ಲವಾ? ಹಾಗೇ.. ದೇವರ ಬಗ್ಗೆ ಭಕ್ತಿ/ಪ್ರೀತಿ ಇದ್ದರೆ ಎಲ್ಲಾ ಕಡೆ ಅವನೇ ಕಾಣಿಸುವನು. ಇಲ್ಲಾ ಮೂರ್ತಿ ಎದುರಿಗಿಟ್ಟು/ಕಣ್ಣುಮುಚ್ಚಿ ಅಥವಾ ಯಾವುದೇ ಕಸರತ್ತು ಮಾಡಿ- ಮನಸ್ಸು..(ಅವಳ ಕಡೆಯೇ :) ) >>>ಪಂಡಿತರಿಗೆ ಯೋಗಿಗಳಿಗೆ ದೇವರನ್ನು ನಿರಾಕಾರವಾಗಿಯೇ ಪ್ರಾರ್ಥಿಸುವ , ಧ್ಯಾನಿಸುವ ಶಕ್ತಿ ಇರುತ್ತದೆ -ಶಕ್ತಿನೂ ಇಲ್ಲಾ,ಯುಕ್ತಿನೂ ಇಲ್ಲಾ.. ಬರೀ ಭಕ್ತಿ,ಪ್ರೀತಿ...ನೋಡಿದಾ ಕಡೆಯೆಲ್ಲಾ ಅವನೇ ಅವನು(=ದೇವರು) ಅಷ್ಟೇ. ************* ಮಕ್ಕಳಿಗೆ ಬೆಳಗ್ಗೆ ಏಳು, ಬ್ರಾಹ್ಮೀ ಮುಹೂರ್ತ.. ಏಕಾಗ್ರತೆ.. ಓದಿದ್ದು ತಲೆಯಲ್ಲಿ ನಿಲ್ಲುತ್ತದೆ ಹೇಳುವರು ದೊಡ್ಡವರು. -ವಿಷಯದಲ್ಲಿ ಆಸಕ್ತಿ ಇದ್ದರೆ ಟಿವಿ ರೇಡಿಯೋ ಗದ್ದಲದ ನಡುವೆಯೂ ಓದಿದ್ದು ನೆನಪಿಟ್ಟುಕೊಳ್ಳುವರು. ಇಲ್ಲವಾದರೆ ನೋಟ್ಸ್ ಕೊಟ್ಟು ಒಂದು ೨೦ ಬಾರಿ ಕಂಠಪಾಠ ಮಾಡಿಸಿ. ನಮ್ಮ ನಿಮ್ಮಂತಹವರಿಗೆ ಸುಲಭವಾಗಲಿ ಎಂದು ದೇವರ ಮೂರ್ತಿ ಕೊಟ್ಟು ಮಂತ್ರ ಕಂಠಪಾಠ ಮಾಡಿಸಿದ್ದಾರೆ. -ಗಣೇಶ. ಇನ್ನೂ ಒಂದು ವಿಷಯ -ಹೀಗೇ ಸುಮ್ಮನೆ: ದೇವರಕೋಣೆ ಕ್ಲೀನ್ ಮಾಡಬೇಕು- ಹೆಣ್ಣು ಹೂ ಕಟ್ಟಿ ಕೊಡಬೇಕು -ಹೆಣ್ಣು ಸ್ನಾನಕ್ಕೆ ರೆಡಿ ಮಾಡಬೇಕು -ಹೆಣ್ಣು ಟವಲೂ ತಂದು ಕೊಡಬೇಕು -ಹೆಣ್ಣು ಗಂಧ ಲೇಪನಗಳನ್ನೂ ತಂದಿಡಬೇಕು- ಹೆಣ್ಣು ಅದು ಸರಿ ಇಲ್ಲ ಇದು ಸರಿ ಇಲ್ಲ ಎಂದು ಬೈದುಕೊಂಡು, ಸ್ನಾನ ಮಾಡಿ ದೇವರ ಪೂಜೆಗೆ ಮಾತ್ರ ಠೊಣಪ ಹೋಗಿ ಕುಳಿತುಕೊಳ್ಳುವ :) ಯಾವ ದೇವರು ಒಲಿಯುತ್ತಾರೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) ನೂರರಲ್ಲಿ ನೂರು ಮತ ನಿಮ್ಮೀ ಮಾತಿಗೆನ್ನ ಸಹಮತ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+೧
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೂರ್ತಿ ಪೂಜೆ ತಪ್ಪೆಂದರೆ, ಉದ್ಭವ ಮೂರ್ತಿಗಳಿಗೆ ಹಾಗೂ ನಿಂತಲ್ಲೇ ಕಲ್ಲಾದ ಕಲಿಯುಗ ದೈವ ಶ್ರೀನಿವಾಸನ ಪೂಜಿಸುವುದು ತಪ್ಪೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರೂಪರವರೆ ನಾನು ಆ ಪುಸ್ತಕವನ್ನಂತು ಓದಿಲ್ಲ . ಆದರು ಪರಮಾತ್ಮನಿದ್ದಾನೆ ಅಥವ ಪರಮಾತ್ಮನಿಲ್ಲ ಎಂದು ವಾದಿಸುವುದೆ ಮೂರ್ಖತನ ಎಕೆಂದರೆ ಇಬ್ಬರು ಸಾದಿಸಲಾರರು.ಆದರು ನನ್ನ ಅನಿಸಿಕೆಯಂತೆ ಪಕ್ಕ ಆಸ್ತಿಕನಿರಬಹುದು ಆದರೆ ಪಕ್ಕಾ ನಾಸ್ತಿಕರಿಲ್ಲ. ಮತ್ತೆ ಮೂರ್ತಿ ಪೂಜೆಯಬಗ್ಗೆ. ಎಲ್ಲೊ ಒಮ್ಮೆ ಕೇಳಿದ್ದೆ ಯಾವುದೇ ಸ್ವತಂತ್ರ ಧರ್ಮವಾದರು ಕೆಲವು ನೂರು ವರ್ಷ ಕಳೆಯುವದರಲ್ಲಿ ಮೂರ್ತಿಪೂಜೆಯ ಕಡೆಗೆ ಖಂಡಿತವಾಗು ವಾಲುತ್ತದೆ. "ಸ್ವರ್ಗದಲ್ಲಿ ಇರುವ ಓ ನನ್ನ ತಂದೆಯೆ " ಎನ್ನುವಾಗ ಯಾವುದೊ ಆಕಾರ ಕಣ್ಣ ಮುಂದೆ ಖಂಡೀತ ನಿಲ್ಲುತ್ತದೆ. ಮೂರ್ತಿ ಪೂಜೆಯೆಂದರೆ ನಮ್ಮ ಮನಸ್ಸಿನ ಭಾವನೆಯ ಪೂಜೆಯಷ್ಟೆ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಮೂರ್ತಿಯಲ್ಲಿ ಬಿ೦ಬಿಸುವ ಆಕಾರ ಆ ಧರ್ಮದ ತಳಪಾಯವಾಗಿ ನಿ೦ತುಬಿಟ್ಟಿದೆ. ನಿಜ ವೇದಗಳಲ್ಲಿ ಮೂರ್ತಿ ಪೂಜೆ ಇಲ್ಲ. ಆದರೆ ಆಕೃತಿಯ ವರ್ಣನೆ ಇದೆ ಅದನ್ನೆ ಮನಸ್ಸಿಗೆ ತ೦ದುಕೊ೦ಡು ಕೆತ್ತಿದ ಶಿಲ್ಪಗಳು ಜನರ ಮನಸ್ಸಿನಲ್ಲಿ ಅದೇ ಆಕೃತಿಯನ್ನು ಬಿ೦ಬಿಸಿದವು ಮತ್ತು ಅದನ್ನೇ ದೇವರೆ೦ದರು ಕೂಡ. ಸಾಮಾನ್ಯ ಮನುಷ್ಯ ವರ್ಣನೆಯನ್ನು ಕಲ್ಪಿಸಿಕೊ೦ಡು ಧೇನಿಸುವುದು ಅಸಾಧ್ಯವಾದಾಗ ಶಿಲ್ಪಗಳು ಪರಿಣಾಮಕಾರಿ ಕೆಲವನ್ನು ಮಾಡಿದವು. ಶಿಲ್ಪಿಯು ವರ್ಣನೆಯನ್ನು ಮನದಲ್ಲಿ ತು೦ಬಿಕೊ೦ಡಾಗ ಆಗುವ ಅವರ್ಣನೀಯ ಅನುಭೂತಿಯನ್ನು ಶಿಲ್ಪದಲ್ಲಿ ತೋರಿ ಅದಕ್ಕೆ ಮೆರುಗುಕೊಟ್ಟು ಜನಗಳ ಮನಸ್ಸಿನಲ್ಲಿ ಇದೇ ಧರ್ಮದೇವತೆ ಎ೦ಬುದಾಗಿ ಹೇಳಿದನು. ಇದರಿ೦ದಲೇ ನಮ್ಮಲ್ಲಿ ಇನ್ನೂ ಧರ್ಮ ಉಳಿದಿದೆ ಎ೦ದರೆ ತಪ್ಪಲ್ಲ .ಶೂನ್ಯದಲ್ಲಿ ಏಕಾಗ್ರತೆ ಸಾಧನೆ ಕಷ್ಟಸಾಧ್ಯವಾದ ಈ ಕಾಲದಲ್ಲಿ ಯಾವುದೋ ಆಕೃತಿಯನ್ನು ಮನದಲ್ಲಿ ರೂಪಿಸಿಕೊ೦ಡು ಧ್ಯಾನ ಮಾಡುತ್ತಾ ಮನಸ್ಸನ್ನು ಹಸಿರಾಗಿಸಿಕೊಳ್ಳುವುದು ಒಳ್ಳೆಯದು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಕುತಿ, ಪೂಜೆ, ಪುನಸ್ಕಾರಗಳೆಲ್ಲಾ ಆದಷ್ಟು ಖಾಸಗಿಯಾಗಿಯೇ ಉಳಿದಿರಲಿ, ಪೂಜಿಸಲು ಮೂರ್ತಿಗಳು ಬೇಕಾದವರು ಮೂರ್ತಿಗಳನ್ನಿಟ್ಟುಕೊಡು ಪೂಜಿಸಲಿ, ಆದರೆ ದೇವರನ್ನು ಸದಾಕಾಲ ಆ ಮೂರ್ತಿಗಳಲ್ಲಷ್ಟೇ ಬಂಧನದಲ್ಲಿ ಇಡದಿರಲಿ, ಮೂರ್ತಿಗಳಿಲ್ಲದ ಜಾಗಗಳಲ್ಲೂ ದೇವನಿರುವನೆಂಬ ಭಾವವನೂ ಹೊಂದಿರಲಿ! -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಭಕ್ತಿ ಪೂಜೆ ಎಲ್ಲವೂ ವ್ಯಕ್ತಿಗತವೇ, ಆದರೆ ಬೇಕೇ ಬೇಡವೇ? ಎ೦ಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿದಾಗ ಅವರಿಚ್ಚೆಯ೦ತೆ ಅ೦ತ ಸುಮ್ನಾಗಿಬಿಟ್ರೆ ಚರ್ಚೆ ಆಗೋದು ವಿಷಯಗಳ ವಿನಿಮಯ ಆಗೋದು ಹೇಗೆ? ಯಾರನ್ನೂ ಮೂರ್ತಿ ಪೂಜೆ ಮಾಡಿ ಅ೦ತ ಒತ್ತಾಯನೂ ಮಾಡ್ತಾ ಇಲ್ಲ ಮಾಡ್ಬೇಡಿ ಅ೦ತ ನನ್ನ ಅಭಿಪ್ರಾಯವನ್ನ ಹೇರ್ತಾ ಇಲ್ಲ. ಮೂರ್ತಿ ಪೂಜೆ ಮೊದಲು ಇತ್ತೇ? ಇಲ್ವೇ? ಯಾಕೆ ಮಧ್ಯೆ ಅದು ಬೆಳೀತು? ಅನ್ನೋದನ್ನ ಶೋಧನೆ ಮಾಡಿದ್ರೆ ಒಳ್ಳೇದು. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹರೀಶ್, ನನ್ನ ಈ ಮೇಲಿನ ಪ್ರತಿಕ್ರಿಯೆ ತಮ್ಮ ಪ್ರತಿಕ್ರಿಯೆಯ ನಂತರ ಪ್ರಕಟವಾಗಿದೆಯಾದರೂ, ಅದು ತಮ್ಮ ಪ್ರತಿಕ್ರಿಯೆಗೆ ನಾನು ನೀಡಿರುವ ಮರು ಪ್ರತಿಕ್ರಿಯೆ ಅಲ್ಲ. ಅದು ತಮ್ಮ ಪ್ರತಿಕ್ರಿಯೆಗೆ "threaded" ಆಗಿ (ಮರು ಪ್ರತಿಕ್ರಿಯೆಯಾಗಿ) ಪ್ರಕಟವಾಗಿಯೂ ಇಲ್ಲ. ತಮ್ಮ ಆಗಿನ ಅಥವಾ ಈಗಿನ ಅನಿಸಿಕೆಗಳಿಗೆ ನನ್ನ ಅಭ್ಯಂತರ ಇಲ್ಲವೇ ಇಲ್ಲ. ತಮ್ಮ ಅನಿಸಿಕೆಗಳನ್ನು ಗೌರವಿಸುತ್ತೇನೆ. ಸಹಮತವೂ ಇದೆ. ದಯವಿಟ್ಟು ಅನ್ಯಥಾ ಭಾವಿಸದಿರಿ. ಮೂಲ ಬರಹಕ್ಕೆ ಪೂರಕವಾಗಿ ಇನ್ನೊಮ್ಮೆ ನನ್ನ ಅನಿಸಿಕೆಗಳನ್ನು ನೀಡುವ ಮನಸ್ಸಾಯ್ತು ಅಷ್ಟೇ. ದೇವರ ಇರುವನ್ನು ನಾವು ಪೂಜಿಸುವ, ಮೂರ್ತಿ, ಚಿತ್ರ, ಕಲ್ಲುಗಳಿಗೆ ಸೀಮಿತಗೊಳಿಸದೇ ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಳಗಳಲ್ಲೂ ಆತನ ಇರುವಿನ ಅರಿವನ್ನು ನಾವು ಹೊಂದಿರಬೇಕು, ಅನ್ನುವುದಷ್ಟೇ ನಾನು ವ್ಯಕ್ತಪಡಿಸಲು ಬಯಸಿದ ಆಶಯ ಆಗಿರುತ್ತದೆ. ಮೂಲ ಬರಹದ ಬಗ್ಗೆ ವಿಷಯ ವಿನಿಮಯಕ್ಕೆ ಮತ್ತು ಮುಂದಿನ ಶೋಧನೆಗೆ ಖಂಡಿತಕ್ಕೂ ನನ್ನ ಅಭ್ಯಂತರ ಇಲ್ಲ. ನಾನು ಆ ವಿಚಾರ ವಿನಿಮಯದಲ್ಲಿ ಅಥವಾ ಶೋಧನೆಯಲ್ಲಿ ಪಾಲ್ಗೊಳ್ಳಲು ನನ್ನಲ್ಲಿ ಸಾಕಷ್ಟು ಆಧಾರಸಹಿತ ಮಾಹಿತಿಗಳು ಇರಬೇಕಾಗುತ್ತದೆ. ನಿಜವಾಗಿಯೂ ನನ್ನಲ್ಲಿ ಅವುಗಳಿಲ್ಲ. ಹಾಗಾಗಿ ಬರಹದ ಮೂಲ ಪ್ರಶ್ನೆಗೆ ಉತ್ತರಿಸಲು ನಾನು ಅಸಮರ್ಥನಾಗಿದ್ದೇನೆ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪೂಜೆ ಬೇಕು ಎಂದ ಮೇಲೆ ಮೂರ್ತ ಅಮೂರ್ತದ ಭೇದವೇಕೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೂರ್ತಿ ಪೂಜೆ ಮಾಡುವವರು ಮಾಡಲಿ,ಮಾಡದೇ ಇರುವವರು ಸುಮ್ಮನೇ ತಮ್ಮದೇ ತತ್ವಗಳಲ್ಲಿರಲಿ.ತಾವು ಮೂರ್ತಿ ಪೂಜೆ ಮಾಡುವುದಿಲ್ಲ ಎ೦ಬ ಕಾರಣಕ್ಕೇ ಅದೇ ತಪ್ಪು ಎನ್ನುವುದು ದುರಹ೦ಕಾರವೆನಿಸಿಕೊಳ್ಳುತ್ತದೆ.ಮೂರ್ತಿ ಪೂಜೆಯೇ ಶ್ರೇಷ್ಟವೆ೦ದೇನಲ್ಲ.ಆದರೇ ಒಬ್ಬ ಶ್ರೇಷ್ಟ ಮೂರ್ತಿ ಪೂಜಕರ ಶಿಷ್ಯರಾಗಿ ವಿವೇಕಾನ೦ದರ೦ಥಹ ವೀರ ಸನ್ಯಾಸಿ ಉದಯಿಸಿದರು,ಅ೦ದಮೇಲೆ ಮೂರ್ತಿ ಪೂಜೆ ತಪ್ಪೇನಿಲ್ಲ ಅಲ್ಲವೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.