ಮೇಘಮಾಲೆ

0

ಮೌನಭಾರದಿ ಮೋರೆ ಕಪ್ಪಿಟ್ಟು ಕಂಗೆಟ್ಟು
ತಾಳಲಾರದೆ ಅಲೆಯುತಿದ್ದ ಮೇಘ
ಮುಕ್ತಿ ಪಡೆಯಲಿಕ್ಕೇ ಎಂದೇ ಠಳಾಯಿಸುತ್ತಿದ್ದ
ಗಗನದ ನಿಶಾಕುಸುಮಗಳನು ತರಿದು ಬರಿದು ಮಾಡಲೆಂಬಂತೆ ಶೃಂಗಕರಗಳನು
ತಾಯ ಕರೆದು ಚಾಚುವ ಹಸುಳೆಯಂತೆ
ವಿಸ್ತರಿಸೆ ಮೇಘನ ಮೌನಭಾರ ಒಡಯಿತಲ್ಲಿ
ಮುತ್ತಹನಿಯ ರೂಪ ಪಡೆಯಿತಲ್ಲಿ
ಅವನ ಎದೆಯ ಒಲವ ಮಾತು
ಧರಣಿ ತನುವ ಕಣಕಣಗಳ ವ್ಯಾಪಿಸಿ ನುಡಿಸಿತು
ರಿಂಗಣಿಸಿತು ನವರಾಗ ನಾಟ್ಯರಂಗ ಪಲ್ಲವಿಸಿತು
ಎದೆಯ ಒಲವ ರಾಗ ಎದೆಯ ನುಡಿಸಿರಲು
ಒಡಲೊಳೆಲ್ಲ ಪ್ರೇಮ ರಸಗಂಗೆಯಾಗಿ ಪ್ರವಹಿಸಿರಲು
ಕಳುಹಿಸಿದಳು ತನ್ನೊಲವ ಸಂದೇಶವನು
ತನ್ನ ಅಂಗರಂಗದೊಳು ಹೆಪ್ಪುಗಟ್ಟಿದ
ಹಸಿರ ಉಲಿಯೊಳು ಕುಸುಮ ಸೌರಭದೊಳು
ಗಗನದ ಅಟ್ಟೆಯೊಳು ಕೌತುಕದ ಮೊನೆಯ
ಕಿರುಸಂಧಿನಲಿ ಒಂಟಿಗಾಲ ಮೇಲೆ ನಿಂತ ಮೇಘ
ಇನಿಯಳ ಇಂಚರವ ಆಲಿಸಿದನು ಆಘ್ರಾಣಿಸಿದನು
ಮತ್ತೆ ಸಾಗರದೆದೆಯ ಮಾತು ತಬ್ಬಿ ತುಂಬಿ
ಮೌನವಾದನು ಕಪ್ಪಿಟ್ಟನು !ಕಂಗೆಟ್ಟನು!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.