ಮೋದಿ ಪ್ರಮಾಣ

0

ಒಳ್ಳೆ ದಿನಗಳನ್ನು ನೀಡುತ್ತೇನೆ ಎಂದು ಗೆದ್ದು ಬಂದ, ನೀನು, ಇಂದು ಸ್ವೀಕರಿಸುವೆ ಪ್ರಮಾಣವಚನ,
ದೇಶದ ಜನ ಅಭಿಮಾನವಿಟ್ಟು, ನಿನ್ನ ಆರಿಸಿ ಕಳಿಸಿದ್ದಾರೆ, ಪ್ರಧಾನಿಪೀಠದ ಮೇಲೆ ಇಂದಾಗುವೆ, ಆಸೀನ,
ನಮಗೆ ರಿಯಾಯಿತಿ ಊಟ ಬೇಕಿಲ್ಲ, ಸಹಾಯ ಧನ ಬೇಕಿಲ್ಲ, ಉಚಿತವಾಗಿ ಏನೂ ಬೇಡ, ಕೇಳಿಸಿಕೊಳ್ಳು ಕೋರಿಕೆಯನ್ನ,
ಸರಳ, ಸುಂದರ, ಜೀವನಕ್ಕೊಂದು ಅವಕಾಶ, ಇಷ್ಟೇ ಸಾಕು, ಅರ್ಥ ಮಾಡಿಕೋ ನಮ್ಮ ಕಳಕಳಿನಾ,
ದುಡಿಯುವರಿಗೊಂದು ಸಾಧ್ಯತೆ, ಗಲಭೆ, ದಂಗೆಗಳಿಲ್ಲದ ಜಗತ್ತು, ಇಷ್ಟೇ ಸಾಕು, ಸವಲತ್ತು,
ಬೇಧ ಭಾವವಿಲ್ಲದ, ಆಡಳಿತ, ಹೊರಜಗತ್ತಿನಲ್ಲಿ, ಒಂದಿಷ್ಟ್ಟು ಮಾನ, ಸನ್ಮಾನ, ನೋಡು ಆ ಗಮ್ಮತ್ತು,
ಮಂದಿರ ಮಾಡ್ತಿಯೋ, ಪ್ರತಿಮೆ ಮಾಡ್ತಿಯೋ, ನಮಗೆ ಬೇಡ, ಪ್ರಜೆಗಳಿಗೆ ಮೂಡಿದರೆ ಸಾಕು, ಆತ್ಮಗೌರವ,
ಇಷ್ಟೇ ಬೇಡಿಕೆ, ಈಡೇರಿಸು, ಸುಖಿ ಪ್ರಜೆಗಳ ಬೆಂಬಲ, ಪ್ರೀತಿ, ಪ್ರೇಮ, ಅಂದರೇನೆಂದು, ಮಾಡುವಿ, ಅನುಭವ,
 
 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.