ಯುಗಾದಿಯ ಆಹ್ವಾನ

ಯುಗಾದಿಯ ಆಹ್ವಾನ

ಕವನ

ಯುಗ ಯುಗವು ಕಳೆದರೇನು
ಯುಗ ಪುರುಷನ ಆಗಮನಕ್ಕೆ ಸಜ್ಜಾಗಿವೆ
ಚಿನ್ನಾಟವಾಡುತ್ತ ಚಿಗುರೆಲೆಗಳು
ಮತ್ತೆ ಹೊಂಬಣ್ಣ ಹೊದ್ದು.
ತಂಗಾಳಿಯ ಕಲರವದಲ್ಲಿ
ಕೋಗಿಲೆ ದ್ವನಿ ಸೇರಿದೆ
ಉದಯ ರಾಗ ರಂಗೇರಿದೆ
ಮೊದಲ ಮಾಸ ಚೈತ್ರ ಕಾಲಿಕ್ಕಿದೆ.
ಪೃಕೃತಿ ನವ ವಧುವಾಗಿದೆ
ಹಸಿರು ಸಿರೆಯ ಉಟ್ಟು
ಜರಿಯ ಕುಪ್ಪಸ ತೊಟ್ಟು
ಮುಡಿ ತುಂಬ ಹೂವ ಮುಡಿದು.
ಘಂಮ್ಮೆನ್ನುವ ಪರಿಮಳದ
ಪಾರಿಜಾತ, ಜಾಜಿ, ಮಲ್ಲಿಗೆ
ಪಂಚಾಂಗದ ಶೃವಣ ಕೇಳಲು
ಪೂಜೆಗೆ ಅಣಿಯಾಗಿವೆ.
ಬಾ ಕುಸುಮ ಬಾಲೆ
ಯುಗ ಪುರುಷನೊಡಗೂಡಿ
ಮೆಲ್ಲನೆ ಕೆಂದಾವರೆಯಡಿಯನಿಟ್ಟು
ಹಾಕಿದ ರಂಗಿನ ರಂಗೋಲಿಯ ದಾಟಿ.
ಶ್ರೀ ದುಮು೯ಖಿ ಸಂವತ್ಸರದಲ್ಲಿ
ಬೇವು ಬೆಲ್ಲದ ಸಂಕೇತ ತಿಳಿಸಿ
ಎಲ್ಲರ ಮನೆ ಮನ ಬೆಳಗು
ಯುಗಾದಿಯ ಹಬ್ಬಕೆ ಶುಭವ ಹರಸಿ.