ರಾಮಾಯಣದಲ್ಲಿ ಶಬರಿಯ ಪ್ರಸಂಗ: ಒಂದು ವಿಚಾರ

2.407405

ಶಬರಿ ರಾಮನಿಗೆ ಹಣ್ಣು ಸಮರ್ಪಣೆ ಮಾಡುತ್ತಿರುವುದು

ಚಿತ್ರ ಕೃಪೆ: ವಿಕಿಪೀಡಿಯ

        ರಾಮಾಯಣದಲ್ಲಿ ಶಬರಿ ರಾಮನಿಗೆ ಹಣ್ಣು ತಿನ್ನಿಸುವ ಒಂದು ಪ್ರಸಂಗ ಬರುತ್ತದೆ; ಅದರಲ್ಲಿ ಅವಳು ಬೋರೆ ಅಥವಾ ಬಾರೆ ಹಣ್ಣನ್ನು ಕಚ್ಚಿ ರುಚಿ ನೋಡಿ ಅದರಲ್ಲಿ ಚೆನ್ನಾಗಿರುವ ಹಣ್ಣುಗಳಷ್ಟನ್ನೇ ರಾಮನಿಗೆ ನೈವೇದ್ಯವಾಗಿ ಅರ್ಪಿಸುತ್ತಾಳೆ. ಅವಳು ಕೊಟ್ಟ ಎಂಜಿಲ ಹಣ್ಣನ್ನು ಕ್ಷತ್ರಿಯ ಕುಲದಲ್ಲಿ ಹುಟ್ಟಿದ ರಾಮ ತಿನ್ನುತ್ತಾನೆ. ಅದರ ಬಗ್ಗೆ ಹಿರಿಯರನ್ನು ವಿಚಾರಿಸಿದಾಗ ಅವರು ಹೇಳುತ್ತಿದ್ದುದ್ದು ಭಗವಂತನಿಗೆ ತನ್ನ ಭಕ್ತರು ಪ್ರೀತಿಯಿಂದ ಏನೇ ಅರ್ಪಿಸಿದರೂ ಅದು ಯಾವುದೇ ರೀತಿಯಲ್ಲಾದರೂ ಅವನಿಗೆ ಪ್ರಿಯವಾದುದ್ದರಿಂದ ರಾಮ ಅವಳು ಕಚ್ಚಿ ಕೊಟ್ಟ ಹಣ್ಣನ್ನು ತಿಂದ ಎನ್ನುವುದು. ಇದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಆ ಒಂದು ಪ್ರಸಂಗ ನಮಗೆ ವಾಲ್ಮೀಕಿ ವಿರಚಿತ ಮೂಲ ರಾಮಾಯಣದಲ್ಲಿ ಕಂಡು ಬರುವುದಿಲ್ಲ ಇದರ ಬಗ್ಗೆ ಮೂಲ ವಾಲ್ಮೀಕಿ ರಾಮಾಯಣವನ್ನು ಕನ್ನಡಕ್ಕೆ ಅನುವಾದ ಮಾಡಿರುವ ಲೇಖಕರು  ಕೂಡ ತಿಳಿಸುತ್ತಾರೆ. ಶಬರಿ ರಾಮನಿಗೆ ಹಣ್ಣು ತಿನ್ನಿಸುವ ಪ್ರಸಂಗವೇ ಇಲ್ಲವೆಂದೂ ಅದು ಹೇಗೆ ಆ ಕತೆ ಪ್ರಚಲಿತಕ್ಕೆ ಬಂತೋ ತಿಳಿಯದೆಂದು ಬರೆದಿರುತ್ತಾರೆ. ಹೀಗೆಯೇ ಹತ್ತು ಹಲವಾರು ಕಥೆಗಳನ್ನು ಕಟ್ಟಿ ಮೂಲ ಕಥೆಗೆ ಜೋಡಿಸಿರ ಬಹುದೆನಿಸುತ್ತದೆ. ಅದೇನೇ ಇರಲಿ ಇಲ್ಲಿ ಈ ಕಥೆಯನ್ನು ಹೆಣೆದವರ ಉದ್ದೇಶವೇ ಬೇರೆ ಇದ್ದಂತೆ ಕಾಣುತ್ತದೆ. ನನಗೆ ಅನಿಸಿದ ಮಟ್ಟಿಗೆ ಅದನ್ನು ಹೀಗೆ ಅರ್ಥೈಸಬಹುದೆನಿಸುತ್ತದೆ. ಭಗವಂತನು ನಮಗೆ ಒಳ್ಳೆಯ ಮತ್ತು ಕೆಟ್ಟ ಎನ್ನುವ ಎರಡೂ ರೀತಿಯ ಫಲಗಳನ್ನೂ ಉಣ್ಣುವುದಕ್ಕಾಗಿ ಕೊಡುತ್ತಾನೆ. ನಾವು ಎಲ್ಲವನ್ನೂ ಅನುಭವಿಸಿ/ರುಚಿ ನೋಡಿ ಕೆಟ್ಟದ್ದನ್ನು ಇಲ್ಲಿಯೇ ಬಿಟ್ಟು ಒಳ್ಳೆಯ ಫಲಗಳನ್ನು ಮಾತ್ರ ಭಗವಂತನಿಗೆ ಮರು ಸಮರ್ಪಣೆ ಮಾಡಬೇಕು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶ್ರೀಧರ್ ಅವರೆ, >>ನಾವು ಎಲ್ಲವನ್ನೂ ಅನುಭವಿಸಿ/ರುಚಿ ನೋಡಿ ಕೆಟ್ಟದ್ದನ್ನು ಇಲ್ಲಿಯೇ ಬಿಟ್ಟು ಒಳ್ಳೆಯ ಫಲಗಳನ್ನು ಮಾತ್ರ ಭಗವಂತನಿಗೆ ಮರು ಸಮರ್ಪಣೆ ಮಾಡಬೇಕು -ನೀವು ಹೇಳಿದ ಮೇಲೆ ಆಯ್ತು ಬಿಡಿ. ನೀವು ಹೇಳಿದ್ದು ನಿಜ. ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡದ ೭೪ನೇ ಅಧ್ಯಾಯ ( http://www.valmikira... ) ದಲ್ಲಿ ಶಬರಿ-ರಾಮನ ಭೇಟಿಯಾಗುವುದು. ಅಲ್ಲಿ ಹಣ್ಣುಗಳನ್ನು ರುಚಿನೋಡಿ ಕೊಡಲಿಲ್ಲ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶರೇ, ನಾನು ಹೇಳಿದ ಮೇಲೆ ಅದಕ್ಕೆ ಬೆಲೆ ಬರುವುದಿಲ್ಲ ಅದೇನಿದ್ದರೂ ಅಂಡಾಂಡ ಭಂಡ ಸ್ವಾಮಿಗಳ ಆಮೋದ ಮುದ್ರೆ ಬಿದ್ದಮೇಲೆಯೇ ಅದಕ್ಕೆ ಬೆಲೆ :)) ನೀವು ಕೊಟ್ಟ ಕೊಂಡಿಯನ್ನು ನೋಡಿದೆ. ಅದರಲ್ಲಿ ಮೂಲ ರಾಮಾಯಣದ ಅನುವಾದವನ್ನೂ ನೋಡಿದೆ ಮತ್ತು ನಾನು ಹೇಳುವ ಅಂಶ ಅದರಿಂದ ಸ್ಪಷ್ಠವಾಯಿತು. ಧನ್ಯವಾದಗಳು ಗುರುಗಳೇ. ಕಡೆಯಲ್ಲಿ ನಿಮ್ಮನ್ನು ಗಣೇಶರೆನ್ನುವ ಬದಲು ಗಣಕೇಶ ಎಂದು ಕರೆಯಬಾರದೇಕೆ ಎನ್ನುವ ಪ್ರಶ್ನೆ ಕಾಡುತ್ತಿದೆ?!! :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

@ ಶ್ರೀಧರ್ ಬಂಡ್ರಿ <<<ಗಣಕೇಶ ಎಂದು ಕರೆಯಬಾರದೇಕೆ ಎನ್ನುವ ಪ್ರಶ್ನೆ ಕಾಡುತ್ತಿದೆ?!! :)) >>> GANAKESHA ಗಣಕೇಶ = ಗಣ ಕೇಶ ? ಗಣಗಳ ಕೇಶ ? ಗಣಕೇಶ = ಗಣಕ+ಇಶ ? ಗಣಕ ಇಶ = ಕಂಪ್ಯೂಟರ್ ರಾಜಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಕರ್ ಅವರೆ, <<ಗಣಕೇಶ = ಗಣ ಕೇಶ ? ಗಣಗಳ ಕೇಶ ? >> ಆನೆಯ ತಲೆಯಲ್ಲಿ ಕೂದಲಿದ್ದರಲ್ಲವೆ ಗಣೇಶನಿಗೂ ಕೂದಲು ಆದ್ದರಿಂದ ಈ ಉತ್ತರ ತಪ್ಪು ;)) <<ಗಣಕೇಶ = ಗಣಕ+ಇಶ ? ಗಣಕ ಇಶ = ಕಂಪ್ಯೂಟರ್ ರಾಜಾ? ‍>> ಇದನ್ನು ಸುಮಾರಾಗಿ ಒಪ್ಪ ಬಹುದು ಏಕೆಂದರೆ ನೀವು ಉತ್ತರದ ಸಮೀಪ ಬಂದಿರುವುದರಿಂದ. ಯಾವುದೇ ವಿಷಯವಿರಲಿ ಅದಕ್ಕೆ ಸೂಕ್ತವಾದ ಕೊಂಡಿಯನ್ನು ಸೊಂಡಿಲ್ಲಿಲ್ಲದಿದ್ದರೂ ಕೂಡ ಗಣೇಶರು ಕೊಡುವುದರಿಂದ ಅವರಿಗೆ ಗಣಕೇಶ ಎನ್ನುವ ಎರಡನೇ ಅರ್ಥವೇ ಸರಿ. :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ(ಕರ್+ಧರ್) ಅವರೆ, ಹೇಗೆ ಬೇಕಾದರೂ ಕರೆಯಿರಿ, ಆದರೆ ( http://sampada.net/b... )ಗಣಕದ ಜತೆ ಮಾತ್ರ ನನ್ನ ಸೇರಿಸಬೇಡಿ. :) ನನ್ನಾಕೆ ನನ್ನನ್ನೂ ಗಣಕವನ್ನೂ ಹೊರದಬ್ಬಿಯಾಳು.. ( ಮೇಲಿನ ಕೊಂಡಿಯನ್ನು ಓದಿದರೆ ನಾನು ಯಾಕೆ ರಾತ್ರಿ ಹನ್ನೆರಡರ ಹೊತ್ತಿಗೆ ಬರುವುದು ಗೊತ್ತಾಗುವುದು.) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶರೆ ಉರುಫ್ ಗಣಕೇಶರೆ, ನೀವು ಕೊಟ್ಟ ಕೊಂಡಿಯ ಹಿಡಿದು ಹೋದಾಗ.................... ಅರ್ಥವಾಯಿತು ಬಿಡಿ ನೀವು ದಿನವೆಲ್ಲಾ 'ಆಂಟಿ ವೈರಸ್' (Anti‍-virus) ಹುಡುಕಿಕೊಂಡು ಹೋಗಿರುತ್ತೀರ ನಿಮ್ಮ 'ವಿರಸ' (Virus) ಅನ್ನು ಎದುರಿಸಲು ....ಪಾಪ! :((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರರೇ, ಈ ಪ್ರಸಂಗದಲ್ಲಿ 'ಉಚ್ಛಕುಲದಲ್ಲಿ ಹುಟ್ಟಿದ' ಎಂಬ ಎರಡು ಪದಗಳನ್ನು ಕೈಬಿಡಲು ಸಾಧ್ಯವಾದರೆ ಬಿಡಬಹುದೇ? [ಹುಟ್ಟಿನಿಂದ ಜಾತಿಗಳನ್ನು ಗುರುತಿಸುವುದು ಸರಿಯಲ್ಲ.]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಶ್ರೀಧರ ಬಂಡ್ರಿಯವರಿಗೆ ಈ ಲೇಖನಕ್ಕಾಗಿ ನನ್ನಿ. ಬಾರೆ ಹಣ್ಣಿನ ನಿಮ್ಮ ಪ್ರಶ್ನೆಯಿಂದಾಗಿ "ಕಾದಿರುವಳು ಶಬರಿ" ಪದ್ಯ ನೆನಪಾಗಿ ಗೂಗಲಿಸಿದಾಗ ಒಂದು ಸುಂದರ ಕನ್ನಡ ತಾಣ ಸಿಕ್ಕಿತು. ಅದರಲ್ಲೇ ವಿ.ಸೀ. ಯವರ ಸುಂದರ ಪದ್ಯದ ಪೂರ್ಣ ಪಾಠವೂ ಸಿಕ್ಕಿತು. ವನವನವ ಸುತ್ತಿ ಸುಳಿದು ತರುತರುವ ನಲೆದು ತಿರಿದು ಬಿರಿ ಹೂಗಳಾಯ್ದು ತಂದು ತನಿವಣ್ಗಣಾಯ್ದು ತಂದು | ಮೂಲ ರಾಮಾಯಣದಲ್ಲಿ ಇಲ್ಲವಾದರೂ ಕತೆ ತುಂಬಾ ಚೆನ್ನಾಗಿದೆ, ಮಾತ್ರವಲ್ಲ ರಾಮನಿಂದಾಗಿ ಅನ್ನುವದಕ್ಕಿಂತ ಹೆಚ್ಚಾಗಿ ಬಾರೇ ಹಣ್ಣಿನಿಂದಾಗಿ ಶಬರಿ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ ಎಂದನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಿ. ಸೀ. ಯವರ ಸುಂದರ ಕವನ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಶ್ರೀಕರ್ ಅವರೆ. ಥ್ಯಾಂಕ್ಸ್ ಟು ಶಬರಿ ಅಂಡ್ ಹರ್ ಬಾರೆ ಹಣ್ಣು ಫಾರ್ ದಿಸ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೇ, ನಾನು ರಾಮಾಯಣದ ಕಾಲವನ್ನು ಗಣನೆಗೆ ತೆಗೆದುಕೊಂಡು ಆ ಶಬ್ದವನ್ನು ಉಪಯೋಗಿಸಿದ್ದೆ; ಇದರಿಂದ ತಪ್ಪು ಅಭಿಪ್ರಾಯ ಉಂಟಾಗ ಬಹುದೆಂದು ನೀವು ತಿಳಿಸಿಕೊಟ್ಟಿದ್ದರಿಂದ ಅದನ್ನು 'ಕ್ಷತ್ರಿಯ ಕುಲದಲ್ಲಿ ಹುಟ್ಟಿದ ' ಎಂದು ಬದಲಾವಣೆ ಮಾಡಿದ್ದೇನೆ. ನಿಮ್ಮ ಸಲಹೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ ಬಂಡ್ರಿಯವರೆ ವಂದನೆಗಳು. ಶಬರಿಯ ಕುರಿತ ನಿಮ್ಮ ಅಭಿಪ್ರಾಯ ಸರಿ. ದೇವರಿಗೆ ಭಕ್ತಿ ಮುಖ್ಯವಾಗುತ್ತದೆಯೆ ಹೊರತು ಬೇರವುದೂ ಅಲ್ಲ. ಮುಗ್ಧತೆಗೂ ಸಹ ದೇವ ಒಲಿಯುತ್ತಾನೆಮ ಎನ್ನುವುದು ಈ ಉಪಕಥೆ ಸೇರಿಸಿದವ ರ ಉದ್ದೇಶ ವಾಗಿರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹನುಮಂತ ಪಾಟೀಲರೆ, <<ಮುಗ್ಧತೆಗೂ ಸಹ ದೇವ ಒಲಿಯುತ್ತಾನೆ ಎನ್ನುವುದು ಈ ಉಪಕಥೆ ಸೇರಿಸಿದವರ ಉದ್ದೇಶ ವಾಗಿರಬಹುದು.>> ಇದರ ಅರ್ಥ ನಿಷ್ಕಳಂಕ ಅಥವಾ ಸ್ವಾರ್ಥ ರಹಿತ ಭಕ್ತಿಯಾಗುವುದರಿಂದ ಇದಕ್ಕೆ ದೇವರು ಒಲಿಯುತ್ತಾನೆನ್ನುವುದು ನಿಜ. ನಿಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕುವೆಂಪುರವರ ರಾಮಾಯಣ ದರ್ಶನಂ ಕ್ರತಿಯಲ್ಲೂ ಶಬರಿಯ ಪ್ರಸಂಗ ತುಂಬಾ ಸುಂದರವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕುವೆಂಪುರವರ ರಾಮಾಯಣ ನೆನೆಪಿಸಿದ್ದಕ್ಕೆ ಧನ್ಯವಾದಗಳು ಶ್ರೀನಿವಾಸ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.