ಲಕ್ಷಾರ್ಚನೆ

0
             
 
               ಗುರುನಾಥರು ದೇವಸನ್ನಿಧಿಯಲ್ಲಿ ಉಪಸ್ಥಿತರಿದ್ದಾಗ ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯ ಮಾತು ಬಂತು.   ಈಶ್ವರನಿಗೆ   ಲಕ್ಷ ಬಿಲ್ವಾರ್ಚನೆಯನ್ನು  ಮಾಡಿಸುವ ಹೊಣೆ ಹೊತ್ತ ಮಹಾನುಭಾವರು  ಈ ವಿಚಾರವನ್ನು ಗುರುನಾಥರಲ್ಲಿ ಪ್ರಸ್ತಾಪಿಸಿದರು.
              " ಈ ಬಾರಿ ನಮ್ಮ ಈಶ್ವರನಿಗೆ,  ಲಕ್ಷ ಬಿಲ್ವಾರ್ಚನೆ ಮಾಡುವ ಉದ್ದೇಶ ಹೊಂದಿದ್ದೇವೆ." ಎಂದು ಹೇಳಿದರು.
              " ಬಹಳ ಸಂತೋಷ , ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿರಾ?  ಸರಿ, ಲಕ್ಷಾರ್ಚನೆ  ಎಂದರೇನು? ಸಾರ್." ಎಂದು ಮರು ಪ್ರಶ್ನೆ ಹಾಕಿದರು.
              "  ಲಕ್ಷಾರ್ಚನೆ   ಎಂದರೆ ಒಂದು ಲಕ್ಷ ಬಿಲ್ವದ ಕುಡಿ ಎಸಳುಗಳನ್ನು,  ಈಶ್ವರನಿಗೆ ಸಮರ್ಪಣೆ ಮಾಡುವುದು." ಎಂದರು.
              " ಒಂದು ಲಕ್ಷ ಬಿಲ್ವದ ಕುಡಿಗಳೇ !!(?)  ಅಂದರೆ , ಇಷ್ಟು ಸಂಗ್ರಹ ಮಾಡಲು ಸಾಕಷ್ಟು ಮರಗಳಿಂದ ಕುಯ್ಯಬೇಕು. ಸಾಕಷ್ಟು ಚಿಗುರು ಬಿಲ್ವಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಚಿಗುರುಗಳನ್ನೇ ಕುಯ್ಯುವುದು?  ಹೌದೆ? " ಎಂದರು ಸ್ವಲ್ಪ ಆತಂಕ ಮಿಶ್ರಿತ ದ್ವನಿಯಲ್ಲಿ.
              " ಹೌದು, ಈ ಎಲ್ಲ ಬಿಲ್ವ ಕುಡಿ ಎಸಳುಗಳು ಈಶ್ವರನಿಗೆ ಸಮರ್ಪಣೆಯಾಗುತ್ತದೆ. " ಎಂದು ಬೀಗುತ್ತಾ ಹೇಳಿದರು.
              " ಈ ಲಕ್ಷ ಕುಡಿಗಳನ್ನು ಕೊಯ್ಯುವ ಮೊದಲು ಆ ಬಿಲ್ವ ಗಿಡಕ್ಕೆ ಒಂದಷ್ಟಾದರೂ ನೀರನ್ನು ಯಾರೋ ಹಾಕಿರಬೇಕಲ್ಲವೇ?  ಹಾಕಿ ಸಾಕಿರಬೇಕಲ್ಲವೇ?  ಹೀಗೆ ಪೋಷಣೆ ಯಾದರೆ  ಗಿಡದಲ್ಲಿ ಚಿಗುರು ಕಾಣಿಸಿಕೊಳ್ಳುತ್ತದೆ. ಆ ಚಿಗುರನ್ನು ಗಿಡ  ಕಳೆದು ಕೊಂಡರು ಮತ್ತೆ ನೀರು ಗೊಬ್ಬರ ಬಿದ್ದರೆ ಮತ್ತೆ ಚಿಗುರು ಒಡೆಯಬಹುದು. ಅಲ್ಲವೇ ಸಾರ್!? " ಎಂದು ಪ್ರಶ್ನಿಸಿದರು ಗುರುನಾಥರು.
              " ಹೌದು........ ಹೌದು.." ಎಂದು ತಲೆ ತೂಗಿದರು.
              " ಈಗ..... ನೀವು ಯಾರೋ ಬೆಳೆಸಿದ ಗಿಡ ಅಥವಾ ಮರದಿಂದ ಕುಡಿ ಎಸಳುಗಳನ್ನು ತಂದು ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿದ್ದಿರ.   ನೀವು ಆ ಗಿಡಗಳಿಗೆ ಈ ಮುಂಚೆ ಎಷ್ಟು ಕೊಡ ನೀರು ಹಾಕಿದ್ದೀರಾ?  ಎಷ್ಟು ಗೊಬ್ಬರ ಹಾಕಿದ್ದೀರ? ಏನೂ ಮಾಡದೆ ಯಾರೋ ಬೆಳೆಸಿದ ಮರದಿಂದ ಅದರಲ್ಲೂ ಕುಡಿ ಎಸಳು ಕುಯ್ಯ್ದು,   ಚಿಗುರನ್ನು ಹಾಳುಮಾಡಿ ಈಶ್ವರನ ತಲೆಯಮೇಲೆ ಹಾಕಿದರೆ ಈಶ್ವರ ಮೆಚ್ಚುತಾನೆಯೇ ............ಸಾರ್?" ಎಂದು ಸರಳವಾದ ಸಿದ್ದಾಂತವನ್ನು ಅವರ ಮುಂದೆ ನಿರ್ಲಿಪ್ತರಾಗಿ ಇಟ್ಟುಬಿಟ್ಟರು.
              ಈ  ತರಹದ ಚಿಂತನೆಯಾಗಲಿ,   ವಿಚಾರವಾಗಲಿ ಅವರ ಕನಸಿನಲ್ಲೂ ಬಂದಿರಲಿಕ್ಕೆ ಸಾಧ್ಯವಿಲ್ಲ.  ಮಿಂಚಿನಂತೆ ಬಂದ ಈ ಪ್ರಶ್ನೆ ಆ ಮಹಾನುಭಾವರನ್ನು ತಬ್ಬಿಬ್ಬು ಮಾಡಿತು. ಏನು ಹೇಳಲು ತೋಚದೆ  ಕುಬ್ಜರಾದರು.  
              " ಇದೆಲ್ಲ ಕಕ್ಕುಲಾತಿ ಸಾರ್......ಬರಿ ಕಕ್ಕುಲಾತಿ. " ಎಂದು ತಲೆ ಅಲ್ಲಾಡಿಸಿದರು.
              ಸಾವರಿಸಿಕೊಂಡು " ಹಾಗಾದರೆ ಲಕ್ಷ ಬಿಲ್ವಾರ್ಚನೆ ಮಾಡುವುದು ಬೇಡವೇ? " ಎಂದು ಅತ್ಯಂತ ನಿರಾಸೆಯಿಂದ ಕೇಳಿದರು.
               " ನಾನೆಲ್ಲಿ ಹಾಗೆ  ಹೇಳಿದೆ?" ಎಂದು ಸುಮ್ಮನಾದರು 
               " ಹಾಗಾದರೆ, ಲಕ್ಷಾರ್ಚನೆ ಮಾಡುವ ಬಗೆಯಾದರೂ ಹೇಗೆ? " ಎಂದು ವಿನೀತರಾಗಿ ಪ್ರಶ್ನಿಸಿದರು.
               " ಲಕ್ಷ್ಯದಿಂದ ಒಂದು ಬಿಲ್ವದ ಎಸಳನ್ನ ಪರಮ ಭಕ್ತಿಯಿಂದ ಈಶ್ವರನ ತಲೆಯ ಮೇಲೆ ಇರಿಸಿ ಧನ್ಯತೆಯನ್ನ ಹೊಂದುವುದು.  ಭಕ್ತಿ, ಪ್ರೇಮ, ಶ್ರದ್ಧೆ  ಇಲ್ಲದೇ ಒಂದು ಲಕ್ಷ ಹಾಕಿದರು ಅಷ್ಟೇ, ಒಂದು ಕೋಟಿ  ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ " ಎಂದು ತಮ್ಮ ಮಾತನ್ನು ಮುಗಿಸಿದರು.
                ಇಂದಿಗೂ ಗುರುನಾಥರ  ಈ ಮಾತು ನಮ್ಮನ್ನ ಭಾವ ಪರವಶರನ್ನಾಗಿ ಮಾಡುತ್ತದೆ.  ಭಗವಂತನ ಮುಂದೆ ನಿಂತಾಗ ಲಕ್ಷ್ಯವಿಡಬೇಕೆಂಬ ಮಾತು ಪ್ರತಿಸಾರಿಯೂ ಎಚ್ಚರಿಸುತ್ತದೆ.  ಇಂತಹ ಗುರುನಾಥರನ್ನು ಪಡೆದ ನಾವೇ ಧನ್ಯರು.
 
(ನನ್ನ ಆತ್ಮೀಯರೊಬ್ಬರು ಗುರುನಾಥರ ಬಳಿ ಹೋದಾಗ ಈ ಘಟನೆ ನಡೆದದ್ದು. ಅವರು ನೀಡಿದ ವಿವರಣೆ ಆಧರಿಸಿ  ಆ ಘಟನೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ)
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>> " ಲಕ್ಷ್ಯದಿಂದ ಒಂದು ಬಿಲ್ವದ ಎಸಳನ್ನ ಪರಮ ಭಕ್ತಿಯಿಂದ ಈಶ್ವರನ ತಲೆಯ ಮೇಲೆ ಇರಿಸಿ ಧನ್ಯತೆಯನ್ನ ಹೊಂದುವುದು. ಭಕ್ತಿ, ಪ್ರೇಮ, ಶ್ರದ್ಧೆ ಇಲ್ಲದೇ ಒಂದು ಲಕ್ಷ ಹಾಕಿದರು ಅಷ್ಟೇ, ಒಂದು ಕೋಟಿ ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ "<< +1 ನಿಮ್ಮ ಮಾತು ನಿಜ ಅಂತಹ ಮಹಾನುಭಾವರ ಸಂಗವೆ ಒಂದು ಪುಣ್ಯ.. ಗುರುನಾಥರ ಬಗ್ಗೆ ವಿವರವಾದ ಒಂದು ಲೇಖನ ಪ್ರಕಟಿಸಿದರೆ ನಮಗೂ ಅವರ ಬಗ್ಗೆ ತಿಳಿದಂತಾಗುತ್ತದೆ ಪ್ರಕಾಶ್ ರವರೇ.ಧನ್ಯವಾದಗಳೊಂದಿಗೆ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಸತೀಶ್ ರವರೆ, ಗುರುನಾಥರ ಜೊತೆ ಇದ್ದಾಗ ನಡೆದ ಸಂಭಾಷಣೆಯನ್ನು ಇಲ್ಲಿ ಬರೆಯುತ್ತಿದ್ದೇನೆ. ಗುರುನಾಥರ ಬಗ್ಗೆ ವಿವರವಾದ ಮಾಹಿತಿಯು ಇನ್ನು ಸಿಗಬೇಕಾಗಿದೆ. ಸಿಕ್ಕನಂತರ ಅತ್ಯಂತ ಸಂತೋಷದಿಂದ ನಿಮ್ಮಂತಹವರೊಡನೆ ಹಂಚಿಕೊಳ್ಳುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಚೆನ್ನಾಗಿದೆ .....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಗೋಪಾಲ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮ್ಮಲ್ಲಿಯೂ ಹಾಗೆಯೇ.. ಕೆಲವು ಭಕ್ತಾದಿಗಳು ಬ೦ದವರು ಅವರಿಗೆ ರೂ೦ ಸೌಲಭ್ಯ ಯಾ ಬೇರೆ ಏನಾದರೂ ಆಗುವುದಿದ್ದಲ್ಲಿ ನಮ್ಮಲ್ಲಿಗೆ ಬ೦ದು “ ನಾವು ಹಿ೦ದೆ ಅನ್ನಪೂರ್ಣೇಶ್ವರಿಗೆ ಅನ್ನದಾನ ಮಾಡಿದ್ದೆವು “ ಎ೦ಬ ಗತ್ತನ್ನು ತೋರಿಸಿದ ಕೂಡಲೇ ನನಗೆ ನಗು ಬರುತ್ತದೆ.. ಪರವಾಗಿಲ್ಲ “ ದೇವರಿಗೇ ಅನ್ನಹಾಕಿದವರು ಇ೦ದು ನಮ್ಮಲ್ಲಿ ರೂಮು ಕೇಳಲು ಬ೦ದಿದ್ದಾರಲ್ಲ“ ಎ೦ದು! ನಿಮ್ಮ ಗುರುನಾಥರ ಮಾತು ಅಕ್ಷರಶ: ಸತ್ಯ. ಚೆನ್ನಾದ ಸ೦ದೇಶ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ನಾವಡ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>“ ನಾವು ಹಿ೦ದೆ ಅನ್ನಪೂರ್ಣೇಶ್ವರಿಗೆ ಅನ್ನದಾನ ಮಾಡಿದ್ದೆವು “ ಎ೦ಬ ಗತ್ತನ್ನು.. :) :) ಪ್ರಕಾಶ್ ಅವರೆ, ಉತ್ತಮ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಗಣೇಶರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗುರುನಾಥರ ಅದ್ಭುತ ಮಾರ್ಗದರ್ಶನ ಎಲ್ಲರೂ ಅನುಸರಿಸಬೇಕಿದೆ!! ಧನ್ಯವಾದ, ಪ್ರಕಾಶರೇ, ಸದ್ವಿಚಾರ ಹರಡುತ್ತಿರುವಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾಗರಾಜರೇ ನಿಜ, ಅವರ ತೋರಿದ ಮಾರ್ಗ ಅನುಸರಿಸ ಬೇಕಿದೆ. ಆದರೆ............. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಪ್ರಕಾಶ್ ನರಸಿಂಹಯ್ಯ ಅವರೆ, ಗುರುನಾಥರ ಭೋಧನೆ ಅರ್ಥಪೂರ್ಣ.ಹಂಚಿಕೊಂಡಿದ್ದಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ನಾಗರಾಜರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಪ್ರಕಾಶರೆ, ನಿಮ್ಮ ಗುರುನಾಥರು ಈ ಕಾಲಕ್ಕೆ ಹೇಳಿರುವುದು ಸರಿಯಾಗಿದೆ. ಹೀಗೆ ಅರ್ಥವಿಲ್ಲದೆ ಲಕ್ಷ ಲಕ್ಷ ಖರ್ಚುಮಾಡಿ ಮಾಡುವ ಬಿಲ್ವಾರ್ಚನೆ ವ್ಯರ್ಥ. ಆದರೆ ಹೀಗೆ ಲಕ್ಷ ಬಿಲ್ವಾರ್ಚನೆ ಮಾಡಬಯಸಿದವರ ಮೂಲ ಉದ್ದೇಶ ಇಷ್ಟೊಂದು ಬಿಲ್ವ ಪತ್ರೆಗಳು ಬೇಕೆಂದರೆ ಅದರಲ್ಲಿ ಎಷ್ಟೊಂದು ಜನ ಭಾಗಿಯಾಗಬಹುದು ಮತ್ತು ಅಷ್ಟೆಲ್ಲಾ ಜನಕ್ಕೆ ಅರ್ಚನೆಯನ್ನು ಮಾಡುವ ಸೌಭಾಗ್ಯವನ್ನು ಒದಗಿಸುವುದಾಗಿತ್ತಲ್ಲವೇ? ಆದ್ದರಿಂದ ತನ್ನ ಗುರಿಯ ಉದ್ದೇಶ ಸ್ಪಷ್ಟವಾಗಿದ್ದರೆ ಈ ರೀತಿಯ ಗೊಂದಲಗಳು ಹುಟ್ಟುವುದಿಲ್ಲ ಎನಿಸುತ್ತದೆ. ಒಳ್ಳೆಯ ವಿಷಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಶ್ರೀಧರ ಬಂಡ್ರಿ ಯವರೇ, ಭಕ್ತಿ, ಪ್ರೇಮ, ಶ್ರದ್ಧೆ ಇಲ್ಲದೇ ಒಂದು ಲಕ್ಷ ಬಿಲ್ವದ ಎಸಳು ಹಾಕಿದರು ಅಷ್ಟೇ, ಒಂದು ಕೋಟಿ ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ. ಅದರ ಬದಲು ಪರಮ ಲಕ್ಷ್ಯದಿಂದ, ಒಂದೇ ಎಸಳು ಸಾಕು. ಎಂಬುದು ಗುರುನಾಥ ಉದ್ದೇಶವೆಂಬುದು ನನ್ನ ಭಾವನೆ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಯಾರೋ ಬೆಳೆಸಿದ ಮರದಿಂದ ಅದರಲ್ಲೂ ಕುಡಿ ಎಸಳು ಕುಯ್ಯ್ದು, ಚಿಗುರನ್ನು ಹಾಳುಮಾಡಿ ಈಶ್ವರನ ತಲೆಯಮೇಲೆ ಹಾಕಿದರೆ ಈಶ್ವರ ಮೆಚ್ಚುತಾನೆಯೇ ............ಸತ್ಯವಾದ ಮಾತು . ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೆನ್ನಾಗಿದೆ ಪ್ರಕಾಶವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಚೇತನ್ ರವರೆ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮನಮುಟ್ಟುವ ಚಿಂತನೆ. ಈ ರೀತಿಯಾಗು ಸಮಾಜ ತಿದ್ದುವವರ ಅಗತ್ಯ ಇಂದು ಖಂಡಿತ ಇದೆ... ಇದೇ ರೀತಿ ಗಣೇಶ ಚತುರ್ಥಿ, ಆಯುಧಪೂಜೆಯ ದಿನಗಳಂದು ಎಳೆಯ ಬಾಳೆಯ ಸಸಿಗಳನ್ನು ಕಡಿಯುವುದನ್ನು ತಪ್ಪಿಸಲು ಏನಾದರೂ ಯೋಜನೆ ರೂಪಿಸಬಹುದೇ? ಫಲ ನೀಡುವ ಆ ಸಸಿಗಳು ಹಬ್ಬದ ನಂತರ ರಸ್ತೆಬದಿಯಲ್ಲಿ ಬಿದ್ದಿರುವುದನ್ನು ಕಂಡಾಗ ಸಂಕಟವಾಗುತ್ತದೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಸೂರಜ್ ರವರೆ, ನಿಮ್ಮ ಮಾತು ಸತ್ಯ. ರಸ್ತೆ ಬದಿಯಲ್ಲಿ ಬಿದ್ದ ಬಾಳೆ ಕಂದು ಮತ್ತು ಮಾವಿನ ಸೊಪ್ಪು ನೋಡುವಾದ ಖಂಡಿತವಾಗಿ ಮನಸ್ಸಿಗೆ ಬೇಸರವೆನಿಸುತ್ತದೆ. ಇದರ ಪರಿಹಾರಕ್ಕೆ ಜನರು ಮನಸ್ಸು ಮಾಡಬೇಕು. ಆದರೆ ಈ ಕಾರ್ಯ ಮೊದಲು ನಮ್ಮಿಂದ ಆರಂಭವಾಗಬೇಕು. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.