ವರದಾ ಬಸ್ಸಿಗೆ ಬೆಂಕಿ ಬಿತ್ತು !!

4.285715

 ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ನಮ್ಮೂರಾದ ಮುಂಗಳಿಮನೆಗೆ ಇರುವ ಹದಿನೈದು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು.

 
ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು.
ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹುಡುಗಿಯರು, ಕುಡುಕರು, ಶಾಲಾ ಬಾಲಕ, ಬಾಲಕಿಯರು - ಹೀಗೇ ಎಲ್ಲಾ ವರ್ಗದ ಜನರೂ ಸೇರಿ ಅದೊಂದು ಮಿನಿ ಭಾರತವೇ ಆಗಿತ್ತು. ಜೊತೆಗೆ ಸೀಮೆಣ್ಣೆ ಕ್ಯಾನು, ಮೆಣಸಿನಕಾಯಿ ಚೀಲ, ತರಕಾರಿ, ಬಂಗಡೆ ಮೀನು, ಮುಳಗಾಯಿ, ತೆಂಗಿನಕಾಯಿ, ಹುಣಸೇಹಣ್ಣು ಎಂದು ಅರ್ಧ ಮಾರುಕಟ್ಟೆಯೇ ಬಸ್ಸೊಳಗಿತ್ತು. ಬೇರೆ ಬೇರೆ ಬ್ರಾಂಡು ಹೊಡೆದ ಬ್ರಾಂಡ್ ಫ್ಯಾಕ್ಟರಿಗಳಿಗೇನೂ ಕೊರತೆ ಇರಲಿಲ್ಲ. ಹೀಗೆ ಎಲ್ಲಾ ಪರಿಮಳವೂ ಸೇರಿ ಅದೊಂದು ಮಿಶ್ರತಳಿಯ ವಾಸನೆಯಾಗಿ ಬಸ್ಸೊಳಗೆ ಹರಡಿತ್ತು. ಏಜೆಂಟ್ ಸೀತಾರಾಮಣ್ಣ ಕೂಗಿ ಕೂಗಿ ಟಿಕೇಟು ಕೊಟ್ಟರೆ ಕಂಡಕ್ಟರ್ ಚಂದ್ರಣ ಖುಶಿಯಿಂದ ದುಡ್ಡು ಎಣಿಸಿದರು. ಕೊನೆಗೂ ಬಸ್ ಹೊರಟಿತು.
 
ರಾಘವೇಂದ್ರ ಅಕ್ಕಿ ಮಿಲ್ ಹತ್ತಿರ ಬಂದಾಗ ಅಲ್ಲೊಂದಿಷ್ಟು ಜನ ಹತ್ತಿದರು. ಜೊತೆಗೆ ಅಕ್ಕಿ ಮೂಟೆ ಬೇರೆ. ಅಲ್ಲಿಂದಲೂ ಹೊರಟ ನಂತರ ಮುಂದೆ ಹೋಗಿ ವರದಳ್ಳಿ ರಸ್ತೆಗೆ ತಿರುಗಿಕೊಂಡಾಗ ಅಲ್ಲೊಂದಿಷ್ಟು ಜನ ಒತ್ತರಿಸಿ ಹತ್ತಿಕೊಂಡರು. ಈ ರೀತಿ ವರದ ಬಸ್ಸೆಂಬುದು "ಸಂತೃಪ್ತ ಸ್ಥಿತಿ" ತಲುಪಿದ ಭೌತಿಕ ವಸ್ತುವಂತೆ ಕಂಡು ಬಂತು. ಅಲ್ಲಿ ಇನ್ನೊಂದೇ ಒಂದು ಕೆಜಿ ಜಾಸ್ತಿ ಆದರೂ ಬಸ್ಸು ಸಿಡಿದು ನುಚ್ಚು ನೂರಾಗಿ ಬಿಡುತ್ತೇನೋ ಎನ್ನುವಂತಿತ್ತು. ಈ ವಿಪರೀತ ನೂಕುನುಗ್ಗಲಿನಿಂದ ಬೇಸತ್ತ ಅನೇಕರು ಕಂಡಕ್ಟರು, ಡ್ರೈವರಿಗೆ ಬೈಯುತ್ತಾ ತಮ್ಮ ನೋವು ತೋಡಿಕೊಂಡರು.
 
ಹೆಲಿಫ್ಯಾಡ್ ಬಳಿ ಮತ್ತೊಂದಿಷ್ಟು ಜನ ಕೈ ಅಡ್ಡ ಹಾಕಿದರು. ಚಾಲಕ ಬಸ್ ನಿಲ್ಲಿಸಲಿಲ್ಲ. ಅವರೇನದರೂ ಓಡಿ ಬಂದಿದ್ದರೆ ಬಸ್‌ಗಿಂತಾ ಮುಂದೆ ಹೋಗಿ ಮನೆ ಸೇರಬಹುದಿತ್ತು. ಬಸ್ ಅಷ್ಟೊಂದು ವೇಗವಾಗಿ ಓಡುತ್ತಿತ್ತು. ಅಂತಹ ವೇಗದಲ್ಲೂ ಸೆಟ್ಟೀಸರ ತಂಗುದಾಣದಲ್ಲಿ ಕಂಡಕ್ಟರ‍್ ವಿಷಲ್ ಹಾಕಿದರೂ ಚಾಲಕ ನಿಲ್ಲಿಸಲಿಲ್ಲ. ಅದಕ್ಕೆ ಕಾರಣ ಅಲ್ಲಿ ಇಳಿಯಬೇಕಾಗಿದ್ದ ನಾಲ್ಕಾರು ಮಂದಿ ನೂರಾರು ಜನರ ನಡುವೆ ಸಿಕ್ಕಿಕೊಂಡಿರುವುದರಿಂದ ನಿಲ್ಲಿಸಿದರೆ ಅವರು ಇಳಿಯಲು ತುಂಬಾ ಸಮಯವಾಗಿ ಬಿಡುತ್ತಲ್ಲ. ಹಾಗಾಗಿ ಅಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಕರ್ಕೀಕೊಪ್ಪ ನಿಲ್ದಾಣದಲ್ಲಿ ಜಾಸ್ತಿ ಜನ ಇಳಿಯುತ್ತಾರೆ. ಇವರನ್ನೂ ಅಲ್ಲೇ ಒಟ್ಟಿಗೆ ಇಳಿಸಿದರಾಯ್ತು ಎಂದು ಚಾಲಕ ಹಾಗೆ ಮಾಡಿದ್ದ. ಆದರೆ ಅಲ್ಲಿ ಇಳಿಯಬೇಕಾಗಿದ್ದವರು ಒಂದು ಥರದ ಗೌಜು ಎಬ್ಬಿಸಿದರು. ಕೊನೆಗೂ ಬಸ್ಸು ಬಂದು ನಿಂತಿದ್ದು ಕರ್ಕೀಕೊಪ್ಪ ನಿಲ್ದಾಣದಲ್ಲೇ.
 
 ಅಲ್ಲಿ ಬಂದು ನಿಲ್ಲುವುದಕ್ಕೂ ಸರಿಯಾಗಿ ಇಂಜಿನ್‌ನಿಂದ ಹೊಗೆ ಶುರುವಾಗಿ ಅದು ಕೆಲವೇ ಕ್ಷಣದಲ್ಲಿ ದೊಡ್ಡದಾಗಿ ಹೋಯ್ತು. ಅದೇ ಸಮಯಕ್ಕೆ ಸರಿಯಾಗಿ ಸೆಟ್ಟಿಸರದಲ್ಲೇ ಇಳಿಯಬೇಕಾಗಿದ್ದ ಕುಡುಕನೊಬ್ಬ ತನ್ನನ್ನು ಮುಂದೆ ತಂದು ಇಳಿಸಿದ್ದಕ್ಕಾಗಿ ಇಳಿದು ಹೋಗುವಾಗ ಕೋಪದಲ್ಲಿ "ವರದಾ ಬಸ್ಸಿಗೆ ಬೆಂಕಿ ಬಿತ್ತು" ಎಂದು ನುಡಿದದ್ದೂ ನಡೆದು ಹೋಯ್ತು. ವನೇನೋ ಅವನಷ್ಟಕ್ಕೆ ಅವನೇ ಬೈದು ಹೊರಟು ಹೋದ. ಆದರೆ ಇದು ಕೇಳಿದ್ದೇ ತಡ "ಬೆಂಕಿ ಬಿತ್ತಾ ? ಅಯ್ಯೋ ಇಳೀರಿ ಎಲ್ಲ" ಎನ್ನುತ್ತಾ ಜನರು ಕಂಡ ಕಂಡಲ್ಲಿ ಧುಮುಕತೊಡಗಿದರು.
 
ಪುಣ್ಯಕ್ಕೆ ಆ ಬಸ್ಸಿನ ಕಿಟಕಿಗೆ ಗಾಜುಗಳೇ ಇರಲಿಲ್ಲ. ದೊಡ್ಡ ಕಿಟಕಿ ಬೇರೆ. ಎಲ್ಲಾ ಕಿಟಕಿಗಳಿಂದಲೂ ಮೇಲೆ ತಿಳಿಸಿದ ಎಲ್ಲಾ ವರ್ಗದ ಸಾರ್ವಜನಿಕರೂ ಧುಮುಕುತ್ತಿದ್ದರು. ಕೆಳಗೆ ಯಾರಿದ್ದಾರೆ ಯಾರಿಲ್ಲ ಅಂತ ನೋಡಲಿಲ್ಲ. ಅದರಲ್ಲೂ ಕೆಲವರು ತಮ್ಮ ತಮ್ಮ ಸಾಮಾನಿನ ಮೂಟೆಯನ್ನೂ ಬಿಡದೇ ಹೊರಗೆ ಎಸೆದುಕೊಂಡು ನಂತರ ಹೊರಗೆ ಹಾರಿದರು. ಕೆಳಗೆ ಹಾರಿ ಕಾಲು ನೋವು ಮಾಡಿಕೊಂಡಿರುವಾಗಲೇ ಮೇಲಿನಿಂದ ತಲೆ ಮೇಲೆ ಸಾಮಾನು ಚೀಲಗಳು ಬಿದ್ದವು. ಕೆಲವರು ಎಸೆದ ಸೀಮೆಣ್ಣೆ ಕ್ಯಾನ್ ಮುಚ್ಚಳ ತೆರೆದುಕೊಂಡು ಅದು ಹಲವರ ಸಾಮಾನುಗಳನ್ನು ತೋಯಿಸಿತು. ನಾನು ಕಿಟಕಿ ಪಕ್ಕದಲ್ಲೇ ಕುಳಿತಿದ್ದರೂ ನನಗೆ ಮೇಲೇಳಲೂ ಬಿಡದಂತೆ ನನ್ನನ್ನು ದಾಟಿಕೊಂಡು ಜನರು ಧುಮುಕುತ್ತಿದ್ದುದು ಮಜವಾಗಿತ್ತು. ಹೆಂಗಸರು ಮಕ್ಕಳೇಲ್ಲಾ ಕಿಟಕಿಯಿಂದಲೇ ಹಾರಲು ಹೋಗಿ ಸಮತೋಲನ ಸಿಗದೇ ಬಿದ್ದು ಲಗಾಟಿ ಹೊಡೆದುದೂ ಆಯ್ತು. ಈ ನಡುವೆ ಚಾಲಕ ಮತ್ತು ನಿರ್ವಾಹಕ ಇಂಜಿನ್ ಪರಿಶೀಲಿಸಿ ಅಲ್ಲಿ ಏನೂ ತೊಂದರೆ ಇಲ್ಲದ್ದನ್ನು ಗಮನಿಸಿ ಹಾರುತ್ತಿದ್ದವರ ಬಳಿ ಬಂದು "ಏನೂ ಆಗಿಲ್ಲರೀ, ಗಾಭರಿ ಆಗಬೇಡಿ, ರೇಡಿಯೇಟರ್‌ನಲ್ಲಿ ನೀರು ಕಡಿಮೆ ಆಗಿದೆ ಅಷ್ಟೇ!" ಎಂದು ಹೇಳಿದರೆ ಯರೂ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಅವರ ಮೇಲೆಯೇ ನೆಗೆದು ಸೇಡು ತೀರಿಸಿಕೊಂಡರು.
 
ಆಗ ನಾನು ನೋಡುತ್ತಿರುವಂತೆಯೇ ನನ್ನ ಎದುರಿಂದ ಯಾರೋ ಪ್ಯಾರಾಚೂಟ್ ಕಟ್ಟಿಕೊಂಡು ಹಾರಿದಂತೆ ಕಂಡು ಬಂತು. ’ಅಲೆಲೆ, ಬಸ್‌ನಿಂದ ಹಾರಲಿಕ್ಕೂ ಪ್ಯಾರಾಚ್ಯೂಟೇ?’ ಎಂದು ಚಕಿತನಾಗಿ ಹಾರಿದವರನ್ನು ನೋಡಿದರೆ ಅದು ಹಾಯ್ಗೋಡಿನ ಕಳ್ಳಭಟ್ಟಿ ಮಾರುವ ವನಜಕ್ಕ! ಅವಳು ಪ್ಯಾರಾಚೂಟ್ ಕಟ್ಟಿಕೊಂಡು ಹಾರಿರಲಿಲ್ಲ... ಅವಳು ಸಹಜವಾಗೇ ಹಾರಿದ್ದರೂ ಅವಳ ಸೀರೆ ಮತ್ತು ಲಂಗ ಗಾಳಿಗೆ ಪ್ಯಾರಾಚೂಟ್‌ನಂತೆ ಅಗಲವಾಗಿ ಬಿಚ್ಚಿಕೊಂಡು ಅವಳನ್ನು ಕ್ಷೇಮವಾಗಿ ನೆಲಕ್ಕಿಳಿಸಿದ್ದವು. ಅದನ್ನು ಕೆಳಗೆ ನಿಂತು ನೋಡಿದ ಕಾಲೇಜು ಹುಡುಗರು ಮುಸಿ ಮುಸಿ ನಗುತ್ತಾ ಮತ್ತೆ ಯಾರಾದರೂ ಇದೇ ರೀತಿ ಹಾರುವರೇ ಎಂದು ಕಾಯತೊಡಗಿದರು.
 
ಈ ರೀತಿ ಒಂದು ಹಂತಕ್ಕೆ ಬಸ್ ಖಾಲಿಯಾಗಿ ಕೊನೆಗೆ ನಾವೊಂದು ಹತ್ತು ಹನ್ನೆರಡು ಜನರಷ್ಟೇ ಉಳಿದಾಗ ಬಸ್ಸಿಗೆ ಬೆಂಕಿ ಬಿದ್ದಿಲ್ಲ ಅಂತ ತೀರ್ಮಾನವಾಯ್ತು. ಮತ್ತೆ ಎಲ್ಲರೂ ಧಡಬಡಾಯಿಸಿ ಬಸ್ ಏರಿದರು. ಕರ್ಕೀಕೊಪ್ಪದಲ್ಲೇ ಸುಮಾರು ಅರ್ಧ ಬಸ್ ಜನ ಇಳಿಯುವುದು ಇದ್ದುದರಿಂದ ಈ ಸಲ ಅಷ್ಟೊಂದು ಕಷ್ಟ ಆಗಲಿಲ್ಲ. ಈ ಬಾರಿ ’ಬಸ್‌ಗೆ ಬೆಂಕಿ ಬಿತ್ತು’ ಎಂದು ಹೇಳಿದ ಆ ಕುಡುಕನನ್ನು ಎಲ್ಲರೂ "ಥೂ ಅವನ ಮನೆ ಹಾಳಾಗ" ಎಂದು ಬೈದುಕೊಳ್ಳುತ್ತಾ ತಮ್ಮ ತಮ್ಮ ಸ್ಥಿತಿಯ ಬಗ್ಗೆ ಹಳಿದುಕೊಳ್ಳತೊಡಗಿದರು. ಒಬ್ಬೊಬ್ಬರೂ ತಾವು ಹಾರಿದ ಬಗೆಯನ್ನು ಬಗೆ ಬಗೆಯಲ್ಲಿ ವರ್ಣಿಸುತ್ತಿದ್ದರೆ ವನಜಕ್ಕ ತಾನೇನೂ ಕಮ್ಮಿ ಇಲ್ಲ ಅನ್ನುವಂತೆ "ನನ್ನ ಸೀರೆ ಕಂಡಿರ್ಯಾ? ಹೆಂಗ್ ಬಿಚ್ಕಂಡಿತ್ ಅಂತ?!" ಎಂದು ದೊಡ್ಡದಾಗಿ ಹೇಳುತ್ತಾ ಅದನ್ನು ನೋಡದಿದ್ದವರೂ ಸಹ ಕಲ್ಪನೆ ಮಾಡಿಕೊಳ್ಳುವಂತೆ ಮಾಡಿದಳು!
 
ಏನೆ ಆದರೂ ವರದಾ ಬಸ್ಸಿನ ಸೇವೆಯನ್ನು ನಮ್ಮೂರಿನ ಜನ ಮರೆಯುವ ಹಾಗೆಯೇ ಇಲ್ಲ. ದಶಕಗಳ ಕಾಲ ಅದು ಸೇವೆ ನೀಡಿ ಈಗ ಮರೆಯಾಗಿದೆ. ಅದರ ಮಾಲೀಕರು ಬಸ್‌ ರೂಟ್‌ ಅನ್ನು ಗಜಾನನ ಸಂಸ್ಥೆಯವರಿಗೆ ಮಾರಿದ್ದಾರೆ. ವರದಾ ಬಸ್‌ ನಮ್ಮೂರಿನವರ ಜನ ಮಾನಸದಲ್ಲಿ ಹೇಗೆ ಬೇರು ಬಿಟ್ಟಿತ್ತೆಂದರೆ ಈಗಿನ ಗಜಾನನದವರೂ ಸಹ "ಶ್ರೀ ವರದಾ" ಹೆಸರಿನಲ್ಲೇ ಒಂದು ಬಸ್‌ನ್ನು ನಮ್ಮೂರಿಗೆ ಬಿಟ್ಟಿದ್ದಾರೆ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬಸ್‌ನಿಂದ ಹಾರಲಿಕ್ಕೂ ಪ್ಯಾರಾಚ್ಯೂಟೇ?’ :())) ಅದನ್ನು ನೋಡದಿದ್ದವರೂ ಸಹ ಕಲ್ಪನೆ ಮಾಡಿಕೊಳ್ಳುವಂತೆ ಮಾಡಿದಳು! :((( :())) ಅವರ ಮೇಲೆಯೇ ನೆಗೆದು ಸೇಡು ತೀರಿಸಿಕೊಂಡರು. :()) ಮಾರುಕಟ್ಟೆಯೇ ಬಸ್ಸೊಳಗಿತ್ತು. ಬೇರೆ ಬೇರೆ ಬ್ರಾಂಡು ಹೊಡೆದ ಬ್ರಾಂಡ್ ಫ್ಯಾಕ್ಟರಿಗಳಿಗೇನೂ ಕೊರತೆ ಇರಲಿಲ್ಲ :())) ಅಲ್ಲಿ ಇನ್ನೊಂದೇ ಒಂದು ಕೆಜಿ ಜಾಸ್ತಿ ಆದರೂ ಬಸ್ಸು ಸಿಡಿದು ನುಚ್ಚು ನೂರಾಗಿ ಬಿಡುತ್ತೇನೋ ಎನ್ನುವಂತಿತ್ತು. :())) ------------------------------------------------------------------ ಶ್ರೀಪತಿ ಅವ್ರೆ- ನೀವ್ ಬರೆದ ಈ ಅನುಭವ ಕಥನ ಓದಿದೆ .. ಕಾಕತಾಳೀಯ ಎಂಬಂತೆ ನಾ ಮೊನ್ನೆ ಮೊನ್ನೆ ನನ್ ಇದೆ ತರಹದ ಅನುಭವವನ್ನ ಕುರಿತು ಒಂದು ಬರಹ ಬರೆದಿದ್ದೆ ..!! ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)?? | ಸಂಪದ - Sampada http://sampada.net/b... ನಿಮ್ಮ ನುಭವ ಹೆಚ್ಚ್ಹು ಕಡಿಮೆ ನನ್ ಅನುಭವಕ್ಕೂ ಹೋಲುತ್ತೆ ..!! ನಿಮ ಬರಹ ಓದಿ ನೀವ್ ಅಲ್ಲಲ್ಲಿ ಹೇಳಿದ ಸಂಗತಿಗಳು ವಿಪರೀತ ನಗೆ ತರಿಸಿದವು..:())) ಈ ತರಹದ ಸನ್ನಿವೇಶದಲ್ಲಿ ಹಾಸ್ಯ ಸನ್ನಿವೇಶಗಳಿಗೆ ಕೊರತೆ ಇರೋಲ್ಲ...!! ನನ್ನ ಅನುಭವ ಕಥನದಲ್ಲಿ ಕೊಂಚ ವಿಭಿನ್ನ ಸ್ತಿತಿ ಇತ್ತು ಮತ್ತು ಅದೇ ನನಗೆ ಅಚ್ಚರಿ ಆದದ್ದು ಅದು:
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ಬರಹವನ್ನು ಓದುತ್ತಿದ್ದಂತೆ ನನಗೆ ಸಹಜವಾಗಿ ಸಪ್ತಗಿರಿಯವರು ಬರೆದ ಲೇಖನ ನೆನಪಾಯಿತು. ಬಹುಶ: ಶ್ರೀಪತಿಯವರೂ ಕೂಡ ಆ ಲೇಖನವನ್ನು ಓದಿ ತಮ್ಮ ಅನುಭವವನ್ನು ನೆನಪಿಗೆ ತಂದುಕೊಂಡು ಈ ಬರಹ ಬರೆದಿರಬಹುದು. ಶ್ರೀಪತಿಯವರೆ ನಿಮ್ಮ ಬರವಣಿಗೆಯ ಶೈಲಿ ಈ ಕಥಾನಕವನ್ನು ಸರಾಗವಾಗಿ ಓದುವಂತೆ ಮಾಡಿತು ಮತ್ತು ನಿಮ್ಮ ರಸಿಕತೆಯನ್ನೂ ಹೊರಹಾಕಿತು ;))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

@ ಸಪ್ತಗಿರಿವಾಸಿ - ಇದು ಕಾಕತಾಳೀಯವಲ್ಲ. ನಿಮ್ಮ "ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!!" ಲೇಖನ ಓದುವಾಗಲೇ ನನಗೆ ಎಂದೋ ನಡೆದಿದ್ದ ಈ ಘಟನೆ ನೆನಪಾಗಿದ್ದು. ಅದಕ್ಕೆ ಪ್ರತಿಕ್ರಿಯೆಯಾಗಿ ಇದನ್ನು ಉದಾಹರಿಸಬೇಕೆಂದು ಬರೆಯಲು ಶುರು ಮಾಡಿದೆ. ಆದರೆ ಸ್ವಲ್ಪ ದೊಡ್ಡದಾಗುತ್ತದೆ ಅನ್ನಿಸಿದಾಗ ಇದನ್ನೇ ಒಂದು ಲೇಖನವಾಗಿಸೋಣ ಅನ್ನಿಸಿತು. ಈ ಘಟನೆ ನೆನಪಾಗಲು ಕಾರಣರಾದ ನಿಮಗೆ ಕೃತಜ್ಞತೆಗಳು. @ ಶ್ರೀಧರ್ ಬಂಡ್ರಿ ನಿಮ್ಮ ಅನಿಸಿಕೆ ಸರಿಯಾಗಿದೆ. ಸಪ್ತಗಿರಿಯವರ ಲೇಖನ ಓದಿಯೇ ನನಗೆ ಈ ಘಟನೆ ನೆನಪಾದುದು. ರಸಿಕತೆ ? ರಸಿಕತೆ ಇಲ್ಲದ ಜೀವನ ನೀರಸ ಅಲ್ವ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೆನ್ನಾಗಿದೆ. ಅಂತೂ ನಮ್ಮ ಸಂಪದಿಗರಿಬ್ಬರೂ ಬಸ್ಸಿಗೆ ಬೆಂಕಿ ಬಿದ್ದರೂ ಸಿಕ್ಕ ಸೀಟು ಬಿಟ್ಟು ಏಳುವವರಲ್ಲ :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾವು ಕುಳಿತ ಸೀಟಿಗೇ ಬೆಂಕಿ ಬಿದ್ದಲ್ಲಿ ಆಗ ಯೋಚನೆ ಮಾಡಬಹುದು. ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಅಣ್ಣ- ಈಗ ಯೋಚಿಸಿ ನಾವ್ ಇಬ್ಬರು ಏನಾದರೂ ಅಪ್ಪಿ ತಪ್ಪಿ ಹೋಗಿ ಆ 'ಸೀ ಎಮ್ಮು' ಸೀಟ್ ನಲ್ಲಿ ಕೂತರೆ.....!! ???? ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

^^ ಆ ಸೀಟಲ್ಲಿ ಕೂರುವ ಮೊದಲು ಯೋಚಿಸಿ.. ಆ ಸೀಟು ವರದಾ ಬಸ್ಸಿಗಿಂತಲೂ ಅಲುಗಾಟ ಜಾಸ್ತಿ ! ಇರೋರೆಲ್ಲಾ ಹೊಗೆ ಹಾಕ್ತಾರೆ. ಕಾಲ ಬುಡದಲ್ಲೆ ಬೆಂಕಿ ಇರುತ್ತೆ. ಹಾವು ಚೇಳು ಅಕ್ಕ ಪಕ್ಕನೇ ಇರುತ್ವೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:())) ಶ್ರೀಪತಿ ಅವ್ರೆ ಅದೂ ನಿಜವಿರಬಹುದು.. ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧ | ಸಂಪದ - Sampada http://sampada.net/%... ಕೆಲ ತಿಂಗಳ ಹಿಂದೆ ಬರೆದ ಈ ಬರಹದಲ್ಲಿ ಇದ್ದುದು ಈಗ ಇರುವ ಪರಿಸ್ತಿತಿ ನೋಡಿ... ಶುಭವಾಗಲಿ.. ತ್ವರಿತ ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಚೆನ್ನಾಗಿದೆ, ನಮ್ಮೂರಿನ ಶಂಕರ್ ಬಸ್ ನೆನಪಿಗೆ ಬಂತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

@ ಚೇತನ್ ಕೋಡುವಳ್ಳಿ ಧನ್ಯವಾದಗಳು, ಮೆಚ್ಚಿದ್ದಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಪತಿಯವರೇ, ವರದಾ ಬಸ್ಸು ಮತ್ತು ಮುಂಗ್ಲಿಮನೆ ನನ್ನ ಬಾಲ್ಯದ ಆಪ್ತ ಭಾಗ. ಹುನ್ ಆ ರಶ್ಶು, ಭಯಂಕರ ರೈಡು, ಗ್ಲಾಸಿಲ್ಲದ ಕಿಟಕಿಗಳು, ಬ್ರಾಂಡು ಫ್ಯಾಕ್ಟರಿಗಳು ಎಲ್ಲವು ಎಷ್ಟು ಕಣ್ಣಿಗೆ ಕಟ್ಟಿದ ಹಾಗೆ ನೆನಪಿದೆ ನಂಗೆ. ನಾನು ಸಾಮಾನ್ಯ ರಜಾ ದಿನಗಳಲ್ಲಿ ಆ ಬಸ್ಸಿಗೆ ಬರುತ್ತಿದ್ದೆ. ನನ್ನ ಅಜ್ಜನ ಮನೆಗೆ. ಚಂದ್ರನ್ನ, ಚೌಡಪ್ಪ, ಮತ್ತು ವಯಸ್ಸಾದ ಡ್ರೈವರ್ ಎಲ್ಲ ನನ್ನ ಪ್ರೀತಿಯವರು. ನಾನು ಧಾವಂತವಿಲ್ಲದ ಆ ದಿನಗಳಲ್ಲಿ ಕೆಳದಿ ರಸ್ತೆ ಕಾಂಪ್ಲೆಕ್ಸ್ ನಿಂದ ಅಥವಾ ಮಾರ್ಕೆಟ್ ರಸ್ತೆ ಸ್ಟಾಪಿನಿಂದ ಇನ್ನು ಒಂದು ಗಂಟೆ ಮೊದಲು ಹತ್ತಿ ಕೂರುತ್ತಿದ್ದೆ ಆ ಬಸ್ಸಲ್ಲಿ ಸೀಟು ಹಿಡಿಯಲು.! (ಸಂಜೆ ಟ್ರಿಪ್ಪಿಗೆ) ಅ ಬಸ್ಸಲ್ಲಿ ಹೋಗಿ ಬರುವಾಗ ತುಂಬೆ ಏರಿನಲ್ಲಿ ಕಾಣುವ ಶರಾವತಿಯ ನೋಟ ನನ್ನ ಅತ್ಯಂತ ಪ್ರೀತಿಯ ನೆನಪು. ಈಗಲೂ ಕಣ್ಮುಚ್ಚಿದರೆ ಅದೇ ಕಾಣುತ್ತದೆ. ಏನೇನೇನೋ ಚಂದ ನೆನಪುಗಳನ್ನ ಹುಟ್ಟಿ ಹಾಕಿದ ನಿಮ್ಮ ಈ ಬರಹಕ್ಕೆ ಸಿಕ್ಕಾಪಟ್ಟೆ ಥ್ಯಾಂಕ್ಸ್. ಪ್ರೀತಿಯಿಂದ, ಸಿಂಧು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

೫ ವರ್ಷ ೯ ವಾರಗಳಿಂದ ಸಂಪದದಲ್ಲಿ ಇರುವ ಸಿಂಧು ಅವ್ರೆ ನಿಮ್ಮದೇ ಬ್ಲಾಗ್ ನಲ್ಲಿ(http://www.nenapu-ne...) ಮಾರ್ಚ್ ೩೦ ನೇ ತಾರ್ಖು ಗೆ ಕೊನೆಯ ಬರಹ ಬರೆದು ಸಕ್ರಿಯ ಆಗಿರುವ ನೀವು ಸಂಪದದಲ್ಲಿ ಮಾತ್ರ ಕೊನೆಯ ಬರಹ ಬರೆದದ್ದು ಮಾರ್ಚ್ ೧೧ ೨೦೦೮ ರಂದು...!! ಅದ್ಯಾಗ್ಗು ನೀವು ಶ್ರೀಪತಿ ಅವರ ಈ ಬರಹಕ್ಕೆ ಪ್ರತಿಕ್ರಿಯಿಸಿದ್ದು ಕಂಡು ನ0ಗೆ ಅನ್ನಿಸುತ್ತಿದೆ, ನೀವ್ ಬರಹ ಬರೆಯದಿದ್ದರೂ ಇಲ್ಲಿ ಬರುವ ಬರಹಗಳನ್ನ ಗಮನಿಸುತ್ತಿರುವಿರಿ ಎಂದು.... ಶುಭವಾಗಲಿ... ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತ ಗಿರಿವಾಸಿ, ಥ್ಯಾಂಕ್ಯೂ ನಿಮ್ಮ ಅಬ್ಸರ್ವೇಶನ್ನಿಗೆ. ನಂಗೆ ಈಗ ಮೊದಲಿನ ಹಾಗೆ ಬರೆಯಲು ಸಮಯವಿಲ್ಲ. ಓದು ನನ್ನ ಜೀವನದ ರೀತಿ. (ಲೈಫ್ ಸ್ಟೈಲ್)ಯ ಮುಖ್ಯ ಭಾಗ. ಅದಿರದೆ ಬದುಕಿರಲಾರೆ. ಎಲ್ಲ ಬರಹಗಳನ್ನೂ ಓದಲಾಗುವುದಿಲ್ಲ. ಅಲ್ಲಲ್ಲಿ ಮೊದಲ ಸಾಲಿನಲ್ಲಿ ನನ್ನ ಕಣ್ ಸೆಳೆದವನ್ನ ಬಿಡದೆ ಓದುತ್ತೇನೆ. ಸ್ವಲ್ಪ ವಯಸ್ಸಾಗಿರೋದ್ರಿಂದ ಟೀನ್ ರೊಮ್ಯಾಂಟಿಕ್ ಬರಹ ಓದುದು ಕಡಿಮೆ. ಹಳೆ ನೆನಪುಗಳೂ, ಪ್ರಕೃತಿ, ಚಾರಣ, ಊರು, ಕನ್ನಡ.. ಈ ಬರಹಗಳಿಗೆ ಆದ್ಯತೆ. ಸಂಪದದಲ್ಲಿ ನನ್ ಬರಹ ಹಾಕದೆ ತುಂಬ ದಿನ ಆಯ್ತು. ಸಧ್ಯದಲ್ಲೆ ಹಾಕ್ತೀನಿ. ನಿಮಗೆ ನನ್ ಬರಹ ಇಷ್ಟ ಆದ್ರೆ ಇತ್ತೀಚೆಗೆ ಬರೆದ ಒಂದು ಕೆಂಡಸಂಪಿಗೆಯ ಅಂಕಣ ಇಲ್ಲಿದೆ. ಹೂಕಣಿವೆ http://www.kendasamp... ಪ್ರೀತಿಯಿಂದ,ಸಿಂಧು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಿಂಧು ಅವ್ರೆ ವಯಸ್ಸು ದೇಹಕ್ಕೆ ಬಿಡಿ- ಮನಸ್ಸಿಗೆ ಅಲ್ಲ - ಅದು ನೀವ್ ಬರೆದ ವಿಭಿನ್ನ ಬರಹಗಳನ್ನು ನೋಡಿ-ಓದಿ ನಂಗೆ ಗೊತ್ತಾಗಿದೆ(ಸಂಪದದಲ್ಲಿ).. ಕೆಂಡ ಸಂಪಿಗೆ ಯನ್ನು ಸಹಾ (ಈಗ ಸುಮಾರು ೩-೪ ತಿಂಗಳಿಂದ )ನಾ ಓದುವೆ, ಆದರೆ ನೀವ್ ಇಲ್ಲಿಯೂ ಅಲ್ಲಿಯೂ ಇರುವಿರಿ ಅಂತ ಈಗ ಗೊತ್ತಾಯ್ತು, ನಿಮಂ ಬರಹವನ್ನು ಓದುವೆ, ಅಲ್ಲಿಯೇ ಪ್ರತಿಕ್ರಿಯಿಸುವೆ... ಶುಭವಾಗಲಿ.. ತ್ವರಿತ ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಿಂಧು ಅವರಿಗೆ ನಮಸ್ಕಾರ, ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನೀವು ನಮ್ ಕಡೆಯವರೆಂದು ತಿಳಿದು ಸಂತೋಷವಾಯ್ತು. ಯಾರು ನಿಮ್ಮ ಅಜ್ಜ ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ತೇ ಶ್ರೀಪತಿ, ನನ್ನ ಅಜ್ಜ ಮುಂಗಳೀಮನೆಯ‌ ದಿವಂಗತ ‍‍ ಪಟೇಲ್ ಮಂಜಯ್ಯನವರು. ಅಲ್ಲೆ ಬಸ್ ಸ್ಟಾಪಿನ ಹತ್ತಿರವೆ ಮಾವನ ಮನೆ ಇರುತ್ತದೆ. ನಿಮಗೆ ಅವರೆಲ್ಲಾ ಗೊತ್ತಿದಾರೆ ಅನಿಸುತ್ತೆ. ಮತ್ತೆ ನಮ್ಮ ಅಮ್ಮನಿಗೆ ನಿಮ್ಮ ಅಮ್ಮನ ಪರಿಚಯವಿದೆ. ತುಂಬ ಹಿಂದೆ ಅವರು ನಿಮ್ಮ ಬಗ್ಗೆ ಹೇಳಿದ ನೆನಪು ನಂಗೆ. ಪ್ರೀತಿಯಿಂದ,ಸಿಂಧು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಟೇಲ್ ಮಂಜಯ್ಯ ಅವರ ಹೆಸರು ಅಂತ ಗೊತ್ತಿರಲಿಲ್ಲ. ನಾವೆಲ್ಲಾ ಮಂಜಪ್ಪ ಹೆಗಡೆಯವ್ರು ಅಂತ ಕರಿತಿದ್ವಿ. ಅವರು ಚೆನ್ನಾಗಿ ಗೊತ್ತು. ಅವರ ಮನೆಯ ಕಾಂಪೌಂಡ್ ಒಳಗೆ ತುಂಬಾ ಗೇರು ಮರ ಇವೆಯಲ್ಲ? ಅವುಗಳ ಹಣ್ಣುಗಳನ್ನು ಕಿತ್ತು ತಿನ್ತಾ ಇದ್ವಿ. ಅವರೇ ಕೊಡುತ್ತಿದ್ದರು. ಮನೆ ಹಿಂಭಾಗದಿಂದ ಬಂದು ಮಾವಿನಕಾಯಿಗಳನ್ನೂ ಕದ್ದು ತಿನ್ತಿದ್ವಿ. (ಅವರಿಗೆ ಹೇಳ್ಬೇಡಿ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಪತಿ ಮತ್ತು ಸಿಂಧು ಅವ್ರೆ- ನಿಮ್ಮಿಬ್ಬರ ಹಳೆಯ ನೆನಪುಗಳು ಓದಿದಾಗ, ಸಂಪದ ಸ್ನೇಹ ಸೇತು ಸಹಾ ಆಗುವುದು ಅಂತ ತಿಳಿಯಿತು... ಶುಭವಾಗಲಿ... \\\\\\\\\|||||||||//////////
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೆನಪಿನ ದೋಣಿಯನ್ನು ಹತ್ತಿಸಿದ ಲೇಖನಕ್ಕೆ ಧನ್ಯವಾದಗಳು. ನಮ್ಮ ಹೊಳಲ್ಕೆರೆ ಗ್ರಾಮದಲ್ಲಿ ಒಂದು ಬಸ್ ಬರುತ್ತಿತ್ತು. ಅದರ ಹೆಸರು 'ಅನುಮಾ ನ್ ಮೋಟರ್ ಸರ್ವಿಸ್' ಎಂದು. 'ಹನುಮಾನ್' ಹೋಗಿ ಅದು ನಿಜಕ್ಕೂ ಅನುಮಾನದ ತಲೆಪತ್ತಿಯನ್ನು ಅಮ್ತಿಸಿಕೊಮ್ದಿತ್ತು. ಆಗ ಬರುತ್ತಿದ್ದ ಬಸ್ ಗಳು ಹನುಮಾನ್ ಮೂತಿಯನ್ನು ಹೊಮ್ದಿರುತ್ತಿದ್ದುದು ನಿಜ ಸಂಗತಿ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

'ಅನುಮಾ ನ್ ಮೋಟರ್ ಸರ್ವಿಸ್' ಎಂದು. 'ಹನುಮಾನ್' ಹೋಗಿ ಅದು ನಿಜಕ್ಕೂ ಅನುಮಾನದ ತಲೆಪತ್ತಿಯನ್ನು ಅಮ್ತಿಸಿಕೊಮ್ದಿತ್ತು. ಆಗ ಬರುತ್ತಿದ್ದ ಬಸ್ ಗಳು ಹನುಮಾನ್ ಮೂತಿಯನ್ನು ಹೊಮ್ದಿರುತ್ತಿದ್ದುದು ನಿಜ ಸಂಗತಿ ! :()))) \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲಾ ಊರಲ್ಲೂ ಒಂದೊಂದು ’ವರದಾ ಬಸ್ಸುಗಳು" ಇದ್ದೇ ಇವೆ ಅಂದಂಗಾಯ್ತು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.