ವಸಂತ ಚೈತ್ರ ಯುಗಾದಿ.......

4

            ವಸಂತ ಚೈತ್ರ ಯುಗಾದಿ.......
ಹಿತ ಹಿತ ಚೈತ್ರದ ಚಿಗುರಿನ ಚಿತ್ತಾರ ಸೊಗಸು 
ಫಳ ಫಳ ಹೊಳೆಯುತ ಕಣ್ಸೆಳೆವ  ಹೊಂಗಿರಣವು   
ಚಿಲಿಪಿಲಿ ಹಕ್ಕಿಯ ಕಿಲ ಕಿಲ  ಕಲರವವು
ಮಿರ ಮಿರ ಮಿನುಗಿ ಪಸರಿಸುವ ಹಚ್ಚ-ಹಸಿರಿನ ಹಾಸು
ಲಕ ಲಕನೆ ಫಲುಕಿ  ನಳ ನಳಿಸುವ ಸೊಬಗಿನ ಹೂಗೊಂಚಲು
 ಪಟ ಪಟನೆ ಪುಟಿದೇಳುವ ಅಂದದ ಪುಟ್ಟ ದುಂಬಿಯು 
 ಚುಮು ಚುಮು ಬಿಸಿಲಿನ ಚಿಟ ಪಟ ಮಳೆ ಹನಿಯು 
 ಬಿರ ಬಿರನೆ ಬಾನಲಿ ಬಾಗಿಸಿ ಬಳುಕುವ ಬಣ್ಣ ಬಣ್ಣದ ಮಳೆಬಿಲ್ಲು
ಕುಣಿ ಕುಣಿದು ಅತ್ತಿತ್ತ ಕಳ್ಳ ನೋಟ ಬೀರುವ ತುಂಟ ಮೊಲವು
ಕರ ಕರ ಕರಗುಟ್ಟಿ ಕುಪ್ಪಳಿಸುವ ಕಪ್ಪೆಯು
ಟುವ್ವಿ ಟುವ್ವಿ  ಮೆಚ್ಚುವ  ಗುಬ್ಬಚ್ಚಿ ಹಾಡಿನ ಠೇಂಕಾರವು
ಜಿರ ಜಿರನೆ ಜಿರುಗುಟ್ಟುವ ಜೀರುಂಡೆಯ ಝೇಂಕಾರವು
ಕುಹೂ ಕುಹೂ ಕೋಗಿಲೆಯ ಇಂಪಾದ ಸವಿ ಗಾನವು 
ಝಳು ಝಳು ಝರಿ ಲಹರಿಯ ಮಂಜುಳ ನಾದವು
ಘಮ ಘಮ ಗಮಿಸುವ ಮಾವು-ಬೇವು ಕಂಪಿನ ತಂಪೆಲರವು
ನಲಿ ನಲಿ ನಲಿದಾಡುತ ಸಾಗಲಿ ಗೆಲುವು ದಿನ ದಿನವು
ಹೊಸ ಹೊಸ ಋತು ವಸಂತ ಸಂಭ್ರಮದ ಆದಿಯ ಯುಗಾದಿಯು 
 
—-Rukku
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.