ವಿಕಾರಚಿತ್ತ…

0

ತಪ್ಪ ತಿಳಿದು,ಮತ್ತೊಂದು ತಪ್ಪಿನ ಸುತ್ತ
ಗಿರಕಿ ಹೊಡೆದು ತಿರುಗಿಬಿತ್ತು, ಮತ್ತೆ ಎತ್ತು
ಸವಾರನಿಲ್ಲದ ಕುದುರೆ, ವಿಕಾರಚಿತ್ತ…

ಕಣ್ಣ ತೆರೆದು, ಒಳಗಣ್ಣನ್ನು ಮುಚ್ಚಿ
ಸತ್ಯ ಕನಲಿ, ಅಸತ್ಯವಷ್ಟೇ ಗೋಚರಿಸಿ
ವಿನಾಶದ ಕುರುಡುಛಾಯೆ, ವಿಕಾರಚಿತ್ತ…

ಸೌಂದರ್ಯ ಕಳೆದು, ವಿಕೃತಿ ತಳೆದು
ಆಂತರ್ಯದ ಚೈತನ್ಯವೇ ಮಾಸಿಹೋಗಿ
ಯೌವ್ವನಕ್ಕೆ ಹಿಡಿದ ಮುಪ್ಪಿದು, ವಿಕಾರಚಿತ್ತ…

ತನ್ನ ಶಕ್ತಿಯ ಮರೆತು, ಸ್ವಾಭಿಮಾನಕ್ಕೆ
ಆತ್ಮವಂಚನೆಯೆಂಬ ಧಕ್ಕೆ ಮಾಡಿ
ಹೇಡಿತನದ ಪರಮಾವಧಿಯಿದು, ವಿಕಾರಚಿತ್ತ…

ಹಿಂದಿನ ನಿನ್ನೆಲ್ಲ ವಿಜಯಗಳ ಮರೆತು
ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಜಿಸಿ
ಸೋಲಿನ ವಿಜೃಂಭಣೆಯಿದು, ವಿಕಾರಚಿತ್ತ…

ಕರುಣೆಯೆಂಬ ತನ್ನತನವ ಬಿಟ್ಟು
ಕ್ರೌರ್ಯ-ಕಾರ್ಯವ ಆರಾಧಿಸುವ
ದಾನವನತೆಯ ಪ್ರತೀಕವಿದು, ವಿಕಾರಚಿತ್ತ…

ಅಳಿದುಳಿದ ಸತ್ವಗಳ ಕೆದಕೆದಕಿ
ಚಿತ್ತಚಾಂಚಲ್ಯವ ನೀನರಿತಮೇಲೂ
ಬಿಟ್ಟರೂ ಬಿಡದ ಮಾಯೆಯಿದು, ವಿಕಾರಚಿತ್ತ…

************

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.