ಶೀಟಿ ಹೊಡೆಯೋದು.

0

ಶೀಟಿ ಹೊಡೆಯೋದು. ಬಸ್ಸಿನಿಂದ ಇಳಿಯುವಾಗ ತಡಮಾಡಿದ ಇಳಿವಯಸ್ಸಿನ ಮುದುಕಿಗೆ ಕಂಡಕ್ಟರ್ ಜೋರು ಮಾಡುತ್ತಾ " ಅದೆಷ್ಟು ಹೊತ್ತು ಇಳಿತಿಯಾ? ನಾನು ಶೀಟಿ ಹೊಡೆದದ್ದು ಕೇಳಲ್ಲಿಲ್ಲವೇನು? ಇಳಿ ಬೇಗ. " ಇಳಿದ ಮುದುಕಿ, ಕಂಡಕ್ಟರ್ನನ್ನು ದುರುಗುಟ್ಟಿ ನೋಡಿ " ಶೀಟಿ ಹೊಡೆದರೆ ತಿರುಗಿನೋಡೋ ಕಾಲಎಲ್ಲ ಆಗಲೇ ಮುಗಿದು ಹೋಯಿತು. ಈಗ ಏನಿದ್ದರು ಶೀಟಿ ಹೊಡೆಯೋದು ಅಷ್ಟೇ ಬಾಕಿ ಇರೋದು " ಎಂದು ತೋರು ಬೆರಳನ್ನು ಮೇಲಕ್ಕೆ ತೋರಿಸಿದಳು. ತನ್ನ ತಪ್ಪಿನ ಅರಿವಾಗಿದ್ದರು ಏನೂ ಮಾಡಲು ಸಾಧ್ಯವಿರಲಿಲ್ಲ, ಕಾಲ ಮಿಂಚಿ ಹೋಗಿತ್ತು. ಬಾಯಿಂದ ತಪ್ಪು ಮಾತು ಉದುರಿತ್ತು. ತಲೆ ತಗ್ಗಿಸಿ ರೈಟ್ .......ಎಂದು ಬಾಗಿಲು ಎಳೆದುಕೊಂಡ ಕಂಡಕ್ಟರ್.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

:) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಚೇತನ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶೀಟಿ ಹೊಡೆಯುವುದಕ್ಕೆ ಬಹಳ ಅರ್ಥವಿದೆ! ಹಲವಾರು ತರದ ಶೀಟಿಗಳಿವೆ!! ಧನ್ಯವಾದ, ಪ್ರಕಾಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾಗರಾಜರೆ, ಒಂದು ಶೀಟಿ ಯುವಕರು ಚುಡಾಯಿಸಲು ಹೊಡೆಯುವ ಶೀಟಿಯಾದರೆ, ಇನ್ನೊಂದು ಅಂತಿಮ ಶೀಟಿ. ಆದರೆ ಕೊನೆಯಲ್ಲಿ ಇಳಿವಯಸ್ಸಿನ ಮುದುಕಿ ಹೇಳಿದ ಶೀಟಿ ನೇರ ಹೃದಯಕ್ಕೆ ತಟ್ಟುತ್ತದೆ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.