ಸಂತ ಶಿಶುನಾಳ ಷರೀಫ್ ಸಾಹೇಬ

3.6

19ನೇಯ ಶತಮಾನದದಲ್ಲಿ ಆಗಿ ಹೋದಅನುಭಾವಿ ಕವಿಗಳಾದ ಸಂತ ಶಿಶುನಾಳ ಷರೀಫ್ ಸಾಹೇಬ ಎಂದು ಹೆಸರುವಾಸಿಯಾದ ಧಾರವಾಡಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸಣ್ಣಗ್ರಾಮ ಶಿಶುನಾಳದಲ್ಲಿ ಕ್ರಿ.ಶ.1819 ಮಾರ್ಚ 7ರಂದು ಇವರ ಜನನ. ತಂದೆ ಹಜರತ್‍ ಇಮಾಮಸಾಹೇಬ, ತಾಯಿ ಹಾಜಿಮಾ ಇವರನ್ನು ಪ್ರ್ರೀತಿಯಿಂದ ಇಟ್ಟ ಹೆಸರು “ಮೊಹಮ್ಮದ್ ಶರೀಫ್”. ಇಂದು ಶಿಶುನಾಳ ಶರೀಫರ 195ನೇ ಹುಟ್ಟು ವರ್ಷ. ಜಾನಪದ ಪ್ರತಿನಿಧಿಯಾದ ಈ ಯೋಗಿ ಕವಿ ಸಾಮಾನ್ಯ ಮಾನವರಿಗೂಅರ್ಥವಾಗುವಂತೆ ಮಾನವತೆಯ ತತ್ವಬೋಧನೆ ಮಾಡಿದ್ದಾರೆ. ಕಳಸ ಗ್ರಾಮದ ಬರಿಮೈಯ ಚರಮೂರ್ತಿಯಾದ ಗೋವಿಂದಭಟ್ಟರು ಶರೀಪ್ ಸಾಹೇಬರ ಗುರುಗಳು. ಜಾತಿ ಮತಗಳ ಭೇದವೆಂದರೆ ಇವರಿಗಾಗದು, ಗುರುಶಿಷ್ಯರಿಬ್ಬರೂ ಒಂದೇತಟ್ಟೆಯಲ್ಲಿ ಊಟ ಮಾಡುತ್ತಿದ್ದರೆಂದ ಮೇಲೆ ಅವರಲ್ಲಿರುವ ಅನ್ಯೂನ್ಯತೆಯನ್ನು ಊಹಿಸಬಹುದು. ದಿವ್ಯ ಮಾನವರಾಗಿ ಬಾಳಿದ ಶರೀಫರು, ಅವರ ಜನನ ಸ್ಥಳವಾದ ಶಿಶುನಾಳ ಗ್ರಾಮದಲ್ಲಿ 1889ನೇಯ ಮಾರ್ಚ 7ನೇಯ ದಿನಾಂಕದಂದು ಅವಸಾನ ಹೊಂದಿದರು. ಅವಸಾನಕ್ಕೆ ಕೆಲ ನಿಮಿಷಗಳ ಮುಂಚೆ ಅವರಿಗೆ ದಿವ್ಯ ಸ್ಪೂರ್ತಿಯುಂಟಾಗಿ “ಬಿಡತೇನಿ ದೇಹ‌ ಬಿಡತೇನಿ, ಭೂಮಿಗೆಕೊಡತೇನಿ, ದೇಹಾ ಬಿಡತೇನಿ” ಎಂದು ಹಾಡಿದರು. ಹಿಂದೂ-ಮುಸ್ಲೀಂ ಭಾವೈಕ್ಯದ ಸಂಕೇತವಾದ ಶರೀಫರ ಅಂತ್ಯಸಂಸ್ಕಾರ ಕ್ರಿಯೆಯುಎರಡೂ ಪರಂಪರೆಗಳ ಅನ್ವಯ ನಡೆಯಿತು. “ಕೂಡಿ ಬಾಳಿದರೆ ಸ್ವರ್ಗ”, ಭಾರತದಲ್ಲಿ ನಾವು ಬಯಸುವುದು ಸೌಹಾರ್ಧ ವಾತಾವರಣ. ಅದಕ್ಕೆತಮ್ಮೆಲ್ಲರ ಸಹಕಾರ ಅಗತ್ಯ ವಂದನೆಗಳೊಂದಿಗೆ, ಎನ್.ಸಂತೋಷ ತೋಟ್ನಳ್ಳಿ. ಚಿತ್ರ ಕೃಪೆ.ಕನ್ನಡ ಸಂಪದ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):