(ಸಂಪದದ ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು)

0

 

 
ಕನ್ನಡದ ಚೇತನವೇ ಮತ್ತಿನ್ನೇಕೆ ನಿದ್ದೆ
ಕರುನಾಡ ಪ್ರಾಣವೇ ಅಮಲು ಇನ್ನೇಕೆ?
ಎದ್ದು ಬಾ , ಒದ್ದು ಬಾ ಹಂಗಿನರಮನೆಯ,
ಕನ್ನಡಾಂಬೆಯ ಮಡಿಲ ಮನೆಯಲ್ಲಿ
ಒಡಲ ಚಾಚಿ , ಸ್ವತಂತ್ರವಾಗು
ಅಭಿಮಾನಿಯಾಗು, 
ಎಲ್ಲರೂ ಇರಲಿ, ಎಲ್ಲವೂ ಇರಲಿ
ಪೃಥ್ವಿಯಲ್ಲಿನ ಭಾಷೆ, ಸಂಸ್ಕೃತಿ 
ಲಕ್ಷವಿರಲಿ,
ನಿನ್ನೊಳಗಿನ ಕನ್ನಡಿಗ ಮಾತ್ರ
ಎಚ್ಚೆತ್ತಿರಲಿ, ಕನ್ನಡ ಮರೆಯದೆ
ಹಂಗ ಮೆರೆಯದೆ,ಚೂರು ಪಾರು
ಆರು ಪಾರು ಭಾಷೆಗಳ ಸೇರಿಸದೆ,
ಇರುವ ಕನ್ನಡವ ಹಾಳು ಮಾಡದೆ
ಕನ್ನಡವ ಎಲ್ಲೆಲ್ಲೂ ಎತ್ತಿ ಹಿಡಿದರೆ
ಕರನಾಡ ಪುತ್ರ(ತ್ರಿ)ಯಾದುದಕೆ 
ಸಾರ್ಥಕ 
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.