'ಸಂಪದ' ಸಮ್ಮಿಲನ (MOM)

0

ಬಹು ದಿನಗಳಿಂದ ನಾನು ನಿರೀಕ್ಷಿಸಿದ್ದ ದಿನ ಬಂದಿತು, ಸಂಪದದ ಸಮ್ಮಿಲನ !


ನನ್ನ ಮನೆಯಿಂದ ಡ್ರೈವ್ ಮಾಡುತ್ತಾ ಹೊರಟೆ . ಮಾರ್ಗ ಮಧ್ಯದಲ್ಲಿ ಯೋಚಿಸುತ್ತ, ಯಾರು ಯಾರು ಬಂದಿರುತ್ತಾರೋ ಎಂಬ ಕುತೂಹಲದಿಂದ ಗಾಡಿಯನ್ನು  ವೇಗವಾಗಿ ಐಶ್ವರ್ಯಳ ಕೆನ್ನೆಯ ತರಹದ ರೋಡ್ ಮೇಲೆ ಓಡಿಸುತ್ತಿದ್ದೆ  , ಅಲ್ಲಲ್ಲಿ ಓಂಪುರಿ ಕೆನ್ನೆಯ ಅನುಭವವು ಆಯಿತು.ಕೊನೆಗೆ  'ಸಾರಂಗ' ತಲುಪಿದೆ.

ವಿಶಾಲವಾದ ಹಾಲ್, ಬಾಗಿಲು ತೆರದಿತ್ತು , ಸ್ವಾಗತ ಕೋರಲು ಕೃಷ್ಣ ದೇವರಾಯನ ಆಸ್ಥಾನದಲ್ಲಿ ಕುಳಿತಂತೆ ಎಲ್ಲ ಲೇಖಕರು ಕುಳಿತ್ತಿದ್ದರು,"ಅತ್ಯುಗ್ರರ್ ,ಸಾಹಸಿಗಳ್, ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ , ವಾಕ್ಚತುರರ್" ಗಳ ದರ್ಶನ ವಾಯಿತು.ನಾನು ನನ್ನನು ಪರಿಚಯಿಸಿಕೊಂಡೆ. ಕೆವುವರು ' ಓಹ್ ! .." ಎಂದರು. ಗೊತ್ತಿರುವ some ಪದಗಳಿಂದ ರಚಿಸಿದ ನನ್ನ ಲೇಖನಗಳನ್ನೂ ಓದಿರುವವರು ಎಂದು ಮನಸಿನಲ್ಲಿ ಖುಷಿಯಾಯಿತು.  ಕೇವಲ ಭಾವಚಿತ್ರ / ಪ್ರತಿಕ್ರಿಯೆ/ಲೇಖನದಿಂದ ಪರಿಚಯವಾದವರನ್ನು , ರಕ್ತ ,ಮಜ್ಜಾ ,ಮಾಂಸ ದಿಂದ ಕೂಡಿದ ಶರೀರದೊಂದಿಗೆ ಪರಿಚಯವಾದುದ್ದು  ಒಂದು ತರಹ ಖುಷಿ ಕೊಟ್ಟಿತು.ನಮಗಾಗಿ ಕಾದಿದ್ದ ಆಲೂ ಬನ್, ಸಿಹಿ ತಿಂಡಿ  ಮತ್ತು ಕಾಫಿ/ಟೀ ಗಳ ಸಮಾರಾಧನೆ ಆಯಿತು.

ನಂತರ 'ಸಂಪದ'ದ  ಸೃಷ್ಟಿ ಕರ್ತಾ ಸಂಪದ ನಡೆದು ಬಂದ ದಾರಿ,ಮುಂಬರುವ ದಿನಗಳಲ್ಲಿ 'ಸಂಪದ' ಯಾವರೂಪ ತಾಳಬಹುದು
ಎನ್ನುವ ಬಗ್ಗೆ ವಿವರಿಸಿದರು.ಕೆಲವು ವಿಷಯಗಳು technical ಆಗಿತ್ತು. ಎಲ್ಲಾ ಬರಹಗಳು ದಿನ ಕಳೆಯುತ್ತಿದ್ದಂತೆ ಹೇಗೆ ಸಂರಕ್ಷಣೆ (ಡಾಟಾ ಬ್ಯಾಕ್ ಅಪ್ ) ಆಗುತ್ತಿದೆ ಅದ್ದಿಕ್ಕಾಗಿ ಅವರು ಮತ್ತು ಅವರ ಸಿಬ್ಬಂದಿ ಏನೇನು ಕ್ರಮ ಕೈಗೊಳ್ಳುತ್ತಾರ ಎನ್ನುವುದನ್ನು ಸ್ಪಷ್ಟಪಡಿಸಿದರು.ಸಂಪದಿಯರು 'ಸಂಪದ'ದಲ್ಲಿ  ಇನ್ನೂ ಹೆಚ್ಚು  ಹೊಸತನ ತರಲು ಇಚ್ಛಿಸಿದರೆ ಸಲಹೆಗಳನ್ನೂ  ಇಮೇಲ್ ಮೂಲಕ ಕಳಿಸಿ ಎಂದರು.

ಅವರ ಕೆಲವು  ಮಾತುಗಳಲ್ಲಿ 'ಪ್ರಜಾಪ್ರಭುತ್ವದ' ಸಾರ ಸ್ಪಷ್ಟವಾಗಿತ್ತು. 'ಸಂಪದ' ಜನರಿಂದ , ಜನರಿಗಾಗಿ ಎಂಬುದು ಸತ್ಯ. ಗೌರಿಶಂಕರನ ತಲೆಯಲ್ಲಿದ ಗಂಗೆ ಯನ್ನು ಸಗರ ಪುತ್ರ ಧರೆಗೆ ತರದೇ ಇದ್ದಲ್ಲಿ  ಗಂಗೆ ಶಿವನ ಬಳಿಯೇ ಇರುತ್ತಿದ್ದಳು. ಹಾಗೆ 'ಸಂಪದ'  ಎಲ್ಲರ ಮಸ್ತಕ ದಿಂದ 'e'  ಪುಸ್ತಕಕ್ಕೆ  ಜ್ಞಾನದ ಸುಧೆಯಾಗಿ ಹರಿದು ಬರಲು ಸಹಕರಿಸುತ್ತಿದೆ.

ಸಭೆಗೆ ಭಾಗವಹಿಸಿದ್ದ ಎಲ್ಲರು ಒಬ್ಬೊಬ್ಬರಾಗಿ ಪರಿಚಯಿಸಿಕೊಂಡರು. ಕನ್ನಡ ದಲ್ಲಿ  ಮಾತಿನ ಮಲ್ಲರ ನ್ನು ತಯಾರು ಮಾಡಬೇಕೆಂಬ ಮಹತ್ವಾಕಾಂಕ್ಷೆ ಯನ್ನು ಕ್ಯಾಲಿಫೋರ್ನಿಯಾದ toastmaster ಒಬ್ಬರು ವ್ಯಕ್ತಪಡಿಸಿದರು.ಹೀಗೆ  ಎಲ್ಲರ ಪರಿಚಯ ವಾದಂತೆ.
ಮಂಡ್ಯದ ಗಂಡುಒಬ್ಬರು  'ಸಂಪದ'ದಲ್ಲಿ ಪ್ರಕಟವಾಗುವ ಬರಹಗಳನ್ನು ಫಿಲ್ಟರ್ ಮಾಡಬಹುದೇ ? ಎಂದು ಪ್ರಶ್ನಿಸಿದರು.
"ತೋಚಿದನ್ನು ಗೀಚುವುದು" ಅದ್ದಿಕ್ಕಾಗಿಯೇ 'ಸಂಪದ' ವಿರುವುದು , sensitive ಆದ ವಿಷಯವಿದ್ದಲ್ಲಿ ನಿರ್ವಾಹಕರ ಗಮನಕ್ಕೆ ತರುವುದು ಉತ್ತಮ ಎಂಬುದು  ಎಲ್ಲರ ಅಭಿಪ್ರಾಯವಾಯಿತು. ಕೆಲವು ಉದಯೋನ್ಮುಖ ಕವಿಗಳು ತಮ್ಮ ಕಾಲೇಜು ದಿನಗಳ  ಹವ್ಯಾಸ 'ಸಂಪದ'ದಿಂದ ಮುನ್ದುವರೆಯಿತು ಎಂದು ಹೇಳಿದರು. ಕೆಲವು ಸಂವತ್ಸರಗಳು ಕೊಲ್ಲಿ ರಾಷ್ಟ್ರದಲ್ಲಿ ಸೇವೆಸಲ್ಲಿಸಿ ದೇಶಕ್ಕೆ ಹಿಂದ್ತಿರುಗಿರುವ, ದುಬೈ ಶೇಕ್ ತರಹ ಎರಡು ಕೈ ಬೆರಳುಗಳಿಗೆ ಕಪಾಲಿ ಉಂಗುರ ತೊಟ್ಟಿದ ಮಿತ್ರರೊಬ್ಬರು. 'ಸಂಪದ'ದಲ್ಲಿ ಪ್ರಕಟವಾದ ಲೇಖನ ದಿಂದ ತಮ್ಮ ಸ್ನೇಹಿತರೊಬ್ಬರ ಜೀವನದಲ್ಲಿನ  ಸಾಂಸಾರಿಕ ಬಿರುಕು ಹೇಗೆ ಮುಚ್ಚಿತು ಎಂಬ ವಿಚಾರವನ್ನು  ಎಲ್ಲರಿಗೂ ತಿಳಿಸಿದರು.

ಸ್ನೇಹಿತರೆ ! ಯಾವುದೇ ಕೆಲಸಕ್ಕೆ ಬೇಕಾದ Time , Money  and Energy ಯನ್ನು 'ಸಂಪದ' ದ ಸೃಷ್ಟಿಕರ್ತಾ ಯಾವ ಅಪೇಕ್ಷೆ ಇಲ್ಲದೆ ಬಳಸಿರುವುದು ಶ್ಲಾಘನೀಯ. ಇನ್ನು ಕೆಲವು ವರ್ಷಗಳ ನಂತರ 'ಸಂಪದ' ಒಂದು ಪರಿಪೂರ್ಣ ಜ್ಞಾನಭಂಡಾರ ವಾಗುವುದರಲ್ಲಿ ಸಂಶಯವಿಲ್ಲ. ನಾನು ತಿಳಿದಿರುವಂತೆ ಇದು ನಿಜವಾದ ಕನ್ನಡ ಸೇವೆ. ನೀವೇನಂತೀರಾ ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

:-):-) ಸಕ್ಕತ್ ವಿವರಣೆ ಕೊಟ್ಟಿದ್ದೀರ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾಷಾಪ್ರಿಯರೇ ನಿಮ್ಮ ಭಾವಚಿತ್ರ ನೋಡಿದ್ದ ನನಗೆ ನಿಮ್ಮನ್ನು ಎದುರು ನೋಡಿದಾಗ ಗುರುತಿಸಲು ಸಾಧ್ಯವಾಗಲಿಲ್ಲ. ನಿಮ್ಮ ಪರಿಚಯವಾದ ಮೇಲೆ ಗೊತ್ತಾಗಿದ್ದು..ಚೆನ್ನಾಗಿದೆ ವಿವರಣೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<<ಕೆಲವು ಸಂವತ್ಸರಗಳು ಕೊಲ್ಲಿ ರಾಷ್ಟ್ರದಲ್ಲಿ ಸೇವೆಸಲ್ಲಿಸಿ ದೇಶಕ್ಕೆ ಹಿಂದ್ತಿರುಗಿರುವ, ದುಬೈ ಶೇಕ್ ತರಹ ಎರಡು ಕೈ ಬೆರಳುಗಳಿಗೆ ಕಪಾಲಿ ಉಂಗುರ ತೊಟ್ಟಿದ ಮಿತ್ರರೊಬ್ಬರು>> ಯಪ್ಪಾ, ಸಕತ್ ಡೇ೦ಜರ್ರು ಕಣ್ರೀ ನೀವು, ಯಾರಿಗೂ ಕಾಣಿಸದ ನನ್ನ ಕೈ ಉ೦ಗುರಗಳು ತಮಗೆ ಇಷ್ಟೊ೦ದು ಚೆನ್ನಾಗಿ ಕ೦ಡಿವೆಯಲ್ಲಾ? ಯಪ್ಪಾ, ಕಷ್ಟ ಕಣ್ರೀ ಭಾಷಾಪ್ರಿಯರೆ! ಏನೇ ಆಗ್ಲಿ, ಒ೦ದು ಸು೦ದರ ಸ೦ಜೆ ಸ೦ಪದಿಗರೊ೦ದಿಗೆ ಕಳೆದ ಅನುಭವ ಅನಿರ್ವಚನೀಯ ಕಣ್ರೀ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಖಂಡಿತ ! ನಿಮ್ಮ ಉಂಗುರದ ಮೇಲೆ ನನಗೆ ಆಸೆ ಇಲ್ಲ ಸರ್ :) , ನಿಮ್ಮ ವ್ಯಕ್ತಿತ್ವ ನಿಮ್ಮ appearance ನನಗೆ ಮೆಚ್ಚುಗೆ ಆಯಿತು. ಬರಿಯದೇನೋ ಬರೆದೆ, ಆದರು ಸ್ವಲ್ಪ ಸಮಾಧಾನ ಇರಲಿಲ್ಲ, anyway ನಿಮಗಿರುವ ಹಾಸ್ಯ ಮನೋಭಾವ ದಿಂದ ನನಗೆ ಈಗ ಸಮಾಧಾನ ವಾಯಿತು. ಎಲ್ಲರ ಪರಿಚಯವಾದದ್ದು ಒಂದು ಸಂತೋಷದ ವಿಷಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಿಡಿಯೋ (ಇಲ್ಲದಿದ್ದರೆ), ಆಡಿಯೋ ಮುದ್ರಣ ಯಾರಾದರೂ ಮಾಡಿಕೊಂಡಿದ್ದೀರಾ? ಇದ್ದರೆ ನಮಗೂ ಕೇಳಿಸಿ! ದೂರದಿಂದಲೇ ಸ್ವಲ್ಪ ಭಾಗವಹಿಸಿದ ಆನಂದವನ್ನ ಪಡೆದುಕೊಳ್ಳೋಣ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ಅಂತೀನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.