ಸಂಪನ್ನ

0

ಕೆಲವು ಜವಾಬ್ದಾರಿಗಳನ್ನು ಮುಗಿಸಿ, ಕೆಲವೊಂದನ್ನು ಎದುರು ನೋಡುತ್ತಾ ಕೂತಿದ್ದೇನೆ ಸಂಪನ್ನ,
ಅನುಭವಿಸುತ್ತಿದ್ದೇನೆ ಮಧ್ಯವಯಸ್ಸಿನ ತಳಮಳಗಳನ್ನ, ಗೊದಲಗಳನ್ನ ಹಾಗೆ, ಅದರ ತಂಪನ್ನ,
ನಡೆಯೋಷ್ಟು ವಯಸ್ಸಾಗಿಲ್ಲ, ಓಡೋ ಚೈತನ್ಯ ಉಳಿದಿಲ್ಲ, ಅರ್ಥಮಾಡಿಕೊಳ್ಳಿ ನನ್ನ ಭಾವನೆಗಳನ್ನ,
ತಲೆಯಲ್ಲಿರೋ ನೆರೆಕೂದಲಿನ ಕೃಪೆಯಿಂದ ಸಂಪಾದಿಸುತ್ತಿದೇನೆ ಹೊಸ ಗೌರವವನ್ನ,
ಯೌವ್ವನದ ಕನಸ್ಸಿನ್ನು ಮುಗಿದಿಲ್ಲ, ತತ್ವಜ್ಞಾನಿ ನನ್ನಲ್ಲಿನ್ನೂ ಹುಟ್ಟಿಲ್ಲ, ಸಹಿಸಿಕೊಳ್ಳುತ್ತೇನೆ ಈ ಶೂನ್ಯವನ್ನ,
ವೃದ್ಧರ ನಡುವೆ ಇನ್ನೂ ಜಾಗ ಸಿಕ್ಕಿಲ್ಲ, ಯುವಕರು ಇಷ್ಟ ಪಡಲ್ಲ, ಭರಿಸುತ್ತೇನೆ ಈ ಕಿರಿಕಿರಿಯನ್ನ,
ಈ ಮಜಲಿಗೂ, ಒಂದು ಸೌಂದರ್ಯವಿದೆ, ಭಾವವಿದೆ, ಅದರ ವಶಕ್ಕೆ ನೀಡಿದ್ದೇನೆ ನನ್ನನ್ನ,
ಅನಿಸುತಿದೆ, ಮಾಗಿಸಬಹುದು ಈ ಹಂತ, ನನ್ನ ವ್ಯಕ್ತಿತ್ವವನ್ನ, ಮೂಡಿಸಬಹುದು ಹೊಸ ಛಾಪನ್ನ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.