ಸಣ್ಣ ಮನಸ್ಸಿನ ದೊಡ್ಡ ಮನುಷ್ಯರು !!! ಇವರಿಗೆ ಬುದ್ದಿ ಹೇಳೋರು ಯಾರು???

3.5

 

 
 
 
 
ಅಂದು ಹಾಗೆ ನನ್ನ ಕೆಲಸದ ನಿಮಿತ್ತ ಹೊರಟಿದ್ದೆ , ಮೈಸೂರಿನ ಸರಸ್ವತಿಪುರಂ ದಾಟಿ ನನ್ನ ಆಕ್ಟಿವ ಸ್ಕೂಟರ್ ರಾಮಸ್ವಾಮಿ ವೃತ್ತದ ಕಡೆ ಹೊರಟಿತ್ತು !!! ಮುಂದೆ ಒಂದು ಬಿಳಿಬಣ್ಣ ದ ಮಾರುತಿ ಹೋಗುತ್ತಿತ್ತು ಅದರೊಳಗಿಂದ ಒಂದು ಕೈ ದಾರಿ ಉದ್ದಕ್ಕೂ ಸಿಗರೇಟಿನ ಕಿಡಿ ಹಾಗು ಬೂದಿ ಹೊಗೆ ಹರಡಿಕೊಂಡು ಚಲಿಸಿತ್ತು. ಸ್ಕೂಟರಿನಲ್ಲಿದ್ದ ನನ್ನ ಕಣ್ಣಿಗೆ ಕಿಡಿ ಬಂದು ತಗುಲಿ ಸ್ವಲ್ಪ ಉರಿಯಿತು , ಹಾಗೆ ಮುಂದೆ ರಾಮ ಸ್ವಾಮೀ ಸರ್ಕಲ್ ಸಿಗ್ನಲ್ ಹತ್ತಿರ ಈ ಪುಣ್ಯಾತ್ಮನಿಗೆ ಸ್ವಲ್ಪ ಪೂಜೆ ಮಾಡಿದೆ ಅನ್ನಿ !! ಆದ್ರೆ ಆ ಪುಣ್ಯಾತ್ಮನಿಗೆ ಏನು ಅನ್ನಿಸಿದ ಹಾಗೆ ಕಾಣಲಿಲ್ಲ !!! ಹಾಗೆ ನನ್ನ ಮೊಬೈಲ್ ನಿಂದ ಅವನ ಕೈ ಮಾಡಿದ ಕೆಲಸ ಸೆರೆಯಾಗಿತ್ತು . ಇಂತಹ ಸಣ್ಣ ಮನಸ್ಸಿನ ದೊಡ್ಡ ಮನುಷ್ಯರಿಗೆ ತಮ್ಮ ಇಂತಹ ಕ್ರಿಯೆ ಯಿಂದ ಅದರಲ್ಲೂ ವಾಹನ ಚಾಲನೆ ಮಾಡುವಾಗ ಹಿಂದಿನ ದ್ವಿಚಕ್ರ ಸವಾರರಿಗೆ ,ಪಾದ ಚಾರಿಗಳಿಗೆ ಸಿಗರೇಟಿನ ಕಿಡಿ, ಬೂದಿ ಹಾರಿ ಆಗುವ ಹಾನಿಯ ಅರಿವು ಇಲ್ಲದೆ ಇರುವುದು ಶೋಚನೀಯ .ಕೆಲವೊಮ್ಮೆ ವೇಗವಾಗಿ ಬರುವ ಇಂತಹ ಕಿಡಿಗಳು ಕಣ್ಣನ್ನು ಹಾಳು ಮಾಡಬಹುದು ಆದ್ದರಿಂದ ಬ್ಲಾಗಿಗರೇ ನೀವು ಧೂಮಪಾನಿಗಳಾಗಿದ್ದರೆ ದಯಮಾಡಿ ಇವನಂತೆ ದಾರಿ ಉದ್ದಕ್ಕೂ ಹೀಗೆ ಸಿಗರೇಟಿನ ಕಿಡಿ,ಬೂದಿ ಉದುರಿಸಿಕೊಂಡು ಹೋಗಿ ಬೇರೆಯವರ ಕಣ್ಣು ಕೀಳದಿರಿ !!!ಏನಂತಿರಾ ಸ್ವಾಮೀ???
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬಾಲು ಅವ್ರೆ ನನಗೂ ಈ ರೀತಿಯ ಅನುಭವ ಹಲವಾರು ಬಾರಿ ಆಗಿದೆ.. ಬೆಂಗಳೂರಲ್ಲಿ ಬಸ್ಸುಗಳಲ್ಲಿ ಹೋಗುವಾಗ ಕೆಲವೊಮ್ಮೆ ಆಟೋ ನವರು ಮಾತೂ ಕಾರು ಜೀಪು ಬೈಕು ಗಳಲ್ಲಿ ಹೋಗ್ವವರು ಬಿಡುವ ಹೋಗೆ ನೇರ ನಮ್ಮ ಮೂಗು ಕಣ್ಣು ತಲುಪುತ್ತೆ... ನೀವು 'ಜಾಡಿಸಿದ್ದೀರ' ನಾ 'ಶಾಪ' ಹಾಕಿ ಸುಮ್ನಾದೆ ಅಸ್ಟೇ.. ಅವರ್ಗೆ ಈ ರೀತಿಯ ಸ್ವತಹ : ಅನುಭವವಾದರೆ ಅವರಿಗೆ ನಮ್ ಪಾಡು ಅರ್ಥವಾಗಬಹುದೇನೋ :) ಅಂದ್ ಹಾಗೆ ಫೋಟೋಗಳು ಸ್ಪುಸ್ತವಾಗಿವೆ/... ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅನುಭವ ತಿಳಿಸಿ ಅನಿಸಿಕೆ ಬರೆದಿದ್ದೀರ ವಂದನೆಗಳು ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಾಲುರವರೆ, ನಾನು ಧಾರವಾಡದಲ್ಲಿ ಡಿಗ್ರಿ ಕಲಿಯುತ್ತಿದ್ದಾಗಿನ ಒಂದು ಘಟನೆ ನಿಮ್ಮ ಅನುಭವದಿಂದ ಜ್ಞಾಪಕಕ್ಕೆ ಬಂತು. ಅದೇನೆಂದರೆ ಅಲ್ಲಿ ಜನರಿಗೆ ಬೀಡಿ ಸಿಗರೇಟಿಗಿಂತ ಸ್ವಲ್ಪ ಜರ್ದಾ-ತಂಬಾಕು ಮತ್ತು ಎಲೆ ಅಡಿಕೆ ಹಾಕುವ ರೂಢಿ ಜಾಸ್ತಿ. ಬಸ್ಸಿನಲ್ಲಿ ಕುಳಿತವನೊಬ್ಬ ಬಸ್ಸಿನ ಕೆಳಗಡೆ ನಿಂತಿದ್ದವನನ್ನು ಗಮನಿಸದೆ ಅವನ ಅಂಗಿಯಮೇಲೆ ಪಚಕ್ಕನೆ ತನ್ನ ಎಲೆ-ಅಡಿಕೆಯ ರಸ ಕವಳವನ್ನು ಉಗಿದ. ಆಮೇಲೆ ಅದನ್ನು ಗಮನಿಸಿ ಅಂಗಿ ಗಲೀಜಾದವನಲ್ಲಿ ಕ್ಷಮೆಯಾಚಿಸಿದ. ಆಗ ಆ ಗಲೀಜು ಅಂಗಿ ಧರಿಸಿದ್ದವನು, ಎಲೆ-ಅಡಿಕೆ ಉಗಿದವನನ್ನು ಒಂದು ಕ್ಷಣ ಇರಿ; ನಿಮಗೇನೂ ನಾನು ಬೈಯ್ಯುವುದಿಲ್ಲವೆಂದು ಹೇಳಿ, ಹತ್ತಿರದಲ್ಲೇ ಇದ್ದ ಪಾನ್-ಬೀಡಾ ಅಂಗಡಿಯಿಂದ ಆಗಿನ ಎರಡು ರೂಪಾಯಿಯ ಪಾನನ್ನು ಖರೀದಿಸಿ ಅದನ್ನು ಚೆನ್ನಾಗಿ ಜಗಿದು ಇವನ ಅಂಗಿಯ ಮೇಲೆ ಉಗಿದು ಹೇಳಿದ. "ನನ್ನ ಎರಡು ರೂಪಾಯಿ ಖರ್ಚಾದರೂ ಪರವಾಗಿಲ್ಲ ಆದರೆ ಅಂಗಿ ಗಲೀಜು ಮಾಡಿಕೊಂಡು ತಿರುಗುವವನ ಪರಿಸ್ಥಿತಿ ನಿಮಗೆ ಅರ್ಥವಾಗಬೇಕೆಂದು ಈ ರೀತಿ ಮಾಡಿದೆ" ಎಂದು ಅವನಿಗೆ ತನ್ನದೇ ರೀತಿಯಲ್ಲಿ ಬುದ್ಧಿ ಕಲಿಸಿದ. ನೀವು ಕೂಡ ಇದೇ ರೀತಿ ಆ ದೊಡ್ಡ ಮನುಷ್ಯನಿಗೆ ಮಾಡಿದ್ದರೆ ಅವನಿಗೂ "ಬುದ್ಧಿ ಭೆಟ್ಟಿ"ಯಾಗುತ್ತಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹ ಹ ಹ ಒಳ್ಳೆಯ ನಿದರ್ಶನ ನೀಡಿದ್ದೀರಾ ಸರ್ , ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅನಿಸಿಕೆ ಸರಿ ಅ೦ತೀನಿ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಮಾತಿಗೆ ನಾನೂ ಸೈ ಅಂತೀನಿ !!!:-)))))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಳ್ಳೆಯ ಕೆಲಸ! ಆ ವಾಹನದ ನಂ.ಸಹ ಕಾಣುವಂತೆ ಫೋಟೋ ತೆಗೆದು ಕೆಲವು ಕಡೆ ಅಂಟಿಸಬೇಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು ಸರ್ ತಮ್ಮ ಮಾತು ನಿಜ , ವಾಹನ ಚಲಿಸುವಾಗ , ತುಂಬಾ ವಾಹನಗಳಿದ್ದ ಕಾರಣ ನನ್ನ ಮೊಬೈಲಿನಿಂದ ತೆಗೆಯಲು ಸಾಧ್ಯವಾಗಿದ್ದು ಇಷ್ಟೇ ಸರ್.ನಿಮ್ಮ ಅನಿಸಿಕೆಗಳಿಗೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.