ಅಂತಃಸ್ಫುರಣ

ಸಂತೆ - ವ್ಯಾಪಾರ

"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .."

(ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ್ಬೋದು!)

'ಎರಡು ಕೇಜಿ ಕ್ಯಾರೆಟ್ ಕೊಡಪ್ಪ.'

"ತಗೊಳ್ಳಿ ಸಾರ್, ಮತ್ತೇನು ಬೇಕು?"

'ಏನೂ ಬೇಡ. ಸಾಕು'

"ಎಂಭತ್ತು ರೂಪಾಯಿ ಕೊಡಿ."

'ಎಂಭತ್ತು? ಕ್ಯಾರೆಟ್ ಹತ್ತು ರೂಪಾಯಿ ಅಂತಿದ್ದೆ? ಅಲ್ಲಿಗೆ ಇಪ್ಪತ್ತೇ ತಾನೇ ಆಗೋದು?'

"ಕಾಲು ಕೇಜಿಗೆ ಹತ್ತು ರೂಪಾಯಿ!"

'......?!?!?!'

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನುಷ್ಯ V/s. ಸಸ್ಯ

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಟ್ವಿಟರಿನಲ್ಲಿ #Kannada

ಟ್ವಿಟರಿನಲ್ಲಿ ಕನ್ನಡ ಟ್ವೀಟ್‌ಗಳನ್ನು ಅಥವಾ #Kannada ಹ್ಯಾಶ್‌ಟ್ಯಾಗ್ ಹೊಂದಿದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಲು @hashKannada ಎನ್ನುವ ಹೊಸ ಖಾತೆ ತೆರೆದಿದ್ದೇನೆ. ಅದು ಟ್ವಿಟರಿನಲ್ಲಿ #Kannada ಇರುವ ಟ್ವೀಟ್‌ಗಳನ್ನು ರೀಟ್ವೀಟ್ ಮಾಡುತ್ತದೆ. ಇದರಿಂದ ಕನ್ನಡದ (ಅಥವಾ ಕನ್ನಡದ ಬಗ್ಗೆ ಇರುವ) ಟ್ವೀಟ್‌ಗಳನ್ನು ಒಂದೆಡೆ ಪಡೆಯಲು ಸಹಾಯಕ. ನೀವು ಟ್ವಿಟರ್‌ನಲ್ಲಿದ್ದರೆ @hashKannadaವನ್ನು ಫಾಲೋ ಮಾಡಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ..

ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ ಉದ್ದೇಶ. ಆದರೆ ಇವತ್ತು ಒಂದು ಕಟಿಂಗ್ ಶಾಪಿಗೆ ಹೋಗಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡ್ರೀಮ್ಸ್

ಜಪಾನಿನವರಾದ ಅಕಿರ ಕುರೊಸವ ಅವರ ಡ್ರೀಮ್ಸ್ ಚಲನಚಿತ್ರವನ್ನು ಹಿಂದೊಮ್ಮೆ ನೋಡಿದ್ದೆ. ಅದರಲ್ಲಿ "Mount Fuji in Red" ಅನ್ನೋ ಒಂದು ಡ್ರೀಮ್ ಇದೆ. ಜಪಾನಿನ ಆರು ನ್ಯೂಕ್ಲಿಯಾರ್‍ ರಿಯಾಕ್ಟರ್‌ಗಳು ಸ್ಫೋಟಗೊಂಡರೆ ಏನಾಗಬಹುದೆಂದು ಆತ ಬಹಳ ಹಿಂದೆಯೇ ಆಲೋಚಿಸಿದ್ದ. ಮೊನ್ನೆ ಫುಕುಶಿಮಾದಲ್ಲಿ ಅವನು ಅಂದುಕೊಂಡಂತೆಯೇ ನಡೆಯಿತು. YouTubeನಲ್ಲಿ ಹುಡುಕಿದಾಗ ಅದರ ವೀಡಿಯೋ ಸಿಕ್ಕಿತು. ಕೆಳಗೆ ಅದನ್ನು ಲಗತ್ತಿಸಿದ್ದೇನೆ. ದಯವಿಟ್ಟು ಒಮ್ಮೆ ನೋಡಿ ಅದರ ಬಗ್ಗೆ ಆಲೋಚಿಸಿ, ಹಾಗೂ ಪೂರ್ತಿ ಡ್ರೀಮ್ ಸಿನೆಮಾ ಸಿಕ್ಕಿದರೆ ನೋಡಿ. ತುಂಬಾ ಚೆನ್ನಾಗಿದೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಕಂಪ್ಯೂಟರ್‍ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?

ಹಲೋ.. ಯಾರು ಪ್ರಸನ್ನನಾ?

ಹೌದು.

ನಾನು ಗೋಪಾಲರಾವ್ ಮಾತಾಡುದು..

ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ?

ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ.

ಯಾಕೆ? ಏನಾಗಿದೆ?

ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ?

ಸರಿ, ನಾಳೆ ಬಂದ್ರೆ ಆಗುತ್ತಾ?

ಆಯ್ತು ಪರ್ವಾಗಿಲ್ಲ, ನಿಂಗೆ ಟೈಮಾದಾಗ ಬಾ.

ಹಾಗಾದ್ರೆ ನಾಳೆ ಸಂಜೆ ಬರ್ತೀನಿ.

ಆಯ್ತು, ಹಂಗಾದ್ರೆ ಫೋನ್ ಇಡ್ತೀನಿ.

*******************
(ಗೋಪಾಲರಾಯರ ಮನೆಯಲ್ಲಿ)

ಪ್ರಸನ್ನ: ಗೋಪಾಲರಾಯರು ಮನೇಲಿದಾರಾ? ಕಂಪ್ಯೂಟರ್‍ ಹಾಳಾಗಿದೆ ಅಂತಿದ್ರು, ನೋಡೋಣಾಂತ ಬಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಲೆನಾಡಿನ factಗಳು... ಭಾಗ-1

ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ,

1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ ಚೀಲದಲ್ಲಿ ಕೋಳಿ ಕೂಗ್ತಿದೆ ಅಂದ್ರೆ, ಅವತ್ತು ಭಟ್ರ ಮನೇಲಿ ಹರಕೆ ಇದೆ ಅಂತ ಅರ್ಥ!

2. ದೀಪಾವಳಿ ಬಿಟ್ಟು ಬೇರೆ ಟೈಮಲ್ಲಿ ಪಟಾಕಿ ಅಥ್ವಾ ಈಡಿನ ಸೌಂಡು ಕೇಳ್ತು ಅಂದ್ರೆ, ಯಾರೋ ಹೊಗೆ ಹಾಕಿಸ್ಕೊಂಡಿದಾರೆ ಅಂತ ಅರ್ಥ!

3. ಮನೇಲಿ ನೆಲದ ಮೇಲೆ ರಕ್ತದ ಕಲೆ ಆಗಿದೆ ಅಂದ್ರೆ, ಯಾರೋ ತೋಟದಿಂದ ಇಂಬ್ಳ ಹತ್ತಿಸ್ಕೊಂಡು ಬಂದಿದಾರೆ ಅಂತ ಅರ್ಥ!

4. ಯಾರ್ದಾದ್ರೂ ಮನೇಲಿ ಹುರುಳಿ ಸಾರು ಆಗಿದೆ ಅಂದ್ರೆ, ಹೂಟೆ ಶುರುವಾಯ್ತು ಅಂತ ಅರ್ಥ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?

ನಮ್ಮ ಜೀವಶಾಸ್ತ್ರದ ಮೇಷ್ಟ್ರು ಒಂದು ಸಲ ಇದ್ದಕ್ಕಿದ್ದಂತೆ "ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?" ಅಂತ ಕೇಳಿದರು. ಬಸ್ಸು, ಲಾರಿಯಲ್ಲಿ ಬರುವ ಉತ್ಸರ್ಜಿತ ಹೊಗೆ (exhaust gas) ಇಂಗಾಲದ ಡೈ ಆಕ್ಸೈಡ್ (ಕಾರ್ಬನ್ ಡೈ ಆಕ್ಸೈಡ್) ಅಲ್ವಾ, ಅದು ಕಪ್ಪು ಬಣ್ಣ ಇರುತ್ತೆ. ಹಾಗಾಗಿ ಇಂಗಾಲದ ಡೈ ಆಕ್ಸೈಡ್ ಬಣ್ಣ ಕಪ್ಪು ಎಂದು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ "ಕಪ್ಪು" ಅಂತ ಕೂಗಿದ್ವಿ. ತಕ್ಷಣ ಅವರು , " ಹಾಗಾದರೆ ನಾವು ಉಸಿರು ಬಿಟ್ಟಾಗ ಮೂಗಿಂದ ಇಂಗಾಲದ ಡೈ ಆಕ್ಸೈಡ್ ಅನಿಲ ಹೊರಬರುತ್ತಲ್ಲ, ಅದು ಸಿಗರೇಟ್ ಹೊಗೆ ತರಹ ಕಪ್ಪಗೆ ಇರಬೇಕಿತ್ತು. ಏಕಿಲ್ಲ?" ಎಂದು ಕೇಳಿದರು. ಆಗ ನಾವು ಹೇಳಿದ್ದು ತಪ್ಪು ಉತ್ತರ ಎಂದು ಗೊತ್ತಾದರೂ, ಮೂಗಿಂದ ಕಪ್ಪು ಹೊಗೆ ಬರುವುದನ್ನು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ ನಕ್ಕಿದೆವು. :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈ ಸಮೀಕರಣವನ್ನು ಬಿಡಿಸಿ

ಈ ಕೆಳಗಿನ ಸಮೀಕರಣವನ್ನು ಬಿಡಿಸಿ ಉತ್ಪನ್ನ ತಿಳಿಸಿದವರಿಗೆ ಅದನ್ನೇ ಉಡುಗೊರೆಯಾಗಿ ನೀಡಲಾಗುವುದು. ತಡ ಮಾಡಬೇಡಿ, ಈಗಲೇ ಬಿಡಿಸಿ. :-)

C12H22O11 + NaCl + H2O + C6H8O7 -----} ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಫೀಡ್ ಬರ್ನರ್‍ ಮತ್ತು ಟ್ವಿಟರ್‍

ಫೀಡ್ ಬರ್ನರ್‌ನ ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಓದುಗರಿಗೆ ನಿಮ್ಮ ಲೇಖನಗಳನ್ನು ಇ-ಮೇಲ್ ಮೂಲಕ ತಲುಪಿಸುವುದು ಹೇಗೆಂದು ತಿಳಿಸಿದ್ದೆ. ಈ ಸಲ, ನೀವು ಬ್ಲಾಗಿನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ತಾನಾಗಿಯೇ ಟ್ವಿಟರ್‌ನಲ್ಲಿ ಬರುವಂತೆ ಮಾಡುವುದು ಹೇಗೆ ಎಂದು ನೋಡೋಣ.(ಇದಕ್ಕೆ ನಿಮ್ಮಲ್ಲಿ ಒಂದು ಟ್ವಿಟರ್‍ ಅಕೌಂಟ್ ಇರಬೇಕು. ಇದರ ಉಪಯೋಗವೆಂದರೆ ನೀವು ನಿಮ್ಮ ಬ್ಲಾಗಿನಲ್ಲಿ ಹೊಸ ಲೇಖನ ಬರೆದಾಗ ಅದರ ಶೀರ್ಷಿಕೆ ಹಾಗೂ ಲೇಖನದ ಒಂದೆರಡು ಸಾಲು ಜೊತೆಗೆ ಆ ಲೇಖನಕ್ಕೆ ಲಿಂಕ್ ಟ್ವಿಟರ್‌ನಲ್ಲಿ ಪ್ರಕಟವಾಗುತ್ತದೆ. ಅದನ್ನು ನೋಡುವ ನಿಮ್ಮ ಟ್ವಿಟರ್‍ ಹಿಂಬಾಲಕರು{Followers} ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ!

ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಮೇಲೆ ಕೆಳಗೆ ಸುದ್ಧಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಆ ಎರಡು ಸುದ್ಧಿಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದರೆ, ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಓದಿ, ಎಷ್ಟು ಮಜವಾಗಿರುತ್ತದೆ ಎಂದು ಗೊತ್ತಾಗುತ್ತದೆ. ನಿನ್ನೆ ಅಯೋಧ್ಯೆ ಪ್ರಕರಣಕ್ಕೆ ತೀರ್ಪು ಬಂದ ಬೆನ್ನಲ್ಲೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರನೂ ಲಂಚ ಹಗರಣದಲ್ಲಿ ಸಿಕ್ಕಿಬಿದ್ದಿದ್ದು ಟಿವಿ9ನಲ್ಲಿ ಪ್ರಸಾರವಾಗುತ್ತಿತ್ತು. ಮೇಲೆ ಅಯೋಧ್ಯೆಯ ಬಗ್ಗೆ ಹಾಗೂ ಕೆಳಗೆ ಜಗದೀಶ್ ನಾಯ್ಡು ಬಗ್ಗೆ ಸಾಲುಗಳು, ಅದನ್ನು ಕೂಡಿಸಿ ಓದಿದಾಗ ನನಗೆ ಕಾಣಿಸಿದ ತಮಾಷೆ ಇಲ್ಲಿದೆ.

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ

ಸುಪ್ರಿಂ ಕೋರ್ಟ್‌ಗೆ ಹೋಗಲು ತೀರ್ಮಾನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವರ್ಡ್‌ನಲ್ಲಿ ಯೂನಿಕೋಡ್ ಮತ್ತು ಚೌಕಚೌಕ ಅಕ್ಷರಗಳು

ವರ್ಡ್‌ನಲ್ಲಿ ಯೂನಿಕೋಡ್‌ನಲ್ಲಿ ಟೈಪಿಸುವಾಗ ಅಕ್ಷರಗಳೆಲ್ಲಾ ಚೌಕಚೌಕವಾಗಿ ಬರುತ್ತಿದೆಯೇ? ಒಂದು ಸಣ್ಣ ಬದಲಾವಣೆ ಮಾಡಿಕೊಂಡರೆ ಅದನ್ನು ಸರಿಪಡಿಸಿಕೊಳ್ಳಬಹುದು.


ಮೊದಲು ವರ್ಡ್‌ನಲ್ಲಿ ಒಂದೆರಡು ಅಕ್ಷರಗಳನ್ನು ಟೈಪಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಟೆಸ್ಟ್‌ಡಿಸ್ಕ್ ಎಂಬ ಆಪತ್ಬಾಂಧವ

ಏನೋ ಪ್ರಯೋಗ ಮಾಡೋಕೆ ಹೋಗಿ ನಿಮ್ಮ ಹಾರ್ಡ್‌ಡಿಸ್ಕ್‌‌ನ ಯಾವುದಾದರೂ ಅಮೂಲ್ಯ ಪಾರ್ಟಿಷನ್‌ ಅಳಿಸಿ ಹೋಗಿದೆಯೇ/ಮಾಯವಾಗಿದೆಯೇ? ಚಿಂತಿಸಬೇಡಿ, ಆ ಪಾರ್ಟಿಷನ್‌ ಮರಳಿ ಪಡೆಯಲು ಒಂದು ಸುಲಭದ ವಿಧಾನವಿದೆ. ಅದೇ ಟೆಸ್ಟ್‌ಡಿಸ್ಕ್ ಎಂಬ ಸಲಕರಣೆ. ಮೊದಲು ಟೆಸ್ಟ್‌ಡಿಸ್ಕ್‌‌ನ್ನು ನಿಮ್ಮ ಆಪರೇಟಿಂಗ್ ಸಿಸ್ಟಮ್‌ಗೆ ಅನುಗುಣವಾಗಿ ಇಲ್ಲಿಂದ ಇಳಿಸಿಕೊಳ್ಳಿ http://www.cgsecurity.org/wiki/TestDisk_Download

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಫೀಡ್ ಬರ್ನರ್‍ ಮತ್ತು Email Subscription

ನಿಮ್ಮ ಬ್ಲಾಗ್ ಓದುಗರಿಗೆ ಪ್ರತೀ ಬಾರಿ ನಿಮ್ಮ ಬ್ಲಾಗಿಗೆ ಬಂದು ಹೊಸ ಬರಹಗಳನ್ನು ಓದುವುದಕ್ಕೆ ತೊಂದರೆಯಾಗುತ್ತಿರಬಹುದು. ಅದಕ್ಕಾಗಿ ನೀವು ಅವರಿಗೆ ನಿಮ್ಮ ಹೊಸ ಬರಹಗಳನ್ನು ಇ-ಮೇಲ್ ಮೂಲಕ ತಲುಪಿಸಬಹುದು. ಅದಕ್ಕಾಗಿ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದನ್ನೀಗ ವಿವರವಾಗಿ ನೋಡೋಣ.

(ಇಲ್ಲಿರುವ ಚಿತ್ರಗಳು ಚಿಕ್ಕದಾಗಿದೆ. ಅವುಗಳನ್ನು ಸ್ಪಷ್ಟವಾಗಿ ನೋಡಲು ಹಾಗೂ ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಪಂಡಿತ ಪು‌ಟ್ಟರಾಜ ಗವಾಯಿಗಳು ನಿಧನ

ಗದಗ ವೀರೇಶ್ವರ ಆಶ್ರಮದ ಪುಟ್ಟರಾಜ ಗವಾಯಿಗಳು (1914-2010) ವಿಧಿವಶರಾಗಿದ್ದಾರೆ. ಗಾನ ಯೋಗಿ, ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಗವಾಯಿಗಳು 97 ವರ್ಷ ಜೀವಿಸಿದ್ದರು. ಅವರಿಗೆ ಈ ಅಕ್ಷರಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

 

 

 

ಸುದ್ದಿ ಮೂಲ:ಸುವರ್ಣ ನ್ಯೂಸ್ 24X7 ಮತ್ತು tv9 ಕನ್ನಡ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

2500 ಮೊಟ್ಟೆ, 5000 ರೂಪಾಯಿ!

ಇವತ್ತು ಮಧ್ಯಾಹ್ನ ನನ್ನ ಮೊಬೈಲಿಗೆ ಯಾವುದೋ ನಂಬರಿಂದ ಕಾಲ್ ಬಂತು. ಯಾರದಪ್ಪಾ ಈ ನಂಬರ್‍ ಅಂತ ಅಂದುಕೊಂಡು ರಿಸೀವ್ ಮಾಡಿದರೆ ಆ ಕಡೆಯಿಂದ "ನೀವು ನೀಡಿದ ಆರ್ಡರ್‍‌ನಂತೆ ನಿಮ್ಮ ಮನೆಗೆ 2500 ಮೊಟ್ಟೆ ಕಳುಹಿಸಿದ್ದೇವೆ, ಲಾರಿ ಡ್ರೈವರ್‍ ಹತ್ರ 5000 ರೂಪಾಯಿ ಕೊಟ್ಟುಬಿಡಿ" ಎಂದು ಹೇಳಿದರು. ನನಗೆ ಒಂದು ಸಲ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ನಾನು ಮೊಟ್ಟೇನೆ ತಿನ್ನಲ್ಲ, ಅಂತದರಲ್ಲಿ ಎರಡೂವರೆ ಸಾವಿರ ಮೊಟ್ಟೆಗೇಕೆ ಆರ್ಡರ್‍ ಮಾಡುತ್ತೇನೆ, ಬಹುಷಃ ರಾಂಗ್ ನಂಬರ್‍ ಡಯಲ್ ಮಾಡಿರಬೇಕು ಎಂದುಕೊಳ್ಳುತ್ತಿರುವಾಗಲೇ ಆ ಕಡೆಯಿಂದ ಮತ್ತೆ ಧ್ವನಿ ಕೇಳಿಬಂತು- "ನೀವೂ ನಿಮ್ಮ ಸ್ನೇಹಿತರನ್ನು ಇದೇ ರೀತಿ ಬೇಸ್ತು ಬೀಳಿಸಬೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ಸಂಸಾರ ಆನಂದ ಸಾಗರ....

ನಮ್ಮ ಸಂಸಾರ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....

ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... 
ನಾನು
ತೆಳ್ಳಗೆ ಇರಬಯಸುತ್ತೇನೆ,
ಏಕೆಂದರೆ
ನಾನು ಆರೋಗ್ಯವಾಗಿರಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವಡರಿಗೆ ಜನ್ಮದಿನದ ಶುಭಾಶಯಗಳು

ಇವತ್ತು ಸಂಪದಿಗ ರಾಘವೇಂದ್ರ ನಾವಡರ ( http://sampada.net/user/ksraghavendranavada-0 ) ಜನ್ಮದಿನ. ಅವರಿಗೆ ದೇವರು ಅಷ್ಟೈಶ್ವಯಾ೵ದಿಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. :-)

 

ಪ್ರೀತಿಯಿಂದ,

-ಪ್ರಸನ್ನ ಶಂಕರಪುರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಿಎಸ್‌ಎನ್‌ಎಲ್ ಲೈವ್

ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಬಳಸುತ್ತಿರುವವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಿವೆ: ಕರೆ ಮಾಡಿ ಮುಗಿಸಿದ ನಂತರ ಈ ರೀತಿ-> Free streaming on BSNLlive, no usage/browsing charges 16-31 Aug. Vist http://bsnllive.net. ಹಾಗೂ ಟೆಕ್ಸ್ಟ್ ಮೆಸೇಜ್‌‌ನಲ್ಲಿ Watch Live TV, Movies & more on BSNLlive- http://bsnllive.net ಎಂದು ಬರುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀವು Twifficiency ಉಪಯೋಗಿಸಿದ್ದೀರಾ?

ಮೂರ್ನಾಲ್ಕು ದಿನಗಳಿಂದ ಟ್ವಿಟರ್‌‌ನಲ್ಲಿ Twifficiency ಎನ್ನುವ ಒಂದು app ಭಾರೀ ಸಂಚಲನ ಮೂಡಿಸಿದೆ. ನೀವು ಟ್ವಿಟರ್‌ನ್ನು ಉಪಯೋಗಿಸುವುದರಲ್ಲಿ ಎಷ್ಟು efficient ಎನ್ನುವುದನ್ನು ಇದು ತಿಳಿಸಿಕೊಡುತ್ತದಂತೆ! ಒಬ್ಬರ ಹಿಂದೊಬ್ಬರಂತೆ ಎಲ್ಲರೂ ಅದನ್ನು ಉಪಯೋಗಿಸುತ್ತಿದ್ದಾರೆ. ಆದಕ್ಕೆ ಕಾರಣ ನೀವು Twifficiency ಉಪಯೋಗಿಸಿದ ತಕ್ಷಣ  ನೀವೇ ಟ್ವೀಟ್ ಮಾಡಿದಂತೆ ಈ ರೀತಿಯ ಸಾಲುಗಳು ನಿಮ್ಮ ಅಕೌಂಟಿಂದ ಬರುತ್ತದೆ: My Twifficiency score is --%. Whats yours?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಯಿಗೆ "ಹಚಾ..." ಎಂದರೆ ಹತ್ತಿರ ಬರುತ್ತೋ ಇಲ್ಲಾ ಓಡಿ ಹೋಗುತ್ತೋ?

ನಾಯಿ ಸಾಕುವವರೆಲ್ಲ ಸಾಮಾನ್ಯವಾಗಿ ಅದಕ್ಕೆ ಟೈಗರ್‍ ಎಂದೋ ಟಾಮಿ ಎಂದೋ ಮುದ್ದಿನ ಹೆಸರಿಟ್ಟಿರುತ್ತಾರೆ. ಟಾಮಿ... ಟಾಮಿ... ಎಂದು ಕರೆದರೆ ಸಾಕು ಬಾಲ ಅಲ್ಲಾಡಿಸಿಕೊಂಡು ಯಜಮಾನನ ಬಳಿ ಬರುತ್ತವೆ. ಹಾಗೆಯೇ ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ನಾಯಿಗಳಿಗೆ "ಹಚಾ..." ಎಂದು ಗದರಿದರೆ ಓಡಿ ಹೋಗುತ್ತವೆ. ಇದನ್ನು ಎಲ್ಲರೂ ಒಪ್ಪುತ್ತೀರಾ ತಾನೆ?

 

ಈಗ ನನ್ನ ಪ್ರಶ್ನೆ ಏನೆಂದರೆ, ನಾಯಿಗೆ ಅದೇ "ಹಚಾ.." ಎಂದು ಹೆಸರು ಇಟ್ಟು, "ಹಚಾ... ಹಚಾ..." ಎಂದರೆ ಅದು ಬಾಲ  ಅಲ್ಲಾಡಿಸಿಕೊಂಡು ಬರುತ್ತದೆಯೇ ಅಥವಾ ಹೆದರಿಕೊಂಡು ಓಡುತ್ತದೆಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ಅಷ್ಟಲಕ್ಷ್ಮೀ ಸ್ತೋತ್ರಮ್

ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಉಪಯೋಗ ಆಗಬಹುದೆಂಬ ನಂಬಿಕೆಯೊಂದಿಗೆ ಅಷ್ಟಲಕ್ಷ್ಮಿ ಸ್ತೋತ್ರದ ಸಂಗ್ರಹವನ್ನು ಪ್ರಕಟಿಸುತ್ತಿದ್ದೇನೆ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಪ್ಪೆಗೆ ಬಾಲ ಇರುತ್ತಾ?

ನಿನ್ನೆ ಸಂಜೆ ನಮ್ಮ ಮನೆಯ ಹಿತ್ತಲಲ್ಲಿ ಒಂದು ಕಪ್ಪೆಯನ್ನು ನೋಡಿದೆ. ಸುಮಾರಾಗಿ ದೊಡ್ಡದಾಗಿಯೇ ಇತ್ತು. ಆದರೆ ನನಗೆ ಆಶ್ಚರ್ಯ ಆಗಿದ್ದು ಎಂದರೆ ಅದಕ್ಕೊಂದು ಉದ್ದದ ಬಾಲ ಇತ್ತು. ಎಲ್ಲರನ್ನೂ ಕರೆಯೋಣ ಎಂದು ಮನೆಗೆ ಹೋಗಿ, ಮತ್ತೆ ಬರುವಷ್ಟರಲ್ಲಾಗಲೇ ಕಪ್ಪೆ ಮಾಯವಾಗಿತ್ತು! ಬಹುಷಃ ಗೊದಮಟ್ಟೆಯಿಂದ ಕಪ್ಪೆಗೆ ರೂಪಾಂತರ ಹೊಂದುವಾಗ ಬಾಲ ಉದುರಿರಲಿಲ್ಲ ಅನ್ಸುತ್ತೆ! :)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಡಿ.ಕೆ.ಭಾರದ್ವಾಜರ ಇಂಗ್ಲೀಷ್-ಕನ್ನಡ ಶಬ್ಧಕೋಶದಲ್ಲಿ ಯಾವಾಗಲೋ ಒಮ್ಮೆ "ಅಂತಃಸ್ಫುರಣ" ಎಂಬ ಪದ ನೋಡಿದ್ದೆ. ಅದರ ಇಂಗ್ಲೀಷ್ ಸಮಾನಾರ್ಥಕ ಪದ ಈಗ ನೆನಪಿಲ್ಲ. ಆದರೆ ಆ ಪದ ನನಗೆ ಇಷ್ಟ ಆಯಿತು. ನನ್ನ ಬ್ಲಾಗಿಗೆ "ಅಂತಃಸ್ಫುರಣ" ಎಂದು ಮರು ನಾಮಕರಣ ಮಾಡೋಣ  ಎಂದುಕೊಂಡಿದ್ದೇನೆ. ಆದರೆ ನನಗೆ ಅದರ ಕನ್ನಡ ಅರ್ಥ ಗೊತ್ತಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ "ಕನ್ನಡ ರತ್ನಕೋಶ"ದಲ್ಲಿ ಹುಡುಕಿದೆ. ಆದರೆ ಅಲ್ಲಿ ಆ ಪದವೇ ಇಲ್ಲ.  ಗೂಗ್ಲಿಸಿದರೆ "ಅಂತಃಸ್ಫುರಣ" ಸಿಗಲಿಲ್ಲ ಎಂದು ಬಂತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

CFL ಉಡುಗೊರೆ ಕೊಟ್ಟರೆ ಹೇಗೆ?

ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸಲ ನಾವು ಕೊಡುವ ಉಡುಗೊರೆಗಳು ಅವರಿಗೆ ಯಾವುದೇ ರೀತಿಯ ಉಪಯೋಗಕ್ಕೂ ಬರುವುದಿಲ್ಲ. ಹಾಗಾಗಿ ಕೆಲಸಕ್ಕೆ ಬಾರದ ಉಡುಗೊರೆಗಳನ್ನು ಕೊಡುವ ಬದಲಿಗೆ CFL (Compact fluorescent lamp) ಅಥವಾ ಟ್ಯೂಬ್‌‌ಲೈಟ್‌‌ಗಳನ್ನು ಗಳನ್ನು ಕೊಟ್ಟರೆ ಹೇಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಂಪ್ಯೂಟರ್‌‌ನಲ್ಲಿ ದಾಖಲೆಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸುವುದು

ನಿಮ್ಮ ಕಂಪ್ಯೂಟರ್‌‌ನ್ನು ಬಹಳ ಜನ ಬಳಸುತ್ತಿದ್ದು ಎಲ್ಲರಿಗೂ ಬೇರೆ ಬೇರೆ ಯೂಸರ್‍ ಅಕೌಂಟ್‌‌ಗಳಿದ್ದರೆ, ನೀವು ನಿಮ್ಮ ಖಾಸಗಿ ಅಥವಾ ಗುಪ್ತ ಫೋಲ್ಡರ್‌ಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸಬಹುದು. ಅದಕ್ಕಾಗಿ ಹೀಗೆ ಮಾಡಿ. ಮೊದಲು ಕಂಟ್ರೋಲ್ ಪ್ಯಾನಲ್‌ಗೆ ಹೋಗಿ.

 

 

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

ಮೈಕ್ರೋಸಾಫ್ಟ್ ವರ್ಡ್‌‌ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್‌ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ ಕಡತಗಳನ್ನು ಬೇರೆಯವರಿಗೆ ಕಳುಹಿಸುವಾಗ, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಅವರು ನಿಮ್ಮ ಡಾಕ್ಯುಮೆಂಟನ್ನು ಓದುವಂತೆ ಮಾಡಲು ಹೀಗೆ ಮಾಡಿ. ನೀವು ವರ್ಡ್ ಕಡತವನ್ನು ಸೇವ್ ಮಾಡುವ ಮೊದಲು tools ಗೆ ಹೋಗಿ Options ಒತ್ತಿರಿ.

 

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಕನ್ನಡ ಫಾಂಟಿನ ತೊಂದರೆ

 

 

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಫಾಂಟ್‌ ಲಿಸ್ಟ್‌‌ನಲ್ಲಿ ಕನ್ನಡ ಫಾಂಟ್‌‌ಗಳು ಸರಿಯಾಗಿ ಕಾಣುತ್ತಿಲ್ಲವೇ? ಹಾಗಾದರೆ ಈ ರೀತಿ ಮಾಡಿ. Toolsಗೆ ಹೋಗಿ customize ಒತ್ತಿರಿ. ನಂತರ Options ಟ್ಯಾಬ್ ಕ್ಲಿಕ್ ಮಾಡಿ.

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನಿಮ್ಮ ಜಾಲತಾಣಕ್ಕೆ ಕನ್ನಡ ಲಿಪಿಯಲ್ಲಿ URL

ನಿಮ್ಮ ಬಳಿ ಈಗಾಗಲೇ ಒಂದು ಜಾಲತಾಣ ಅಥವಾ ಬ್ಲಾಗ್ ತಾಣ ಇದ್ದರೆ ಅದಕ್ಕೆ ಕನ್ನಡ ಲಿಪಿಯಲ್ಲಿ URL ಕೊಡಬಹುದು. ಇದಕ್ಕಾಗಿ ನೀವು http://co.cc ತಾಣಕ್ಕೆ Sign In ಆಗಬೇಕಾಗುತ್ತದೆ. ನಂತರ ಅಲ್ಲಿರುವ ಸೂಚನೆಗಳನ್ನು ಪಾಲಿಸಿದರೆ ಉಚಿತವಾಗಿ ನಿಮ್ಮ ತಾಣಕ್ಕೆ ಕನ್ನಡ ಲಿಪಿಯಲ್ಲಿ ಒಂದು URL ಪಡೆಯಬಹುದು. ಆ URL ಈ ರೀತಿ ಇರುತ್ತದೆ- http://ನಿಮ್ಮಹೆಸರು.co.cc.

field_vote: 
Average: 4.6 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ನಂದು ಸಾರ್‍ ಆ ಜಾಗ...

                             ನಂದು ಸಾರ್‍ ಆ ಜಾಗ...

 

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇಮೇಲ್ ಮೂಲಕ ಬ್ಲಾಗರ್‌ಗೆ ಲೇಖನಗಳನ್ನು ಪೋಸ್ಟ್ ಮಾಡುವುದು

ನೀವು ನಿಮಗೆ ಇಮೇಲ್‌ಗಳ ಮೂಲಕ ಬರುವ ಪ್ರಮುಖ ಮಾಹಿತಿಗಳನ್ನು ನಿಮ್ಮ ಬ್ಲಾಗ್‌ಗೆ ಹಾಕಬೇಕಿದ್ದರೆ ಅಥವಾ ಒಂದೇ ಲೇಖನವನ್ನು ಅನೇಕ ಬ್ಲಾಗ್‌ಗಳಿಗೆ ಪೋಸ್ಟ್‌ ಮಾಡಬೇಕಿದ್ದರೆ ಬ್ಲಾಗರ್‍ನಲ್ಲಿರುವ ಒಂದು ಸೌಲಭ್ಯ ನಿಮಗೆ ಉಪಯೋಗಕ್ಕೆ ಬರುತ್ತದೆ. ಮೊದಲು ಬ್ಲಾಗರ್‌ನಿಂದ ನಿಮ್ಮ ಅಕೌಂಟಿಗೆ ಲಾಗಿನ್ ಆಗಿ.


ನಂತರ ನಿಮ್ಮ Dashboardನಲ್ಲಿ ಕಾಣುವ Settings ಲಿಂಕ್ ಒತ್ತಿರಿ.


field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ನಿಮ್ಮ ಕಂಪ್ಯೂಟರ್‍ ಹೈಬರ್ನೇಟ್ ಮಾಡಿಡಿ

ನೀವು ನಿಮ್ಮ ಕಂಪ್ಯೂಟರ್‌‌ನ್ನು ಟರ್ನ್ ಆಫ್‌ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ ಸಮಯ ಹಾಗೂ ವಿದ್ಯುತ್ ಉಳಿತಾಯವಾಗುತ್ತದೆ. ಅಲ್ಲದೇ ಹೈಬರ್ನೇಟ್ ಮಾಡಿಡುವುದರಿಂದ ಎಲ್ಲಾ ಅಪ್ಲಿಕೇಷನ್‌ಗಳನ್ನು ಮತ್ತೊಮ್ಮೆ ಪ್ರಾರಂಭ ಮಾಡಬೇಕಾಗುವುದಿಲ್ಲ.

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಹಾಟ್‌ಮೇಲ್‌ನಲ್ಲಿ ನಿಮ್ಮ Gmailನ ಮೇಲ್‌ಗಳನ್ನು ಓದಬಹುದು

ನೀವು ನಿಮ್ಮ ಹಾಟ್‌ಮೇಲ್‌ ಅಥವಾ ಲೈವ್ ಅಕೌಂಟ್‌ ಮೂಲಕ ನಿಮ್ಮ Gmailನ ಅಥವಾ ಇನ್ನೊಂದು ಹಾಟ್‌ಮೇಲ್‌ ಅಕೌಂಟ್‌ನ ಮೇಲ್‌ಗಳನ್ನು ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನಿಮ್ಮ ಹಾಟ್‌ಮೇಲ್ ಅಥವಾ ಲೈವ್ ಅಕೌಂಟಿಗೆ ಲಾಗಿನ್ ಆಗಿರಿ.

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

SMS ಮೂಲಕ ಉಚಿತವಾಗಿ ನಿಮ್ಮ ಮೇಲ್ ಪಡೆಯಿರಿ

ನೀವು ಹಾಟ್‌ಮೇಲ್ ಅಥವಾ ಲೈವ್‌‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ನೋಡಬಹುದು ಹಾಗೂ ಅದಕ್ಕಾಗಿ ನೀವು ಯಾವುದೇ ಶುಲ್ಕವನ್ನೂ ನೀಡುವುದು ಬೇಕಾಗಿಲ್ಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಅಂತಃಸ್ಫುರಣ