ಅನಾಥ ಪ್ರಜ್ಞೆ

ಬದುಕು ಮತ್ತು ಒಂಟಿತನದ ನಡುವೆ...

ಬೆಂಗಳೂರು ಎಂಬ ಮಾಯಾನಗರಿಗೆ ಬಂದು ಒಂದೂವರೆ ವರ್ಷಗಳಾಗುತ್ತಾ ಬಂತು. ಓದು ಮುಗಿಸಿ, ಚೆನ್ನೈಯಲ್ಲಿ ಕೆಲಸ ಸಿಕ್ಕಿ ಮನೆಯಿಂದ ಹೊರಟು ನಿಂತಾಗ ಅಮ್ಮ ಹೇಳಿದ್ದು "ಲೈಫ್್ನಲ್ಲಿ ಇನ್ನಾದರೂ ಸೀರಿಯಸ್ಸಾಗಿರು. ಮಕ್ಕಳಾಟ ಸಾಕು". ಅಪ್ಪ ಹೇಳಿದ್ದು" ಲೈಫ್್ನಲ್ಲಿ ಏನೇ ಸಮಸ್ಯೆ ಬಂದರೂ ಕೂಲ್ ಆಗಿ ತೆಗೋ. ಬದುಕು ಯಾವಾಗಲೂ ಒಂದೇ ತರ ಇರಲ್ಲ. ಪ್ರತಿಯೊಂದು ಕ್ಷಣವೂ ನಿನಗೆ ಅಮೂಲ್ಯವಾದ್ದು, ಈ ಬದುಕು ನಿನಗೆ ಎಲ್ಲವನ್ನೂ ಕಲಿಸುತ್ತದೆ". ನಿಜ, ಬದುಕು ಎಂಬುದು ಏನೆಂದು ಸರಿಯಾಗಿ ಅರ್ಥವಾದದ್ದೇ ನಾನು ಒಂಟಿಯೆನಿಸಿಕೊಂಡಾಗ. ಅಲ್ಲಿಯವರೆಗೆ ಅಪ್ಪನನ್ನು ಬಿಟ್ಟು ದೂರ ಹೋಗಿರದ ನಾನು ಒಂದು ವರ್ಷ ಚೆನ್ನೈಯಲ್ಲಿ ಕಳೆದ. ಆದರೆ ಅಲ್ಲಿ ನಾನು ಒಂಟಿಯಾಗಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅನಾಥ ಪ್ರಜ್ಞೆ