ಅನುಭವ 3

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೧

ನಿನ್ನೆಯ ಆ ಮಿಲಿಟರಿ ವಿಮಾನ ಪ್ರಯಾಣದ ಆಯಾಸ ಇನ್ನೂ ತಗ್ಗಿರಲಿಲ್ಲವಾದ್ದರಿಂದ, ಹಾಸಿಗೆಯಿಂದ ಏಳಲಾಗದ ಬ್ರಹ್ಮಾಂಡಾಲಸ್ಯದಿಂದಲೇ ಇನ್ನೂ ಕೋಳಿ ನಿದ್ದೆಯಲ್ಲಿಯೇ ಇದ್ದೆ. ಕರೆಗಂಟೆ ಕಿರ್ರ್ ಅನ್ನುತಿತ್ತು. ಅರೆಗಣ್ಣಿಂದಲೇ ಸುತ್ತ ಕತ್ತಾಡಿಸಿದೆ. ಗೋಡೆ ಗಡಿಯಾರ ಅದಾಗಲೇ ಎಂಟು ಗಂಟೆ ತೋರಿಸುತ್ತಿತ್ತು . ದಿಗ್ಗನೆದ್ದು ಬಾಗಿಲು ತೆರೆದೆ. ಆರಡಿ ಎತ್ತರದ ಅಜಾನುಬಾಹು ದೇಹ ತನ್ನ ಋಷಿಗಡ್ಡಮೀಸೆಯ ನಡುವಿನ, ಹಳದಿ ಹಲ್ಲಿನ ಸಾಲಿನ ಪ್ರದರ್ಶನ ಮಾಡುತ್ತಿತ್ತು. ತಲೆಯಿಂದ ಪಾದದವರೆಗೆ ಕಂದು ಬಣ್ಣದ ವಸ್ತ್ರದಲ್ಲಿ ಸುತ್ತುವರೆದಿದ್ದ ಅಪ್ಪಟ ದೇಸಿ ಉಡುಗೆಯ ರೂಪದರ್ಶಿಯಂತಿದ್ದ ಆತ. ಆದರೆ ಬಟ್ಟೆ ಒಗೆದು ಅದೆಷ್ಟು ದಿವಸಗಳಾಗಿತ್ತೋ? ಅನಿಸುತಿತ್ತು.

field_vote: 
Average: 5 (15 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 
Subscribe to ಅನುಭವ 3