ಅರಬ್ಬರ ನಾಡಿನಲ್ಲಿ

ಅರಬ್ಬರ ನಾಡಿನಲ್ಲಿ...೩ - ಹಾರಿ ಹೋದ ಪ್ರಾಣ ಪಕ್ಷಿ.

ಅಬುಧಾಬಿಯಲ್ಲಿ ಕೆಲಸ ಆರಂಭಿಸಿದ ನಂತರ ಅಲ್ಲಿನ ವಾತಾವರಣವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.  ಥಟ್ಟಂತ ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ ಕಛೇರಿಯಲ್ಲಿದ್ದ ಎರಡು "ಮಾಫಿಯಾ"ಗಳು.  ನಮ್ಮ ಭಾರತೀಯರು, ಅದರಲ್ಲಿ ಬಹುತೇಕರು ಮಲಯಾಳಿಗಳು, ಅವರದ್ದೇ ಒಂದು ಗುಂಪು ಕಟ್ಟಿಕೊಂಡು ಇಲ್ಲದ ರಾಜಕೀಯ ಮಾಡಿಕೊಂಡು ತಂತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ನಿರಂತರ ಯತ್ನದಲ್ಲಿದ್ದರು.  ಇನ್ನೊಂದು, ಇದಕ್ಕೆ ವಿರುದ್ಧವಾದ ಈಜಿಪ್ಟಿನವರ ಗುಂಪು, ಈಜಿಪ್ಟಿನವರನ್ನು ಇಲ್ಲಿ "ಮಿಶ್ರಿ"ಗಳು ಎಂದು ಕರೆಯುತ್ತಾರೆ.  ಭ್ರಷ್ಟಾಚಾರದಲ್ಲಿ ಭಾರತೀಯರನ್ನು ಮೀರಿಸುವ ಇವರು ತಮ್ಮದೇ ಒಂದು ಗುಂಪನ್ನು ಕಟ್ಟಿಕೊಂಡು, ಸಂಸ್ಥೆಯ ಮಾಲೀಕರೊಂದಿಗೆ, ಅವರ ಕುಟುಂಬದವರೊಂದಿಗೆ ಅರಬ್ಬಿಯಲ್ಲಿ ಮಾತಾಡುತ್ತಾ, ಯಾವ ಘನಂದಾರಿ ಕೆಲಸವನ್ನೂ ಮಾಡದಿದ್ದರೂ, ಎಲ್ಲವನ್ನೂ ತಾವೇ ಮಾಡಿದ್ದಾಗಿ ಹೇಳಿಕೊಂಡು ಮೆರೆದಾಡುತ್ತಿದ್ದರು.  ನಮ್ಮ ’ಯೆಮೆನಿ’ ಮುಖ್ಯ ವ್ಯವಸ್ಥಾಪಕ ಇವರ ನಡುವೆ ಸೂತ್ರದ ಗೊಂಬೆಯಂತೆ ಆಡುತ್ತಿದ್ದ.  ಈ ಎರಡೂ ಗುಂಪಿಗೆ ಸೇರದ ನಾನು ಒಂದೆಡೆ "ಮಲೆಯಾಳಿ ಮಾಫಿಯಾ", ಮತ್ತೊಂದೆಡೆ "ಮಿಶ್ರಿ ಮಾಫಿಯಾ" ಗಳ ನಡುವೆ ಅಡ್ಡದಾರಿಯಲ್ಲಿ ನಿಂತಿದ್ದೆ.  ಸದಾ ತಾವೇ ಮೇಲೆಂದು ತೋರಿಸಲು ಹೆಣಗಾಡುತ್ತಾ, ಮಾಡಬೇಕಿದ್ದ ಗುರುತರ ಕಾರ್ಯಗಳನ್ನು ನಿರ್ಲಕ್ಷಿಸಿದ್ದ ಎರಡೂ "ಮಾಫಿಯಾ"ಗಳನ್ನು ನಿಯಂತ್ರಿಸಿ, ಸಂಸ್ಥೆಯ ದೈನಂದಿನ ಚಟುವಟಿಕೆಗಳನ್ನು ತಹಬಂದಿಗೆ ತರುವ ಗುರುತರ ಜವಾಬ್ಧಾರಿಯನ್ನು ನನ್ನ ಪಾಲಿಗೆ ವಹಿಸಲಾಗಿತ್ತು.  ಈ ತಾಕಲಾಟಗಳ ನಡುವೆ ಹಾರಿಹೋದ ಒಬ್ಬ ಬಡಪಾಯಿಯ ಪ್ರಾಣಪಕ್ಷಿಯ ಕಥೆ ನನ್ನನ್ನು ತುಂಬಾ ವಿಚಲಿತನನ್ನಾಗಿಸಿತ್ತು.

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಅರಬ್ಬರ ನಾಡಿನಲ್ಲಿ - ೨, "ಇಂಗು ತಿಂದ ಮಂಗ".

ನಾನು ಕೆಲಸಕ್ಕೆಂದು ಬಂದ ಹೊಸತರಲ್ಲಿ ಅರಬ್ಬಿ ಭಾಷೆಯ ಅರಿವಿಲ್ಲದೆ ಭಾರೀ ಪೇಚಾಟದ ಪ್ರಸಂಗಗಳು ನಡೆದವು.  ಆದರೆ ನನ್ನ ತುಂಟ ಮನಸ್ಸಿನೊಂದಿಗೆ ಆ ಪ್ರಸಂಗಗಳನ್ನು ಬಹಳ ಚೆನ್ನಾಗಿಯೇ ಆಸ್ವಾದಿಸಿದ್ದೆ.  ಅದರಲ್ಲೊಂದು ಇಂತಿದೆ, ದುಬೈನಲ್ಲಿ ಭಾರತೀಯರು ಹೆಚ್ಚಾಗಿರುವಂತೆ ರಾಜಧಾನಿಯಾದ ಅಬುಧಾಬಿ ನಗರದಲ್ಲಿ ಈಜಿಪ್ಟಿನವರು ಹೆಚ್ಚಾಗಿದ್ದಾರೆ.  ಅಬುಧಾಬಿಯ ಅರಸರಿಗೆ ಅರಬ್ಬಿ ಮಾತಾಡುವವರೆಂದರೆ ತುಂಬಾ ಅಚ್ಚುಮೆಚ್ಚು, ಹಾಗಾಗಿ ಅಲ್ಲಿ ಭಾರತೀಯರು ಎರಡು ಅಥವಾ ಮೂರನೆಯ ಸ್ಥಾನಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.  ನನ್ನನ್ನು ದುಬೈಗೆ ಶಾಖಾ ವ್ಯವಸ್ಥಾಪಕನನ್ನಾಗಿ ಆಯ್ಕೆ ಮಾಡಿದ್ದರೂ ಸಹಾ ಸುಮಾರು ಒಂದೂವರೆ ವರ್ಷ ಅಬುಧಾಬಿಯಲ್ಲೇ ಉಳಿಸಿಕೊಂಡಿದ್ದರು, ಅಲ್ಲಿ ಒಬ್ಬ ಯೆಮೆನಿ ಅರಬ್ ಮುಖ್ಯ ವ್ಯವಸ್ಥಾಪಕನಾಗಿದ್ದ, ಅವನಿಗೆ ನಮ್ಮ

field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಅರಬ್ಬರ ನಾಡಿನಲ್ಲಿ............೧

ಅರಬ್ಬರ ನಾಡಿನಲ್ಲಿ ಸಾಕಷ್ಟು ಮೋಜಿನ ಪ್ರಸಂಗಗಳು ನಡೆಯುತ್ತವೆ.  ನಮ್ಮ ಅನುಭವದಿಂದ ನಾವು ಇದು ತಪ್ಪು ಎಂದು ಹೇಳಿದರೆ ಕೇಳದೆ ಅವರದೇ ಆದ ದಾರಿಯಲ್ಲಿ ಹೋಗಿ ಬೇಸ್ತು ಬಿದ್ದು ಕೊನೆಗೆ ನಮ್ಮಂತೆ ಬರುತ್ತಾರೆ.  ಆದರೆ ಅದೇನೋ ಒಂದು ರೀತಿಯ ಬಿಗುಮಾನ ಇದ್ದೇ ಇರುತ್ತದೆ.  ಈ ಅನುಭವಗಳನ್ನು "ಅರಬ್ಬರ ನಾಡಿನಲ್ಲಿ"  ಮಾಲಿಕೆಯಲ್ಲಿ ಹಂಚಿಕೊಳ್ಳಲಿದ್ದೇನೆ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಅರಬ್ಬರ ನಾಡಿನಲ್ಲಿ