ಕನ್ನಡ ಕವನ

ಬೆಳಗನು ಮುಸುಕುವ ಮಾಯೆಯ ಮಂಜು

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೇತಿ

ನೇತಿ

ದಿನಾ ನನ್ನನ್ನೇ
ಕೊಂದುಕೊಳ್ಳಲು
ಗೆಳೆಯನೊಬ್ಬನ
ಸಂಪಾದಿಸಿದೆ
ಆತನೋ
ತುಂಬಿದ ನದಿ
ಹುಟ್ಟೇ ಇಲ್ಲದ
ನಾವೆಯಲ್ಲಿ
ತಾನೇ
ಗಮ್ಯವನ್ನರಸುವ  
ಪಯಣಿಗ
ಈಜಲು
ಬರದಿದ್ದರೂ
ನಿರ್ಭಯ ನಾನು
ಬೆಳಕಿನೆಡೆಗಲ್ಲವೇ

ಗಮ್ಯ
ಗಮನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಹಾ ತಿಮಿರ

ಮಹಾ ತಿಮಿರ

ಹೊರಗೆ ಕವಿಯುತ್ತಿದೆ
ಸಂಜೆಯ ಕತ್ತಲು
ಜತೆಗೆ ಸುರಿಯುವ
ಸೋನೆ ಮಳೆ
ಮನದ ಬಾನಲೂ
ಆತಂಕದ ಛಾಯೆ
ನಾಳಿನ ಚಿಂತೆಯ
ಮಹಾ ತಿಮಿರ
ಮಾಯೆಯ ಮುಸುಕು
ಅಂದರೂ
ಪ್ರಕೃತಿಯ ಕೋಪ ಎಂದರೂ
ಕವಿಯುವುದು
ನನ್ನ ಮೇಲೇಯೇ ಎಲ್ಲ
ಮನೆಯೊಳಕ್ಕೆ
ಧಾವಿಸಲೂ ಮನಸ್ಸಿಲ್ಲ
ಅಲ್ಲೂ ಕತ್ತಲೆಯೇ
ಯಾಕೆಂದರೆ
ಕರೆಂಟಿಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಮ್ಯ

ಗಮ್ಯ


ತುಂಬಾ
ನಡೆದೆನೆನ್ನಿಸಿತು
ಹೀಗೇ ಕೇಳಿದೆ
ನಿನಗೆ ಬೇಸರ
ನೋವು ಇಲ್ಲವೇ
ಈ ಭಾರ, ಹೊತ್ತು
ದಾರಿ ಹೇಳಿತು
ಭಾರ ಮತ್ತು
ನಡೆ
ನಿನ್ನದು
ನನಗೇಕೆ
ನೋವು, ಬೇಸರ
ಆದರೂ
ಚಿಂತನೆಗೆ
ಗ್ರಾಸವಾಗಬೇಕಾದದ್ದು
ನಾನಲ್ಲ
ಗಮ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಹದಾರಿಯಾರೂ ಕೇಳರು ನಿನ್ನ
ಸಾವಿರ ಚಿಂತನೆಗಳ
ಆಕ್ರೋಶ ಕೂಗಾಟ
ಕ್ರಮಿಸಲು
ದಾರಿ ತೋರರು
ಬದಲಾದ ಸಂಕೇತದ
ಹಸಿರಿಗೆ ತಾನವೇ ವೇಗ
ಎಲ್ಲಿಯೂ ನಿಲ್ಲದೇ
ಕ್ರಮಿಸುವ  ನಿಲ್ಲದ ಪಯಣ
ಕಿತ್ತಳೆಯಲಿ ಎಚ್ಚರವಿರಲಿ
ಸರಿಯುವ ಸಂಭಂಧಗಳ  
ಕಾದು ನೋಡುವ
ಯಾಂತ್ರಿಕ ಸಂಕೇತ
ನಿಂತಿತೇ ಆಸೆಗಳ ಗೋಜಲು
ಕೆಂಪಿನ ಸಂಕೇತಕೆ 
ಎಚ್ಚರವಿದ್ದರೆ ಎಲ್ಲವೂ
ನಿನ್ನದೇ ಹಿಡಿತದಲ್ಲಿ
ಪಯಣ

ಕಡಿವಾಣ,
ಮತ್ತು

ರಹದಾರಿಯ

ಮುಕ್ತಾಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆತ್ಮೀಯ ಸಂಪದಿಗರೇ ಹೆಸರಿಡಿ ಈ ಕವಿತೆಗೆ .........? ಗತಿ

 

ದಾರಿಯೇ

ಸದಾ
 ಬಾ
ನನ್ನ

ಕ್ರಮಿಸು
ಎನ್ನುತ್ತಿರುವ,
ಈ ಪಯಣದ
ನಿರಂತರತೆಯ

ಕೊಂಡಿಯ
ನಡುವೆ

ಏರಲು ಇಳಿಯಲು
ಯಾವ ನಿಲ್ದಾಣವೂ
ಇಲ್ಲ
ಏನನ್ನೂ ಕ್ರಮಿಸದೇ  
ಎಲ್ಲವ ತಲುಪುವ
ಗುಣ
ಹಳತಾಗದ
ನಿರಂತರತೆಯ
ಹಿಂದಿನಿಂದ ಇಂದಿನ
ಮುಂದಕ್ಕೋ
ಮುಂದಿನ
ಹಿಂದಕ್ಕೋ
ವಿಧಿಯಿಲ್ಲದ
ಕ್ರಮದೆ
ಸರಿದಾಟ

ಸಂಪದಿಗರೇ


ನನ್ನ ನಲ್ಮೆಯ ಧನ್ಯವಾದಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭವಿಷ್ಯ

ಕೇಳಿದೆ ಮೊದಲಿನವವ
"ಏನು ಮಾಡುತ್ತಿದ್ದೀರಿ?"
"ಕಾಣುತ್ತಿಲ್ಲವೇ ಕಾಯಕ"
ಕೂಲಿಗೆ, ಕೂಳಿಗೆ
ಬಸವಣ್ಣನವರು ಹೇಳಿದ್ದರು
"ಕಾಯಕವೇ ಕೈಲಾಸ"
ಇನ್ನೊಬ್ಬನ್ನ ಕೇಳಿದೆ ಅದನ್ನೇ
"ಯಾಕೆ ಗೊತ್ತಾಗುತ್ತಿಲ್ಲವೇ?"
"ತಳಪಾಯ
ಭವ್ಯ ಮಹಲಿಗೆ
 ಬೇರು"
ಹಿಂದಿನಿಂದೊಂದು
ಚಿಕ್ಕ ದನಿ
"ಕಾಣಿಸೋದಿಲ್ಲವೇ ಭವಿಷ್ಯ"
ಆ ಕಡೆ ನೋಡಿದೆ
ವೃದ್ಧ ನೊಬ್ಬ

ನಡುಗುತ್ತ
ನೀರೆರೆಯುತ್ತಿದ್ದ
ಮಣ್ಣಿನೊಳಗಿನ
ಬೀಜ
ವೃಕ್ಷಕ್ಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆಂಪು ಕುಡಿಗಳು ಧರೆಗೆ

 

ಸಮಾನತೆಯ ಯುಗದಲ್ಲೂ

ಆಯ್ಕೆಗಿಲ್ಲದ ಸ್ವಾತಂತ್ರ್ಯ

ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ

ಹಸಿದ ಹೊಟ್ಟೆಗಳ ಪರದಾಟ

ತಾಯ ಉದರಕ್ಕೆ ಕತ್ತರಿ

ಕೊಳೆತ ತರಕಾರಿಯ ಬಿಕರಿಗೂ

ಬರದ ಅನಾಥ ಸರಕು

ಸಾವಿರ ಸಂಖ್ಯೆಯಲ್ಲಿ

ಕಸದ ತೊಟ್ಟಿಗೆ ರವಾನೆ

ಚೀರಿ ಬಗೆದು ತಿನ್ನಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಾಡಿ ನ್ಯಾಯದ ಬಂಟರು

 

 

ವಿಶಾಲ ರಾಜಮಾರ್ಗದ ಮೇಲೆ
ಓಡಾಡುತಿಹ ಜನರು
ಸರತಿಯಂತೆ
ಒಬ್ಬರ ಹಿಂದೆ ಒಬ್ಬರು
ವೇಗವಾಗಿ ಅರಾಮವಾಗಿ
ಎಲ್ಲೆಲ್ಲೂ ಅವರೇ


ಅಂಗಡಿ ಮುಂಗಟ್ಟುಗಳೆಲ್ಲ ಅಲ್ಲಿಯೇ
ಮನೆ ಕೊಳ್ಳ ಬಂಗಲೆ ಎಲ್ಲವೂ
ನಾಳಿನ ಚಿಂತೆಯೂ ಇಲ್ಲದೇ
ಆರಾಮವಾಗಿದ್ದಾರೆ ಇವರು

 

ಪಕ್ಕದ ಜೀಬ್ರಾ ಕ್ರಾಸಿಂಗ್ ನಲ್ಲಿ
ಮಾತ್ರ ಯಂತ್ರಗಳು
ಹಿಂದೆ ಮುಂದೆ
ಆಚೆ ಈಚೆ ಎಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆ ಭಾವದುಂಬಿ ನಾನು ನೀನೊಂದು ನಗುವ ಹೂವು
ನಿನ್ನಿಂದ ಅರಿತೆ ನಾನು ಒಲವಿನಾ ಅರ್ಥವನ್ನೂ
ಆ ಭಾವದುಂಬಿ ನಾನು ನಿನಗೆಂದೆ ನಗುವ ಹೂವು

ಕಣ್ಣಲ್ಲೇ ಇಟ್ಟು ನಿನ್ನ     ಕಣ್ಮುಚ್ಚಿ ಕುಳಿತೆ ಚಿನ್ನ
ಮನದಲ್ಲಿ  ತುಂಬಿ ನಿನ್ನ ಮರೆತೆಲ್ಲ ಬಾಹ್ಯವನ್ನ

ಬಿಡಲೊಲ್ಲೆ ನಿನ್ನ ನಾನು, ಕಣ್ತೆರೆದು ನೋಡಿ ಜಗವ
ಉಸಿರಂತೆ ನನ್ನಲಿರುವ , ಇರುವಂತೆ ನಿನ್ನಲೇ ನಲಿವ

ಊರೆಲ್ಲ ಕರೆದರೇನು ಮರುಳಾದೆನೆಂದು ನನ್ನ
ಜತೆಗಿಲ್ಲವೇನು ನೀನು ಸಾಕೆನಗೆ ಅದುವೆ ರನ್ನ

ನನಗಿಲ್ಲ ಇನ್ನು ಚಿಂತೆ  ನಿನ್ನೊಲವೆ ನನ್ನ ಲಹರಂತೆ
ಬೆರೆತಂತೆ ನನ್ನಲಿರುವ ನಿನ್ನೊಲವೆ ನನ್ನ ಉಸಿರಂತೆ
 
  ನನ್ನುಸಿರ ರಾಗವೇ ನೀನು,ಅದರಲ್ಲೇ ತಾನವೇ ನಾನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ನದಿಯ ಹರಿವು

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

field_vote: 
Average: 3.8 (20 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕನ್ನಡ ಕವನ