ಕವಿತೆ

ಹೀಗೊಂದು ಡೈರಿ ಪುರಾಣ

ಡೈರಿಗಳ ಹಾಳೆಗಳಲ್ಲಿ ತುಂಬಿದ ಅಕ್ಷರಗಳು, ನನ್ನ ಮನಸಿನ ಬೇಡದ ಭಾವನೆಗಳು. ಅವುಗಳನ್ನು ಹಳೆ ಪಾತ್ರೆ, ಕಬ್ಬಿಣ, ಪೇಪರ್ ಅವನಿಗೆ ಹಳೆಯ ಡೈರಿಗಳನು ಕೊಟ್ಟು ಮನೆಗೆ ಹಿಂದಿರುಗುವ ಹಾದಿಯಲ್ಲಿ, ಅನೇಕ ಹೊಸ ಹೊಸ ಭಾವನೆಗಳು ಮತ್ತೆ ನನ್ನ ಮನದಲ್ಲಿ ಮೂಡಿದವು, ನನ್ನಲ್ಲಿದ್ದ ನೆಗೆಟಿವಿಟಿ ದೂರ ಓಡಿತು. ಮನಸು ಶಾಂತವಾಯಿತು, ನಿರ್ಮಲವಾಯಿತು, ಹೃದಯ ಪ್ರಶಾಂತವಾಗಿತ್ತು. ಖಾಲಿ ಬಿಳಿಯ ಹಾಳೆಯಂತೆ ನನ್ನ ಮನವು ಘಮಘಮಿಸಿತ್ತಿತ್ತು. ಆ ಡೈರಿಗಳಲ್ಲಿ ಬರೆದಿದ್ದ ಅನೇಕ ಪದ್ಯಗಳು, ದಿನಚರಿ, ಪುಟ್ಟ ಪ್ರಬಂಧಗಳು, ಹೀಗೇ ಬೇಡದ್ದು, ಬೇಕಿದ್ದು, ಎಲ್ಲಾ ಇತ್ತು. ಆದರೂ ಅದನ್ನು ಹಳೇ ಪೇಪರಿನವನಿಗೆ ಕೊಟ್ಟೆ, ಮನೆಯಲ್ಲಿದ್ದ ಗಲೀಜು ಕಡಿಮೆಯಾಯಿತು, ಮನದಲಿದ್ದ ಗಬ್ಬು ಕೂಡ ಮಾಯವಾಯಿತು. ಆದರೂ, ನನಗೆ ಆ ಡೈರಿಗಳು ಬಲು ಪ್ರಿಯವಾಗಿದ್ದವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (5 votes)
To prevent automated spam submissions leave this field empty.

ಬಾಡಿತೇಕೆ ಮುಖವು ನಿನ್ನದು?

ಬಾಡಿತೇಕೆ ಮುಖವು ನಿನ್ನದು

ನನ್ನ ಪ್ರೀತಿಯು ಸಾಲದೇ

ಕುಳಿತೆಯೇಕೆ ಹೀಗೆ ಸುಮ್ಮನೆ

ನಗುವ ಮೋರೆಯ ತೋರದೇ.

 

ಅಳುವ ಮರೆಸಿ, ಒಲವ ಬೆರೆಸಿ

ನಗುವ ತೋರಲು ಬಾರದೇ

ಒಲವಿಗಾಗಿ, ನಲುವಿಗಾಗಿ

ಒಮ್ಮೆ ಮನವು ಬಾಗದೇ.

 

ಹಣಕೆ ಒಲವ, ಕ್ಷಣಕೆ ಮನವ

ಮಾರಿ ಕೂರಲು ಸಾದ್ಯವೇ

ಹಣವ ವ್ಯಯಿಸಿ, ಬೆವರ ಹನಿಸಿ

ಪ್ರೀತಿ ಪಡೆಯಲು ಸಾದ್ಯವೇ

 

ಕ್ಷಣಕೂ ಮೀರದ, ಕ್ಷಣಿಕ ವಿರಹವ

ಒಮ್ಮೆ ತಾಳಲು ಆಗದೇ

ಒಂದು ಕ್ಷಣದ ನೋಟವಿರದೇ

ಬದುಕು ಮುಂದೆ ಸಾಗದೇ

 

ಕ್ಷಣವ ಮರೆತೆನು, ಹಣವ ಮರೆತನು

ನಿನ್ನ ನಾನು ಮರೆಯನು

ಬಯಸಿದವಳ ಮರೆತು ಬಾಳಲು

ಮೆಚ್ಚಿ ಹರಸುವನೇನು ಆತನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಲೈಫು ಇಷ್ಟೇನೆ, ಲೈಫು ಹೀಗೇನೆ

ಅಮ್ಮನ ಮಡಿಲಲ್ಲಿ ಊಟ ಮಾಡಿ

ತಾತನ ಹೆಗಲೇರಿ ಆಟ ಆಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಯೋಚನೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ನಡೆದ ದಾರಿಯಲ್ಲಿ ಹೆಜ್ಜೆ ಜಾಡನ್ನರಸಿ

ಧೂಳೆಬ್ಬಿಸೋ ಬಸ್ ಸ್ಟ್ಯಾಂಡ್
ನಲ್ಲಿ ಗೊಣ್ಣೆ ಒರೆಸೋ ಹುಡುಗ
ಮಾರುವ ತಾಜಾ ತಾಜಾ ಹಣ್ಣುಗಳು
ನಮ್ಮ ಆಟೋ ಹತ್ತಿಯಾನೆಂದು
ಕಾತರಿಸುವ ಕಣ್ಣುಗಳು

ನನ್ನೂರಲ್ಲೀಗ ಬಸ್ ಧೂಳೆಬ್ಬಿಸುವುದಿಲ್ಲ
ರೋಡು ತುಂಬಾ ಟಾರು
ದಾರಿಯುದ್ದಕೂ ಬಾರು
ಕೊಳಕು ಮೈಯ ಹುಡುಗ
ಹಣ್ಣು ಮಾರುವುದಿಲ್ಲ

ಊರಿಗಿಳಿದೊಡನೇ ಕೈ ಕುಲುಕಿ
ದಾರಿ ತುಂಬಾ ನಗು ಚೆಲ್ಲಿ
ಉಡಿ ತುಂಬಾ ಮಾತು ತುಂಬಿ
ಮನದೊಂದಿಷ್ಟು ಲಗೇಜು ಇಳಿಸುವವರು

ನನ್ನೂರಲ್ಲೀಗ ಡಿಶ್ ಟೀವಿ
ಮಾತೆಲ್ಲಿ ಕಳೆದುಹೋದವು
ಕಾತರಿಸಿವೆ ಕಿವಿ
ಉಡಿ ಖಾಲಿ, ಗುಡಿ ಖಾಲಿ
ಊರ ಮುಂದಿನ ಕಟ್ಟೆ ಖಾಲಿ

ಮನೆ ತಲುಪುವ ಮುನ್ನ
ನಡೆದ ಹಾದಿಯ ಮೇಲೆ
ಸಾಲು ಮರದ ತಂಪು
ಭತ್ತ, ಬೇವಿನ ಕಂಪು

ನನ್ನೂರಲ್ಲೀಗ ಆಮ್ಲಜನಕದ ಕೊರತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಕಾಣದ ಕವಿತೆ....

ಹನಿಯಲಿ ಮೂಡಿದೆ ಒಂದು ಕವಿತೆ,


ಚಿಗುರೆಲೆಯ ಮೇಲೆ....


ಮರಿ ಸೂರ್ಯನಂತೆ ಪಳ-ಪಳನೆ ಹೊಳೆಯುತಿದೆ,


ತಾವರೆ ಪುಷ್ಪದ ಮೇಲೆ....


ನಮ್ಮ ಮನೆಯ ಮಗುವಿನ ಮುಗ್ಧ ನಗುವಿನಲ್ಲಿ,


ಸಣ್ಣಗೆ ಅಡಗಿ ಕುಳಿತಿದೆ....


ಅಣ್ಣನ ತುಂಬು ಪ್ರೀತಿಯಲ್ಲಿ,


ನಿಶ್ಕಲ್ಮಶ ವಾಗಿ ಬೆಳಗುತಿದೆ....


ತಂದೆ-ತಾಯಿಯ ಆರೈಕೆಯಲ್ಲಿ,


ತೇಲಿ ಸಾಗುತಿದೆ....


ಗೆಳೆಯರ ಜೀವದ ಗೆಳೆತನದಲ್ಲಿ,


ಬಂಧವಾಗಿ ಕೂಡಿದೆ....


ನಲ್ಲೆಯ ಸವಿ ಪಿಸುಮಾತಿನಲ್ಲಿ,


ಹೃದಯದ ವೀಣೆ ಮೀಟುತಿದೆ....


ಅಂತೂ ಈ ಎಲ್ಲಾ ವಿಶ್ವವೇ,


field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಭವ ಬಂಧನದೊಳೂ ಸಿಲುಕಿ...

               ೧

ಮರೆಯಾಗಿವೆ ಕಣ್ಣೊಳಗಿನ ಕನಸುಗಳು
ಮನದ ತಳದ ಕೊಳದಲ್ಲಿ ಅಲೆಗಳಿಲ್ಲ

ಬಿಡುವಿರದ ಬದುಕಲ್ಲಿ ಮೌನಕ್ಕೆ ಬೆಲೆಯಿಲ್ಲ
ಕದವಿಕ್ಕಿದೆ ಎದೆಯೊಡಲು, ಓಲೈಸೆ ವಿಧಿಯಿಲ್ಲ

ಚಲಿಸುತ್ತಿಲ್ಲ, ಬದಲಾಗುತ್ತಿಲ್ಲ ಕಾಲ ಇಲ್ಲಿ
ಕನಿಷ್ಠ ಕಾಣುತ್ತಿಲ್ಲ ಮಾರೀಚನ ಜಿಂಕೆ - ದಣಿದ ಮನದಲ್ಲಿ

ಕದವಿಕ್ಕಿದ ಕೋಣೆಯಲಿ ಉಸಿರುಗಟ್ಟಿದೆ ಬದುಕು
ಹೊರಟಿಹೆನು ಹಸಿರ ಹುಡುಕಿ
ಬೆಳಕು ಕಂಡೀತೇ ಅಲ್ಲಿ - ಈಗಾದರೂ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಭಾವ ತರಂಗಿಣಿ

ತಿಳಿಗತ್ತಲಲಿ ಸುಳಿಗಾಳಿಗೆ ಸಿಕ್ಕು
ತರುಗೆಲೆಯೊಂದು ಹಾರಿತ್ತು
ಮಲಗಿದ್ದ ಕೊಳಕ್ಕೆ ಮೆಲ್ಲನೆ ಮುತ್ತಿಕ್ಕೆ
ಅಲೆಯೊಂದು ಬೆದರಿತ್ತು

ಅದುರಿದಾ ಕೊಳದಲ್ಲಿ
ಚಂದಿರನು ಬೆಚ್ಚಿದ್ದ
ಮೆಲ್ಲನೆ ಹೊರಳಾಡಿ
ಮತ್ತದೋ ಮಲಗಿದ್ದ

ಆ ದೃಶ್ಯಕ್ಕೆ ಬೆರಗಾದೆ
ಕತ್ತಲಿಗೆ ಮರುಳಾದೆ

ಆ ಕೊಳದ ಬಳಿ
ಆ ಬಿದಿರು ಮೆಳೆ
ನನ್ನ ಭಾವವನ್ನೊಮ್ಮೆ ತೂಗಾಡಿತು

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಒಂದು ಕನಸಿನ ( ಕಥೆ? )

ಮಧ್ಯರಾತ್ರಿಯಲ್ಲಿ ಕನಸೊಂದು ಹುಟ್ಟಿತ್ತು
ಮುಂಜಾನೆಯವರೆಗೂ ಮೊಗ್ಗಾಗಿ ಕುಳಿತಿತ್ತು
ಮಾಗಿಯ ಚಳಿಯಲ್ಲಿ ಹೂವಾಗಿ ಅರಳಿತ್ತು
ಬಿಸಿಲಿನ ತಾಪದಲ್ಲೂ ಕಂಪನ್ನು ಬೀರಿತ್ತು

ದಿನವೆಲ್ಲಾ ಹಿಗ್ಗಾಗಿ, ಮನವೊಂದು ಮೊಗ್ಗಾಗಿ
ಕಂಡ ನೋಟವೆಲ್ಲಾ ಮನಸಿಗೆ ಹಿತವಾಗಿ
ಆಡಿದ ಪ್ರತಿ ಮಾತೂ ಪ್ರೀತಿಯ ಹೂವಾಗಿ
ಕಾಲ ತಾನಾಗಿ ಚಲಿಸಿರಲು ಸಂಜೆಯಾಗಿತ್ತು

ಮುಂಜಾನೆಯ ಮೊಗ್ಗು ಸಂಜೆಗೆ ಬಾಡಿ ಹೋಗಿತ್ತು
ಕಂಪನೆಲ್ಲಾ ಕಳೆದುಕೊಂಡಿತ್ತು
ಸೊರಗಿದ ಮನವೊಂದ ಹೊತ್ತುಕೊಂಡಿರಲು
ಮಧ್ಯರಾತ್ರಿಯ ಗಿಡದಲ್ಲಿನ್ನೊಂದು ಕನಸು ಹುಟ್ಟಿತ್ತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಅಲೆಮಾರಿ

ಬರೆಯಬೇಕೆಂದಾಗ ಬರೆಯಬಿಡದೆ
ಹಾಡಬೇಕೆಂದಾಗ ದನಿ ನಿಲ್ಲಿಸಿ
ಅಳಬೇಕೆಂದರೂ ಅಳಬಿಡದ
ಮನಸಾವರಿಸುವ ಭಾವ ಅಲೆಮಾರಿ


ಕಣ್ಣರಳಿಸಿದ ಹುಡುಗಿಯ
ಕಣ್ಣು ತಪ್ಪಿಸಿದ, ಅವಳೆಡೆಗೆ
ನೋಡಲಾಗದೆ ನೋಡುವ
ನೋಟ ಅಲೆಮಾರಿ


ನಿಂತಲ್ಲಿ ನಿಲ್ಲಲಾಗದೆ
ಕೂತಲ್ಲಿ ಕೂರಲಾಗದೆ
ಎಲ್ಲೆಲ್ಲೋ ಸುತ್ತುವ
ಮನಸು ಅಲೆಮಾರಿ


ಬೇಡುವವರ ಬಳಿ ಸುಳಿಯದ,
ಗೊತ್ತಿಲ್ಲದೇ ಹೋಗಿ ಮನೆಯ
ಮುಚ್ಚಿದ ಕದ ತಟ್ಟುವ
ಸಾವು ಅಲೆಮಾರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಪ್ರಶ್ನೆಗಳು


ಕವಿತೆ ಗರ್ಭ ಕಟ್ಟುವುದು
ಮಧ್ಯರಾತ್ರಿಯಲ್ಲೇನಾ?
ಕನಸುಗಾರನಿಗೇನಾ?
ಭಗ್ನ ಪ್ರೇಮಿಗೇನಾ?
ಪ್ರೀತಿ ಹುಡುಕುವವನಿಗೇನಾ?

ಕವಿತೆ ಹುಟ್ಟುವುದು
ಒಂಟಿತನದ ನೀರವತೆಯಲ್ಲೇನಾ?
ಆಸೆಗಳ ಬೆನ್ನತ್ತಿದಾಗಲೇನಾ?
ದುಃಖದ ಮಡಿಲಲ್ಲಿರವಾಗಲೇನಾ?
ನಿರಂತರ ಸಂತಸದ ಕಾತರದಲ್ಲಿರುವಾಗಲೇನಾ?

ಕಾಮನಬಿಲ್ಲಿಂದ ಬಾಣ ಬಿಟ್ಟಾಗ
ಚೆಂದನೆಯ ಮಳೆ ಬಿದ್ದಾಗ
ಮನಸೊಂದನ್ನು ಸೆಳೆದಾಗ
ಕನಸೊಂದನ್ನು ಕಳೆದುಕೊಂಡಾಗ
ಹುಟ್ಟುವುದು ಕವಿತೆಯೇನಾ?

ಕವಿತೆಯೆಂದರೆ ರೂಪಕಗಳೇನಾ?
ಪ್ರಾಸಬದ್ಢ ಸಾಲುಗಳೇನಾ?
ತುಂಟತನದ ಮಾತುಗಳೇನಾ?
ಕೊನೆಗಾಣದ ಉಪಮೆಗಳೇನಾ?
ಅಥವಾ ಕವಿಯೊಬ್ಬನ ಆತ್ಮಕಥೇನಾ?
ಕವಿತೆಯೆಂದರೆ ಅಷ್ಟೇನಾ?


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ನದೀ ತೀರದಲ್ಲಿ ನೆನಪುಗಳು ಒದ್ದೆ

ನದಿಯೆಂದರೆ ಬರೀ ನೀರಲ್ಲ
ನದಿ ಹೆಣ್ಣು; ಹೆಣ್ಣು ಮಾಯೆ
ಮಾಯೆಯೆಂದೊಡೆ ಸೆಳೆತ
ಈಕೆ ನದಿ, ಮನ ಕದಿಯೋ ಮಾಟಗಾತಿ
 
ಕಡಲ ಮಗಳಿವಳು
ನೆನಪ ಮರೆತಿಹಳು
ದಾರಿ ಹುಡುಕುತ ಹೊರಟಿಹಳು
 
ನಿಂತಲ್ಲೇ ನಿಲ್ಲುವಳಲ್ಲ
ಎಲ್ಲಿಂದ ಬಂದವಳೋ
ಅದೆಲ್ಲಿಗೆ ಹೊರಟಿಹಳೋ
ಇನ್ನೂ ತಿಳಿದಿಲ್ಲ
 
ನದಿಯೆಂದರೆ ಧುಮ್ಮಿಕ್ಕುವ ಜಲಪಾತ
ರುದ್ರ ಭಯಂಕರಿ, ಮನ ಸೆಳೆವ ವೈಯ್ಯಾರಿ
 
ನದಿಯೆಂದರೆ ಉದ್ದನೆ ನೆನಪು, ಮೈಮರೆವ ರಾಗ
ಅಂಕುಡೊಂಕಿನ ಹಾದಿ. ಮೈದೊಳೆವ ಜಾಗ
ಭಯ ಬೀಳಿಸೋ ಪ್ರವಾಹ
ಕ್ಷಣ ಚಿತ್ತ ಕ್ಷಣ ಪಿತ್ಥ
 
ನದಿಯೊಳಗೂ ಮುಳುಗಿವೆ
ಅಗಣಿತ ಕನಸುಗಳು
ಹೊರಬರದ ನಿಟ್ಟುಸಿರುಗಳು
ಬಯಕೆ, ಬದುಕು, ಕನವರಿಕೆಗಳು
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕನಸುಗಳು ಕಾಣೆಯಾಗಿವೆ

ಭುಸುಗುಟ್ಟಿದೆ ಮುಗಿಲು, ತಲೆಯೆತ್ತಿದರೆ ದಿಗಿಲು
ಭೂ ತಾಯಿ ಕಣ್ಣೀರಿಟ್ಟರೆ
ಜೀವವೆಲ್ಲಾ ಒದ್ದೆ.

ಜೊತೆಯಿದ್ದವರು ಇನ್ನಿಲ್ಲ,
ಕತ್ತಲೆಗೆ ಕೊನೆಯಿಲ್ಲ.
ಗುಡಿಸಿ ಬಿಸಾಡಲು
ಕಸವಾಯಿತೆ ಬದುಕು?

ಅಲೆದಾಟ ಸಾಕಾಗಿದೆ,
ದಣಿವಾಗಿದೆ ಜೀವಕೆ.
ಮನಸುಗಳೆಲ್ಲಾ ಮಲಗಿವೆ
ಕನಸುಗಳೊಂದಿಷ್ಟಿದ್ದರೆ ದಾನ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಕಾಲದ ನದಿಯ ಹರಿವು

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

field_vote: 
Average: 3.8 (20 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕವಿತೆ