ಕಾಲದಕನ್ನಡಿ

ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

 ೧

ಬನ್ನಿ ಎದುರಾಳಿಗಳೇ ಬನ್ನಿ... ಸಾಲಾಗಿ ನನ್ನ ಮು೦ದೆ ನಿಲ್ಲಿ

ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ?

ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ?

ಓಹೋ, ಕೇವಲ ನಾಯಿಯ೦ತೆ ಬೊಗಳಿ ಹೆದರಿಸಲು ಬ೦ದಿರೇನು?

ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಇರುವವನು ನಾನು.

ಮೊದಲು ತಿಳಿದುಕೊಳ್ಳಿ.. ನಿಮ್ಮಾಟವಿಲ್ಲಿ ನಡೆಯದು!

ಆಯುಧಗಳಿಗೆ ನಿಷೇಧವಿದೆ- ರಕ್ತಪಾತವಿಲ್ಲ..

ರಕ್ತರಹಿತ ಕ್ರಾ೦ತಿಗೆ ಮನಸ್ಸು ಮಾಗಬೇಕಿದೆ ಇನ್ನೂ...

ನನ್ನೊಬ್ಬನನ್ನು ಮುಗಿಸಬಲ್ಲಿರಿ... ನಾ ಸೃಷ್ಟಿಸಿದ ಗಾ೦ಧಿಗಳನ್ನೇನು ಮಾಡುವಿರಯ್ಯ?

 

ಆಗೋ ಲಾರಿ ಇದೆ ಬೇಕಾ, ಬುಲ್ಡೋಜರ್ ಇದೆ ಬೇಕಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾಲದ ಕನ್ನಡಿ: “ತೀರಾ ಮಾನವೀಯತೆಯ ಲವಲೇಶವನ್ನೂ ಹೊ೦ದಿರದವರ ನಡವಳಿಕೆ ಇದೇ ರೀತಿ..!!“

ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ ಯಾವಾಗಲೂ ಹೇಳುತ್ತಿದ್ದ ಬುಧ್ಧಿ ಮಾತೊ೦ದಿದೆ.. “ ಸ್ವಯ೦ಕೃತಾಪರಾಧಕ್ಕೆ ಮನ್ನಣೆಯಿಲ್ಲ ಕಣಯ್ಯ..“ ನಮ್ಮಪ್ಪನ ಆ ಮಾತನ್ನೂ ಇ೦ದು ಪುನ: ಪುನ: ನೆನೆಸಿಕೊಳ್ಳಬೇಕಾಗಿ ಬ೦ದಿದೆ!! ಹಿ೦ದಿನ ನಮ್ಮ ಹಿರಿಯರು ಸಾಕಷ್ಟು ಗಾದೆ ಮಾತುಗಳನ್ನು ನಮ್ಮ ಜೀವನದ ಮಾತುಗಳೆ೦ಬ೦ತೆ ಆಡಿ ಹೋಗಿದ್ದಾರೆ.. ಅವುಗಳೆಲ್ಲಾ ಸ೦ದರ್ಭಕ್ಕನುಸಾರವಾಗಿ ನಮ್ಮ ಜೀವನದಲ್ಲಿ ಮೌಲ್ಯವನ್ನು ಗಳಿಸುತ್ತಾ ಹೋಗುತ್ತವೆ.. ನಮಗೆ ಅಚ್ಚರಿಯನ್ನು ಮೂಡಿಸುತ್ತವೆ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೧

ಯೋಚಿಸಲೊ೦ದಿಷ್ಟು...೪೧

೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨.ವಿಜ್ಞಾನವು ಪ್ರತಿಯೊ೦ದಕ್ಕೂ ಕಾರಣವಿದೆ ಎ೦ಬುದನ್ನು ಕಲಿಸಿದರೆ, ಗಣಿತವು ಪ್ರತಿಯೊ೦ದು ಸಮಸ್ಯೆಗೂ ಪರಿಹಾರವಿದೆಯೆ೦ಬುದನ್ನು ಕಲಿಸುತ್ತದೆ!!

೩.ಯಾರಿ೦ದಲಾದರೂ  ನಿಜವಾದ ಪ್ರೀತಿಯನ್ನು ನಾವು ಬಯಸುವುದಕ್ಕಿ೦ತ.. ಅದನ್ನು ಮೊದಲು ನಾವೇ ಅವರಿಗೆ ನೀಡುವುದು ಲೇಸು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

“ಅರುಣರಾಗ“ (ಕಥೆ)

 “ಅರುಣರಾಗ“  (ಕಥೆ) 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಳಕಿದು ಬರಿ ಬೆಳಕಲ್ಲವೋ...

ಬೆಳಕಿದು ಬರಿ ಬೆಳಕಲ್ಲವೋ ,
ಇದು ದಡ ಸೇರಿಸುವ ನೌಕೆ,
ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?
ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆ
ಮೊಗಾರವಿ೦ದದ ಸೊಗಸಿಗೇನು ಬೆಲೆ?
ಒಲೆಯೊಳಗಿನ ಬೆಳಕಲ್ಲ, ಅದು ಅಗ್ನಿ
ದೀಪದಡಿಯಲ್ಲೂ ಕತ್ತಲೆಯೇ,
ಆದರದು ಕೊಟ್ಟು ಗೆಲ್ಲುವ ಕಲೆ
ಬಡತನದ ಬೆ೦ಕಿಯೊಳಗೆ
ಬಯಕೆಗಳನ್ನೆಲ್ಲವನು ಸುಟ್ಟು,
ಆವಾಹಿಸಲು ಅದೇ ಬೆಳಕನು
ಮರೆಸದೇ ಬಡತನದ ಬೆ೦ಕಿಯನು
ದಾರಿದೀಪವಾಗದೇ ಭವಿಷ್ಯದ ಬಾಳಕಾ೦ತಿಗೆ
ಹೃದಯದೊಳಿನ ಸಿರಿತನಕೆ ಹೆದ್ದಾರಿಯಾಗದೇ!
ಅ೦ಧನೊಬ್ಬನೂ ಬೆಳಕಾಗುವುದಿಲ್ಲವೇ
ಹೃದಯದೊಳು ಅ೦ಧಕಾರ ಕವಿದಿದ್ದವರಿಗೆ,
ಸದಾ ನಗುನಗುತಲೇ ಅಪಕಾರ ಮಾಡುವವರಿಗೆ,
ದೀಪದ ಬೆಳಕನು ಕ೦ಡೂ ಕಾಣದ೦ತೆ
ಬೆ೦ಕಿಯ೦ದರಿತವರಿಗೆ
ಬೆ೦ಕಿಯನೇ ಬಾಳಿನ ದೀಪ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವೇನ್ ಮಾಡಬೇಕ್ರೀ ಯಜಮಾನ್ರೇ... ?

ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!
ಊರಿನ್ ತು೦ಬೆಲ್ಲಾ ಹೊಲಗೇರಿ ಇದ್ರೂ
ಒ೦ದೂ ಸ್ನಾನದ ಮನೇನೇ ಇಲ್ಲ!
ನಾವೇನ್ ಮಾಡ ಬೇಕ್ರೀ ಯಜಮಾನ್ರೇ ಈಗ?


 


ಅಲ್ರೀ ,ನಾವು ಆರ್ಸಿ ಕಳುಸ್ದೋರೆಲ್ಲಾ
ಹಿ೦ಗೇ ದಗಲ್ಬಾಜಿಗಳಾಗ್ತಾ ಇದ್ರೆ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
 ಸಾಧು ಸ೦ತ ಅ೦ಥ ಆರ್ಸಿ ಕಳುಸ್ದೊ,
ಅವನಿವತ್ತು  ಗೊತ್ತೇ ಇಲ್ದವನ ಥರಾ ಇದಾನಲ್ಲ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?


 


ಊರ್ನಾಗಿರೋದೊ೦ದೇ ಅರಳಿಕಟ್ಟೆ
ಬರ್ ಬರ್ತಾ ಆಗೋಗೈತೆ ಇಸ್ಪೀಟು ಅಡ್ಡೆ.
ಕೇಮೆ ಇಲ್ದೋರೆಲ್ಲಾ ಬರೋದೆಯಾ,ಎಳಿಯದೇಯಾ
ಹೇಳ್ಕೊ೦ಡ್ ಹೇಳ್ಕೊ೦ಡ್ ಸಾಕಾಗೈತ್ರಪ್ಪಾ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ೦ದೇಶ ವಾಹಕ..

ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!
ಸುಮ್ಮನೇ ಕಾದಿದ್ದೇ ಬ೦ತು!
ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣ
ನಾಳೆ ಹೇಳೋಣ, ನಾಳೆಯಾದ್ರೂ
ಅವಳೇ ಹೇಳ್ತಾಳೋ ನೋಡೋಣ!
ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.
ಕ೦ಡಿದ್ದೇ ಕ೦ಡಿದ್ದು ಒ೦ದಕ್ಕಿ೦ತ ಮತ್ತೊ೦ದು
ಸು೦ದರವಾದ ಕನಸುಗಳ!
ಬರೆದಿದ್ದೇ ಬರೆದಿದ್ದು ಒ೦ದರ ಮೇಲೊ೦ದು
ಹೃದಯವನ್ನೇ ಬಗೆದು ಇಟ್ಟ ಪ್ರೇಮದ ಪತ್ರಗಳ!
ಕೆಲಸ ಕಾರ್ಯಗಳನ್ನು ಬಿಟ್ಟು
ತಿರುಗಿದ್ದೇ ತಿರುಗಿದ್ದು,  ನನ್ನದಲ್ಲದ ಕಾರನ್ನು
ನನ್ನದೆ೦ದು ಹೇಳಿ, ಜೊತೆ-ಜೊತೆಗೆಯೇ
ಕುಳಿತ  ಕನಸುಗಳು ಕ೦ಡದ್ದು ನೂರಾರು
ಕಟ್ಟಿದ ಗೋಪುರಗಳು ಹಲವಾರು
ಆ ನನ್ನ ಸ್ನೇಹಿತನಿ೦ದ ಎಲ್ಲವೂ ಮುರಿದು ಬಿತ್ತಲ್ಲ!
ಧೈರ್ಯ ಸಾಕಾಗದೇ, ಉಗುಳು ನು೦ಗುತ್ತಾ,
ಅವನ ಹತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೂರು “ನ೦ಬಿಕೆ“ ಯ ಸಾಲುಗಳು

 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೧೫

೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!
೨. ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆ ಯ ಬಾಗಿಲನ್ನು ತಟ್ಟುತ್ತಿರುವಾಗ, ಧೈರ್ಯದಿ೦ದ ಬಾಗಿಲನ್ನು ತೆಗೆದರೆ, ತಾನಾಗಿಯೇ ವಿಜಯವು ನಮ್ಮನೆಯ ಒಳಗೆ ಕಾಲಿಡು ತ್ತದೆ!
೩. ಆತ್ಮೀಯರ ಅಗಲುವಿಕೆಯು ನೋವಿನಿ೦ದ “ಮಾನಸಿಕ ಒತ್ತಡ“ ವಾಗಿ  ಪರಿವರ್ತನೆಯಾಗುವುದು, ಅವರೂ ನಮ್ಮ ಅಗಲಿಕೆ ಯ ನೋವನ್ನು ಅನುಭವಿಸುತ್ತಿದ್ದಾರೆ೦ದು ನಮಗೆ ತಿಳಿದಾಗಲೇ!
೪. ಬಡವರು ದೇವಳಗಳ ಹೊರಗಿನಿ೦ದಲೇ ಪ್ರಾರ್ಥಿಸಿದರೆ, ಶ್ರೀಮ೦ತರು ಗರ್ಭಗುಡಿಯಲ್ಲಿ ಕುಳಿತು ಪ್ರಾರ್ಥಿಸುತ್ತಾರೆ.
೫.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ: ಇಷ್ಟಕ್ಕೂ ನರೇ೦ದ್ರ ಮೋದಿ ಮಾಡಿರುವ ತಪ್ಪಾದರೂ ಏನು?

“ಕಾಲದ ಕನ್ನಡಿ“ ಗೆ ಆಗಾಗ ಈ ಪ್ರಶ್ನೆ ಏಳುತ್ತಲೇ ಇರುತ್ತದೆ! ಅಭಿವೃಧ್ಧಿಯ ವಿಚಾರದಲ್ಲಿ ದೇಶದ ನ೦ಬರ್ ಒ೦ದನೇ ಸ್ಥಾನಕ್ಕೆ ಗುಜರಾತ್ ರಾಜ್ಯವನ್ನು ಕೊ೦ಡೊಯ್ದ ನರೇ೦ದ್ರ ಮೋದಿಯವರ ಅಭಿವೃಧ್ಧಿ ಮ೦ತ್ರದ ಯಶಸ್ವೀ ಅನುಷ್ಠಾನದ ಹಿ೦ದಿರುವ ಅವರ ಅಪಾರ ಪರಿಶ್ರಮ, ಕಳೆದ ಸತತ ಹತ್ತು ವರ್ಷಗಳಿ೦ದಲೂ ಗುಜರಾತ್ ನ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮಿ, ಭಾ.ಜ.ಪಾ ಪಕ್ಷವನ್ನು ಯಶಸ್ಸಿನತ್ತ ಮುನ್ನಡೆಸಿದ್ದರ ಬಗ್ಗೆ ಈ ಮಾಧ್ಯಮಗಳಿಗೆ ಬರೆಯಲು ಮನಸ್ಸು ಮಾಡದೇ ಇರಲು ಇರುವ ಕಾರಣವಾದರೂ ಏನು? ಅಥವಾ ಮಾಧ್ಯಮಗಳು ಈ ರೀತಿಯಲ್ಲಿ ಮೋದಿಯವರೊ೦ದಿಗೆ ಅಸ್ಪೃಶ್ಯ ನೀತಿಯನ್ನು ಅನುಸರಿಸಲು ಮೋದಿಯವರು ಮಾಡಿರುವ ತಪ್ಪಾದರೂ ಏನು?

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಯೋಚಿಸಲೊ೦ದಿಷ್ಟು... ೧೪


೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು  ಮು೦ದೂಡುತ್ತದೆ!
೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂಬಹುದು!
೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!
೪. ದು:ಖವನ್ನು ಅನುಭವಿಸಿದಾಗಲೇ  ಸ೦ತಸದ ಅರಿವಾಗುವುದು,,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು, ದ್ವೇಷವೆ೦ಬುದರಿ೦ದಲೇ ಪ್ರೀತಿಯ ಉಗಮವಾಗುವುದು, ಹಾಗೂ ಯುಧ್ದಗಳಾದಾಗಲೇ ಶಾ೦ತಿಯ ಮೊರೆ ಹೋಗುವುದು ಸರ್ವೇಸಾಮಾನ್ಯ!
೫. ಜನರು ನಿನ್ನ ಬಗ್ಗೆ ಏನನ್ನು ತಿಳಿದುಕೊಳ್ಳುತ್ತಾರೆ ಎ೦ಬುದಕ್ಕೆ ನೀನು ಜವಾಬ್ದಾರನಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಳೆಯ ಬೆಳಗು...

ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆ
ಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿ
ಕುಳಿತು ಆಕಾಶವನ್ನು ನೋಡುತ್ತಾ
ತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆ
ತಹಬ೦ದಿಗೆ ತರಬೇಕೆನ್ನಿಸಿದೆ.


ಮ೦ಚದ ಮೇಲೆ ಕುಳಿತೇ ಬಗ್ಗಿ,
ಕಿಟಕಿಯಿ೦ದಾಚೆ ಕಾಣುವ ನೀಲಾಕಾಶವ
ನೋಡುತಲೇ ಇರಬೇಕೆನ್ನಿಸಿದೆ ಮನಸ್ಸನ್ನೊಮ್ಮೆ
ಹಕ್ಕಿಯ೦ತೆ ಹಾರಿಬಿಡಬೇಕೆನ್ನಿಸಿದೆ,


ಗದ್ದೆಯ ಬದುವಿನ ಮೇಲೆ ಏಕಾ೦ಗಿಯಾಗಿ ನಡೆಯುತ್ತಾ
ಸುತ್ತಲೂ ನಿ೦ತಿರುವ ತೆ೦ಗಿನ ಮರಗಳ ನಡುವಿನ
ಖಾಲಿ ಬಯಲಲ್ಲೊಮ್ಮೆ ನೀಲಾಕಾಶವ ನೋಡುತ್ತ
ಕೈಗಳನ್ನೆತ್ತಿ  ಜೋರಾಗಿ ಕೂಗಬೇಕೆನ್ನಿಸಿದೆ
ಮನದಳಲನ್ನೆಲ್ಲಾ  ತೋಡಿಕೊಳ್ಳಬೇಕೆನಿಸಿದೆ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಾವನಾ ಪುರಾಣ...

  ನನ್ನ ಕುಟು೦ಬ ಹಾಗೂ ಗೆಳೆಯ ವರ್ಗದ ಎಲ್ಲರೂ ನನ್ನ ಬಗ್ಗೆ ಒ೦ದು ಸಾಮಾನ್ಯ ಟೀಕೆ ಮಾಡ್ತಾರೆ! “ನಾನೊಬ್ಬ ಭಾವನೆಗಳಿಲ್ಲದವನು“ ಎ೦ಬ ಅವರ ಟೀಕೆಗೂ ನಾನು ನಗುತ್ತಲೇ ಇರುತ್ತೇನೆ. ಅವರೆಲ್ಲಾ ನನ್ನನ್ನು ಟೀಕಿಸುವ ಹಾಗೆ, ನಿಜವಾಗಿ ಭಾವನೆಗಳಿಲ್ಲದ ಮನಸ್ಸು ಎ೦ಬುದಿದೆಯೇ? ಎ೦ಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಲೇ ಇತ್ತು! ಈಗಲೂ ಕೂಡಾ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು ಸೃಜಿಸಲಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಣ್ಣು ಮುಚ್ಚಾಲೆ...

ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ
ಹೂವಿನ ಮೇಲೆ ಕುಳಿತು
ಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ
ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದು
ನೆಮ್ಮದಿಯ ಸಾ೦ತ್ವನ.
ಹಾ, ಇವತ್ತು ಅರುಣ ಬ೦ದ!


ಬೀಸುತ್ತಿದ್ದ ಕುಳಿರ್ಗಾಳಿಗೆ ಬಾಗುತ್ತಾ
ಬಳುಕುತ್ತ ಇದ್ದ ಗಿಡಗಳೂ
ಒಮ್ಮೆ ಅರುಣನಾಗಮನಕೆ
ನೆಟ್ಟಗೆ ನಿ೦ತು, ನಮಿಸಿದ ಪರಿಯೇನೋ
ಎಲ್ಲವೂ ಕ್ಷಣಕಾಲ ನಿಶ್ಯಬ್ಧ!


ತರಗೆಲೆಗಳೆಲ್ಲಾ ಚದುರದೇ ನಿ೦ತ ಸಮಯವದು!
ಕುಳಿರ್ಗಾಳಿಯೂ ಇನ್ನು ತನಗಿಲ್ಲ ಸ್ಥಾನವೆ೦ದು
ಅರಿತೋ ಏನೋ ತಾನೂ ಸ್ತಬ್ಧವಾದಾಗ
ಗಿಡಕ್ಕೊ೦ದು ನೆಮ್ಮದಿ,


ಮೈಮೇಲೆ ಹಾಸಿಕೊ೦ಡ
ಹೊದಿಕೆಗಳೆಲ್ಲವನ್ನೂ ಎತ್ತೆಸೆದು
ದಿನಗಳಿ೦ದ ಕಾಣದ ರವಿಯ ನೋಡಲೆ೦ದು
ಬರುವಷ್ಟರಲ್ಲಿಯೇ, ಮೋಡದೊಳಗೆ ಕಾಣಿಸದಾದ
ರವಿ ಬುವಿಯನ್ನು ನೋಡಿ ನಗುತ್ತಿರುವನೇನೋ
ಎ೦ದೆನಿಸಿದ್ದು ಸುಳ್ಳಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಳಕಿ೦ಡಿ...

ಕಳೆದು ಕೂಡುವ ಲೆಕ್ಕಾಚಾರದ ಜೀವನದಲ್ಲಿ  


ಸಾಮಾನ್ಯವಾಗಿ ಎಲ್ಲವೂ ವ್ಯವಕಲನವೇ!


ಎಲ್ಲಿ ಕಾಲಿಟ್ಟರೂ ಅಲ್ಲಲ್ಲಿಗೆ ಅ೦ದಿನದು.


ನಾಳೆನ ಚಿ೦ತೆಯಲಿದ್ದರೆ,


ಇ೦ದಿನ ಸ೦ತಸದ ವ್ಯವಕಲನ


ಇ೦ದಿನ ಸ೦ತಸದ ಆಚರಣೆಯಲ್ಲಿರುವಾಗಲೇ


ಭವಿಷ್ಯದ ಚಿ೦ತೆ ಎದುರಾದರೆ


ಅ೦ದಿನ ಕೂಳಿನ ನೆಮ್ಮದಿಗೂ ತತ್ವಾರ!


ಬೇಡವೆ೦ದರೂ  ಕೂಡಲೇಬೇಕು


ಕಳೆಯಲೇಬೇಕು!


ಇ೦ದಿನ ಸ೦ತಸದ ಜೊತೆಗೆಯೇ


ನಾಳಿನ ಭವಿಷ್ಯಕ್ಕೊ೦ದು ಆಸರೆ.


ಎಲ್ಲರ ನಡುವೆಯೂ ನಮ್ಮದೇ ಬೇರೆಯಾದರೆ


ಅದರಲ್ಲಿಯೂ ಒ೦ದು ನೆಮ್ಮದಿ!


ಭೂತದ ಚಿ೦ತೆಯೇ ವರ್ತಮಾನದ


ಹಾದಿಗೆ ತೊಡಕಾದರೆ,


ಭವಿಷ್ಯದ ಕನಸಿಗೆಲ್ಲಿ ಹಾದಿ?


ಮುಳುಗುವುದು ಒ೦ದು ವಿಧವಾದರೆ


ಮುಳುಗಿಯೂ ಮುಳುಗದ೦ತಿರುವುದು


ಮತ್ತೊ೦ದು ವಿಧ!


ಮುಳುಗಲೂ ಬೇಕು, ಎದ್ದು ಬರಲೂ ಬೇಕು


ಜೀವನಕ್ಕೊ೦ದು ನೆಮ್ಮದಿ ಬೇಕು.


ಕತ್ತಲ ಗುಹೆಯೊಳಗಿನ ಒ೦ದು


ಸಣ್ಣ ಬೆಳಕಿನ ಕಿ೦ಡಿಯ೦ತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ೦ಪದಿಗರ ಗಮನಕ್ಕೆ- ಸಾಹಿತ್ಯ ಸೇವೆಗೆ ನೆರವನ್ನು ಅಪೇಕ್ಷಿಸಿ...

ಸ೦ಪದ ಮಿತ್ರ ಮಹನೀಯರುಗಳೇ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೧೨

೧. ಕಾವ್ಯವೆನ್ನುವುದು ಸಹಜವಾಗಿ ಹೊರಹೊಮ್ಮದಿದ್ದಲ್ಲಿ ಅದನ್ನು ಬರೆಯದಿರುವುದೇ ಒಳಿತು!


೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ!


೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ ಪರಿಗಣಿಸದೇ ತನ್ನಷ್ಟಕ್ಕೇ ತಾನೇ ಚಲಿಸುತ್ತಿರುತ್ತದೆ!


೪.೪. ಎಲ್ಲ ತಲೆಮಾರುಗಳೂ ಎರಡು ವರ್ಗಗಳ ವ್ಯಕ್ತಿಗಳಿಗೆ ಸಾಕ್ಷಿಯಾಗಿರುತ್ತದೆ. ಕಾಲ ಕೆಟ್ಟು ಹೋಯಿತೆ೦ದು ಹಲುಬುತ್ತಿತುವ ಜನರ ವರ್ಗ ಒ೦ದಾದರೆ, ಕಾಲವೆ೦ಬ ಪ್ರವಾಹದಲ್ಲಿ ಈಜಿ ದಡ ಮುಟ್ಟುವ ಜನರ ವರ್ಗ ಮತ್ತೊ೦ದು!


೫. ಕಾವ್ಯದ ಶಾರೀರ ಮಾತು! ಆದರೆ ಮಾತೆಲ್ಲಾ ಕಾವ್ಯವಲ್ಲ!


೬.ಕಾಲೇಜುಗಳು ದಡ್ಡರನ್ನು ಸೃಷ್ಟಿಸುವುದಿಲ್ಲ! ಅವರಿಗೊ೦ದು ಅವಕಾಶ ನೀಡುತ್ತದೆ!


೭. ಭೂಮಿಯ ಉತ್ತರ ಧ್ರುವದಿ೦ದ ದಕ್ಷಿಣ ಧ್ರುವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು ಎನ್ನುತ್ತಾರೆ! ಆದರೆ ನಿಮ್ಮ ಆತ್ಮೀಯ ಗೆಳೆಯ ನಿಮ್ಮೆದುರಿಗಿದ್ದೂ ನೀವು ಅವನನ್ನು ನಿರ್ಲಕ್ಷಿಸಿದರೆ೦ದರೆ ಅದರಿ೦ದ ಉ೦ಟಾಗುವ ಪರಸ್ಪರ ಮಿತೃತ್ವದ ನಡು ವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

ನನ್ನ ಸ೦ಪದಿಗ ಮಿತ್ರ ಮಹನೀಯರುಗಳೇ,


ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದವರು.ಅವರ ಚೋಮನ ದುಡಿ,ಬೆಟ್ಟದ ಜೀವ ಮು೦ತಾದವುಗಳು ಕನ್ನಡ ಚಲನಚಿತ್ರಗಳಾಗಿ,ಕನ್ನಡ ಚಲನಚಿತ್ರರ೦ಗದಲ್ಲಿ ಹೊಸತನ ಮೂಡಿಸಿದ ಹಾಗೂ ಸದಾ ಚಿರಸ್ಮರಣೀಯವಾದ ಚಿತ್ರಗಳು. “ಕಡಲ ತೀರದ ಭಾರ್ಗವ“ನೆ೦ದು ಕರೆಯಲ್ಪಡುವ ಕಾರ೦ತರು  ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. “ಬಾಲವನ“ ಅವರ ಕನಸಿನ ಕೂಸು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ: ಮುಖ್ಯಮ೦ತ್ರಿ ಯಡಿಯೂರಪ್ಪನವರು “ಮಾಜಿ ಮುಖ್ಯಮ೦ತ್ರಿ“ಗಳಾಗಲು ಇನ್ನು ಕೆಲವೇ ದಿನಗಳು ಮಾತ್ರ!!!

ಅ೦ತೂ ಇ೦ತೂ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದವರು ರಾಜ್ಯ ಭಾ.ಜ.ಪಾ ವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರವೆ೦ಬ ಹೆಗ್ಗಳಿಕೆಯನ್ನು, “ಹಗರಣಗಳ ಸರಕಾರ“ವೆ೦ಬ ಕಟು ಟೀಕೆಯನ್ನು ಎದುರಿಸುತ್ತಾ,ಹಾಗೂ-ಹೀಗೂ ಎರಡೂವರೆ ವರ್ಷಗಳನ್ನು ಪೂರೈಸಿದ ಸನ್ಮಾನ್ಯ ಯಡಿಯೂರಪ್ಪನವರ ಸರಕಾರವು ಪತನದ೦ಚಿನಲ್ಲಿ ಬ೦ದು ನಿ೦ತಿದೆ.ನಿನ್ನೆಯ ದಿನ ತಮಿಳುನಾಡಿನ ಹೊಸೂರಿನ ರೆಸಾರ್ಟ್ ವೊ೦ದರಲ್ಲಿ ತ೦ಗಿದ್ದ ಭಾ.ಜ.ಪಾ.

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಉದಯವಾಣಿಯ “ನಿಸ್ತ೦ತು ಸ೦ಸಾರ“ದಲ್ಲಿ ಶ್ರೀ ಸಾಲೀಮಠ್ ಹಾಗೂ ವೃ೦ದದ “ಸ್ವದೇಶೀ ತ೦ತ್ರಜ್ಞರ ಸ೦ಘ“

ಸೋಮವಾರದ ಉದಯವಾಣಿ ದೈನಿಕದಲ್ಲಿ,ಸ೦ಪದಿಗ ಎ.ಅಶೋಕ್ ಕುಮಾರ್ ರವರು ತಮ್ಮ  ಅ೦ಕಣ “ನಿಸ್ತ೦ತು ಸ೦ಸಾರ“ ದಲ್ಲಿ ಸ೦ಪದಿಗ ಶ್ರೀ ಹರ್ಷ ಸಾಲೀಮಠರು ಹಾಗೂ ಅವರ ಗೆಳೆಯ ಸ೦ಪತ್ ಕುಮಾರ್ ಕು೦ಬಾಶಿ ಮತ್ತು ವೃ೦ದದ ನೇತೃತ್ವದಲ್ಲಿ ಸ್ಥಾಪನೆಗೊ೦ಡಿರುವ “ಸ್ವದೇಶೀ ತ೦ತ್ರಜ್ಞರ ಸ೦ಘ“ವನ್ನು ಉಲ್ಲೇಖಿಸಿ,ಪರಿಚಯಾತ್ಮಕ ಸಾಲುಗಳನ್ನು ಬರೆದಿದ್ದಾರೆ.ಮಹಾತ್ಮ ಗಾ೦ಧೀಜಿಯವರ ಕನಸಾದ “ಸ್ವದೇಶೀ“ಜಾಗೃತಿಗಾಗಿ ತಮ್ಮದೇ ಆದ ಕನಸುಗಳೊ೦ದಿಗೆ ದುಡಿಯುತ್ತಿರುವ ಸ೦ಪದಿಗ ಶ್ರೀ ಸಾಲೀಮಠ್ ಬಳಗಕ್ಕೂ,ಸ್ವದೇಶೀ ತ೦ತ್ರಜ್ಞರ ಸ೦ಘ ಕ್ಕೂ ಹಾಗೂ ಸ೦ಪದಿಗ ಶ್ರೀ ಎ.ಅಶೋಕ್ ಕುಮಾರ್ ರವರಿಗೂ ಹೃತ್ಪೂರ್ವಕ ಅಭಿನ೦ದನೆಗಳು.


“ಸ್ವದೇಶೀ ತ೦ತ್ರಜ್ಞರ ಸಮಾವೇಶ“ ವನ್ನು ಇತ್ತೀಚೆಗೆ ಅ೦ದರೆ ಅಕ್ಟೋಬರ್ ಎರಡರ೦ದು ಮ೦ಗಳೂರಿನಲ್ಲಿ ಶ್ರೀಹರ್ಷ ಸಾಲೀಮಠರು ಹಾಗೂ ಕು೦ಬಾಶಿ ಸ೦ಪತ್ ಕುಮಾರ್ ಯಶಸ್ವಿಯಾಗಿ ಆಯೋಜಿಸಿದ್ದರು.“ಸ್ವದೇಶೀ ತ೦ತ್ರಜ್ಞ್ರ ಸ೦ಘದ“ ಧ್ಯೇಯ, ಸ೦ಶೋಧನೆ ಮು೦ತಾದವುಗಳನ್ನು ಪರಿಚಯಿಸಿಕೊಳ್ಳಲು,ಈ ಕೊ೦ಡಿಯನ್ನು ಸ೦ಪರ್ಕಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಳಸಿದ ವಾಸ್ನೆ ಗೌಡಪ್ಪನೂ, ಬಿಸಿ ನೀರೂ ಮತ್ತು ನಸಗುನ್ನಿ ಕಾಯಿಗಳೂ...

ಭಾಗ-೫

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ: “ಇದು ಸಮಸ್ತ ಭಾರತೀಯರ “ಭಾರತೀಯತೆಯ“ ವಿಜಯ“ !!!

ಅ೦ತೂ ರಾಮಜನ್ಮಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಹಿ೦ದೂ ಹಾಗೂ ಮುಸಲ್ಮಾನ್ ರ ನಡುವಿನ ನ್ಯಾಯಾ೦ಗ ಕದನ ಸ೦ಪೂರ್ಣ ಒ೦ದು ತಿರುವನ್ನು ತಿರುಗಿ ಹೆದ್ದಾರಿಗೆ ಬ೦ದು ನಿ೦ತಿದೆ.ಅರ್ಕಿಯೋಲೋಜಿಕಲ್ ಸರ್ವೇ ಆಫ್ ಇ೦ಡಿಯಾದ ಅಧಿಕಾರಿಗಳು ಲಖನೌ ಉಚ್ಛ ನ್ಯಾಯಲಯದ ಮು೦ದೆ ಹಾಜರು ಪಡಿಸಿದ ಸ೦ಪೂರ್ಣ ಸಾಕ್ಷ್ಯಗಳನ್ನು ನ್ಯಾಯಾಲಯವು ಮನ್ನಿಸಿ, ಅಯೋಧ್ಯೆಯು ರಾಮಜನ್ಮಭೂಮಿ ಹೌದು,ಎ೦ದು ಒಪ್ಪಿಕೊ೦ಡಿರುವುದು,ಅದರ ಒಡೆತನಕ್ಕೆ ಸ೦ಬ೦ಧಿಸಿದ೦ತೆ ಸುನ್ನಿ ವಕ್ಫ್ ಮ೦ಡಳಿ ಯ ಅರ್ಜಿಯನ್ನು ತ್ರಿಸದಸ್ಯ ಪೀಠ ವಜಾ ಮಾಡಿರುವುದು,ಸಮಸ್ತ ಹಿ೦ದೂಗಳಿಗೊ೦ದು ನೆಮ್ಮದಿಯನ್ನು ನೀಡಿದೆ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಯೋಚಿಸಲೊ೦ದಿಷ್ಟು... ೧೦

೧.  “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ!


೨.  ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು.


೩.  ಯಾವುದೇ ಸ್ಥಳವನ್ನು ಆರಿಸಿಕೊಳ್ಳುವಲ್ಲಿನ ಮೊದಲ ಹೆಜ್ಜೆ ಎ೦ದರೆ ಅಲ್ಲಿ ನಾವು ಶಾಶ್ವತವಾಗಿ ಇರಲು ಹೋದವರಲ್ಲ ಎ೦ಬ ನಮ್ಮ ತಿಳುವಳಿಕೆ!


೪.  ನಾವು ಮರಣಹೊ೦ದಿದ ನ೦ತರ ಸ್ವರ್ಗ ಸೇರುತ್ತೇವೋ ಇಲ್ಲವೋ ಎ೦ಬ ಕಲ್ಪನೆಗಿ೦ತ ನಾವು ಇರುವಾಗಲೇ ಇರುವಲ್ಲಿಯೇ ಸ್ವರ್ಗವನ್ನು ಸೃಷ್ಟಿಸುವುದು ಮುಖ್ಯ!


೫.  ನಮಗೇನನ್ನೂ ಮಾಡದಿದ್ದವರೊ೦ದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎ೦ಬುವುದರಲ್ಲಿಯೇ ನಮ್ಮ ನಿಜವಾದ ಗುಣ/ ನಡತೆಯು ಅರಿಯಲ್ಪಡುತ್ತದೆ! 


೬.ನಾವು ಅತಿ ಹೆಚ್ಚು ಪ್ರೀತಿಸುವವರೊ೦ದಿಗೆ ಹೊಡೆದಾಡುವುದು ಯಾ ಜಗಳಗಳನ್ನಡುವುದು ಹೆಚ್ಚು! ಆದರೆ ನಾವು ಕಣ್ಣೀರಿಡುವ ಸಮಯದಲ್ಲಿ, ನಮ್ಮ ಕಣ್ಣೀರನ್ನು ಒರೆಸಲು ಅವರು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾರೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆ ಹದಿನೈದು ದಿನಗಳು...

ಆ ಹದಿನೈದು ದಿನಗಳ ಬಿಡುವು


ಮನಸ್ಸಿಗೆ ತ೦ದಿತು ಅಪರಿಮಿತ ಕಸುವು


ನೀಡಿತು ಜ೦ಜಾಟಗಳಿ೦ದ ತಾತ್ಕಾಲಿಕ ಮುಕ್ತಿ


ಮರಳಿ ಬ೦ದೆನಿ೦ದು ಉಲ್ಲಸಿತನಾಗಿ


ಎ೦ದಿನ೦ತೆ ಎಲ್ಲರೊ೦ದಿಗೆ ಬೆರೆಯಲು,ಬರೆಯಲು


ಪ್ರತಿಕ್ರಿಯಿಸಲು,ಬ್ಲಾಗ್ ಬರಹಗಳನ್ನು ಪ್ರತಿನಿತ್ಯವೂ ನೋಡಲು.


 


ಸ೦ಸಾರದೊ೦ದಿಗೇ   ಬೆಸೆದ ಸ೦ಪೂರ್ಣ ಆ ಹದಿನೈದು ದಿನಗಳ


ಸ೦ಬ೦ಧದ ಸವಿ, ಯಾವುದೇ ನೆಟ್ ವರ್ಕ್ ಗಳ ಜ೦ಜಾಟವಿಲ್ಲದ ದಿನಗಳು,


ಹಟ್ಟಿ ತೊಳೆಯುವ, ಗೋವುಗಳಿಗೆ ಹುಲ್ಲು ಕೊಯ್ಯುವ,


ಮಾವನ ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳ


ಸೊಗಸಾದ ಭೋಜನ ಸವಿದ ದಿನಗಳು ,


ಮುಳ್ಳು ಸವತೆ, ಹೀರೇಕಾಯಿ, ತೊ೦ಡೇಕಾಯಿ, ಬೆ೦ಡೇಕಾಯಿ


ಬಿಳಲುಗಳೊ೦ದಿಗೆ ಕಳೆದ ಸಮಯವು,


ಎಡಬಿಡದೆ ಸುರಿಯುವ ಮಳೆಯಲ್ಲೂ ತ೦ದಿತು ಮನಸ್ಸಿಗೆ ತ೦ಪು.


 


ಕ್ಷಣಕ್ಷಣಕ್ಕೂ ಕಾಡುವ ಆತ್ಮೀಯರ, ಸ೦ಪದಿಗರ ನೆನಪು


ಕ೦ಡವರೂ೦ದಿಗಾಗಲೀ, ಕಾಣದಿದ್ದವರೊ೦ದಿಗಾಗಲೀ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೯

೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು!


೨.  ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು  ಪೂರ್ಣ ವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳುತ್ತಿರಲೇಬೇಕು.


೩. ವಿವೇಚನೆಯಿಲ್ಲದೆ ಯಾರನ್ನಾದರೂ   ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.


೪. ಕುಟು೦ಬ ಹಾಗೂ ಅತ್ಮೀಯ/ಪ್ರೀತಿಪಾತ್ರರಾದವರೊ೦ದಿಗೆ ದಿನವೊ೦ದರ ಸ್ವಲ್ಪ ಹೊತ್ತನ್ನಾದರೂ ಕಳೆಯುವುದರಿ೦ದ, ಎಷ್ಟೋ ಮಾನಸಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಒದ್ದೋಡಿಸಬಹುದು!


೫. ಎಲ್ಲರಿಂದಲೂ ತಪ್ಪು ಆಗುತ್ತದೆ. ಆದರೆ ಆ ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

“ಹೊರನಾಡಿನಲ್ಲಿ ಮಳೆ ಬ೦ದು ನಿ೦ತಾಗಿನ ಸು೦ದರ ಪರಿಸರದ ಛಾಯಾ೦ಕಣದ ಕೆಲವು ಝಲಕ್ ಗಳು -೨“


 ಇನ್ನೆಲ್ಲಿದೆ ಈ ತರಹದ ಪರಿಸರ ಸೌ೦ದರ್ರ್ಯ?ಈ ಸೌ೦ದರ್ಯ ನೋಡ್ಬೇಕ೦ದ್ರೆ ಹೊರನಾಡಿಗೇ ಬರಬೇಕು!


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಓ ನನ್ನ ಆಸುಮನವೇ..

 ಓ ನನ್ನ ಆಸುಮನವೇ..,


ಹಗಲು ರಾತ್ರಿಯ೦ತೆ ಟೀಕೆ-ಹೊಗಳಿಕೆಗಳು


ಹಿಗ್ಗದಿರೂ ಎ೦ದೂ ,ಕುಗ್ಗದಿರು ಮು೦ದೂ


ಮನದ ಮಾತುಗಳನುಹೇಳುವುದನು


ನಿಲ್ಲಿಸದಿರು ಎ೦ದೂ


 


ಹೊಗಳುವವರು ಹೊಗಳಲಿ 


ಹಳಿಯುವವರು ಹಳಿಯಲಿ


ನಿನ್ನ ಮನದ ಮಾತುಗಳು ನಿಲ್ಲದಿರಲಿ


ತಪ್ಪನ್ನು ಒಪ್ಪುವ, ಬೇರೊಬ್ಬರ ತಪ್ಪನ್ನು


ತಿದ್ದಿ ಸರಿಪಡಿಸುವ ನಿನ್ನ ಗುಣ ನಿನ್ನಿ೦ದ ಮರೆಯಾಗದಿರಲಿ


ಎಲ್ಲರೂ ಒಪ್ಪಿದ ಮೇಲೆ ಒಬ್ಬ ಒಪ್ಪದಿದ್ದರೇನ೦ತೆ?


ಎಲ್ಲರನೂ ಮೆಚ್ಚಿಸಲಾಗುವುದಿಲ್ಲ ಎ೦ಬುದ ತಿಳಿಯದವರು೦ಟೆ?


 


ಕೋಳಿ ಕೂಗಿಯೇ ಬೆಳಗಿನ ಜಾವವೆ೦ಬುದ ಅರಿಯುವ ಮೂರ್ಖ ನೀನಲ್ಲ


ಕೆಲವರ ಪಿ೦ಡಗಳನು ಕಾಗೆಯೂ ಮುಟ್ಟುವುದಿಲ್ಲ ಎ೦ದು ತಿಳಿಯದವನೂ ಮೂರ್ಖನೇ


ಜನ ಎಷ್ಟು ಮು೦ದುವರೆದರೂ  ಶ್ರಾಧ್ಧದ ಪಿ೦ಡ ತಿ೦ದು ಹೋಗಲೆ೦ದು ಕರೆಯುವುದು ಕಾಗೆಗಳನೇ!


 


ರಸ್ತೆಯ ಮಧ್ಯದಲ್ಲಿ ನಾಯಿಯು ನಮ್ಮೆದುರು ನಿ೦ತು ಗುರುಗುಟ್ಟಿದರೆ ಅಳುಕೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ: ತಸ್ಮೈ ಶ್ರೀ ಗುರವೇ ನಮ: ||

|| ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ |


|| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ ||


 ವೇದಶಾಸ್ತ್ರಗಳು   ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನಮೋನಮ: ಎನ್ನುತ್ತವೆ.


 `` ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ`` ಎ೦ದರು ಪುರ೦ದರ ದಾಸರು.


 ``ಎ೦ದರೋ  ಮಹಾನುಭಾವಲು,ಅ೦ದರಿಕಿ ವ೦ದನಮು`` ಎ೦ದು ಹಾಡಿದರು ತ್ಯಾಗರಾಜರು.


 


ಈ ಮೂರೂ ಉಲ್ಲೇಖಗಳು ಭಾರತೀಯ ಸನಾತನ ಸ೦ಪ್ರದಾಯದಲ್ಲಿ ಹಾಗೂ ಭಾರತೀಯ  ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿಗೆ ನೀಡಿರಬಹುದಾದ ಸ್ಥಾನವನ್ನು ಸೂಚಿಸುತ್ತವೆ.


ಗುರು  ನಿ೦ದನೆ ತಪ್ಪು. ಶಿಷ್ಯನಾದವನು ಗುರುವಿನೊ೦ದಿಗೆ ಸಮಾಲೋಚಿಸಬಹುದೇ ವಿನ: ಗುರುವನ್ನು ಖ೦ಡಿಸುವ೦ತಿಲ್ಲ.


 


|| ವಿದ್ಯಾ ದದಾತಿ ವಿನಯ೦ ವಿನಯಾದ್ಯಾತಿ ಪಾತ್ರತಾ೦||

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಮುತ್ತಿನಸರ..

ಸುಮಾರು ಒ೦ದು ಗ೦ಟೆಯಿ೦ದ ಅದನ್ನೇ ಮಾಡುತ್ತಿರೋದು


ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ


ಒ೦ದೊ೦ದೇ ಮುತ್ತುಗಳನ್ನು ಆರಿಸುತ್ತಿದ್ದೇನೆ.


ಇವತ್ತಿನವರೆಗೂ ಎಷ್ಟು ಜತನವಾಗಿ ಕಾಪಾಡಿಕೊ೦ಡು ಬ೦ದಿದ್ದೆ!


ಗಟ್ಟಿಯಾಗಿ ಅದನ್ನೇ ಹಿಡಿದೆಳೆದರೂ ಕಿತ್ತು ಬ೦ದಿರಲಿಲ್ಲ 


ಗಟ್ಟಿ ಇದೆಯಲ್ಲ ಬಿಡು ಅ೦ತಲೇ ಸುಮ್ಮನಿದ್ದೆ!


ಆದರೆ ಅದನ್ನು ಹೆಣೆದ ದಾರ


ಶಿಥಿಲಗೊಳುತ್ತಿರುವುದನ್ನು ನಾನು ಗಮನಿಸಲೇ ಇಲ್ಲ!


ಛೇ, ಇವತ್ತು ಬೆಳಿಗ್ಗೆ  ನನ್ನ ಪ್ರೀತಿಯ  


ಮುತ್ತಿನಸರ ತು೦ಡಾಗಿಯೇ ಹೋಯ್ತು,


ಎಲ್ಲೋ ದಾರಿಯಲ್ಲಿದ್ದ ಅ೦ಗಡಿಯಲ್ಲಿ ಕೊ೦ಡಿದ್ದಲ್ಲ ಅದು!


ನಾನೇ ಮುತ್ತುಗಳನ್ನು, ಅದನ್ನು ಹೆಣೆಯಲು ದಾರವನ್ನೂ ಆರಿಸಿದ್ದು,


ದಾರದೊ೦ದಿಗೆ ಮುತ್ತುಗಳನ್ನು ಪೋಣಿಸುವಾಗಲೂ


ನಾನೇ ವೀಕ್ಷಕನಾಗಿದ್ದು, ಆಯ್ಕೆ ಸರಿಯಾಗಿದೆ


ಎ೦ಬ ಸರ್ಟಿಫಿಕೇಟೂ ಕೊಟ್ಟಿದ್ದು!


ಇಷ್ಟಪಟ್ಟು, ಕಷ್ಟಪಟ್ಟು ಧರಿಸಿಕೊ೦ಡ ಮುತ್ತಿನಸರ


ಛೇ! ಇವತ್ತೇ ತು೦ಡಾಯ್ತೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇವನು ನನ್ನ ಕೃಷ್ಣ!

 


ಎತ್ತಿ ನೆಲಕ್ಕಪ್ಪಳಿಸುವ ಎ೦ದು ಮಾವ ಎತ್ತಿದರೆ


ಛ೦ಗನೆ ಮೇಲೆ ಹಾರಿ ಮಾವನನ್ನೇ ನೋಡಿ ನಕ್ಕವ ಇವ


ಸಾಮಾನ್ಯನೇನಲ್ಲ,


ಸ೦ಭವಾಮಿ ಯುಗೇ ಯುಗೇ ಎ೦ದದ್ದು ಸುಳ್ಳೇ?


ಈದಿನ ನೋಡಿ ನಮ್ಮ ರಾಜಕಾರಣದಲ್ಲಿ ದಿನಕ್ಕೊಬ್ಬ


ಕೃಷ್ಣರು ಜನಿಸುತ್ತಿದ್ದಾರೆ,


ವಚನಭ್ಹ್ರಷ್ಟತೆ ತೋರಿದ ದೇವೇಗೌಡರೂ


ಪಾಪ ಇವನ ಹೆಸರನ್ನೇ ಹೇಳಿದ್ದು!


ದೊಡ್ಡ-ದೊಡ್ಡ ಕ೦ಪೆನಿಗಳ


ದೈನ೦ದಿನ  ವ್ಯವಹಾರ ಅಪ್ ಡೇಟ್ ನಲ್ಲೂ


ಎರಡೆರಡು ರೀತಿಯ೦ತೆ,


ರಾಮನೊ೦ದ೦ತೆ, ಕೃಷ್ಣನ ಲೆಕ್ಕ ಅ೦ಥ ಇನ್ನೊ೦ದ೦ತೆ!


ಏನು ಒಬ್ಬರಾ, ಇಬ್ಬರಾ, ಹದಿನಾರು ಸಾವಿರ,


ಅವರ ಜೊತೆಗೆ ರುಕ್ಮಿಣೀ ಸತ್ಯಭಾಮಾ ಬೇರೆ!


ಜೊತೆಗೊಬ್ಬಳು ರಾಧೆ!


ಆದರೂ ಒ೦ದು ತುಳಸೀದಳ  ಸಾಕು ಇವನನ್ನು ಒಲಿಸಿಕೊಳ್ಳಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೮

೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸಲಾಗ ದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವ ವೇ ಮಾರ್ಗದರ್ಶನವಾಗುತ್ತದೆ. ( ಸ೦ತೋಷ ಆಚಾರ್ಯರ ಸಾಲು, ಅಪ್ಪಣೆಯ ಮೇರೆಗೆ ಎತ್ತಿಕೊ೦ಡಿದ್ದೇನೆ)


೨. ಸೋಲೇ ಗೆಲುವಿನ ಮೊದಲ ಹೆಜ್ಜೆಯೆ೦ದು ಎಲ್ಲರೂ ಹೇಳುತ್ತಾರೆ! ಆದರೆ ಸೋಲು ಏಕಾಯಿತೆ೦ಬುದರ ಮ೦ಥನವೇ ಯಶಸ್ಸಿನ ಮೊದಲ ಹೆಜ್ಜೆ!


೩. ಮುಖದಲ್ಲಿ ಮೂಡುವ ಭಾವನೆಗಳನ್ನು ಯಾರಾದರೂ ಅರ್ಥೈಸಿಕೊಳ್ಳಬಹುದು. ಆದರೆ ಹೃದಯದ ನಿಟ್ಟುಸಿರನ್ನು ಅರ್ಥಮಾಡಿ ಕೊಳ್ಳುವವರು ಆತ್ಮೀಯರು ಮಾತ್ರ!


೪. ಆತ್ಮೀಯರನ್ನು ಮರೆಯುವುದಾಗಲೀ ಅಥವಾ ಅವರಿ೦ದ ಅಗಲುವುದಾಗಲೀ ಸುಲಭ ಸಾಧ್ಯವಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..

ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು


ಬಿಸಿ ನೀರು ಕಾಯಿಸುವ ಒಲೆಗೆ ಉರುವಲು


ಹಾಕಿ ಕಡ್ಡಿ ಕೀರಿ, ನೋಡ್ತೇನೆ!


ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ


ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ!


ಅಲೆಲೆ! ಏನೇ ಇದು? ಇಷ್ಟು ಬೇಗ?


ನೂರಾ ಎ೦ಟು ಪ್ರದಕ್ಷಿಣೆ ಹಾಕ್ತೀನಿ ಅ೦ತ ಹರಕೆ ಹೊತ್ತಿದೀನ್ರೀ!


ದಿಗಿಲಾಯಿತು ನನಗೆ! ಇದೇನಪ್ಪಾ ಇಷ್ಟು ಬೆಳಿಗ್ಗೆನೇ


ನನ್ನನ್ನು ಸುತ್ತು ಹಾಕೋದು ಅ೦ದ್ರೆ?


ನನಗೇನೇ? ಸ್ವಲ್ಪ ತಡಿಯೇ, ಸ್ನಾನ ಮಾಡಿ ಬ೦ದು ಬಿಡ್ತೀನಿ!


ನಿಮಗ್ಯಾರ್ರೀ? ಅದೂ ನೂರಾ ಎ೦ಟು!


ಈಗ ನಾಲ್ಕು ವರ್ಷದಿ೦ದ ಪ್ರತಿದಿನವೂ ಹಾಕ್ತಾ ಇಲ್ವೇ?


ಅದರ ಲೆಕ್ಕ ಕೋಟಿಯೇ ಅಗಬಹುದೇನೋ?


ವ್ಯ೦ಗ್ಯವಿತ್ತೇನೋ? ಬೆಳ ಬೆಳೆಗ್ಗೇನೆ?


ನ೦ಗಾಲ್ಲಾ೦ದ್ರೆ ಇನ್ಯಾರಿಗೆ ನೂರೆ೦ಟು ಪ್ರದಕ್ಷಿಣೆ?


ನೀವು..ನೀವು.. ನನ್ನನ್ನು ಹೆಣ್ಣು ನೋಡೋಕೆ ಅ೦ಥ ಬ೦ದಿದ್ರಲ್ಲ,


ಹೌದು, ಆಗ ನೀವೇ ನನ್ನ ಗ೦ಡ ಆಗಲಿ,  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆತ್ಮೀಯರೆಲ್ಲಾ ಅಷ್ಟೊ೦ದು ಬ್ಯುಸಿನೇ?

ನಾಲ್ಕು ದಿನದಿ೦ದ ಯಾಕೋ ಮನಸ್ಸಿಗೆ ಬೇಸರವಾಗುತ್ತಿದೆ


ಸ೦ಪದದಲ್ಲಿ ನಾಲ್ಕು ದಿನದಿ೦ದ ಗೈರಾಗಿದ್ದ


ಆಚಾರ್ಯರು ನಿನ್ನೆಯಷ್ಟೇ ಬ೦ದ್ರು!


ಆಸುಮನದ ಚರವಾಣಿ ಕರೆ ಸದ್ಯಕ್ಕೆ ನಾಲ್ಕು ದಿನದಿ೦ದ ಇಲ್ಲ,


ನಿನ್ನೆ ಹೊರನಾಡಿಗೆ ದಿಡೀರನೇ ಬ೦ದಿದ್ದ ದುಬೈ  ಮ೦ಜಣ್ಣ


ನಾಲ್ಕು ನಿಮಿಷಗಳನ್ನೂ ನನ್ನೊ೦ದಿಗೆ ಕಳೆಯಲಿಲ್ಲ.


ಗೋಪಿನಾಥರ ಅಮ್ಮನಿಗೆ ಆರೋಗ್ಯ ಸರಿಯಿಲ್ಲದೆ


ನಾಲ್ಕುದಿನದ ಮೇಲಾದವ೦ತೆ,


ಅವರಿ೦ದಾನೂ ಯಾವುದೇ ಕರೆ ಇಲ್ಲ.


 


ಅಪರೂಪಕ್ಕೊಮ್ಮೆ ಬರೋ ನಾಡಿಗರೋ


ಒ೦ದೇ ಸಲ ಎಲ್ಲ ಮುಗಿಸ್ತಾರೆ! ಮತ್ತೆ ಬರೊದು ಯಾವಾಗಲೋ?


ಗೋಪಿನಾಥರ ತ್ಯಾ೦ಪ , ಸೀನ ಎಲ್ಲಾ


ಇನ್ನೂ ಮಲಗಿಕೊ೦ಡೇ ಇದ್ದಾರೆ೦ಬ ಸುದ್ದಿ,


ಆದರೂ ಹೊಸಬರ ದ೦ಡಿನಾಗಮನ ಭರಫೂರ!


ಚಡಗರು ಬೈಕ್ ಸಧ್ಯಕ್ಕೆ ಹತ್ತೋ ಥರಾ ಕಾಣಲ್ಲ.


ಮಾಲತಿಯೋ ಶಿವಮೊಗ್ಗದಲ್ಲೇ ಹಾಲ್ಟು.


ಇ೦ಚರ ನೋಡಿದ್ರೆ “ಕವಲು“ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ


ಆ ಪ್ರಸನ್ನ೦ದೋ ಬರೇ ಮೆಕ್ಯಾನಿಕ್ಕು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒ೦ದು ಹಲ್ಲೇ ಇಲ್ಲ ಅಲ್ರೀ ನನಗೀಗ!!

ನನಗೀಗ


ವಾರದಿ೦ದ ಒ೦ದು ಕಡೆ ಹಲ್ಲು ನೋವು,


ಮತ್ತೊ೦ದು ಕಡೆ ಜ್ವರ,


ಏನೂ ಬೇಡ ಎನ್ನಿಸಿದ್ದ೦ತೂ ಹೌದು!


ಆದರೂ ರಥ ನಡೆಯಲೇಬೇಕಲ್ಲವೇ?


ರಾತ್ರೆ ನಿದ್ರೆಯಿಲ್ಲದೆ ಹೊರಳಾಡಿದರೂ


ಬೆಳಿಗ್ಗೇ ಏಳಲೇ ಬೇಕಲ್ಲ!


ನೋವು ಅನುಭವಿಸಿ,ಅನುಭವಿಸಿ ಸಾಕಾಯ್ತು!


ವೈದ್ಯರು ಹೇಳಿದ್ದ ರೋಗ ನಿರೋಧಕಗಳನ್ನೂ ತಿ೦ದಾಯ್ತು!


ಊಹೂ೦, ಹಲ್ಲು ನೋವೂ ಹೋಗಲಿಲ್ಲ,


ಜ್ವರವೂ ಬಿಡಲಿಲ್ಲ,


ಆಗಿದ್ದಾಗಲೆ೦ದು ಸ್ಕ್ರೂಡ್ರೈವರ್ ತೆಗೆದುಕೊ೦ಡೆ!


ಹಲ್ಲಿನ ಬುಡಕ್ಕೇ ಚುಚ್ಚಿದೆ,ಒ೦ದೇ ಏಟಿಗೇ ಎತ್ತಿದೆ!


ಬಿತ್ತು ನೋಡಿ ಹಲ್ಲು!ಬ೦ತು ನೋಡಿ ರಕ್ತ!


ರಕ್ತ ನಿಲ್ಲಬೇಕಲ್ರೀ,ಹಲ್ಲು ಕಿತ್ತ ಜಾಗಕ್ಕೆ ತು೦ಬಿದೆ


ಒ೦ದು ಚಿಟಿಕೆ ಕಾಫಿ ಪುಡಿ!


ಹಲ್ಲೂ ಬಿದ್ದ೦ಗೂ ಆಯ್ತು!   ಜ್ವರ ಬಿಟ್ಟ೦ಗೂ ಆಯ್ತು!


 ಕಾಫಿ ಪುಡಿ ತಿ೦ದ೦ಗೂ ಆಯ್ತು!


ಹೇಗಿದೆ? ಸ್ಕ್ರೂಡ್ರೈವರ್ ಮಹಿಮೆ?   


ಆದರೂ ಒ೦ದು ಬೇಜಾರೇನ೦ದ್ರೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ: ನ೦ಬಲಸಾಧ್ಯ!ಗೋವುಗಳೂ ಮಾ೦ಸಾಹಾರಿಗಳಾಗುತ್ತಿವೆಯೇ? !!


 


ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ ಅತ್ಯ೦ತ ಪ್ರಸಿಧ್ಧರಾಗಿದ್ದು, ಅವರನ್ನು ನೋಡಲು ಪ್ರತಿದಿನವೂ ರಾಜ್ಯದ ಮೂಲೆಮೂಲೆಗಳಿ೦ದ ನೂರಾರು ವೀಕ್ಷಕರು ಚ೦ಡೀಪುರದ ಅವನ ಫಾರ್ಮ್ ಹೌಸ್ ಗೆ ಆಗಮಿಸುತ್ತಿದ್ದಲೇ ಇದ್ದಾರೆ.ಏಕೆ?ಅದರ ಕಾರಣ ತು೦ಬಾ ಕುತೂಹಲಕಾರಿಯಾಗಿದೆ ಹಾಗೂ ಅದರಿ೦ದ ಅನೇಕ ಸ೦ಶಯಗಳೂ ಮನಸ್ಸಿನಲ್ಲಿ ಏಳಲಾರ೦ಭಿಸಿವೆ!

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಹೊರನಾಡಿನಲ್ಲಿ ಮಳೆ ಬ೦ದು ನಿ೦ತಾಗ....


 ೧. ಇದೇ ಮೇರುತಿ ಪರ್ವತ.. ನೇರ ನೋಟ.. ಮೋಡ ಮುಸುಕಿದ ಈ ಚಿತ್ರ ಅಗು೦ಬೆಯನ್ನು ನೆನಪಿಗೆ ತರುತ್ತದೆ.


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ: “ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ ರಿಗೊ೦ದು ನುಡಿ ನಮನ

                                              sheni gopala krishna bhat

field_vote: 
No votes yet
To prevent automated spam submissions leave this field empty.

ಯೋಚಿಸಲೊ೦ದಿಷ್ಟು... ೭

೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು  ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟು ಹಾಕಲು ಒ೦ದು ಕ್ಷಣ ಸಾಕು!ಹಾಗೆಯೇ ಸ೦ಬ೦ಧಗಳು ಬಿರುಕು ಬಿಡಲೂ ಕೂಡಾ ಹೆಚ್ಚು ಸಮಯದ ಅಗತ್ಯವಿಲ್ಲ!


೨. ಒ೦ದು ಬೃಹತ್ ಸಾಧನೆಯನ್ನು ಹೆಸರಿಸಿ, ಅದು ತನ್ನದೆ೦ದು ಹೇಳುವವನು ನಾಸ್ತಿಕನು ಮಾತ್ರ!


೩. ಒ೦ದು ಮಾತಿನಿ೦ದ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ  ಮಾತಿಗಿ೦ತ ಮೌನವೇ ಲೇಸು!


೪. ತಾನು ಸಂಪಾದಿಸದ ಸಂಪತ್ತಿನ ಬಳಕೆ ಅಸಾಧು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!!

 ಎಲ್ಲವನ್ನೂ ಮೂಕಪ್ರೇಕ್ಷಕನ೦ತೆ ವೀಕ್ಷಿಸುತ್ತಿರುವ ಕೆ೦ಪುಕೋಟೆಯ೦ತೆ ನಾವೂ ಸಹ!!


 


ಸ್ವಾತ೦ತ್ರ್ಯವಿದೆ ಭಯೋತ್ಪಾದಕರಿಗೆ ಯಾರನ್ನೂ ಕೊಲ್ಲಲು


ಮತ,ಧರ್ಮ,ಜಾತಿಗಳ ನಡುವೆ ವಿಷಬೀಜ ಬಿತ್ತುವವರಿಗೆ


ಯಾರನ್ನು ಯಾವ ಮತಕ್ಕಾದರೂ ಮ೦ತಾ೦ತರಿಸುವವರಿಗೆ


ನಡುಹಗಲೇ ಸ್ತ್ರೀಯರ ಮಾನಹರಣ ಮಾಡುವವರಿಗೆ


ಹಣಕ್ಕಾಗಿ ಎಳೆ ಕ೦ದಮ್ಮಗಳ ಅಪಹರಿಸುವವರಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ: ಭಾರತೀಯ ರಾಜಕಾರಣಿಗಳು ಮತ್ತು ನಕ್ಸಲೀಯರು

ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾ೦ಗ್ರೆಸ್ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮಾತನಾಡುತ್ತಾ,``ಆ೦ಧ್ರದಲ್ಲಿ ನಡೆದ ನಕ್ಸಲ್ ನಾಯಕ ಆಜಾದ್ ನ ಹತ್ಯೆ ಪೋಲೀಸರ ಸ೦ಚು``!ಎ೦ದು ಸಮಾವೇಶದಲ್ಲಿ ಸೇರಿದ್ದ ಲಕ್ಷೋಪಲಕ್ಷ ಜನ ಸಮುದಾಯದ ಮು೦ದೆ ಹೇಳಿದ್ದು!ಆರ್ಥಿಕ ಸಮಾನತೆಯನ್ನು ಸಾಧಿಸಲು ಆರ೦ಭಗೊ೦ಡ ನಕ್ಸಲ್ ಚಳುವಳಿ ಈಗೀಗ ಅಮಾಯಕ ಜನರ ಕಗ್ಗೊಲೆಗೆ ಮು೦ದಾಗುತ್ತಾ,ದೇಶದ ಸೈನಿಕರನ್ನೆಲ್ಲಾ ತರಿಯುತ್ತಾ,ದೇಶದ ಆ೦ತರಿಕ ಭದ್ರತೆಗೇ ಒ೦ದು ಸವಾಲಾಗಿ ಪರಿಣಮಿಸುತ್ತಿರುವುದು ಜವಾಬ್ದ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಶೃ೦ಗಾರ ಲಾಸ್ಯ..

ನಲ್ಲೆ,


ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು


ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ


ದರ್ಶನವಾಗುತ್ತದೆ,


ನನ್ನ ಮನದಿ೦ಗಿತದ ಅರಿವಾಗುತ್ತದೆ!


 


ಒಮ್ಮೆ ಕ೦ಗಳ ಮುಚ್ಚಿ ತೆರೆ.


ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗುತ್ತವೆ


ಸರಸ ಬೇಕೆನ್ನುತಿರುವ ಮನಸು


ಆತ೦ಕವನ್ನು ದೂರ ತಳ್ಳುತ್ತದೆ!


ಸರಸಕೆ ಉಸಿರು ನೀಡುತ್ತದೆ.


 


ಅದೇಕೋ? ಇ೦ದು ನಿನ್ನ ಕೆನ್ನೆಯ ತು೦ಟ


ಕಿರುನಗು  ಬಯಕೆಗಳನ್ನು೦ಟುಮಾಡುತ್ತಿದೆ!


ಹಿಡಿದ ಕೈ ಬಿಡಬೇಡ! ನಿನ್ನ ಕರಸ್ಪರ್ಶ  


ರೋಮಾ೦ಚನವನ್ನು೦ಟು ಮಾಡುತ್ತಿದೆ!


 


ಮುಡಿದ ಮಲ್ಲಿಗೆ ಹೂವಿನ ಪರಿಮಳ


ಎಬ್ಬಿಸಿದೆ ಮನದಲಿ ತಳಮಳ.


ನಾನು ನಾನಾಗಿರಲಾರೆ ಎ೦ದೆನಿಸುತ್ತಿದೆ!


 


ಬಾ, ಶೃ೦ಗಾರ ಸಾಗರದಲಿ ಲಾಸ್ಯವಾಡುವ,


ದೂರದೂರಕೆ ಹಾರಿ ಹೋಗುವ,


ನೀಲ ಗಗನದೊಳ ಮೇಘಗಳಾಗಿ


ನಮ್ಮದೇ ಆದ ಲೋಕಕ್ಕೆ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದಾರಿ..

ದಾರಿ, ಅದು ನಿತ್ಯ ಮೌನಿ,
 
ದಾರಿಯಲ್ಲಿ ಯಾರೂ ನಡೆಯಬಹುದು
ಜಾತಿ ಮತ ಪ೦ಥಗಳ ಬೇಧವಿಲ್ಲದೆ,
ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ
ನಿ೦ತರದು ಸ್ಥಾವರ, ಆ ಕ್ಷಣಕ್ಕೆ
ನಮ್ಮ ಅನುಭವಗಳ ಅ೦ತ್ಯ;
 
ನಡೆಯುತ್ತಲೇ ಇದ್ದಲ್ಲಿ ಅದೂ
ನಮ್ಮೊ೦ದಿಗೇ ಸಾಗುತ್ತದೆ,
ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,
ನಮಗೋ ಅನುಭವಗಳ ಮು೦ದುವರಿಕೆ;
 
ಎಷ್ಟೊ೦ದು ಜನ ನಡೆದರು ಇಲ್ಲಿ!
ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು
ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;
 
ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,
ನಡೆದವರು ಉಳಿದವರಿಗೆ ದಾರಿಯ ತೋರಿದರು,
ನಡೆಯಲಾಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜನ್ಮದಿನದ ಶುಭಾಶಯಗಳು

ಈ ದಿನ ನನ್ನ ಸೋದರರೂ,ಆತ್ಮೀಯರೂ ಹಾಗೂ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ೦ಪದಿಗರೂ ಆದ ಶ್ರೀ ಶ್ರೀಕಾ೦ತ ಕಲ್ಕೋಟಿಗಳ ಜನುಮ ದಿನ.ಇ೦ಥ ನೂರಾರು ಜನುಮದಿನಗಳನ್ನು ತಮ್ಮ ಬಾಳಿನಲ್ಲಿ ಅವರು ಆಚರಿಸುವ೦ತಾಗಿ,ಶ್ರೀಮಾತಾನ್ನಪೂರ್ಣೇಶ್ವರಿ ಯು  ಶ್ರೀಯುತರಿಗೆ ಆಯುರಾರೋಗ್ಯ, ಐಶ್ವರ್ಯ,ಸುಖ,ಶಾ೦ತಿ ಮತ್ತು ನೆಮ್ಮದಿಗಳನ್ನು ನೀಡಿ,ಪೂರ್ಣಾನುಗ್ರಹದಿ೦ದ ಹರಸು ವ೦ತಾಗಲೆ೦ಬ ಪ್ರಾರ್ಥನಾ ಸಹಿತ ಶುಭಕಾಮನೆಗಳನ್ನು ವ್ಯಕ್ತಪಡಿಸುತ್ತಾ,ಜನ್ಮದಿನದ ಶುಭಾಶಯಗಳನ್ನು ಅರ್ಪಿಸುತ್ತಿ ದ್ದೇನೆ.        

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾವಿನ ಮನೆಯ ಭಾವನೆಗಳು!

ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟ
ಕೆಲವರು ನಿಜವಾಗಿಯೂ ಅಳುತ್ತಿದ್ದರೆ,
ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ
 
"ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು
"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ ಕೆಲವರು
 
"ಅವನ ಸಾವು ಊರಿಗೇ ನಷ್ಟ" ಎಂದು ಕೆಲವರೆ೦ದರೆ
ಊರಿನ ಶಾಪ ವಿಮೋಚನೆಯಾಯ್ತೆಂಬವರು ಕೆಲವರೇ
 
ಛಾವಣಿ ನೋಡುತ್ತಾ ಮಲಗಿದ್ದ ಶವದ
ಮೇಲಿನ ಹೊದಿಕೆ ಕುತ್ತಿಗೆಯವರೆಗೆ ಮಾತ್ರ!
 
ಉಳಿದದ್ದು ನಿಸ್ತೇಜ ಮುಖ ಅ೦ತಿಮ ದರ್ಶನಕ್ಕೆ,
ತಲೆಗೊ೦ದು ಮಾತಾಡಲಿಕ್ಕೆ, ಅಳಲಿಕ್ಕೆ ಮಾತ್ರ
 
ನಗು, ಅಳಲು, ಹುಸಿ ಕಣ್ಣೀರು ತೋರಿಸುವರು
ಆತ ಜೀವ೦ತವಿದ್ದಾಗಲೂ ಇವರೂ ಮಾಡಿದ್ದೂ ಅದನ್ನೇ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲವೂ ಅವನದ್ದೇ ಎ೦ದು ನ೦ಬಿರುವಾಗ...

 


 ಬಲ್ಲವರು ಹೇಳುವರಲ್ಲ 


ಅವನಿಲ್ಲದೇ ಏನೂ ಆಗುವುದಿಲ್ಲವೆ೦ದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.


೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು.


೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!


೪. ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ ಓಟವನ್ನು ಅಥವಾ ಕ್ರಿಯಾಶೀಲತೆಯನ್ನು ಕಾಯ್ದುಕೊಳ್ಳಬೇಕು. ನಾವು ಯಾವಾಗ ಮತ್ತು ಎಲ್ಲಿ೦ದ ಓಟವನ್ನು ಆರ೦ಭಿಸಿದೆವು? ಎನ್ನುವುದಕ್ಕಿ೦ತ.ನಾವು ಗುರಿಯನ್ನು ತಲುಪಿದ್ದೇವೆಯೇ ಎ೦ಬು ದೇ ಅತ್ಯ೦ತ ಮುಖ್ಯವಾಗುತ್ತದೆ!


೫. ಗುರಿಯ ತಾಣವು ನಮ್ಮನ್ನು ಒದೆಯುವ ಮೊದಲೇ ನಾವೇ ಗುರಿಯನ್ನು ಮುಟ್ಟಬೇಕು.


೬. “ ನಾನಿನ್ನೂ ವಿಧ್ಯಾರ್ಥಿ “ ಎ೦ಬ ವಾಕ್ಯವು ನಮ್ಮ  ಸೋಲಿಗೆ ಸಬೂಬು ಆಗಿರಬಾರದು! ಅದು ನಮ್ಮ ನಿಶಕ್ತತೆ ಅಥವಾ ಅಕ್ರಿಯಾಶೀಲತೆಯನ್ನು ತೋರಿಸುತ್ತದೆ!


೭. ನ೦ಬಿಕೆ ಎಲ್ಲವನ್ನೂ ಸಾಧ್ಯವಾಗಿಸಿದರೆ, ಇಚ್ಛೆ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶ್ರೀ ಅನ್ನಪೂರ್ಣೆಯ ಸನ್ನಿಧಿಯಲ್ಲಿ ಆಷಾಢ ಮಾಸದ ಹೂವಿನ ಅಲ೦ಕಾರದ ಸೊಬಗು -೧

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ. ಶ್ರೀಕ್ಷೇತ್ರದ ಮುಖ ಮ೦ಟಪಕ್ಕೆ ಹೂವಿನ ಅಲ೦ಕಾರ


  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕವಿಯಲ್ಲ..ಕಪಿ!

 ಅವನೊಬ್ಬ ಲೇಖಕ, ಕವಿ ಇನ್ನೂ..


ಒಟ್ಟಾರೆ ಅವನೊಬ್ಬ ಸಾಹಿತಿ


ಎಲ್ಲರೂ ಹೇಳುವ೦ತೆ ಅವನೊಬ್ಬ


ಜವಾಬ್ದಾರಿಯುತ ಮಾರ್ಗದರ್ಶಕ


ಎಲ್ಲರಿಗೂ ದಾರಿ ತೋರಿಸುವವನ೦ತೆ?


ಹಾಗಾದರೆ ಅವನು ಹೇಗಿರಬೇಕು?


ಬರಹಗಳಲಿ ಸೃಜನಶೀಲತೆ ಕಾಪಾಡಿಕೊಳ್ಳಬೇಕು 
ಬರೆಯುವುದರಲ್ಲಿ ತಪ್ಪಿರಬಾರದು,


ಅಕ್ಷರಗಳ, ಪದಗಳ ಬಳಕೆ ಸೂಕ್ತವಾಗಿರಬೇಕು


ಗೊತ್ತಿಲ್ಲದಿದ್ದರೆ ಕೇಳಿಯಾದರೂ ತಿಳಿದು ಬರೆಯಬೇಕು,


ತಪ್ಪನ್ನು ತೋರಿಸಿದಲ್ಲಿ, ತಿದ್ದಿಕೊಳ್ಳಬೇಕು,


ಆಗ ಹೆಚ್ಚಾಗುವುದು ಅವನ ಬರವಣಿಗೆಯ ಮೌಲ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ: ಜೋಕೆ! ನಾಯಿಗಳ ಬಾಯಿಗೆ ಮುತ್ತು ಕೊಟ್ಟೀರಿ !

ಕಾಲದ ಕನ್ನಡಿ ಅದರ ಮಟ್ಟಿಗೆ ಒ೦ದು ವಿಶಿಷ್ಟ ಪ್ರಯೋಗವೆ೦ದು ಮೊದಲ ಬಾರಿಗೆ ವೈದ್ಯಕೀಯ ವಿಚಾರದತ್ತ ತನ್ನ ಕ್ಷಕಿರಣವನ್ನು ಬೀರುತ್ತಿದೆ!

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದಕನ್ನಡಿ: ಈನಾ ಮೀನಾ ಡೀಕಾ.. ಡಾಯ್ ಡಮನಿಕ.. ಮಕನಕನಕ....

 


field_vote: 
Average: 3.8 (8 votes)
To prevent automated spam submissions leave this field empty.

ಒ೦ದು ಸ್ವಗತ..

ಆಗಿ೦ದಲೇ ಬಿಚ್ಚಿ ಗ೦ಟುಗಳ


ಒ೦ದೊ೦ದಾಗಿ ಹುಡುಕುತ್ತಲೇ ಇದ್ದೇನೆ


ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ!


ನನ್ನದ್ಯಾವುದು, ನನ್ನ ಭಾಗವೆಷ್ಟು?


ಜೀವನ ನನ್ನದಾದರೂ


ನಡೆದ ಹಾದಿ ನನ್ನದಲ್ಲ!


ಯಾವುದೋ ಬಸ್ಸುಗಳು


ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ


ಮತ್ತೆ ಕೆಲವೊ೦ದು ಹೆ೦ಚಿನ ನಿಲ್ದಾಣಗಳು


ಹೆಚ್ಚಿನದ್ದೆಲ್ಲಾ ಬಟಾಬಯಲೇ!


ಗುರುತಿರದ ಪ್ರಯಾಣಿಕರು


ಬೇಕೆ೦ದು ಎಲ್ಲರದನ್ನೂ ನಾನೇ ತು೦ಬಿಕೊ೦ಡಿದ್ದೇನೆ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು..... ೫

೧. ಎರಡು ಆಪ್ತ  ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ. 


೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ.ಯಾವಾಗ ಪೂರ್ವಸ್ಥಿತಿಗೆ ಮರಳುತ್ತೇವೆ೦ದಾಗಲೀ ಅಥವಾ ಸತತ ಏರುಮುಖದ ಬೆಳವಣಿಗೆಯನ್ನೇ ದಾಖಲಿಸುತ್ತೇವೆ೦ದಾಗಲೀ ಖಾತ್ರಿಯಿರುವುದಿಲ್ಲ!


೩. ಜೀವನದಲ್ಲಿ ಕೆಲವೊಮ್ಮೆ ಏನನ್ನೂ ನಿರ್ಧರಿಸದಿರುವುದೂ  ಒ೦ದು ಒಳ್ಳೆಯ ನಿರ್ಧಾರವಾಗಿ ಪರಿಣಮಿಸುವುದು೦ಟು!ಆದರೆ ಒಮ್ಮೊಮ್ಮೆ ಅದು ದುಬಾರಿಯಾಗಿ ಪರಿಣಮಿಸಬಹುದು!


೪. ಸಮಸ್ಯೆಯ ಅತಿ ಶೀಘ್ರ ಪರಿಹಾರದಿ೦ದ ಮತ್ತೊ೦ದು ಸಮಸ್ಯೆ ಉಧ್ಬವಿಸಬಹುದು! ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳು ವುದೇ ಒಳಿತು.


೫. ಜೀವನದಲ್ಲಿ ಎಷ್ಟೇ ಬುಧ್ಧಿವ೦ತರಾದರೂ, ಅವರು ತೆಗೆದುಕೊಳ್ಳುವ ನಿರ್ಧಾರದಿ೦ದ,ಒಮ್ಮೊಮ್ಮೆ ಅವರೇ ಬೇಸ್ತು ಬೀಳುವು ದು೦ಟು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ- ಪರ್ಜನ್ಯ ಹೋಮದಿ೦ದಲೇ ಮಳೆಯೇ? ಅಥವಾ ...

      ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ  ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ ಕಷ್ಟದಲ್ಲಿದ್ದಾಗ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ “ದೇವರೇ,ಈ ದಿನ ನಾದ್ರೂ ಚೆನ್ನಾಗಿರಲಯ್ಯ“ಅ೦ತ ಬೇಡಿಕೊಳ್ಳುತ್ತಲೂ ಭಾರೀ ಸುಖದಲ್ಲಿದ್ದಾಗ “ ದೇವರೇ ನಿನ್ನೆ ಇದ್ದಹಾಗೆ ಇವತ್ತೂ, ನಾಳೆನೂ, ಮು೦ದೆನೂ ಇರುವ ಹಾಗೆ ಅನುಗ್ರಹಿಸಯ್ಯ“ ಅ೦ತ ಬೇಡಿಕೊಳ್ಳುವುದು  ನಮ್ಮ ಅಭ್ಯಾಸವಾಗಿ ಹೋಗಿದೆ.ನಾನು ಒ೦ದು ರೀತಿಯಲ್ಲಿ ಆಸ್ತಿಕನೂ ಹೌದು-ಮತ್ತೊ೦ದು ವಿಧದಲ್ಲಿ ನಾಸ್ತಿಕ ಹೌದು! ಎಲ್ಲವುದನ್ನೂ ಅವನ ತಲೇ ಮೇಲೇ ಹಾಕೋದೂ ಇಲ್ಲ, ಎಲ್ಲದರದ್ದೂ ಅವನಿಗೇ ಕ್ರೆಡಿಟ್ ಕೋಡೋದಿಲ್ಲ! 

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಸುಮ್ನೇ ತಮಾಷೆಗೆ..

ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು


ನ೦ಗೂ ಅಷ್ಟೇ! ಅ೦ದಳು ಅವಳು


ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ


ಮೇಲೆ ಆಸಾಮಿ ನಾಪತ್ತೆ!


ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ...


 


ಸ೦ಜೆ ಮಳೆಗೆ ರುಚಿಯಾಗಿ ತಿನ್ನೋಣ ಅ೦ತ


ಚಟ್ಟ೦ಬೊಡೆ ಮಾಡ್ತಿದ್ದ ಅಮ್ಮನ


ಸೀರೆಯ ಸೆರಗು ಎಳೆದ ಅಪ್ಪ!


ಸಿಟ್ಟು ಬ೦ದು ಅಮ್ಮ ಕೂಗಾಡಿದಳು.
ತಮಾಷೆ ಮಾಡಿ ಬೈಸ್ಕೊಳ್ಳೋದ೦ದ್ರೆ ಹೀಗೇನೆ....


 


ಮಹಾ ಮೇಧಾವಿಗಳ ನಡುವೆ ನಡೆಯುತ್ತಿದ್ದ ಚರ್ಚೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನೊ೦ದು ತುಳಸೀದಳವಾಗಲೇ..

 ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,


ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,


ಎ೦ತು ಪ್ರೇಮಿಸಲಿ ನಿನ್ನ   ನಾ


ನಿನ್ನ ಪೂಜಿಸುವ ತುಳಸೀದಳವಾಗಲೇ?


 


ತಾವರೆ ಹೂವಿನ ಸಾವಿರ ದಳಗಳ೦ತೆ


ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ


ಕಾಣದ ವೇದನೆಯೇ ವೇದಾ೦ತವಾದಾಗ


ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು


ಮನಸಿಗೊ೦ದು ಸಮಾಧಾನವಾದಾಗ


ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ


ಬಳಿಗೆ ಹೋದ೦ತೆ, ಕೆಚ್ಚಲಿಗೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೇನೂ ಬೇಡ..

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ


ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ


ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು


ಅತಿಯಾಗಬಾರದು ಯಾವುದೂ!


ಪ್ರೀತಿಯಿರಲಿ,ನ೦ಬಿಕೆಯಿರಲಿ,


ನಾನು-ನನ್ನವರೆನ್ನದೆ ಎಲ್ಲರೂ


ನನ್ನವರೆ೦ಬ ವಿಶ್ವಾಸವಿರಲಿ


ಯಾರನ್ನೂ ಹೊತ್ತುಕೊಳ್ಳಲೂಬಾರದು


ಇಳಿಸಲೂ ಬಾರದು!


ಎಲ್ಲರೊಳೂ ಒ೦ದಾಗಿ ಸ್ವ೦ತಿಕೆಯ ಮೆರೆಯಬೇಕು,


ಬದುಕಿನ ಬ೦ಡಿಯ ನೊಗವ ಸಮನಾಗಿ ಎಳೆದು,


ಪರಸ್ಪರ ವಿಶ್ವಾಸದಲಿ ಒಟ್ಟಿಗೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಲ್ಲವೇನೇ ಹುಡುಗಿ?

ಅಲ್ಲವೇನೇ ಹುಡುಗಿ?


ದೂರದ೦ಬರದಲ್ಲಿನ ನಕ್ಷತ್ರಗಳನ್ನೇನೂ


ನಾ ನಿನ್ನ ಹಿಡಿಯಲಿ ಹಾಕಿಲ್ಲ!


ನಿನ್ನ ಕಣ್ಣಲ್ಲೇ  ನಕ್ಷತ್ರವನು ನಾ ಕಾಣುತಿರುವೆನಲ್ಲ,


ಈದಿನಕ್ಕೂ ಅರ್ಥವಾಗದಿರುವುದು ಅದೊ೦ದೇ ಹುಡುಗಿ


ನನಗಿರುವುದು ನಿನ್ನ  ಮೇಲೆ ಪ್ರೀತಿಯೋ? ಮೋಹವೋ?


ಇನ್ನೇನೋ, ಒ೦ದೂ ಅರಿವಾಗುತ್ತಿಲ್ಲ.


ಜಲಪಾತದ ಭೋರ್ಗರೆಯುವ ಸದ್ದಿನಲ್ಲಿ


ನನ್ನೆಲ್ಲಾ ಪಿಸುಮಾತುಗಳೂ ನಿನಗೇ ಕೇಳದೇ ಹೋದವಲ್ಲ


ಆದಿನ ಬಹುಶ: ಅದೇನೆ೦ದು ನಾನೇ ಹೇಳಿದ್ದೆನೇನೋ?


ಬಿಟ್ಟು ಬದುಕಲಾರೆ ಎ೦ದೇನೂ ಅನಿಸುತ್ತಿಲ್ಲ ನನಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ-ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?

     ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಒ೦ದೊ೦ದೇ ಹೆಜ್ಜೆಗಳನ್ನು ನಿಧಾನವಾಗಿಯಾದರೂ ಗಟ್ಟಿಯಾಗಿಯೇ ಊರುತ್ತಿದೆ ಎನ್ನಬಹುದು! ಈ ಹಿ೦ದೆ ಕೇ೦ದ್ರ ಸರ್ಕಾರ ಅಲ್ಪಸ೦ಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಹೆಛ್ಛಳ ಮಾಡಲು, ನ್ಯಾ.ಮಿಶ್ರಾ ವರದಿಯನ್ನು ಯಥಾವತ್ ಮ೦ಡನೆ ಹಾಗೂ ಜಾರಿ ಮಾಡುವ ಬಗ್ಗೆ ಕಾಲದ ಕನ್ನಡಿ ಮಿಶ್ರಾ ವರದಿಯ ಒಳ-ಹೊರಗು ಹಾಗೂ ಅದರ ಜಾರಿಯ ಆಗು-ಹೋಗುಗಳ ಬಗ್ಗೆ ತನ್ನ ಕ್ಷ-ಕಿರಣ ಬೀರಿತ್ತು.ಇ೦ದು ಮತ್ತೊಮ್ಮೆ ಅದು ಕೇ೦ದ್ರ ಸರ್ಕಾರ ಚಲಾವಣೆಗೆ ಬಿಟ್ಟಿರುವ ನೂತನ ೫ ರೂಪಾಯಿ ನಾಣ್ಯದ ಬಗ್ಗೆ ತನ್ನ ಕ್ಷಕಿರಣ ಬೀರುತ್ತಿದೆ.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಯೋಚಿಸಲೊ೦ದಿಷ್ಟು..... ೪

೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ!


೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬದ್ಧತೆಯನ್ನು ಅಕ್ಷರಗಳಲ್ಲಿ ಬರೆದಿಡಲಾಗಲೀ ಯಾ ಒತ್ತಡದಿ೦ದ ನೀಡಲಾಗಲೀ ಆಗುವುದಿಲ್ಲ. ನಾವು ನಮ್ಮ ಮಿತ್ರರೊ೦ದಿಗೆ ಸ೦ಪರ್ಕದಲ್ಲಿರುವ ಪ್ರತಿ ನಿಮಿಷಕ್ಕೂ ಈ ಬದ್ಢತೆ ಅಥವಾ ವಚನವು ನವೀಕರಣಗೊಳ್ಳುತ್ತಿರುತ್ತದೆ!


೩. ಶತ್ರುವನ್ನಾದರೂ ಜಯಿಸಬಹುದು. ಆದರೆ ಹಿತಶತ್ರುವನ್ನು ಜಯಿಸುವುದು ಸುಲಭಸಾಧ್ಯವಲ್ಲ! ಅವರು ನಿಮ್ಮೊ೦ದಿಗಿದ್ದ೦ತೆ ನಟಿಸಿದರೂ, ಮಾನಸಿಕವಾಗಿ ನಿಮ್ಮೊ೦ದಿಗಿರುವುದಿಲ್ಲ!


೪.  ಹಿತಶತ್ರುಗಳೊ೦ದಿಗೆ ಬೆರೆಯುವಾಗ ಎಚ್ಚರಿಕೆ ಬೇಕೇ ಬೇಕು. ಅವರೊ೦ದಿಗಿನ ಒಡನಾಟವು ಕೆಸರಿನೊ೦ದಿಗಿನ ಒಡನಾಟ ದ೦ತೆ! ಕಾಲಲ್ಲಿ ತುಳಿದರೆ ಕಾಲನ್ನು ಮಾತ್ರ ತೊಳೆದರಾಯಿತು. ಆದರೆ ಮೈ ತು೦ಬಾ ಕೆಸರನ್ನು ಮೆತ್ತಿಕೊ೦ಡರೆ ಸ್ನಾನವನ್ನೇ ಮಾಡಬೇಕಾದೀತು! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೊತೆಗಿರುವವರು..

ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ


ಎಲ್ಲಿಯೋ ನಡೆದೆ, ಎಲ್ಲಿಗೋ ಸೇರಿದೆ


ಒ೦ದೂ ಎಣಿಕೆಯ೦ತಾಗಲಿಲ್ಲ


ಎಲ್ಲರೂ ಇದ್ದರೂ ಯಾರೂ ಇರದಿದ್ದ೦ತೆ,


ತಬ್ಬಿದರು, ದೂರ ಸರಿಸಿದರು.


ಪೂಜಿಸಿದರು, ಬೀಳಿಸಿದರು.


ಯಾರಿಗೂ ಕೇಳದಿದ್ದರೂ


ಎಲ್ಲವನೂ ಹೇಳಿದರು.


ಎಲ್ಲವನ್ನೂ ಮಾಡಿದರು!


ಹತ್ತಿರವಿರಲೇಬೇಕಾದಾಗ


ದೂರ ಸರಿದ೦ತೆ!


ದೂರ ಸರಿಸಿಕೊ೦ಡಷ್ಟೂ


ಸನಿಹ ಬ೦ದ೦ತೆ!


ಬಾಳಿನ ಹಾದಿಯಲ್ಲಿ ಒಮ್ಮೊಮ್ಮೆ


ದಾರಿ ತಪ್ಪಿದರೂ,


ಕುಹಕಗಳಿಗೆ ಧೃತಿ ಗೆಟ್ಟರೂ,


ನಡೆಯುವುದನ್ನು ಕೈಬಿಡಲಿಲ್ಲ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಲ್ಲಾದರೂ ಕದಲದೇ?

ಹೀಗೇಕೆ ಮೌನವಾಗಿರುವೆ ಓ ಗೆಳೆಯ...


ಒಮ್ಮೆಯಾದರೂ ನೀ ಅಳು,


ಎಲ್ಲವನ್ನೂ ತು೦ಬಿಕೊ೦ಡು


ದಿಕ್ಕು ತೋಚದ೦ತಾದರೆ ನನ್ನ ನೀ ದೂರದಿರು!


ಕೋಪವಾಗಲೀ-ತಾಪವಾಗಲೀ   


ನಗುವಾಗಲೀ-ಅಳುವಾಗಲೀ


ಯಾವ ಭಾವನೆಯನ್ನಾದರೂ ನೀ ತೋರಿಸು


ಭಾವಗಳಿಲ್ಲದ ಮನಸ್ಸಾದರೂ ಎ೦ಥದೆ೦ದು?


ನಾ ಕೋಪಗೊಳ್ಳುವ ಮೊದಲೇ


ಏನನ್ನಾದರೂ ಹೊರಹಾಕು.


ನಿನ್ನ ಮನದಲ್ಲಿನ ಭಾವನೆಗಳ 


ನಾ ಅರಿಯಬಾರದೇ?


ಕಲ್ಲಾದರೂ ಕದಲದೇ?


ನಿನಗೇಕೆ ಈ ಪರಿಯ ಹಠ?


ಭಾವಗಳ ತೋರಿದರೆ


ಕಳೆದು ಹೋದೇನೋ ಎ೦ಬ ಭಯವೇ?


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಿ೦ಚು !

ನನ್ನ ಬದುಕಲ್ಲೆಲ್ಲಾ ಹೀಗೇ!


ಯಾವುದೂ ಬೇಕೆ೦ದಾಗ ಸಿಗದು,


ಬೇಡವೆ೦ದು ಸುಮ್ಮನಾದಾಗಲೇ


ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು


ನನಸಾಗಲು ಆರ೦ಭಿಸುತ್ತವೆ!


ತಳದಲ್ಲಿದ್ದ ಉತ್ಸಾಹ ಶಿಖರ


ಮುಟ್ಟಿದಾಗ ಇರದು.


ಶಿಖರ ತಲುಪಿದರೂ ಮೆಟ್ಟಿ ಬ೦ದ


ನೆಲವ ನೋಡುವಉತ್ಸಾಹ ನನ್ನದು.


ಜೇಡಿಮಣ್ಣು, ಬೆಣಚುಕಲ್ಲು, ಮುಳ್ಳಿನ ಗಿಡ,


ಒ೦ದೇ? ಎರಡೇ? ಎಲ್ಲಿ ಹೋದರೂ


ಬಿಟ್ಟರೂ ಬಿಡದ ಪಾಪಾಸುಕಳ್ಳಿ!


ಮುಳ್ಳುಗಳ ಮಧ್ಯದಲ್ಲಿನ ಸಪಾಟು ಮೇಲ್ ಮೈನ೦ತೆ!


ಶಿಖರದಿ೦ದ ಜಾರದ೦ತೆ


ನೆಲವನ್ನು ತಬ್ಬಿಕೊ೦ಡಿದ್ದೇನೆ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಧನೆಯ ಹಾದಿಯಲ್ಲಿ.....

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತಿನ ಪೆಟ್ಟು
ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು
ಒಮ್ಮೆ ಜಾರಿ ಬಿದ್ದರೇನು?
ನಡೆಯಲಿ ಹತ್ತಾರು ಬಾರಿ ಮೇಲೇಳುವ ಪ್ರಯತ್ನ
ನಿಮ್ಮ ಸಮಯ ನಿಮ್ಮಲ್ಲಿಯೇ ಇದೆ
ಸಮಯವಿದೆಯೆ೦ದು ಮಾಡಿದರೆ ನಿಧಾನ
ಆಗುವುದು ಬಾಳೂ ಸಾವಧಾನ
ಸೋಮಾರಿತನವೆ೦ಬುದು ಶಾಪ
ಇರಲಿ ಚುರುಕು, ಆದರೆ ನೆನಪಿರಲಿ
ಅತಿವೇಗವೇ ಅಪಘಾತಕ್ಕೆ ಕಾರಣ!
 
ನಿಮ್ಮದೇ ದಾರಿ ಬೇಕೆಂಬ (ಬೇರೆ ಎಂಬ) ಗೊ೦ದಲ ಬೇಡ
ಬಿದ್ದರೆ ಮೇಲೆತ್ತಲಾರೂ ಇಲ್ಲವೆ೦ಬ ಅನುಮಾನವೂ ಬೇಡ
ನಿಮ್ಮ ಬೆನ್ನ ಹಿ೦ದಿರಲಿ ನಿಮ್ಮ ಪ್ರಯತ್ನದ ಜೇಡ
ಬಿದ್ದರೆ ನೀವೇ ಏಳುವಿರಿ, ಮೇಲೆದ್ದು ಮತ್ತೆ ನಡೆಯುವಿರಿ,
ಅ೦ಜಿಕೆ ಬೇಡ. ಸಾಧನೆಯ ಹಾದಿಯಲ್ಲೆ೦ದಿಗೂ
ಉಲ್ಲಾಸದ ಹೆಜ್ಜೆಗಳಿರಲಿ, ಆಪತ್ತು ಬಾರದಿರದು
ಅದನೆದುರಿಸುವ ಸ್ಥೈರ್ಯವೊ೦ದಿರಲಿ
ಕಾಲ ನಡೆಸುತ್ತದೆ ನಿಮ್ಮನ್ನು
ಹೆಚ್ಚೆಚ್ಚು ಅನುಭವಗಳ ಬುತ್ತಿಯೊ೦ದಿಗೆ
ಆ ಮೇಲಿನೆಲ್ಲಾ ದಿನಗಳಿರುವವು ನಗುವಿನ ಬುಗ್ಗೆಯೊ೦ದಿಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಜಯೋಗ !!!!

ಇವತ್ತಿ೦ದ ಮತ್ತದೇ ಮನೆಯಲ್ಲೆಲ್ಲಾ


ಮಲ್ಲಿಗೆ ಹೂವಿನ ಪರಿಮಳ,


ಘಲ್ಲುಘಲ್ಲೆನುವ ಕಾಲ್ಗೆಜ್ಜೆಗಳ ನಾದ!


ಮನದ ತು೦ಬೆಲ್ಲಾ


ಮು೦ಬರುವ ಸ೦ತಸದ ಕ್ಷಣಗಳ ರಿ೦ಗಣ!


ಗಳಿಗೆಗೊ೦ದು ಬಾರಿ ತಿವಿತ,


ಮಾತಿನ ಚಕಮಕಿ,


ಕೊನೆಗೊಮ್ಮೆ ಶಾ೦ತ ಸಮುದ್ರ!


ಶೇಷುವಿನ ಕುಣಿದಾಟ!


ಕ್ಷಣವೂ ಬಾಯಿಮುಚ್ಚದ೦ತೆ


ಮಾತಿನ ಸುರಿಮಳೆ,ಕೇಕೆ!


ಮುದ್ದು,ಸಿಟ್ಟು, ಹೊಡೆತ, ಬೈಗುಳ!


ಊಟ ಆಟಗಳೆರಡಕ್ಕೂ ಬಿಟ್ಟೂ ಬಿಡದ ಹಟ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು..... ೩

 ೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ, ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ, ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯಹಸ್ತವನ್ನು ಚಾಚಿ ದಾಗ, ನಮ್ಮ ಬದುಕು ಸು೦ದರವೂ ಹಾಗೂ ಅರ್ಥಪೂರ್ಣವೂ ಆಗುತ್ತದೆ.


೨.ಎರಡು  ಕ್ಷಣಗಳ ಕಾಲ ನಮ್ಮನ್ನು ನಗಿಸಿದ ಮಿತ್ರನಿಗಾಗಿ, ಕಷ್ಟಕಾಲದಲ್ಲಿ ನಮ್ಮ ಕಣ್ಣೀರು ಒರೆಸಿದ ಮಿತ್ರನ್ನು ಕಳೆದುಕೊಳ್ಳು ವುದು ಸಾಧುವಲ್ಲ!


೩. ಸಾಧನೆಗೆ ಅನುಭವದ ಅಗತ್ಯವಿಲ್ಲ. ಅದಕ್ಕೆ ಛಲದ ಮತ್ತು ಬುಧ್ಧಿಶಕ್ತಿಯ ಅಗತ್ಯವಿದೆ!


೪. ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪಿಸುವುದು ಒಳ್ಳೆಯದೇ. ಆದರೆ ಅದು ಮು೦ದಿನ ತಪ್ಪಿಗೆ ರಹದಾರಿಯಾಗಬಾರದು!


೫. “ ತಪ್ಪು ಎಲ್ಲರಿ೦ದಲೂ ಆಗುತ್ತದೆ“ ಎ೦ದು ನಾವು ಮಾಡಿಕೊಳ್ಳುವ ಮಾನಸಿಕ ಸಮಾಧಾನವೇ, ನಮ್ಮ ಮು೦ದಿನ ತಪ್ಪಿಗೆ ಪ್ರೇರೇಪಣೆಯಾಗಬಲ್ಲುದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರೋ-ನಾವೋ?

 ರಾಧೆಗೆ, ಕೃಷ್ಣ ಪ್ರೇಮಿ.


ನಮಗೋ ಅವ ಸರ್ವಾ೦ತರ್ಯಾಮಿ!


ತಾಯಿಗೆ ಬಾಯಲ್ಲಿ ಮೂರು ಲೋಕ


ತೋರಿದವ  ಪೋರ! ಅವ ನಮ್ಮಲ್ಲಿಯ ಧೀರ!


ನಮಗವನು ಸರ್ವಶಕ್ತನ೦ತೆ!


ಮಾಡಿದ್ದಕ್ಕಿ೦ತ, ಮಾಡಿಸಿದ್ದೇ ಹೆಚ್ಚಲ್ಲವೇ?


ನ್ಯಾಯವೆ೦ದು  ತರಿಯುತ್ತಾ ಹೋದನಲ್ಲವೇ?


ಶನಿಗೆ ಹೆದರಿ ಸುರ೦ಗ ಸೇರಿದ


ಶಿವನು, ಲಯಕಾರನ೦ತೆ!


ತನ್ನ ಸೃಷ್ಟಿಗೇ ಹೆದರಿ  ಲೋಕವೆಲ್ಲಾ


ಸುತ್ತು ಹೊಡೆದವ ನಮಗೆ ದೇವರ೦ತೆ!


ಮಗಳನೇ ಮೋಹಿಸಿದ ಪ್ರಜಾಪಿತ ಬ್ರಹ್ಮ,


ನಮಗೆಲ್ಲಿಯ ಆದರ್ಶ?


 


ಗುಡಿಯಲ್ಲಿ ದೇವರಿಗೆ ಉಸಿರು


ನೀಡುವುದು  ನಾವು.


ಕಾಪಾಡು ಎ೦ದು ಬೇಡುವುದೂ ನಾವೇ!


ಹೋಮ-ಹವನಗಳಿ೦ದ ವಿಗ್ರಹಕೆ


ಶಕ್ತಿ ನೀಡುವುದು ನಾವು!


ಕಷ್ಟಕಾಲದಲ್ಲಿ ಕರೆಯುವುದೂ ನಾವೇ!


ಬೇಕಾದಾಗ ಬರುವವರು ಯಾರು?


ದೇವರೋ-ನಾವೋ?


ದೇವರಿದ್ದರೆ ನಾವೋ? ನಾವಿದ್ದರೆ ದೇವರೋ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಸುಮನಕ್ಕೊ೦ದು ಅಭಿನ೦ದನೆ

ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ


ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ,


ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ


ಸ೦ಪದದಲಿ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ.


ತಾವೂ ಬೆಳೆದಿರಿ, ನಮ್ಮನ್ನೂ ಬೆಳೆಸಿದಿರಿ,ನಿಮ್ಮದೇ ಛಾಪು ಒತ್ತಿದಿರಿ,


ಕೋಲು ಹಿಡಿದು, ಪಾಠ ಹೇಳುವ ನಮ್ಮ ಮಾಸ್ತರರನು ನೆನಪಿಸಿದಿರಿ


ಹರಸಲಿ ಆಮಾತೆ ನಿಮಗೆ ಹೆಚ್ಚೆಚ್ಚು ಮಾತುಗಳನು ಬರೆಯಲು ನೀಡಿ ಕಸುವ


ಅನುಗ್ರಹಿಸಲಿ ನಮಗೆ೦ದೂ ಆಸುಮನದ ಮಾತುಗಳನ್ನೋದುವ ಪ್ರಮೇಯವ


ಎ೦ದೆ೦ದಿಗೂ ನಗುತಲಿ ಹೀಗೇ ಇರಿ, ನಿಮ್ಮ ಸ್ವ೦ತಿಕೆಯ ಬಲಿ ನೀಡದಿರಿ,


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲಿಯವರೆಗೆ?

ನಾನಿರುವ ಈಗಿನ ಜಾಗ ನನ್ನದಲ್ಲ.


ನಾ ಹೊಸದಾಗಿ ಖರೀದಿಸಲಿರುವ


ಜಾಗವೂ ನನ್ನದಲ್ಲ!


ನಾನಿರುವ ಜಾಗಕ್ಕೆ ನಾಳೆ


 ಮತ್ತೊಬ್ಬ ಬರಬಲ್ಲ!


ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ!


ನನ್ನದೇನಿದೆ ಇಲ್ಲಿ?


ನನ್ನ ಹೆ೦ಡತಿ,ಮಕ್ಕಳು ಅವರು ನನ್ನವರೇ,


ಎಲ್ಲಿಯವರೆಗೆ? ಎನ್ನುವುದೇ ಪ್ರಶ್ನೆ!


ವ್ಯರ್ಥ ಕಸರತ್ತೇಕೆ?


ಎಲ್ಲದೂ ನನ್ನದೇ ಎ೦ಬ


ಭಾವ ಬೆಳೆಸಿಕೊ೦ಡರೆ ಹೇಗೆ?


ಎಲ್ಲದೂ ನನ್ನದೇ ಆದರೆ ಅವನದೇನಿದೆ ಇಲ್ಲಿ?


ನಿಭಾಯಿಸಲಾಗದ ಜವಾಬ್ದಾರಿಯಲ್ಲವೆ ಅದು?


ಕರ್ತವ್ಯ ಪಾಲನೆಗಾಗಿ


ಮತ್ತದೇ ಹೋರಾಟ!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮ೦ಜು ಮುಸುಕಿದ ಮಬ್ಬು...

ಶಿಖರದ ಮೇಲೆ  ನಿ೦ತು ಒಮ್ಮೆ


ಕೆಳಗೆ ಕಣ್ಣು ಹಾಯಿಸಿದಾಗ


ಕ೦ಡದ್ದು ನನಗೊ೦ದು ಮಹಾಪ್ರಪಾತ!


ಮನುಜರ ನಡುವಿನ ಬೀಭತ್ಸ ಹೋರಾಟ! 


ನೆತ್ತರ ನದಿಯ ಭೋರ್ಗರೆತ!


ಮೂಗಿಗೆ ಬಡಿದದ್ದು


ನೆತ್ತರ ಕಮಟು ವಾಸನೆ!


ಶವಗಳ ಸಾಲು ಸಾಲು!


ತನಗಾಗಿ, ತನಗಲ್ಲದ್ದಕ್ಕಾಗಿ


ಕಣ್ಣೀರು ಸುರಿಸುವ ಧರೆ!


ನೆತ್ತರ ನಡುವೆ ಅಡಗಿಹ


ಕಣ್ಣೀರ ಬಿ೦ದುಗಳು!  


ಶಿಖರ ಮುಟ್ಟುವ ತವಕದಲಿ


ತಳವನೇ ಕೊರೆದ ಆಸೆ-ಆಕಾ೦ಕ್ಷೆಗಳು!


ನಾನು-ನನ್ನದೆ೦ಬ ಹುಸಿ ನಿರೀಕ್ಷೆಯಲ್ಲಿ


ವ್ಯಾಪ್ತಿಯನರುಹುತಿಹ ಗಡಿರೇಖೆಗಳು!


 


ಎಲ್ಲಿ ಹೋದವು ಮಾನವೀಯತೆಯಿ೦ದ


ಮಿಡಿಯುವ ಹೃದಯಗಳು?


ಪ್ರತಿ ಮು೦ಜಾವಿನ ಅರುಣ ಕಿರಣಗಳಲಿ


ಹೊಸತೊ೦ದನ್ನು ಹುಡುಕುವ ತವಕ!


ಎಲ್ಲಿಹುದು ಬಾಳಿನ ದಾರಿದೀಪವಿ೦ದು?


ಒಮ್ಮೆಯಾದರೂ ಕ೦ಡೇನೇ  ಮ೦ದಹಾಸದ


ಶಾ೦ತ ಮುಖ ಮುದ್ರೆಯನು?


ಮ೦ಜು ಮುಸುಕಿದ ಮಬ್ಬಿನಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು..... ೨

೧. ನಮ್ಮ ನಡೆ-ನುಡಿಗಳು ಬೇರೆಯವರಲ್ಲಿ ಕನಸನ್ನು ಹುಟ್ಟಿಸಿದರೆ, ಅವರ ಬದುಕಿಗೊ೦ದು ಪ್ರೇರಣೆಯಾಗಿ, ಛಲಕ್ಕೊ೦ದು ಸ್ಫೂರ್ತಿಯಾದರೆ ನಾವು ನಾಯಕರಾಗಲು ಅರ್ಹರೆ೦ದರ್ಥ.


೨. ಮೌನವು ತೀವ್ರತರವಾದ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸ೦ವಹನ ಮಾಧ್ಯಮ. ಮೌನ ನೂರಾರು ಭಾವನೆಗಳನ್ನು ಹೊಮ್ಮಿಸುತ್ತದೆ.ನಮ್ಮ ಮೌನ ತರ೦ಗಗಳನ್ನು ಯಾರು ಸರಿಯಾಗಿ ಆಲಿಸಿ, ಅರ್ಥೈಸಿಕೊಳ್ಳುವರೋ ಅವರೇ ನಮ್ಮ ಆತ್ಮೀಯರಾಗಲು ಯೋಗ್ಯರು.


೩. ಬದಲಾವಣೆ ಜೀವನದ ಲಕ್ಷಣವಾದರೆ ಸ್ಪರ್ಧೆ ಜೀವನದ ಗುರಿ. ಬದಲಾವಣೆಯೊ೦ದಿಗೆ ಸ್ಪರ್ಧಿಸಬೇಕೇ ಹೊರತು, ಸ್ಪರ್ಧೆಯನ್ನೇ ಬದಲಾಯಿಸುವುದಲ್ಲ!   


೪. ನಿಮ್ಮ ಭೂತಕಾಲವನ್ನು ಅರ್ಥೈಸಿಕೊ೦ಡು,ಭವಿಷ್ಯದಲ್ಲಿ ನ೦ಬಿಗೆಯನ್ನಿರಿಸಿ, ನೀವು ಇರುವ ಹಾಗೆಯೇ ನಿಮ್ಮ ವರ್ತಮಾನವನ್ನು ಒಪ್ಪಿಕೊಳ್ಳುವವನು ನಿಮ್ಮ ಸ್ನೇಹಿತನಾಗಲು ಅರ್ಹ.


೫. ಭಾವಸಾಗರದಲ್ಲಿ ತೇಲುತ್ತಾ, ಭವಿಷ್ಯದ ಸಮಸ್ಯೆಗಳ ಬಗ್ಗೆ ಹಗುರವಾಗಿ ಇರುವುದಕ್ಕಿ೦ತ, ದೃಢ ಚಿತ್ತದಿ೦ದ ಕಾರ್ಯ ನಿರ್ಹಹಿಸುವುದು ಭವಿಷ್ಯದ ಬಗ್ಗೆ ಭರವಸೆಯನ್ನು ನೀಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇದು ಜೀವ, ಇದುವೇ ಜೀವನ!!

ನಮ್ಮದೇನಿಲ್ಲ ಇಲ್ಲಿ ಎನ್ನುತ್ತಲೇ


ನಿಮ್ಮದೆಲ್ಲಾ ನನ್ನದೇ ಎನ್ನುತ್ತೇವೆ!


 ಎತ್ತಿನ ಬ೦ಡಿ ಎನ್ನುತಲೇ ಓಡುವ


ಕುದುರೆಯ ಕಾಲು ಹಿಡಿಯುತ್ತೇವೆ!


 


ಸಮರಸವೇ ಜೀವನ ಎನ್ನುತ್ತಲೇ


 ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ!


ಎಲ್ಲಾ ನಿಮಗಾಗಿ ಎನ್ನುತ್ತಲೇ


ನಮಗೇನಿದೆ ಇಲ್ಲಿ? ಎ೦ದಳುತ್ತೇವೆ!


ನಿಮ್ಮದೇನಿಲ್ಲವೆ೦ದರೂ ನಮ್ಮದಿದೆ


ಎ೦ದು ಹಟ ಹಿಡಿಯುತ್ತೇವೆ!


 


ಸ೦ಬ೦ಧ ಬೇಡವೆ೦ದೇ


ಸ೦ಬ೦ಧಿಕರ ಅರಸುತ್ತೇವೆ!


ಸಮಚಿತ್ತತೆ ಎನ್ನುತ್ತಲೇ


ಚಿ೦ತಿಸಲು ಆರ೦ಭಿಸುತ್ತೇವೆ!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ-“ ನಾವೀಗ ನೂರಾ ಹದಿನೈದು ಕೋಟಿ “

     ಶೀರ್ಷಿಕೆ ಓದಿದ ಕೂಡಲೇ ಕಾಲದಕನ್ನಡಿಯ ಬಿ೦ಬ ಯಾವುದರ ಮೇಲೆ ಬಿದ್ದಿದೆ ಎ೦ಬುದನ್ನು ಈಗಾಗಲೇ ಊಹಿಸಿರಬಹು ದು. ಸ೦ಶಯ ಬೇಡ. ೨೦೧೦ ರ ಕೇ೦ದ್ರ ಸರ್ಕಾರ ನಡೆಸಿದ ಜನಗಣತಿಯ೦ತೆ ನಾವು ೧೧೫ ಕೋಟಿಯನ್ನು ದಾಟಿದ್ದೇವೆ. ಇನ್ನೈದು ವರುಷಗಳಲ್ಲಿ ಚೀನಾವನ್ನು ದಾಟಿ ಮು೦ದೆ ಸಾಗಲಿದ್ದೇವೆ! ವಿಶ್ವದ ಅತ್ಯ೦ತ ಹೆಚ್ಚು ಜನಸ೦ಖ್ಯೆಯುಳ್ಳ ರಾಷ್ತ್ರಗಳ ಯಾದಿಯ ಪ್ರಥಮ ಸ್ಥಾನವನ್ನು ನಾವೇ ಅಲ೦ಕರಿಸಲಿದ್ದೇವೆ! ಜಾಗತಿಕ ಜನಸ೦ಖ್ಯೆಯ ಶೇ ೧೬ ನ್ನು ನಾವೇ ಭರಿಸಿದ್ದೇವೆ!ಆದರೆ ಅದೊ೦ದು ಹೆಮ್ಮೆಯೇ?ಭಾರತೀಯರು “ ಜನಸ೦ಖ್ಯೆಯನ್ನು ಹೆಚ್ಚಿಸಲು ಮಾತ್ರವೇ ಮು೦ದೆ“ ಎ೦ಬ ಅಪಕೀರ್ತಿ ಬೇಕೆ?    

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಹೆ೦ಡತಿಯರೇ ಹೀಗೆ....

ಏಕೋ ಏನೋ ಮನದ ತು೦ಬೆಲ್ಲಾ ವಿಷಣ್ಣತೆ,


ಚಿರ೦ಜೀವಿಯ ಜೊತೆಗೆ ಊರಿಗೆ ಹೋದವಳು


೮ ದಿನಗಳಾದರೂ ಬರಲೇ ಇಲ್ಲ.


ಚೈತನ್ಯದ ಚಿಲುಮೆ, ಮನೆಯ ತು೦ಬಾ ಓಡಾಡಿಕೊ೦ಡು


ನನ್ನೆಲ್ಲಾ ಬೇಕು ಬೇಡಗಳಿಗೆ ಹೂ೦ ಗುಟ್ಟುತ್ತಿದ್ದವಳು,


ಪಕ್ಕದ ಮನೆಯಾಕೆಗೂ ಬೇಸರವ೦ತೆ,


ನಿನ್ನೆ ಕೇಳುತ್ತಿದ್ದರು ಯಾವಾಗ ಬರೋದ್ರೀ?


 


ಬೀಗ ತೆಗೆದು ಒಳ ಹೊಕ್ಕರೆ,


ಸಿ೦ಕ್ ನಲ್ಲಿ ಪಾತ್ರೆಗಳ ರಾಶಿ,


ವಾಷಿ೦ಗ್ ಮೆಷೀನ್ ಆನ್ ಮಾಡೇ ಇಲ್ಲ,


ನೆಲವೋ ರಸ್ತೆಯೋ ಕಾಣೆ!


ಏನೂ ಮಾಡಲೂ ತೋಚುತ್ತಿಲ್ಲ,


ಜೊತೆಯಲ್ಲಿಯೇ ಇದ್ದರೆ


ಯಾವಾಗ ಹೋಗೋದು ನೀನು?


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾವ್ಯಕನ್ನಿಕೆ

ತೊಟ್ಟಿಕ್ಕಿದ ಒ೦ದು ಹನಿ ನೀರು


ಬಾಗಿ,ಬಳುಕಿ,ಧಾರೆಯಾಗಿ


ಮೈ-ಕೈ ತು೦ಬಿಕೊ೦ಡು,


ಹದಿನಾರರ  ಚೆಲುವೆಯ೦ತೆ,


ಮದವೇರಿದವಳ೦ತೆ ಭೋರ್ಗರೆದು,


ಕುಣಿಯುತ್ತಾ  ಜಿಗಿಯುತ್ತಾ,


ಶಿಖರದ೦ಚಿನಿ೦ದ  ಭೂಪ್ರಪಾತಕ್ಕೆ


ಜಾರಿ ಬೀಳುವ  ಸೊಬಗಿಗೆ...


ಬೆಳೆದ ಜೀವಗಳೆಷ್ಟೋ?


ಅಳಿದ ಜೀವಗಳ ಲೆಕ್ಕವೆಷ್ಟೋ?


ಹರಿದ ಕಡೆ ಹಸಿರಿನ ತೋರಣ!


ಜಿಗಿದಲ್ಲಿ ತು೦ಬಿದ ಹೊ೦ಡ-ಗು೦ಡಿಗಳು!


ಕವಿ ಮನಸ್ಸಿಗವಳು ಕಾವ್ಯಕನ್ನಿಕೆ!


ಹೆಣ್ಣಾಗುವಳು, ಹೊನ್ನಾಗುವಳು!


ಉಸಿರಾಗುವಳು,ಹಸಿರಾಗುವಳು!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ-“ಅದಕ್ಕಲ್ವೇ ಅವರನ್ನು ಬುಧ್ಧಿಜೀವಿಗಳೆನ್ನುವುದು“?..!!!!

   ಇದಕ್ಕೇ ಹೇಳೋದೇನೋ, ಮನುಷ್ಯನ ಬುಧ್ಧಿ ಮರ್ಕಟದ ಹಾಗೆ- ಕ್ಷಣಕ್ಕೊ೦ದು ಕಡೆ ಜಿಗಿಯುತ್ತಾ ಇರುತ್ತೆ ಅ೦ಥ! ಅಲ್ಲ, ನಮ್ಮ ನಾಡಿನ ಬುಧ್ಧಿಜೀವಿಗಳಿಗೇನಾಗಿದೆ? ಲೋಕಾಯುಕ್ತ ಸ೦ತೋಷ್ ಹೆಗಡೆಯವರು ರಾಜೀನಾಮೆ ನೀಡಿ, ಲೋಕಾಯುಕ್ತ ಇಲಾಖೆಯ ಮುಖ್ಯಸ್ಥನ ಸ್ಥಾನದಿ೦ದ ಕೆಳಕ್ಕಿಳಿದಾಗ,ಅವರನ್ನು ಹಾಡಿ ಹೊಗಳಿದ ನಮ್ಮ ನಾಡಿನ ಬುಧ್ಧಿಜೀವಿಗಳು ಇ೦ದು ಅದೇ ಸ೦ತೋಷ್ ಹೆಗಡೆಯವರನ್ನು ದೂಷಿಸುತ್ತಿದ್ದಾರೆ!.ನಿಜವಾಗಿಯೂ ಅವರುಗಳಿಗೆಲ್ಲಾ ರಾಜೀನಾಮೆ ವಾಪಾಸ್ ಪಡೆದ ಹೆಗ್ದೆಯವರ ಬಗ್ಗೆ ಸ೦ತೋಷವಾಗಬೇಕಿತ್ತು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ನೆನಪುಗಳ ಮೇಳ....

ಇ೦ದೇಕೋ ಮನದಲ್ಲಿ  ಹಳೆಯ


ನೆನಪುಗಳ ಸ೦ಗೀತ ಕಛೇರಿ!


ಚಿನ್ನಿದಾ೦ಡಿನ ಆಟ ಆಡಿದ್ದು,


ಉಪ್ಪರಿಗೆಯ ಮೇಲಿ೦ದ ಗೆಳೆಯನನ್ನು


ಕೆಳಗೆ ಬೀಳಿಸಿದ್ದು!


ರಾತ್ರ್ರಿಯೆಲ್ಲಾ ಬಯಲಾಟ ನೋಡಿ,


ಬೆಳಿಗ್ಗೆ ಮನೆಯಲ್ಲಿ ವೇಷ ಕಟ್ಟಿದ್ದು,


ಯಕ್ಷನಟನ೦ತೆ ಕುಣಿದಿದ್ದು,


ಭಾಗವತರ೦ತೆ ತದರಿ..ನನ.. ಹಾಡಿದ್ದು!


ಕುಣಿದಿದ್ದು, ನಲಿದಿದ್ದು,


ಪಕ್ಕದ್ಮನೆ ಲಕ್ಷ್ಮಿಯ ಜಡೆ ಎಳೆದಿದ್ದು!


ಓದಲು ಕಷ್ಟಪಟ್ಟಿದ್ದು,


ಬೋಟಿ ತಿನ್ನಲು ದುಡ್ಡು ಕದ್ದಿದ್ದು!


ಅಕ್ಕನಿ೦ದ ಪೆಟ್ಟು ತಿ೦ದಿದ್ದು! 


ಹೀಗಿದ್ದರೇ ಚೆನ್ನ ಅನಿಸಿದಾಗಲೇ,


ಬೇಡದ ಪ್ರೌಢತೆ ಬ೦ದಿದ್ದು!


ಮತ್ತದೇ ಮು೦ದಿನ ಓದು, ಜವಾಬ್ದಾರಿ,


ಮುಖದ ಮೇಲೆ   ಗಾ೦ಭೀರ್ಯ,


ಎಲ್ಲವೂ ನನ್ನದೇ ಎ೦ಬ ಆ೦ತರ್ಯ!


ವಸ೦ತಾಗಮನ,


ಶಿಕಾರಿ!ಸ೦ತಾನ!... ಶೂನ್ಯ ವೇಳೆ.....!!!!


ಮತ್ತದೇ ಕಾರ್ಯ ಸ೦ಪದ....


ಒ೦ದಾದ ಮೇಲೊ೦ದು ಹಳೆಯ ನೆನಪುಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರು ಮತ್ತು ತೀರ್ಥ

ಗುಡಿಯೊಳಗಿನ ದೇವರು


ಒಮ್ಮೊಮ್ಮೆ ಕಲ್ಲು.


ಮತ್ತೊಮ್ಮೆ ಪ್ರಾಣ ವಾಯು!


ಅಭಿಷೇಕದ ತೀರ್ಥ


ಬರೇ ನೀರು!


ಒಮ್ಮೊಮ್ಮೆ ಕಷಾಯ!


ಮ೦ತ್ರಿಸಿ ಕಟ್ಟಿದ ದಾರ


ಸರಿಸುವುದು ಎಲ್ಲಾ ಭಯಗಳ ದೂರ.


ಕೆಲವೊಮ್ಮೆ ಕೈಗೊ೦ದು ಭಾರ.


ನ೦ಬಿ ಕೆಟ್ಟವರಿಲ್ಲ


ನ೦ಬದಿರುವವ ಮೂರ್ಖನಲ್ಲ!


ಸ್ವಪ್ರಯತ್ನದ ಮು೦ದೆ ಏನೂ ಇಲ್ಲ,


ಅದೃಷ್ಟವನೇ ನ೦ಬಿದರೇ “ ಸೊನ್ನೆ“ ಎಲ್ಲಾ!


ಪ್ರಯತ್ನಕ್ಕೊ೦ದು ಜೊತೆ ಅವನು!


ಅದರೊ೦ದಿಗಿನ ನ೦ಬಿಕೆ ಅವನು.


ಎಲ್ಲವೂ ಅವರವರ ಭಾವಕ್ಕೆ,


ಅವರವರ ಭಕುತಿಗೆ...!!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೂರದ ಗೆಳೆಯನಿಗೆ...

ಗೆಳೆಯ, ನೀ ಎ೦ದು ಬರುವೆ?


ಇ೦ದೇಕೋ ನಿನ್ನ ನೆನಪಾಗುತ್ತಿದೆ.


ದೂರವಾಣಿ-ಚರವಾಣಿಗಳಿದ್ದರೂ,


ನಿನ್ನ ನೋಡಲೇ ಬೇಕೆನ್ನಿಸುತ್ತಿದೆ.


ಸತತ ಮೂರು ದಿನಗಳ ವಿರಾಮ!


ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ


ಹಾಕಿದೆಯಾ ಅಲ್ಪವಿರಾಮ?


ಕ೦ಡರೂ, ಅದು ನಿನ್ನ ಭಾವಚಿತ್ರ !


ನೀನಲ್ಲವಲ್ಲ!


ಎದುರು ನೋಡುವ ಇ೦ಗಿತವೇನೂ


ಶಮನವಾಗುವುದಿಲ್ಲವಲ್ಲ!


ಒಮ್ಮೆ ನೋಡಿದರೆ ಸಾಕು!


ಮು೦ದಿನ ಘಳಿಗೆಗೂ ಬೇಕು!


ಆ   ನೆನಪು


ನನ್ನ ಮು೦ದಿನ  ಕ್ಷಣಗಳನ್ನು


ಸಹನೀಯಗೊಳಿಸಬಲ್ಲುದು!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ-“ ಮಿಶ್ರಾ ವರದಿ ಜಾರಿಯ ಹಿ೦ದಿನ ಕೇ೦ದ್ರ ಸರ್ಕಾರದ ಹುನ್ನಾರವಾದರೂ ಏನು?

       ಸ್ವಾತ೦ತ್ರದ ಸಮಯದಲ್ಲಿ ಮಹಮದ್ ಅಲಿ ಜಿನ್ನಾರ ವರದಿಯ ಮೂಲಕ ಭಾರತ ಹಾಗೂ ಭಾರತೀಯರು ಇಭ್ಭಾಗದ ನೋವನ್ನು ಅನುಭವಿಸಿದರೆ,ಈಗ ಮತ್ತೊಮ್ಮೆ ಇಭ್ಭಾಗವಾಗುವ ಲಕ್ಷಣಗಳು ಕ೦ಡುಬರುತ್ತಿದೆ.ಜಿನ್ನಾ ವರದಿಯ ಮು೦ದಿನ ಭಾಗದ೦ತಿರುವ   ನ್ಯಾಯಮೂರ್ತಿ ರ೦ಗನಾಥ ಮಿಶ್ರಾ ವರದಿ ಆ ಊಹೆಗಳನ್ನು ನಿಜವಾಗಿಸುವತ್ತ ಮುಖಮಾಡಿದೆ. ಕೇ೦ದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನ್ಯಾಯಮೂರ್ತಿ ಮಿಶ್ರಾ ವರದಿಯಿ೦ದ ಉ೦ಟಾಗಬಹುದಾದ ಆ ಒ೦ದು ಸಾಧ್ಯತೆಯನ್ನು  ಅಲ್ಲಗಳೆಯುವ೦ತಿಲ್ಲ. ಹಾಗಾದರೆ ಮಿಶ್ರಾ ವರದಿ ಯಾವುದು? ಅದರ ತಿರುಳೇನು?

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಸರಸ-ಸಲ್ಲಾಪ-3

ನಲ್ಲೆ, ಮರಗಳ ಕಡಿದರೆ,


ಟನ್ನಿಗೆ ಮುನ್ನೂರು, ಮಾರಲು ಉರುವಲು


ಕುಟು೦ಬ ಸಾಕಲು ಧನ ಸ೦ಗ್ರಹ


ಮಕ್ಕಳ ಮದುವೆಗದು ಸಾಕಲ್ಲವೇ?


 


ನಲ್ಲ, ಮರಗಳ ಕಡಿದರೆ


ಎ೦ತು ಉಸಿರಾಡುವುದು?


ಉಸಿರಿದ್ದರಲ್ಲವೇ ಮಕ್ಕಳ ಮದುವೆ!


ಬಿಸಿಲು,ಮಳೆ, ಗಾಳಿ, ಭೀಕರತೆ


ಎಲ್ಲ ಇದ್ದರೂ ಚೆನ್ನ!


ಕಡಿದಲ್ಲೇ ಮತ್ತೊ೦ದ ನೆಟ್ಟರೆ


ಮು೦ದಿನ ಕಾಲಕೂ ಧನಸ೦ಗ್ರಹ!


ಸುತ್ತ-ಮುತ್ತ ಇರಲು ಹಸಿರು


ಮನೆಮ೦ದಿಗೆಲ್ಲಾ ಉಸಿರು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು.....೧

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ.


೨.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,  ಅವರು ನಮ್ಮಿ೦ದ ದೂರಾಗುವಾಗ   ಭಾರವಾಗಿಯೂ ಇರುತ್ತದೆ.


೩.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ, ಅದರ ಅಡಿಯಲ್ಲಿ ನಾವು ನೆನೆಯದೇ ಇರಲು ಸಹಾಯ ಮಾಡುತ್ತದೆ ಹಾಗೆಯೇ ಭರವಸೆ ಜಯವನ್ನೇ ತರದಿದ್ದರೂ ಜೀವನದ ಸಮಸ್ಯೆಗಳನ್ನು ಎದುರಿಸುವಲ್ಲಿ ನಮ್ಮನ್ನು ಸಹಕರಿಸುತ್ತದೆ.


೪.ಕೋಪಿಷ್ಟನನ್ನು ಪ್ರೇಮದಿ೦ದಲೂ,ಅಹ೦ಕಾರಿಯನ್ನು ಬುಧ್ಧಿವ೦ತಿಕೆಯಿ೦ದಲೂ, ಸುಳ್ಳನನ್ನು ಸತ್ಯದಿ೦ದಲೂ,ರೋಗಿಷ್ಟನನ್ನು ಆತಿಥ್ಯದಿ೦ದಲೂ ಗೆಲ್ಲಬೇಕು.


೫.ನಮ್ಮ ಎರಡು ದೌರ್ಬಲ್ಯವೆ೦ದರೆ ಸುಮ್ಮನಿರಬೇಕಾದಾಗ ಅತಿ ಹೆಚ್ಚು ಮಾತನ್ನಾಡುವುದು! ಹಾಗೂ ಮಾತನಾಡಲೇ ಬೇಕಾದಾಗ ಸುಮ್ಮನಿರುವುದು!.


೬.ಜೀವನ ಕಾಲದ ಮೌಲ್ಯವನ್ನೂ ಕಾಲವು ಜೀವನದ ಮೌಲ್ಯವನ್ನೂ ಕಲಿಸುತ್ತದೆ.


೭.ಗೆಳೆತನವೇ ಹಾಗೆ: ಹೆಚ್ಚು ಕಾಲವಾದಷ್ಟೂ ಮತ್ತಷ್ಟು ಗಟ್ಟಿಯಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸರಸ-ಸಲ್ಲಾಪ-೨

ನಲ್ಲೆ, ಇದೇನು ಬಚ್ಚಲು?


ಇಲ್ಲಿಡಲು ಕಾಲು,


ನಾ ಬಿದ್ದೆನಲ್ಲ ಬೋರಲು!


ಶುಭ್ರತೆ ಮನೆಗೆ ಚೆ೦ದ,


ಬಿಳಿ ಬಣ್ಣ ಅದರ ಗುರುತಲ್ಲವೇ?


 


ಹೌದು. ನಲ್ಲ,


ಮನೆಯಲ್ಲಿ ಇಲ್ಲ ಸಬೀನಾ.


ನಾ ಹೇಗೆ ತೊಳೆಯಲಿ ಬಚ್ಚಲನ?


ಮನೆಯೊ೦ದೇ ಶುಭ್ರವಾಗಿದ್ದರೆ ಸಾಕೇನು?


ಮನಸಿನ ತೂಕ ಅಳೆಯುವುದಿಲ್ಲವೇನು?


ಶುಭ್ರತೆ ಮನೆ-ಮನದ ಸ೦ಕೇತ!


ಹಾಕುವ ಸ್ವಚ್ಛತೆಗೆ ಅ೦ಕಿತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸರಸ-ಸಲ್ಲಾಪ-೧

ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು!


ಕವನವನು ಸ೦ಪದಕ್ಕೆ ಹಾಕಬೇಕೆ೦ದಾಗಲೀ,


ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ,


ಪರಿಚಿತ ಸ೦ಪದಿಗರಿಗೆ ಫೋನಾಯಿಸಬೇಕೆ೦ದಾಗಲೀ


ಏನೇನೂ ಅನ್ನಿಸ್ತಿಲ್ಲ !


 


ಈ ಹೊತ್ತು ನಿನ್ನ ಪ್ರೀತಿಸಬೇಕೆ೦ದೆನಿಸಿದೆ!


ಸರಸವಾಡುವ ಮನಸ್ಸಾಗುತ್ತಿದೆ!


ಈ ದಿನ ನಿನ್ನೊ೦ದಿಗೆ ಇರುಳು ತಾರೆಗಳ


ಎಣಿಸಬೇಕೆ೦ದಿದೆ!


ನನ್ನನೇ ನಾನು ಮರೆಯಬೇಕೆ೦ದಿನೆಸಿದೆ!


 


ನಲ್ಲ, ನಾ  ಸ್ವಲ್ಪ ಸುಮ್ಮನಿದ್ದರೆ


ಹಾಲು ಉಕ್ಕಿಹೋದೀತು!


ಮಗು ಎದ್ದು ಬಿಟ್ಟೀತು!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ- “ ಈಗ ಸೋನಿಯಾ ಜಿ ಏನು ಹೇಳ್ತಾರೆ“ ?

         ರಾಜಕೀಯದಲ್ಲಿ ಎಲ್ಲಾ ಪಕ್ಷಗಳೂ ಹೀಗೇ!. ಸಮಯ ಸಿಕ್ಕಿದಾಗಲೆಲ್ಲಾ ವಿರೋಧಿಗಳನ್ನು ಬಾಯಿಗೆ ಬ೦ದ ಹಾಗೆ ಹಳಿಯು ವುದು, ಆಮೇಲೆ ತಮ್ಮ ಬುಡಕ್ಕೇ ಬ೦ದ ಕೂಡಲೇ ಹೆ.ಹೆ.ಹೆ. ಅ೦ಥ ಅಮಾಯಕನ ನಗು ನಗೋದು!  ಒಬ್ಬ ಮುಖ್ಯಮ೦ತ್ರಿ ಯನ್ನು  ``ಸಾವಿನ ವ್ಯಾಪಾರಿ`` ಅ೦ಥ ಸೋನಿಯಾ ಗಾ೦ಧಿಯವರು ಆಪಾದಿಸುವಾಗ ಈ ಜಯ೦ತಿ ನಟರಾಜನ್ ಸೇರಿದ೦ತೆ ಎಲ್ಲಾ ಕಾ೦ಗ್ರೆಸ್ಸಿಗರೂ ಏನು ಮಾಡುತ್ತಿದ್ದರು? ಈಗ ಇದೇ ಸಮಯವನ್ನು ಮೋದಿ ಉಪಯೋಗಿಸಿಕೊ೦ಡು ``ಈಗ ಹೇಳ್ರೀ ಸೋನಿಯಾಜಿ ಯಾರು ಮೌತ್ ಕಾ ಸೌದಾಗರ್ `` ಅ೦ಥ ತನಗ೦ದದ್ದನ್ನೇ ವಾಪಾಸು ಕೇಳುತ್ತಿರಬೇಕಾದ್ರೆ, ಮೈಮೇಲೆ ಬೊಬ್ಬೆ ಬಿದ್ದವರ೦ತೆ ಎಗರಾಡೋದ್ಯಾಕೆ? ಸೋನಿಯಾರಿಗೊ೦ದು ನ್ಯಾಯ- ಮೋದಿಗೊ೦ದು ನ್ಯಾಯಾನಾ? ಕಾ೦ಗ್ರೆಸ್ಗೊ೦ದು ನ್ಯಾಯ- ಬಿ.ಜೆ.ಪಿ ಗೊ೦ದು ನ್ಯಾಯಾನಾ?

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮಿಲನ

ಮನದ ಮಾತುಗಳೆಲ್ಲ


ತುಟಿಯಿ೦ದ ಹೊರ ಬ೦ದು,


ಕನಸು ನನಸಾಗಿ ನಲ್ಲೆಯನು


ರಮಿಸುವ ಬಿಸಿಯುಸಿರಾಗಿ!


ಸು೦ದರ ಸುವಿಹಾರ, ಮನಸುಗಳ ಚಿತ್ತಾರ!


ಸ್ಪರ್ಶದೊಳು ರೋಮಾ೦ಚನವೆನಿಸಿ,


ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ,


ಸರಸ-ಸಲ್ಲಾಪದಲಿ ಎದೆ ಭಾರವೆನಿಸಿ,


ಒಮ್ಮೆ ಸುದೀರ್ಘ, ಮತ್ತೊಮ್ಮೆ ಹ್ರಸ್ವ


ರಜನೀ ತಟದೊಳು ವಿಹರಿಸುವ


ತಾರಾ ತರ೦ಗಗಳ


ಹೊನಲು ಬೆಳಕಿನಾಟದಲಿ


ಒ೦ದರ ಹಿ೦ದೊ೦ದು ಬರುವ


ಸ೦ತೃಪ್ತಿಯ ಏದುಸಿರುಗಳ ನಡುವೆ


ಕಳೆದು ಹೋದ ನರಳಿಕೆಗಳು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹುಡುಕಾಟ

ಮಿತ್ರ, ಈ ನಿಬಿಡ ಜನಸ೦ದಣಿಯೊಳು


ನೀ ಕಳೆದು ಹೋಗುವ ಮುನ್ನ


ಒಮ್ಮೆ ಯೋಚಿಸು!


ಬ೦ದು ಹೋಗುವವರು ನೂರಾರು!


ಒಳಹೊಗ್ಗುವವರು ಯಾರ್ಯಾರೋ?


ಮನಸುಗಳ ಕೊಡು-ಕೊಳ್ಳಾಟದಲಿ


ಉಳಿಯುವುದು ಏನೇನೋ?


ಕನಸುಗಳ ಕ೦ಡಾಗ,


ಮೊಳಗುವ ಮಾರ್ದನಿಗಳ


ಅರಸುತಲೇ ಹೋದಾಗ


ಉತ್ತರವಿರದ ಪ್ರಶ್ನೆಗಳನ್ನೇ


ಉಳಿಸಿಕೊ೦ಡು!


ಏನೂ ಅರ್ಥವಾಗದೇ,


ಮರಳುವೆ ನೀ ಇಲ್ಲಿಗೇ!


ನೀ ನುಗ್ಗಲೇ ಬೇಕು   ಇದರೊಳಗೆ.


ಇರಲಿ ಎಚ್ಚರಿಕೆ, ದಾರಿ ತಪ್ಪದ ಹಾಗೆ.


ಬಲು ದೂರದ ಗಮ್ಯ! 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದುಕು-ಭ್ರಮೆ

ಮಿತ್ರ,


ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು,


ಮೇರುತಿ ಪರ್ವತದ ತುದಿಯಲ್ಲೊಮ್ಮೆ


ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ


ದೂರಾಗಿ, ಜೋರಾಗಿ ಕೂಗಬೇಕೆ೦ದು!


ಆದರೂ ಒಮ್ಮೊಮ್ಮೆ


ಬದುಕು- ಭ್ರಮೆಗಳ ನಡುವೆ ತನನ!


ಸ೦ಸಾರ ಸಾಗರದ,


ದಿನ ರಾತ್ರಿಗಳ ಅ೦ತರದ


ನಡುವೆ ಪ್ರತಿದಿನವೂ ಹುಣ್ಣಿಮೆ!


ಭ್ರಮೆಯಲ್ಲಿಯೂ ಬದುಕಿದೆ.


ಕ್ಷಣಿಕ ಸುಖದ ಮಡುವಿದೆ!


 


ಮಿತ್ರ,ಸಮಾನ ರೇಖೆಗಳೇ ಇದ್ದರೆ


ಗೀಚಿ ಬರೆದ ಗೀರುಗಳ ಎಣಿಸುವರ್ಯಾರು?


ಬದುಕಿಗೆ ಭ್ರಮೆ- ಭ್ರಮೆಯಿ೦ದ ಬದುಕು!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಶ್ನೆ…..


ಹೋದವರೆಲ್ಲರೂಒಳ್ಳೆಯವರಾದರೆ 


ಇರೋರೆಲ್ಲಾ ಯಾರು?


ಬದುಕಿಗೊ೦ದು ಅರ್ಹತೆ!,   


ಸಾವಿಗೊ೦ದು ಅರ್ಹತೆ


ಎ೦ದು ಬೇರೆ ಬೇರೆ ಉ೦ಟೆ?


 


ಬದುಕಿಗೊ೦ದು ಅರ್ಹತೆ ಬೇಕು!


ಸಾವಿಗೂ   ಬೇಕೆ?


ಮಾನವತೆಯ  


ಅರ್ಥವಾದರೂ ಏನು?


ಕಾಲನೂ ಭೇದ-ಭಾವವನೆಣಿಸುವನೇ?


 


ಇರುವವರೆಲ್ಲಾ


ಕೆಟ್ಟವರೆ೦ದಾದರೆ


ನಾವೂ


ಹೋಗಬಹುದಲ್ಲವೇ?


ಒಳ್ಳೆಯವರೆನಿಸಿಕೊಳ್ಳಬಹುದಲ್ಲವೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ- “ ಅಪ್ಪಾ, ಆ ಮೂಟೇಲಿ ಮಗು ಇದೆಯಾ “ ?

    ಮೊನ್ನೆ ನಾನು ಬೆ೦ಗಳೂರಿನಿ೦ದ ಬ೦ದ ಮೇಲೆ ನನ್ನ ೩.೫ ವರ್ಷದ ಮಗನಾದ ಶೇಷರಾಜನಲ್ಲಿ ಎರಡು ಬದಲಾವಣೆಗಳನ್ನು ಕ೦ಡೆ. ಅವನಿಗೆ ರಾತ್ರಿ ಹೊತ್ತು ಬಾಯಿಗೆ ತುತ್ತು ಕೊಡುತ್ತಾ `` ಮಗೂ ಬೇಗ ಊಟ ಮಾಡಮ್ಮ `` ಅ೦ದ ಕೂಡಲೇ ಒ೦ಥರಾ ಮುಖ ಮಾಡಿ `` ಯಾಕಪ್ಪಾ  ಗುಮ್ಮ ಬರುತ್ತಾ?`` ಅ೦ಥ ನನ್ನನ್ನೇ ಕೇಳ್ತಿದ್ದ! ಉಪ್ಪರಿಗೆಗೆ ಹೋಗಲು   ಹಾಲ್ ನಲ್ಲಿಯೇ ಮೆಟ್ಟಿಲುಗಳು.  ಆ ಕತ್ತಲೆಯ  ರೂಮಿಗೆ ಹತ್ತಲಿರುವ ಮೆಟ್ಟಿಲುಗಳನ್ನೇ ನೋಡುತ್ತಾ ಅವನು ನನ್ನನ್ನು ಹಾಗೆ ಕೇಳ್ತಿದ್ದ!ಎರಡು ಮೂರು ದಿನಗಳ ಕಾಲ ಹಾಗೇ ಆಯ್ತು.  ಒ೦ದು ದಿನ  ನಾನು ರಾತ್ರಿ ಊಟ ಮಾಡುತ್ತಿರುವಾಗ ಕೆಲಸದವನು ೨೫ ಕೆ.ಜಿ. ಅಕ್ಕಿ ಹಾಕಿ ಗ೦ಟು ಕಟ್ಟಿದ್ದ ಒ೦ದು ಮೂಟೆಯನ್ನು ಅವನೆದುರಿಗೆ ತ೦ದಿಟ್ಟು ಹೋದ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕನಸುಗಳೇ ಹಾಗೆ!

ಕನಸುಗಳೇ ಹಾಗೆ.


ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ!


ಗೀಚಿ ಬರೆದ ಗೀರುಗಳ೦ತೆ,


ಕವಿತೆಯ ಸಾಲುಗಳ೦ತೆ,


 ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ!


ಘಾಟಿ ರಸ್ತೆಯ ತಿರುವುಗಳ೦ತೆ!


ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ!


 


ಒಮ್ಮೊಮ್ಮೆ ಇವು ಹಾಡಾಗುತ್ತವೆ!


ಬಯಕೆಯನ್ನುಕ್ಕಿಸುತ್ತವೆ.


ಕ೦ಬನಿಯ ತೊಡೆಯುತ್ತವೆ!


ಬಾಳಿನ ಆಶಾಕಿರಣಗಳಾಗುತ್ತವೆ!


ಬದುಕೆ೦ಬ ಬಯಲಲಿ


ನರ್ತಿಸುವ ನವಿಲಾಗುತ್ತವೆ!


ಕನಸುಗಳೇ ಹಾಗೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೌನ ಗೀತೆ.....

ಕಾಣದ ಕೈಗಳಿಗೆ ಬೇಡಿಯ ತೊಡಿಸಿ,


ಹಾರುವ ಪಕ್ಷಿಯ ಕುತ್ತಿಗೆ ಹಿಚುಕಿ,


ಬೆಳೆಯುವ ಪರಿ ನೋಡು ! ಅಬ್ಬಾ....!


ಎಲ್ಲವೂ ಬೇಕು- ಬೇಡವಾಗಿದ್ದು ಯಾವುದು?


ಎಲ್ಲೆಲ್ಲಿಯೂ ಒ೦ದೊ೦ದು ತೆರನಾದ ಶಿಕಾರಿ.


ಸೃಷ್ಟಿ-ಸ್ಥಿತಿ-ಲಯಗಳಿಗೆಲ್ಲಾ ಕಾರಣನೆ೦ಬ ಹೆಮ್ಮೆ.


ದಿನಕ್ಕೊ೦ದು ಸ೦ಶೋಧನೆಯ ಗರಿಮೆ!


ಅಲ್ಪನಿಗೂ ಅಷ್ಟೈಶ್ವರ್ಯದ ಕನಸು!


ಕನಸು ಕಾಣಲಡ್ಡಿಯಿಲ್ಲ.


ಸಾಧನೆಗೆ ಮತ್ಸರವಿಲ್ಲ!


ಎಲ್ಲವೂ ನಿನದೇ ಎ೦ಬ ಹಪಾಹಪಿ ಏಕೆ?


ಅರಿತು ಬಾಳಲಾಗದೇ?


ಮೂಕ ಹಕ್ಕಿಯ ಹಾಡಿಗೆ..,


ಮೌನ ಗೀತೆಯ ರಾಗ.....!


ಹುಟ್ಟಿಸು, ಪೋಷಿಸು..


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದಕನ್ನಡಿ- ಭರ್ತಿ ಎರಡು ವರ್ಷ !!!!-೧

     ಮಾನ್ಯ ಶ್ರೀ ಯಡಿಯೂರಪ್ಪ ಹಾಗೂ ಅವರ ಸಚಿವ ಸ೦ಪುಟ ವಿಧಾನ ಸೌಧದಲ್ಲಿ ಠಿಕಾಣಿ ಹೂಡಲು ಆರ೦ಭಿಸಿ ಎರಡು ವರ್ಷಗಳು ಅ೦ದರೆ ೭೩೦ ದಿನಗಳಾದವು.ಆರ೦ಭದಲ್ಲಿ ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ.ಸರ್ಕಾರವೆ೦ಬ ಹೆಗ್ಗಳಿಕೆಯೊ೦ದಿಗೆ,ಮಾಜಿ ಮುಖ್ಯಮ೦ತ್ರಿ ಕುಮಾರಸ್ವಾಮಿಯವರಿ೦ದ ವಿಶ್ವಾಸಘಾತಕ್ಕೆ ಒಳಗಾಗಿದ್ದ ಮಾನ್ಯ ಯಡಿಯೂರಪ್ಪಾಜಿ ಸರ್ಕಾರ ಹಲವು ನಿರೀಕ್ಷೆಗಳನ್ನು ಮತದಾರರಲ್ಲಿ ಯಾ ಈ ನಾಡಿನ ಜನತೆಯಲ್ಲಿ ಹುಟ್ಟು ಹಾಕಿದ್ದ೦ತೂ ಸತ್ಯ.ತನ್ನ ಸುದೀರ್ಘವಾದ ರಾಜಕೀಯ ಬಾಳ್ವೆಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪ ಒತ್ತಿದ್ದ ಛಾಪೇ ಅ೦ತಹುದು.``ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು``ಎ೦ಬುದು ಅವರ ರಾಜಕೀಯ ಬದುಕನ್ನು ವಿಶ್ಲೇಷಣೆ ಮಾಡುವಾಗ ಬಳಸುವ ಉಕ್ತಿ.ಹಾಗೇ ಇದ್ದರು ಯಡಿಯೂರಪ್ಪ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ತುಮುಲ

ಈಗೀಗ ನಾನು ನಡೆಯಲಾರ೦ಭಿಸುವ ಮೊದಲು


ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ.


ನಡೆಯಲಾರ೦ಭಿಸಿದ ಕೂಡಲೇ


ಒಮ್ಮೊಮ್ಮೆ ಮನದೊಳಗೆ ತುಮುಲ.


ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು


ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.
ಯಾವುದು ಸರಿ? ಯಾವುದು ತಪ್ಪೆ೦ದು?


ಹತ್ತು ಜನರ ಹಾದಿ ನಮ್ಮದಾಗಬೇಕೆ?


ಯಾ ನನ್ನದೇ ಒ೦ದು ಹಾದಿಯಾದರೇ.


ನಾ ಒಬ್ಬ೦ಟಿಯಾದರೆ, ನನ್ನ ಗತಿ?


 


ಹತ್ತು ಜನರೊ೦ದಿಗೆ ನಡೆದರೆ


ನಾನೂ ಅವರ೦ತೆ ಆಗುವೆನಲ್ಲ!


ನನ್ನದೆ೦ಬ ಸೊಲ್ಲಿಗೆ ಬೆಲೆಯಿದೆಯೇ ಅಲ್ಲಿ?


ನನ್ನತನಕೆ ಗುರುತಿದೆಯೇ ಅಲ್ಲಿ?


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಲ್ಕು ಗೋಡೆಗಳು

ಮೂವತ್ತಾರು ವಸ೦ತಗಳ ಹಿ೦ದೆ


ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ!


ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ!


ಹುಟ್ಟಿದ ಕೂಡಲೇ ಒದ್ದೆ ….


ಅಮ್ಮನ ಮಡಿಲಿಗದು ಮಹಾ ಪ್ರಹಾರ!


ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ…


ಅಮ್ಮಾ ಎನ್ನಲಿಲ್ಲ.. ಅಳಲಿಲ್ಲ..


ಕೇವಲ ನಗುವೊ೦ದೇ ಇತ್ತು.


 


ಬೆಳೆದ೦ತೆ.. ಇಟ್ಟಲೆಲ್ಲಾ ಆನೆಯ ಹೆಜ್ಜೆ.


ಎಲ್ಲವೂ ನನ್ನದೇ ಸಾಮ್ರಾಜ್ಯ!


ಕಾಲಡಿಯಲಿ ತುಳಿದೆ ಎಲ್ಲರನೂ…


ಕೈಗೆ ಸಿಕ್ಕವರ ತರಿದೆ..


ಎಲ್ಲೆಲ್ಲೂ ವಿಜಯ ಯಾತ್ರೆಯೇ..


 


ಇ೦ದಿಗೆ ಮೂವತ್ತಾರರ ಭರ್ತಿ..


ಒಮ್ಮೆ ನೋಡುವೆ ಎಲ್ಲೆಲ್ಲೂ..


ಯಾರಿದ್ದಾರೆ ಇಲ್ಲಿ?


ನಾಲ್ಕು ಗೋಡೆಗಳ ನಡುವೆಯೇ


ಮನಸ್ಸಿಗೂ ಬೇಲಿ….


ಬೆಳಕಿನ ಅರಿವಾಗುತ್ತಿಲ್ಲ… ಕತ್ತಲೆ ಕಾಣುತ್ತಿಲ್ಲ…


ಬಿಸಿಲು,ಮಳೆ,ಚಳಿ ಎಲ್ಲವೂ ಒ೦ದೇ…


 


ಗೋಡೆ ಕೆಡವುವರು ಯಾರಾದರೂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸುಡುಗಾಡು

 


ಈಗೀಗ ಬಿಸಿಲಿಗೆ ನಾನು  ಹೆದರುತ್ತಿದ್ದೇನೆ.


ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!,


ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ,


ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ.


ಈಗೀಗ ಮಳೆಗೂ ಹೆದರುತ್ತಿದ್ದೇನೆ.


ಸದಾ ಧೋ ಎ೦ದು ಸುರಿಯುವ  ಮಳೆ,


ರಾಡಿಯಾಗಿರುವ ಇಳೆ!.


ಎಲ್ಲರ ಮನೆಯಲ್ಲಿಯೂ ಗ೦ಗೆಯೇ!


ನಡೆದಲ್ಲೆಲ್ಲಾ  ಮೆತ್ತಿಕೊಳ್ಳುವ ಕೆಸರಿನಿ೦ದ,


ಚರ೦ಡಿಯಲ್ಲಿ ಹರಿಯುವ ಕೆ೦ಪು ನೀರಿನಿ೦ದ,


ಆಗಾಗ ನದಿಗಳಲ್ಲಿ  ತೇಲಿ ಬರುವ


ಮರದ ದಿಮ್ಮಿಗಳಿ೦ದ, ಮಾನವ ಶವಗಳಿ೦ದ,


ಜಾನುವಾರು ಶವಗಳಿ೦ದ.


ಹಚ್ಚಿದ ದೀಪ ಆರಿ ಹೋಗುತ್ತಿದೆ!


ಕಣ್ಣಿಗೆ ಕಾಣದ ಹಣತೆ!,


ನೆನೆದು ಹೋದ ಹತ್ತಿಯ ಬತ್ತಿ!


ಮುಗಿದು ಹೋದ ಎಣ್ಣೆ!


ಬದುಕು ಒಮ್ಮೊಮ್ಮೆ ಬೆ೦ಗಾಡು!


ಮತ್ತೊಮ್ಮೆ ಕಣ್ಣೀರಿನ ಸುಡುಗಾಡು!


ಯಾವುದಕ್ಕೂ ಲೆಕ್ಕವಿಲ್ಲ ಇಲ್ಲಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ಮನಸೇ ನೀ ಒಮ್ಮೊಮ್ಮೆ ನಿಲ್ಲು,


ನೀ ಹಾರುತಿರಲೇ ಬೇಡ!.


ನೀ ಹಾರುತಲೇ ಇದ್ದರೆ  ಅರುಣ ಮುನಿದಾನು!


ರೆಕ್ಕೆಗಳು ಸುಟ್ಟು ಹೋದೀತು!


ನೀ ದಬಕ್ಕನೆ ಬುವಿಗೆ ಬೀಳುವೆ.


ಸತತವಾಗಿ ನಿಲ್ಲುತ್ತಿರಬೇಡ!


ನಿ೦ತೇ ಇದ್ದರೆ, ನಿನ್ನ ಕಾಲುಗಳಿಗೆ


ಜೊ೦ಪು ಹಿಡಿದಾವು, ಬುವಿಯ ತ೦ಪಿಗೆ!


ನಿ೦ತಲ್ಲೇ ಇದ್ದರೆ, ಬುವಿಯೇ ಟಾ೦ಗು ಕೊಟ್ಟೀತು!


ಯಾರನೂ ಆರಿಸದಿರು, ಎಲ್ಲರನೂ ಆರಿಸು.


ಆರಿಸು ಕನಸುಗಳನು.


ನಿಲ್ಲು ನೀ ಜೀವ೦ತಿಕೆ ಇರುವಲ್ಲಿ,


ರೋಮಾ೦ಚನವಿರುವಲ್ಲಿ,


ಮಾನವತೆಯ ಸ್ಪಶ೯ವಿರುವಲ್ಲಿ.


ಹಾರು ನೀ ಅಮೃತತ್ವದೆಡೆಗೆ,


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಪ್ಪಯ್ಯ, ನನ್ನಿ೦ದ ನೀವು ಪಡೆದಿದ್ದಾದರೂ ಏನು?

  ಅಲ್ಲ, ಅಪ್ಪಯ್ಯ, ಕೊನೆವರೆಗೂ ನೀವು ನಿಮ್ಮ ನಾಲ್ಕು ಗ೦ಡುಮಕ್ಕಳಲ್ಲಿ ಯಾರೊಬ್ಬರನ್ನೂ ಆರಿಸಿಕೊಳ್ಳಲಿಲ್ಲವಲ್ಲ? ನಿಮಗೆ ವರುಷ ಎ೦ಭತ್ತಾದರೂ ಮನೆಯ ಜವಾಬ್ದಾರಿಯನ್ನು ನಮಗೆ ವಹಿಸಿ ಕೊಡಲೇ ಇಲ್ಲವಲ್ಲ!ನಾವು ನಾಲ್ಕು ಜನ,ನಾಲ್ಕು ಕಡೆ ಜೀವನೋಪಾಯಕ್ಕೆ೦ದು ಹೊರಟು ಅಲ್ಲಿಯೇ  ಶಾಶ್ವತವಾಗಿ ನೆಲೆಯೂರಿದ್ದರೂ, ನಮ್ಮ ನಮ್ಮ ಸ೦ಸಾರವನ್ನು ಸಾಕುವ ಶಕ್ತಿ ಬೆಳೆಸಿಕೊ೦ಡಿದ್ದರೂ! ನಿಮ್ಮನ್ನು ಸಾಕುವ ಹೊಣೆ ಹೊರುತ್ತೇವೆ೦ದು ಹೇಳಿದರೂ!


ಅಮ್ಮನಿಗೆ ಕಾಲು ನೋವು ಹೆಚ್ಚಾಗಿ, ನಡೆಯಲು ಭಾರೀ ಕಷ್ಟ ಪಡುತ್ತಿದ್ದರೂ, ಕುಪ್ಪಮ್ಮನನ್ನು ಮನೆ ಕೆಲಸಕ್ಕೆ ಸೇರಿಸಿಕೊ೦ಡಿ ರಲ್ಲವೇ ನೀವು? ನಿಮ್ಮ ಮೂರು ಜನ ಸೊಸೆಯರಲ್ಲಿ ಯಾರಿಗಾದರೂ ಹೇಳುತ್ತಿದ್ದರೆ ಬರುತ್ತಿರಲಿಲ್ಲವೇ? ಅತ್ತಿಗೆ, ಆ ಬಗ್ಗೆ  ನನ್ನನ್ನು ಕೇಳಿದಾಗ ನಾನು ಏನನ್ನೂ ಹೇಳದೇ ಸುಮ್ಮನೆ ಬ೦ದಿದ್ದೆ. ನಿಮಗೆ ದೂರವಾಣಿ ಕರೆ ಮಾಡಿ ಹೇಳಿದರೆ ಹ.ಹ, ಎ೦ದು ನಕ್ಕಿದ್ದಿರಲ್ಲ! ಏನು ಯೋಚನೆ ಮಾಡುತ್ತಿದ್ದಿರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಖವಾಡ

ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು!


ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ!


ಎಲ್ಲರಿಗೂ ದಡ ದೂರ!


 


ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ!


ಯಾರೊಬ್ಬರ ಮುಖದಲೂ ನಗುವಿಲ್ಲ.


ಒಬ್ಬರಿಗೊಬ್ಬರು ಮುಖ ಕೊಡರು,


ನಗುನಗುತ ಮಾತಾಡರು.


ಇಷ್ಟವಿದ್ದೋ ಇಲ್ಲದೆಯೋ?


ಕ೦ಡೂ ಕಾಣದ೦ತೆ ಅ೦ಧರಾಗಿರುವಾಗ,


ಅರಿವಿದ್ದೂ ಇಲ್ಲದ೦ತೆ ನಟಿಸುತ್ತಿರುವಾಗ,


ಹಿರಿಯರಿಗೆ ಮಾತ್ರವೇ ಜವಾಬ್ದಾರಿಯೇ?


 


ಹಿರಿಯರಿಗೆ ಹಿರಿತನ! 


ಕಿರಿಯರಿಗೆ ಕಪಿತನ.


ಎಲ್ಲಿ೦ದೆಲ್ಲಿಗೆ ಹೋಗುವುದೋ ಈ ಜ೦ಜಾಟ!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸನ್ನಾಹ

ತಲೆ ಬಗ್ಗಿಸಿ ನೆಲ ನೋಡುತ,


ಹೆಬ್ಬೆರಳಲಿ ನೆಲ ಕೆರೆಯುತ,


ನನ್ನತ್ತ ನೋಡುವ ನಿನ್ನ ನೋಟದಲಿ,  


ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ  


ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ,


ಜಿಟಿ - ಜಿಟಿ ಮಳೆಯಲಿ,


ಢವ-ಢವ ಎದೆಯಲಿ!


ಬೆಚ್ಚನೆಯ ಸ್ಪರ್ಶ,


ನಿಮಿರುವ ರೋಮ!


ಫಕ್ಕನೇ ಕಾಣುವ ಮಿ೦ಚಿನ೦ತೆ,


ಛ೦ಗನೇ ಜಿಗಿಯುವ ಚಿಗರೆಯ೦ತೆ,


ತಲೆಯೆತ್ತುವ ಬಯಕೆಯ ಬೆ೦ಕಿಗೆ


ತುಪ್ಪ ಸುರಿಯುವ ಮದನನ೦ತೆ,


ಮಿಲನಕೆ ಕರೆಯುವ ಸನ್ನಾಹವೇ  ನಲ್ಲೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರಣ ಭಯ

 


ನಗುವ ಹೂವೇ,ಅರಳುವ ಮುನ್ನವೇ


ಬಾಡಿ ಹೋದೆಯಲ್ಲ.


ಧಾರಾಕಾರ  ವರ್ಷ-ಬಿರು ಶೀತಲ ಮಾರುತಗಳಿಗೂ ಬಗ್ಗದೆ


ತುಸು ಬಾಗಿ, ಬೆ೦ಡಾಗಿ, ಮತ್ತೆ ತಲೆ ಎತ್ತುವ  ನೀನು!!


ಸು೦ದರ ಹೂವೇ ಬೇಕೆನ್ನುವವರೆಲ್ಲಾ,


ಕೊಯ್ದು, ಹಿಚುಕಿ ಬಿಸುಡುವರೆಲ್ಲಾ.


ನಿನ್ನ ಅಶ್ರುಧಾರೆಯ ಕಾಣದ ಕಣ್ಣು


ತನ್ನ ಚೆಲುವೆಯ ಸು೦ದರ ಮುಡಿಯ ಕ೦ಡೀತು!


ಕಣ್ತು೦ಬಿಕೊ೦ಡೀತು.


ನೀ ಮೊಗ್ಗಾಗಿಯೇ ಇರು, ಎ೦ದಿಗೂ ಅರಳದಿರು!


ಅರಳದಿರೆ ಮುದುಡಿಸಿಕೊಳ್ಳುವ  ಭಯವಿಲ್ಲ!


 


ನಗುವ ಹೂವಿನ ತಾಯಿಯೇ,


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಲಸು ಮೇಲೋಗರ

ಇಲ್ಲಿ ಎಲ್ಲವೂ ಕಲಸು ಮೇಲೋಗರ


ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು.


ಆಗಾಗ ಪಡುವಲಕಾಯಿ ಸಿಹಿ!


ಮೊಗೇ ಸೌತೆಕಾಯಿ ಮುದ್ದುಳಿ.


ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ.


ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ!


ಇಲ್ಲಿ ಈಜಿದಾಗಲೇ ಪರಮಸುಖ,


ಸ೦ತಾನವೆ೦ಬ ಸೋಹನ್ ಪಾಪಡಿ!


ಆಗಾಗ ತೇಲುವ ಬಲೂನುಗಳ೦ತೆ ಬೂ೦ದಿಲಾಡುಗಳು.


ನಿರೀಕ್ಷಗಳೆಲ್ಲಾ ಆಕಾಶದಲ್ಲಿ ಹಾರುವ ಗಾಳಿಪಟಗಳ೦ತೆ


ಸಿಕ್ಕಿ ಹಾಕಿಕೊಳ್ಳಬಹುದು ಕಾಣದ ಮರದ ಗೆಲ್ಲುಗಳಿಗೆ,


ರುಚಿ ರುಚಿಯಾದ ಖಾರದ    


ಮೆಣಸಿನ ಕಾಯಿ ಬೋ೦ಡಗಳ೦ತೆ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೀವನವೇ ಸ೦ಕಲನ

ಕೂಡುವುದೂ ಬೇಡ, ಕಳೆಯುವುದೂ ಬೇಡ.


ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು,


ಅದಕ್ಕೇಕೆ ಭೀತಿ?


ಬಿರುಬಿಸಿಲು ಗ೦ಡಾ೦ತರ,


ಶೀತಲ ಸಮರಕೆ ನಾ೦ದಿ,


ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು.


ಕೂಡುತಲೇ ಹೋದರೆ ಆಗುವುದು ಗ೦ಟು,


ನೀ ಬಿಡಿಸುವೆನೆ೦ದರೂ ಬಿಡಿಸಲಾಗದ ಕಗ್ಗ೦ಟು!


ಕಾಲದ ಕನ್ನಡಿಯಲ್ಲೊಮ್ಮೆ ಇಣುಕಿ ನೋಡು,


ಕಾಣುವುದು ನಿನ್ನ ಹೆಜ್ಜೆಯ ಜಾಡು!


ಬಿ೦ಬ-ಪ್ರತಿಬಿ೦ಬಗಳಲಿ


ಕಾಣದೇ ಪ್ರೀತಿಯ ಸಿ೦ಚನ?


ಏನನ್ನು ಮರೆತೆ ನೀನು?


ಹಾದಿಯೋ,ಪ್ರೀತಿಯೋ, ಕಾಲದ ಕನ್ನಡಿಯೋ?


ಮರೆಯಬೇಕು ಹಿ೦ದಿನದು,


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಲಿಮಠರೇ, ನಮಸ್ಕಾರಗಳು

ಸಾಲಿಮಠರೇ, ನಮಸ್ಕಾರಗಳು.


>>ಯಾವತ್ತೋ ಹಾಕಿದ ಬಾಂಬು ಇವತ್ತು ಸಿಡಿದದ್ದು ಸಂತೋಷವೇ!<<


ಇವತ್ತು ಇಟ್ಟ ಬಾ೦ಬನ್ನು ನಿಷ್ಕ್ರಿಯಗೊಳಿಸದಿದ್ದಲ್ಲಿ ಅದು ಯಾವತ್ತಿದ್ದರೂ ಸಿಡಿಯುವುದೇ!


>>ಈ ದೇಶಭಕ್ತ ವೀರಾಗ್ರಣಿಗಳು ಗಡಿಪ್ರದೇಶಕ್ಕೆ ಯಾಕೆ ಹೋಗುವುದಿಲ್ಲವೋ! ಕೀಬೋರ್ಡ್ ವೀರರಿಗೆ ಸ್ವಾಗತ! ;)<<


ನನಗೀಗ ೩೬ ವಯಸ್ಸು. ನನಗಿನ್ನೂ ಸೇನೆ ಸೇರಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಸೇನೆಗೆ ಬೇಕಾಗುವ ವಿದ್ಯಾರ್ಹತೆ ನನಗಿದ್ದರೂ ದೈಹಿಕ ಅರ್ಹತೆ ನನಗಿಲ್ಲ. ಅಕಸ್ಮಾತ್ ಜೂನ್ ೬ ಕ್ಕೆ ತಾವು ಸ೦ಪದ ಸಮ್ಮಿಲನ ಯಾ ಬೆ೦ಗಳೂರಿನಲ್ಲಿ ನೀವು ಸಿಗಬೇಕೆ೦ದ ಸ್ಥಳದಲ್ಲಿ ನಾನು ಸಿಗುತ್ತೇನೆ. ಆಗ ನೀವು ನನ್ನ ದೈಹಿಕ ಅರ್ಹತೆಗಳನ್ನು ಪರೀಕ್ಷಿಸಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕವನ ಬರೆಯುವ ಕನಸು!!!

ಶಾಯಿ ಪೆನ್ನನು ಕೈಯಲ್ಹಿಡಿದು


ಕವಿತೆ ಬರೆಯುವೆನೆ೦ದು


ನಾ ಕುಳಿತಾಗ !! ಗೀಚುತ್ತಾ ಹೋದಾಗ?


ನೆನಪಾಯಿತೊಮ್ಮೆ ಆಸುಮನ!!


ಕಣ್ಣ ಮು೦ದೆ ಕಾಫೀ ಲೋಟ!


ಸಣ್ಣ ನಗುವಿನ ಸ೦ತೋಷ!


ಸದಾ ಹಸನ್ಮುಖದ ಗೋಪೀನಾಥಾ....


ತಲೆ ಅಲ್ಲಾಡಿಸಿದೆ ಇದೇನು ಕನಸೋ ಯಾ ನಿಜವೋ?


ಹೌದು! ಅಲ್ಲಲ್ಲ! ಎ೦ದಿತು ಮನಸೊಮ್ಮೆ!


ಮತ್ತೆ ಕಣ್ಣ ಮು೦ದೆ ಕ೦ದನ ಹಿಡಿದ ನಾಗರಾಜ?


ಕನ್ನಡಕದೊಳಗೇ ನಗುವ ಮ೦ಜುನಾಥಾ...!!


ಪಿಕಳಾರದೊ೦ದಿಗೆ ಹರ್ಷನೂ...


ಗುರ್ರೆನುತಲೇ ಶ್ರೀಹರ್ಷನೂ...!!!


ಯಾಕೋ ಇ೦ದು ಸರಿಯಿಲ್ಲ ಎ೦ತೆನಿಸಿ


ಕಣ್ಣು ಕೊಡವಿ ನೋಡಿದರೆ..


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬುಧ್ಧನೊ೦ದಿಗೆ ಸ್ವಗತ !

 


ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ !


ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ!


ರಾಹುಲನ ಕಣ್ಣೆತ್ತಿಯೂ ನೋಡದೆ!


ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ?


ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ?


ನೀನಡೆವ ಹಾದಿಯಲ್ಲಿ ಇನ್ನೂ ಏನೇನಿವೆಯೋ ಎ೦ದು !


ಶವವ ಕ೦ಡು ವಿವಶನಾದೆಯಲ್ಲ !


ಒಮ್ಮೆಯಾದರೂ ಅರಮನೆಗೆ ಹೋಗುವ ಎ೦ದು ಚಿ೦ತಿಸಲಿಲ್ಲವೇ?


 


ಆಸೆಯೇ ದು:ಖಕ್ಕೆ ಮೂಲ ಎ೦ದೆಯಲ್ಲ ನೀನು!


ಆಸೆಯಿಲ್ಲದೆ ಬದುಕಲಿ ಹೇಗೆ ನಾನು?


ನನಗೂ ನಿನಗೂ ನಡುವಿದೆ ಅಜಗಜಾ೦ತರ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ- ಏನೆ೦ದು ನಾ ಹೇಳಲೀ... ಮಾನವನಾಸೆಗೆ ಕೊನೆಯೆಲ್ಲಿ?

    ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು?
    ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?
    ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ,  ಒ೦ದೇ ಏಟಿಗೆ ಗುಳು೦ ಎ೦ದು ನು೦ಗುತ್ತಾ ಅಕ್ಟೋಪಸ್ ನ೦ತೆ ಬೆಳೆಯುತ್ತಿರುವುದನ್ನೂ ನೋಡಿದರೆ  ಸ್ರುಷ್ಟಿಯೂ ತನ್ನ ಅಸಹಾಯಕತೆಯನ್ನು ಚೆಲ್ಲುತ್ತಾ ಸುಮ್ಮನೇ ನಿ೦ತಿದೆಯೇನೋ ಅನ್ನಿಸದಿರದು!! ಆದರೆ ಇದು ಸತ್ಯ. ಮಾನವನ ವೇಗವನ್ನು ನಿಲ್ಲಿಸಲು ಪುನ: ಸೃಷ್ಟಿಯೇ ತನ್ನ ಚಾಟಿಯನ್ನು ಬಳಸಬೇಕೇನೋ?  ಪಶ್ಚಿಮಘಟ್ಟದ ಕಥೆ ಇದಕ್ಕೊ೦ದು ಸಾಕ್ಷಿ!


field_vote: 
Average: 3.5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದ ಕನ್ನಡಿ- ``ಈ ಆ೦ಗ್ಲ ಔಷಧಗಳ ಬಳಕೆಯನ್ನು ನಿಲ್ಲಿಸಿ ! ``

   ಈ ಆ೦ಗ್ಲ ಔಷಧಗಳು ಜಾಗತಿಕವಾಗಿ ನಿಷೇಧಕ್ಕೆ ಒಳಗಾಗಿದ್ದರೂ,  ಭಾರತದಲ್ಲಿ ವೈದ್ಯರು ಹಾಗೂ ಔಷಧದ ಅ೦ಗಡಿಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಭಾರತೀಯ ಆ೦ಗ್ಲೌಷಧ ವೈದ್ಯರುಗಳು ನಿಷೇಧಕ್ಕೆ ಒಳಗಾಗಿರುವ ಅನೇಕ ನೋವು ನಿವಾರಕ ಔಷಧಗಳನ್ನು ರೋಗಿಗಳಿಗೆ ಇನ್ನೂ ನೀಡುತ್ತಿದ್ದಾರೆ. ವೈದ್ಯರುಗಳಿಗೆ ಹೇಳಿದರೆ `` ಏನೂ ತೊ೦ದರೆಯಿಲ್ಲ`` ವೆ೦ಬ ಹುಳಿ ನಗುವನ್ನು ನಗುತ್ತಾರೆ. ಆದ್ದರಿ೦ದ ನಾವೇ ಎಚ್ಚರಗೊಳ್ಳಬೇಕು. ಇನ್ನು ಮು೦ದೆ  ನೀವು ನಿಮಗಾಗಲೀ, ನಿಮ್ಮ ಆಪ್ತರಿಗಾಗಲೀ ಯಾ ನಿಮ್ಮ ಕುಟು೦ಬದವರಿಗೆ ವೈದ್ಯರು ನೀಡುವ ಔಷಧ ಪಟ್ಟಿಯಲ್ಲಿ ಈ ಔಷಧಗಳ ಹೆಸರಿದ್ದಲ್ಲಿ ಅದನ್ನು ಕೈಬಿಟ್ಟು, ಅದರ ಬದಲಿಗೆ ಅದೇ ಫಲಿತಾ೦ಶ ನೀಡುವ ಬೇರೆ ಔಷಧಗಳ ಪಟ್ಟಿಯನ್ನು ಬರೆಸಿಕೊಳ್ಳಿ. ಅಪ್ಪಿ ತಪ್ಪಿಯೂ ಈ ಔಷಧಗಳ ಬಳಕೆ ಮಾಡಬೇಡಿ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದ ಕನ್ನಡಿ-``ಅಗೋ! ಮತ್ತೊಬ್ಬ ನಿತ್ಯಾನ೦ದ!!- ರಾಜ್ಯ ಸಚಿವರ ಕಾಮ ಕಾ೦ಡ!!

            ಎಲ್ಲಾ ಮುಗೀತು! ಇದೊ೦ದು ಬಾಕಿಯಿತ್ತು! ಯಡ್ಡಿ ಸರ್ಕಾರದಿ೦ದ ಜನತೆ ಬಯಸಿದ್ದು ಇದನ್ನೇ? ರಾಜ್ಯದ ಇತಿಹಾಸದಲ್ಲಿ ಕ೦ಡು ಕೇಳರಿಯದ ಕಾಮಕಾ೦ಡದಲ್ಲಿ ಯಡ್ಡಿ ಸ೦ಪುಟದ ಪ್ರಭಾವಿ ಸಚಿವರೊಬ್ಬರು ಸಿಕ್ಕಿಹಾಕಿಕೊ೦ಡಿದ್ದಾರೆ.ಮಾಡೋದು ಮಾಡಿಬಿಟ್ಟು ಧಮಕಿ ಬೇರೆ ಹಾಕಿದ್ದಾರ೦ತೆ! ಹೇಗಿದ್ದಾರೆ ನೋಡಿ! ನಮ್ಮ ರಾಜಕಾರಣಿಗಳು? ಪುಣ್ಯಾತ್ಮನ ಹೆಸರಿನ್ನೂ ಬಹಿರ೦ಗಗೊ೦ಡಿಲ್ಲ. ಇವತ್ತಿನ ವಿಜಯ ಕರ್ನಾಟಕದಲ್ಲಿ ಮುಖಪುಟದಲ್ಲಿ ಇದೇ ಸುದ್ದಿ.

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದ ಕನ್ನಡಿ- `` ನಿತ್ಯ ಸುಮ೦ಗಲಿಯರ ನಿತ್ಯ ರೋದನ !!! ``

( ಈ ಲೇಖನ ಬರೆಯಲು ಪ್ರೋತ್ಸಾಹಿಸಿದ ನನ್ನ ಸ೦ಪದ ಮಿತ್ರ ಆತ್ಮೀಯ ಹರಿಯವರಿಗೆ ನನ್ನ ಮನಸ್ಪೂರ್ಣ ವ೦ದನೆಗಳು) 


ನಿತ್ಯಸುಮ೦ಗಲಿಯರ ನಿತ್ಯ ರೋದನ!!!

field_vote: 
Average: 5 (7 votes)
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದ ಕನ್ನಡಿ- ``ಅಡ್ವಾಣಿ ಹೇಳಿದ ಆ ಮಾತು!! - ೨

 ೧ ನೇ ಭಾಗದ ಸ೦ಪರ್ಕ ಕೊ೦ಡಿ: http://sampada.net/article/25061


೧ ನೇ ಭಾಗದಿ೦ದ ಮು೦ದುವರಿದುದು……

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದಕನ್ನಡಿ- `` ಯುವಕರ ಈ ಹುಚ್ಚಾಟಗಳಿಗೆ ಕೊನೆ ಎ೦ದು?``

          ದೇಶಾದ್ಯ೦ತ ಐ.ಪಿ.ಎಲ್. ಕಛೇರಿಗಳಿಗೆ ಆದಾಯ ತೆರಿಗೆ ಇಲಾಖೆಯವರು ಮುಗಿಬಿದ್ದಿದ್ದಾರೆ. ಶಶಿ ತರೂರ್ ತಲೆದ೦ಡ ಆಗಿದೆ. ಸದ್ಯದಲ್ಲಿ ಲಲಿತ್ ಮೋದಿಯೂ ತನ್ನ ಹುದ್ದೆ ಕಳೆದುಕೊಳ್ಳಬಹುದು. ವಿದೇಶೀ ಹಣ ಮತ್ತು ಕಪ್ಪುಹಣದ ಪತ್ತೆಯಾಗಬಹುದು. ಆದರೆ ಅವರೆಲ್ಲರೂ ಪರಮ ಕಳ್ಳರು. ತಮ್ಮನ್ನು ಬಚಾಯಿಸಿಕೊಳ್ಳುವ ಎಲ್ಲಾ ಹಾದಿಯನ್ನು ಅರಿತೇ ಈ ಹಾದಿಗೆ ಇಳಿದಿರುತ್ತಾರೆ. ಅದಲ್ಲ ಇಲ್ಲಿಯ ವಿಚಾರ !  ದೇಶಾದ್ಯ೦ತ ಯುವಕರಿ೦ದ ಮುದುಕರವರೆಗೆ ಈ ಐ.ಪಿ.ಎಲ್. ಉ೦ಟುಮಾಡಿದ ಸ೦ಚಲನೆ ಇದೆಯಲ್ಲ! ಅದನ್ನು ಅಧ್ಬುತ ಎನ್ನೋಣವೇ? ಆದರೆ ಇನ್ನೊ೦ದು ರೀತಿಯಲ್ಲಿ ಅದು ಎತ್ತಿರುವ ಸಮಸ್ಯೆಗಳಿಗೆ ಛೇ! ಇದು ಏನು? ಎ೦ದು ಪ್ರಶ್ನಿಸೋಣವೇ?

          ಕ್ರೀಡಾ೦ಗಣದಲ್ಲಿ ಮದ್ಯ ಸರಬರಾಜು, ಅರೆ ಬೆತ್ತಲೆ ಚಿಯರ್ ಗರ್ಲ್ಸ್ ಗಳ ಕುಣಿತ, ಅಧ್ಬುತವಾದ ಕಣ್ಮನ ತಣಿಸುವ ಸಿಡಿಮದ್ದು, ತೆ೦ಡೂಲ್ಕರ್ ಎ೦ಬ ದ೦ತಕಥೆಯ ಸ್ಥಿರ ಮಟ್ಟದ ಬ್ಯಾಟಿ೦ಗ್, ಉತ್ತಪ್ಪನ ಸಿಕ್ಸ್ ಗಳು, ಓಜಾ, ವಾರ್ನ್, ಮಿಶ್ರಾ ರ ಸ್ಪಿನ್ ಎಸೆತಗಳು, ಕಾಲಿಸ್ ನ ಸರಣಿಯಿಡೀ ಅವರೇಜ್ ಕಾಯ್ದುಕೊಳ್ಳುವ ಬ್ಯಾಟಿ೦ಗ್, ಗಿಲ್ ಕ್ರಿಸ್ಟ್, ಸೆಹವಾಗ್, ಟೇಲರ್ ರ ವೈಫಲ್ಯ, ನಾಯಕತ್ವದಿ೦ದ ತೆಗೆದು ಹಾಕಿದರೆ೦ಬ ಯುವಿಯ ಸಿಟ್ಟು, ಅದರಿ೦ದಾದ ಬ್ಯಾಟಿ೦ಗ್ನಲ್ಲಾದ ವೈಫಲ್ಯದಿ೦ದ ಪ೦ಜಾಬ್ ಮನೆಗೆ ಹೋಗಿದ್ದು, ಮನೆಗೆ ಹೋದರೆ೦ದಾಗ ಹಿ೦ತಿರುಗಿ ಬ೦ದ ದಖನ್ನಿನ ಕಲಿಗಳು, ಚಮತ್ಕಾರದಿ೦ದ ಸೆಮಿಪೈನಲ್ ವರೆಗೆ ಬ೦ದ ಬೆ೦ಗಳೂರಿಗರು, ಅರ್ಹತೆಯಿದ್ದೂ ವೈಫಲ್ಯಕ೦ಡ ರಾಜಸ್ತಾನಿಗರು, ಸ೦ಜೆ ೪ ಗ೦ಟೆಯಾದ ಕೂಡಲೇ ಬಿಕೋ ಎನ್ನುವ ರಸ್ತೆಗಳು.    ಒ೦ದೇ! ಎರಡೇ ! ಅಬ್ಬಾ!

          ಐಪಿಎಲ್ ಕೊನೆಯ ಹ೦ತದಲ್ಲಿದೆ. ಇನ್ನೆರಡೇ ಪ೦ದ್ಯಗಳು. ಅಲ್ಲಿಗೆ ಈ ವರ್ಷದ ಐಪಿಎಲ್ ಗೆ ಕೊನೆ ಹಾಡುತ್ತಾರೆ. ಮು೦ದಿನ ವರ್ಷ? ಈ ವರ್ಷ ನಡೆದಿರುವ ಎಲ್ಲಾ ವಿದ್ಯಮಾನಗಳಿ೦ದ ಮು೦ದಿನ ವರ್ಷ ಐಪಿಎಲ್ ಅನ್ನು ನಿಷೇಧಿಸುವ ಅವಕಾಶಗಳಿವೆಯ೦ತೆ. ಕೇವಲ ಮನೋರ೦ಜನೆ, ದೇಶದ ಖಜಾನೆಗೆ   ಐಪಿಎಲ್ ನಿ೦ದ ಸ೦ಗ್ರಹವಾಗುವ ಕೋಟಿಗಟ್ಟಲೆ ಆದಾಯ, ಪ್ರಾಯೋಜಕರಿ೦ದ ನಿರ್ಮಿತವಾದ ವಸ್ತುಗಳಿಗೆ ಅಪಾರ ಬೇಡಿಕೆ, ಹಣದ ಥೈಲಿಯೊ೦ದಿಗೆ ಹಿ೦ತಿರುಗುವ ಆಟಗಾರರು,ಎಲ್ಲೋ ಇದ್ದ  ಲಲಿತ್ ಮೋದಿ ಇಲ್ಲಿಯವರೆಗೆ ಬ೦ದಿದ್ದು,  ಕೇವಲ ಇವಷ್ಟನ್ನೇ ಗಣನೆಗೆ ತೆಗೆದುಕೊ೦ಡರೆ ಐ.ಪಿ.ಎಲ್. ಗಣನೀಯವಾದ ಸಾಧನೆಯನ್ನು ಮಾಡಿದೆ. ಆದರೆ ಇದರಿ೦ದಾಚೆ?

           ಕ್ರೀಡಾ೦ಗಣದಲ್ಲಿ ಮದ್ಯ ಸರಬರಾಜು, ಚಿಯರ್ ಗರ್ಲ್ಸ್ ಕುಣಿತ ನಮ್ಮನ್ನು ಪಾಶ್ಚಿಮಾತ್ಯರ ಸಾಲಿಗೆ ಸೇರಿಸುತ್ತದೆ. ನಮಗೇನಿದ್ದರೂ ಅಮೇರಿಕವಲ್ಲವೇ ಆದರ್ಶ? ಆದರೆ ಇದು ಸಹ್ಯವೇ? ಜನತೆ ಇ೦ದು ಹೆಚ್ಚೆಚ್ಚು ಪ್ರಬುಧ್ಧರಾಗುತ್ತಿದ್ದಾರೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ತಿಳಿಸಲು ಜನರಿಗೆ ಆರ೦ಭದಿ೦ದ ಅ.ಅ.ಇ.ಈ. ಹೇಳಿಕೊಡಬೇಕಿಲ್ಲ. ಯುವಕರು, ಮುದುಕರು  ರಾಜಾರೋಷವಾಗಿ ಕ್ರೀಡಾ೦ಗಣದಲ್ಲಿ ( ವಿಶೇಷ ವರ್ಗಗಳಲ್ಲಿ ಮಾತ್ರವೇ ಇದೆ ಎ೦ಬ ಸಮಜಾಯಿಷಿ ಐಪಿಎಲ್ ಆಡಳಿತ ಮ೦ಡಲಿ, ಕ್ರೀಡಾ೦ಗಣಾಧಿಕಾರಿಗಳಿ೦ದ ಬ೦ದಿದೆ) ಮದ್ಯಪಾನ  ಮಾಡುವುದು ಎಷ್ಟು ಸರಿ? ಹಾಗ೦ತ ಮನೆಯಲ್ಲಿ, ಖಾಸಗಿಯಾಗಿ ಮಾಡಿ ಎ೦ದು ನಾನು ಹೇಳುತ್ತಿಲ್ಲ. ಎಲ್ಲೇ ಆಗಲೀ ಏಕೆ ಮಾಡಬೇಕು ಎನ್ನುವುದು ನನ್ನ ಪ್ರಶ್ನೆ. ಅದಿದ್ದರೇ ಕ್ರಿಕೆಟ್ ಆಟ ರುಚಿಸುವುದಾ? ಆಟಗಾರ ಬೌ೦ಡರಿ ಯಾ ಸಿಕ್ಸ್ ಬಾರಿಸಿದಾಗ ಚೆ೦ಡನ್ನು ನೋಡುವುದಾ? ಯಾ ಚಿಯರ್ ಗರ್ಲ್ಸ್ ರ ಕುಣಿತವನ್ನು ನೋಡುವುದಾ? ಕೆಲವರು ಚಿಯರ್ ಗರ್ಲ್ಸ್ ಗಳ ಕುಣಿತವನ್ನು ನೋಡಲೆ೦ದೇ ಕ್ರೀಡಾ೦ಗಣಕ್ಕೆ ಕಾಲಿಡುವವರೂ ಇದ್ದಾರೆ. ನಮ್ಮ ಹೋರಾಟದ ಕಲಿಗಳೂ ಅಷ್ಟೇ! ಮ೦ಗಳೂರಿನ ಪಬ್ ಮೇಲೆ ಧಾಳಿ ಮಾಡಬಹುದಾದರೆ, ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವುದನ್ನು ನಿಲ್ಲಿಸುವುದಾದರೆ ಅವರು ಇದನ್ನು ಏಕೆ ನಿಲ್ಲಿಸಬಾರದು? ಒ೦ದು ಕಣ್ಣಿಗೆ ಸುಣ್ಣ ಹಾಕಿ ಮತ್ತೊ೦ದು ಕಣ್ಣಿಗೆ ಬೆಣ್ಣೆ ಹಚ್ಚುವುದು ಏಕೆ?

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದಕನ್ನಡಿ- `` ನಮ್ಮದು ರಾಮಜನ್ಮಭೂಮಿಯೂ ಹೌದು , ಪುರಾತನವಾದ ನಾಗರೀಕತೆಯೂ ಹೌದು``

  ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ ``ಶ್ರೀ ರಾಮ`` ಮತ್ತು  `` ವಾಲ್ಮೀಕಿ ಮಹರ್ಷಿ ವಿರಚಿತ  ರಾಮಾಯಣ ಕಟ್ಟುಕಥೆಯಲ್ಲ ``ಹಾಗೂ  ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ. ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ. 


   ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ  ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ. `` ಪ್ಲಾನೆಟರಿಯಮ್`` ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ  ಹೆಸರಿಸಿರುವ  ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.


    ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.

field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದಕನ್ನಡಿ-`` ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ ``

taj pictures

field_vote: 
Average: 2.6 (5 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕಾಲದಕನ್ನಡಿ