ಕುಂವೀ

ಕುಂ. ವೀರಭದ್ರಪ್ಪನವರ ಆತ್ಮಕಥೆ: ಗಾಂಧಿ ಕ್ಲಾಸು

ಸಾಹಿತ್ಯ ಅಕಾಡೆಮಿ (ಕೇಂದ್ರ ಹಾಗೂ ರಾಜ್ಯ) ಪ್ರಶಸ್ತಿ ವಿಜೇತ ಲೇಖಕ ಕುಂ. ವೀರಭದ್ರಪ್ಪನವರು ಕನ್ನಡದ ಸಾಹಿತ್ಯ ಲೋಕದ ಒಬ್ಬ ಅತಿ ವಿಶಿಷ್ಟ ಲೇಖಕರು. ದಶಕಗಳ ಕಾಲ ಬಳ್ಳಾರಿ ಹಾಗೂ ಆಂಧ್ರ ಗಡಿಯ ಕುಗ್ರಾಮಗಳಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿ ಆ ಸಮಯದ ಅನುಭವಗಳನ್ನು ಹಾಗೂ ಆ ಭಾಗದ ಜನಜೀವನವನ್ನು ತಮ್ಮ ಜನ್ಮಜಾತ ಪ್ರತಿಭೆಯಿಂದ ಅತಿ ವಿನೂತನ ರೀತಿಯ ಪದಪ್ರಯೋಗ, ವಾಕ್ಯಸಂರಚನೆಗಳಿಂದ ನಿರೂಪಿಸಿ ಗಮನ ಸೆಳೆಯುತ್ತಾರೆ. ನಗರದಲ್ಲಿ ವಾಸಿಸುವವರ ಗಮನಕ್ಕೇ ಬಾರದಂಥ ಲೋಕವೊಂದು ಇವರ ಬರಹಗಳಲ್ಲಿ ಅನಾವರಣಗೊಳ್ಳುತ್ತದೆ. ನಾನು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ಇವರ "ದೇವರ ಹೆಣ" ಎಂಬ ವಿಶಿಷ್ಟ ಕಥೆ ಒಂದು ಪಾಠವಾಗಿತ್ತು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕುಂವೀ