ತಾಯಿ

ಮಾನಿನಿಯ ಮಹದಾಸೆ!

ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!!
ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ...

'10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ ಸಾರ್ಥಕ್ಯ ತಾಯ್ತನದಲ್ಲಿ ಎಂದು ಎಲ್ಲರಿಗೂ ಅನ್ನಿಸುವುದು ಅದೆಷ್ಟು ಸತ್ಯ ಎಂದು ಈಗ ತಿಳಿಯುತ್ತಿದೆ. ಎಂದು ಅಮ್ಮಾ ಎನ್ನುವಳೋ, ಅದೆಂದು ತನ್ನ ಪುಟ್ಟ ಪಾದಗಳ ಬಳಸಿ ನನ್ನ ಬಳಿ ಸಾರುವಳೋ ಎಂಬ ತವಕ ದಿನೇ ದಿನೇ ಕೆಚ್ಚುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (13 votes)
To prevent automated spam submissions leave this field empty.

ಪೆಪ್ಪರಮೆ೦ಟು...

ಪೆಪ್ಪರಮೆ೦ಟು...


 


ಅಲ್ಲಲ್ಲಿ ಹರಿದು ಹೋದ ಅ೦ಗಿ,


ಸೊ೦ಟಕ್ಕೆ ಹೆಸರಿಗೊ೦ದು ಚೆಡ್ದಿ,


ಗುಳಿ ಬಿದ್ದ ಕೆನ್ನೆಗಳು,


ಬಿಸಿಲಿಗೆ ಬಾಡಿ ಹೋಗಿರುವ ಕಣ್ಣುಗಳು


ಯಾರಾದರೂ ರೂಪಾಯಿ  ಕೊಡುವರೇನೋ


ಎ೦ದು ದಿನವೀಡೀ ಕಾಯುವಿಕೆ,


ತ೦ಗಿಗೊ೦ದು ಪೆಪ್ಪರಮೆ೦ಟಿಗಾಗಿ


ಮಲಗಿರುವ ಅಮ್ಮನಿಗೆ ಔಷಧಿಗಾಗಿ,


ಕೆಲವೊಮ್ಮೆ ಬೇಡುವುದೂ ಉ೦ಟು


ದುಡಿದ ದುಡ್ಡೆಲ್ಲವೂ ತ೦ದೆಯ


ಕುಡಿತಕ್ಕೋ ಇಸ್ಪೀಟಿಗೋ,


ತಿ೦ಗಳಿಡೀ ಬೆವರು ಸುರಿಸಿ ಪಡೆದ  ದುಡ್ಡು


ಒ೦ದೇ ದಿನದಲ್ಲಿ  ಉಡಾಯಿಸುವ ಮಜಕ್ಕೋ!


ಅ೦ತೂ ಪುಟ್ಟ ಕ೦ಗಳಿಗೀಗ ಯಾವುದರ ಅರಿವೂ ಆಗದು,


ಪ್ರತಿದಿನ ಸ೦ಜೆಯೂ ಅಮ್ಮನಿಗೆ ಔಷಧಿ


ತ೦ಗಿಗೊ೦ದು ಪೆಪ್ಪರಮೆ೦ಟಿನ ಹೊರತಾಗಿ!


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀನೆನ್ನ ಎದೆಯಲಿ ಬಯಕೆಯಾಗಿದ್ದೆ, ಕಂದಾ...

ನಾಳೆ ಅಂದರೆ, ಮೇ 9ನ್ನು ವಿಶ್ವದ ಬಹಳಷ್ಟು ಕಡೆ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಂದು ಆಚರಣೆಗೂ ಒಂದೊಂದು ದಿನವಿರುವ ಹಾಗೆ, ತಾಯಿತಂದೆಯರಿಗೂ ಪ್ರೇಮಿಗಳಿಗೂ ಒಂದೊಂದು ದಿನ. ಇದು ಅಂತಹ ಒಂದು ದಿನ ಮಾತ್ರ ತಾಯಿಯನ್ನು ನೆನೆಸಿಕೊಳ್ಳುವ ಮಕ್ಕಳಿಗಾಗಿ ಅಲ್ಲ. ತಾಯಿಗೆ ಮಗು ಹೇಗೆಯೋ, ಹಾಗೆಯೇ ಮಗುವಿಗೆ ತಾಯಿ ಕೂಡ ಆಗಿರಬೇಕು. ತಾಯಿ ತನ್ನ ಕೊನೆಯುಸಿರಿರುವವರೆಗೆ ತನ್ನ ಮಗುವ ಪ್ರೀತಿಸುವ ಹಾಗೆ ತಾಯಿಯನೂ ಪ್ರೀತಿಸುವ ಮಕ್ಕಳಿಗಾಗಿ ಈ ಕವನ.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

"ಮಾತೃ ದೆವ್ವೋ ಭವ"

ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದೇ ಸಮನೆ ಫೋನ್ ಮಾಡುತ್ತಿರುತ್ತಾಳೆ ಎಂದು ಪುತ್ರ ಮಹಾಶಯ ನ್ಯಾಯಾಲಯದ ಕಟ್ಟೆ ಹತ್ತಿದ. ಆಸ್ಟ್ರಿಯಾದ ೭೩ ವರ್ಷದ ಈ ವೃದ್ಧ ಮಾತೆ ದಿನಕ್ಕೆ ೪೯ ಸಲ ಫೋನ್ ಮಾಡಿ ಪೀಡಿಸುತ್ತಿದ್ದಳಂತೆ ಒಂಭತ್ತು ತಿಂಗಳು ಹೊತ್ತೂ, ಹೆತ್ತೂ ಸಾಕಿದ ಮಗನನ್ನು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
Subscribe to ತಾಯಿ