ಪ್ರಣಯ

ಕಾಮನೆಗಳ ಬಲೆಯಲ್ಲಿ...

ಜಾನ್...ಇದು ಸರಿಯಲ್ಲ...ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ?
ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ?
ಆದ್ರೂ...ನನಗೆ ಭಯ ಆಗ್ತಾ ಇದೆ.
ಕೂಲ್ ಯಾರ್...ಇದೆಲ್ಲಾ ಕಾಮನ್... ಹಾಗಂತಾ ನಾವು ದೊಡ್ಡ ತಪ್ಪೇನು ಮಾಡ್ತಾ ಇಲ್ಲ. ಜೀವನದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡ್ಬೇಕು. ನಿನ್ನ ಮನಸ್ಸಿಗೆ ಏನು ಬೇಕು ಅದನ್ನು ಗಳಿಸ್ಬೇಕು. ಈ ಪಾಪಪ್ರಜ್ಞೆಯಿಂದ ಹೊರಗೆ ಬಾ....ಚಿಯರ್ ಅಪ್
ಅವನ ಬೆಡ್್ನ ಮೂಲೆಯಲ್ಲಿ ಮುದ್ದೆಯಾಗಿ ಬಿದ್ದಿದ್ದ ನನ್ನ ಉಡುಪುಗಳನ್ನು ತೆಗೆದುಕೊಂಡು ಸೀದಾ ಬಚ್ಚಲು ಮನೆಗೆ ಹೋದೆ.

ನನಗೇನಾಗಿದೆ? ಛೇ..ಹೇಗೆ ನಾ ಮಾಡ್ಬಾರ್ದಿತ್ತು.
"ಥೂ...ನೀನು ಕೆಟ್ಟವಳು..ನಿಂಗೆ ಸ್ಪಲ್ಪವಾದ್ರೂ ಮಾನ ಮರ್ಯಾದೆ ಇದೆಯಾ...ಕುಲಗೆಡೆಸಿದ ಹೆಣ್ಣು" ಎಂದು ಅಮ್ಮ ಬೈದಂತೆ ನಂಗೆ ಕೇಳಿಸ್ತಿತ್ತು. ಕನ್ನಡಿಯಲ್ಲಿ ನನ್ನನ್ನು ನೋಡಿದಾಗ ನಂಗೇ ಅಸಹ್ಯವಾದಂತಾಯ್ತು. ಹೇಗೋ ಸ್ನಾನ ಮುಗಿಸಿ ಹೊರಬಂದಾಗ ಜಾನ್ ಕೂಡಾ ಶರ್ಟು ತೊಟ್ಟು ರೆಡಿಯಾಗಿ ನಿಂತಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೇಲಿ

ಅವನ ಗರ್ಲ್್ಫ್ರೆಂಡ್ ಅಪ್ರತಿಮ ಸುಂದರಿ. ನೋಡಿದ ಹುಡುಗರೆಲ್ಲಾ 'ವಾವ್!'ಅಂತ ಅನ್ನಲೇ ಬೇಕು. 


ಎಲ್ಲಾ ಹುಡುಗರು ತನ್ನ ಹುಡುಗಿಯನ್ನೇ ನೋಡ್ತಾರೆ ಅಂತಾ ಅವನಿಗೂ ಗೊತ್ತು. ಅದಕ್ಕೆ ಯಾವಾಗಲೂ ಅವಳು ತನ್ನ ಜೊತೆ ಇದ್ದರೆ ಇತರ ಹುಡುಗರ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ.


ಅವರ ದೃಷ್ಟಿ ತನ್ನ ಹುಡುಗಿಯತ್ತ ತಾಕದಂತೆ, ಅವಳನ್ನು ಯಾರಾದರೂ ನೋಡಿದರೆ ಸಾಕು ಅವರನ್ನು ಕಣ್ಣಲ್ಲೇ ಗದರಿಸುತ್ತಿದ್ದ. ತನ್ನ ಹುಡುಗಿಯನ್ನು ಇತರರು ನೋಡಿ ಎಂಜಲು ಸುರಿಸುವುದು ಅವನಿಗೆ ಸಹಿಸಕ್ಕೆ ಸಾಧ್ಯ ಆಗ್ತಾ ಇರಲಿಲ್ಲ. ಅವ ಯಾವಾಗಲೂ ಇತರರ ಕಣ್ಣು, ಚಲನವಲನಗಳನ್ನೇ ಗಮನಿಸುತ್ತಿದ್ದ. 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೂ ಒಂದು ಲವ್ ಸ್ಟೋರಿ..

ಭಾನುವಾರ ಬೆಳಗ್ಗೆ ಆರೂವರೆ ಗಂಟೆ. ನನ್ನ ಮೊಬೈಲ್ ರಿಂಗಣಿಸಿದಾಗ ನಿದ್ದೆ ಕಣ್ಣಲ್ಲೇ ತಲೆದಿಂಬು ಪಕ್ಕದಲ್ಲಿರಿಸಿದ ಮೊಬೈಲ್ ತೆಗೆದು ನೋಡಿದೆ.


Surya calling....


ಅರೇ...ಈ ಚಳಿಗೆ ಹತ್ತೂವರೆ ಗಂಟೆಯಾದರೂ ಹಾಸಿಗೆ ಬಿಟ್ಟು ಏಳದಿರುವ ಈ ಮನುಷ್ಯ ಯಾಕಪ್ಪಾ ಇಷ್ಟು ಬೆಳಗ್ಗೆ ನನಗೆ ಕಾಲ್ ಮಾಡುತ್ತಿದ್ದಾನೆ? ಎಂದು ನನಗೆ ಅಚ್ಚರಿಯಾದುದುರಲ್ಲಿ ವಿಶೇಷವೇನಿಲ್ಲ. ಯಾಕೆಂದರೆ ನಿನ್ನೆ ರಾತ್ರಿ ನಾವಿಬ್ಬರೂ ಫೋನ್್ನಲ್ಲಿ ಹದಿನೈದು ನಿಮಿಷ ಹರಟಿದ ನಂತರವೇ ನಿದ್ದೆ ಹೋದದ್ದು. ಅಚಾನಕ್ ನನಗೆ ಬೆಳಗ್ಗೆ ಕಾಲ್ ಮಾಡಬೇಕಾದ ಅಗತ್ಯವೇನಾದರೂ ಬಂತು?


ಹಲೋ ಅಂದೇ...." ವಿನೀ...ನೀನು ಇವತ್ತು ಫ್ರೀ ಇದ್ದೀಯಾ? ಯಾಕೆ?


ಹೇಳು.. ನೀ ಫ್ರೀ ಆಗಿದ್ದರೆ ನನಗೊಂದು ಹೆಲ್ಪ್ ಬೇಕಿತ್ತು.


ನನ್ನಿಂದ ನಿನಗೆ ಹೆಲ್ಪ್? :) ಏನು ಹೇಳು ಮಾರಾಯಾ..


ಅದೂ...ನಂಗೊಂದು ವ್ಯಾಲೆಂಟೈನ್ಸ್ ಡೇ ಗಿಫ್ಟ್ ಖರೀದಿಸಬೇಕಿತ್ತು. ಅದಕ್ಕೆ ನನ್ನ ಜೊತೆ ಬರ್ತೀಯಾ?


ಹೂಂ..ಯಾರಿಗೆ?


ನನ್ನ ಗರ್ಲ್್ಫ್ರೆಂಡ್್ಗೆ ಮತ್ಯಾರಿಗೆ?


ಯಾರವಳು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (18 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

e-ಪ್ರೀತಿ

ಹಾಯ್,
ಗುಡ್ ಮಾರ್ನಿಂಗ್
ಹೆಲೋ
ಆರ್ ಯು ದೇರ್?
ಯಸ್
ಅಬ್ಬಾ!! ಕೊನೆಗೂ ಅವನು ನನ್ನ ಮೆಸೇಜ್್ಗೆ ಉತ್ತರಿಸಿದ. ನಂಗೆ ಅವನು ಸಿಕ್ಕಿದ್ದೇ ಚಾಟ್ ರೂಮಿನಲ್ಲಿ.. ನನ್ನ ಚಾಟ್ ಲಿಸ್ಟ್್ನಲ್ಲಿ ಸುಧೀ...ಅವನೇ ಸುಧೀಶ್ ಹೆಸರು ಮುಂದೆ ಗ್ರೀನ್ ಲೈಟ್ ಕಂಡರೆ ಕೂಡಲೇ ನಾನು ಹಾಯ್ ಮೆಸೇಜ್ ಕಳುಹಿಸುತ್ತಿದ್ದೆ. ನಾವು ಈವರೆಗೂ ಭೇಟಿಯಾಗಿಲ್ಲ. ಮಾತ್ರವಲ್ಲದೆ ನಾನು ಹೇಗಿದ್ದೇನೆ ಎಂದು ಅವನಿಗೂ ಅವ ಹೇಗಿದ್ದಾನೆ ಎಂದು ನನಗೂ ತಿಳಿದಿಲ್ಲ. ಆದರೂ ಏನೋ ಒಂದು ಆತ್ಮೀಯತೆ. ಅವನ ಜೊತೆ ಚಾಟ್ ಮಾಡದೇ ಇದ್ದ ದಿನ ಮನಸ್ಸಲ್ಲಿ ಏನೋ ಒಂದು ರೀತಿಯ ತಳಮಳ. ಈ ರೀತಿ ಅವನಿಗೂ ಅನಿಸುತ್ತದಾ ಎಂದು ನಂಗೆ ಗೊತ್ತಿಲ್ಲ. ಆದರೂ ನಾನಂತೂ ಅವನೊಂದಿಗೆ ಚಾಟಿಂಗ್ ಮಾಡುವುದರಲ್ಲಿ ಸಂತೋಷ ಕಂಡುಕೊಳ್ಳುತ್ತೇನೆ.


ಸುಧೀ....


ಯಸ್


ಬ್ಯುಸಿ?


ನೋ...


ಟೆಲ್ ಮಿ...


ನಥಿಂಗ್...


ಅನು... ಏನಾಯ್ತು ಹೇಳು?


ಏನಿಲ್ಲ...


ಊಟ ಮಾಡಿದ್ಯಾ?


ಇಲ್ಲ..


ಯಾಕೆ?


ಮೂಡ್ ಇಲ್ಲ...


ವೈ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪ್ರಣಯ