ಪ್ರೇಮಪತ್ರ

ಒಲವಿನೋಲೆ

ಮನದನ್ನೆ,
ಕಣ್ರೆಪ್ಪೆ ಮಿಟುಕುವುದರೊಳಗೆ ಅದಾವ ಒಲವಿನಂಬನೆಸೆದೆಯೋ ನಾ ಕಾಣೆ. ವಿರಹದುರಿಯಿಂದ ಬೆಂದು ಬರಡಾಗಿದ್ದ ಎನ್ನೆದೆಗೆ ಒಲುಮೆಯ ತಂಪು ಮಳೆಗರೆದೆ ನೀನು. ಚೈತ್ರ ಪಲ್ಲವಿಸುವ ವೇಳೆ ಎನಗಾಯ್ತು ನೀ ಬಂದ ಘಳಿಗೆ. ತುಸು ಕೋಪ, ಹುಸಿ ಮುನಿಸು ಮೆಳೈಸಿ ನಮ್ಮಿಬ್ಬರ ಪ್ರೇಮಾಂಕುರವಾದದ್ದು ಈಗ ಇತಿಹಾಸ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಗ್ನ ಪ್ರೇಮಿ

(ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.)

ನಾನಂದು ಅಂದೆ ನನಗೆ, ನೀ ಬೇಡವೆಂದು.

ನಾನಿಂದು ಎನುವೆ ನನಗೆ, ನೀ ಸಾಕೆಂದು.

 

ಕುಳಿತಿಹೆನು ನಾನು, ಆ ದಿನವ ನೆನೆದು.

ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು.

ತಿಳಿಯುತಿಲ್ಲ ನನಗೆ, ಹಾಗೇಕೆ ಅಂದೆನೆಂದು .

ಬಯಸುತಿರುವೆ ನಾನು, ನೀನದನ ಮರೆಯುವೆ ಎಂದು.

 

ಮರೆತಿಹೆನು ಬಾಳುವುದು, ನಾನಿಂದು ಕುಂದು.

ಆದರೆ ಮರೆಯಲಾರನು ನಿನ್ನ, ನಾನೆಂದು.

ಶಿಲೆಯಾಗಿಹೆನು, ನಾನಿಂದು ಬೆಂದು.

ನೀ ನಗಬೇಡ ಇಂದು, ನನ್ನನ್ನು ಕೊಂದು.

 

ನೀನಾಗಿಹುವೆ ನನ ಬಾಳಿನ, ಕೇಂದ್ರ ಬಿಂದು.

ಆದರೆ ಮರೆಯಾಗಿಹುದು, ನನ ಮನಸು ಇಂದು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮನಸ್ಸನ್ನು ಕಾಡಿದ ಆ ನಗು..

ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ ಪುಳಕ. ಆಫೀಸಿನಲ್ಲಿ ನೀನು ಏನೋ ನೆಪ ಮಾಡಿಕೊಂಡು ನನ್ನ ಕ್ಯಾಬಿನ್ ಪಕ್ಕ ಬರುವಾಗ ಇವ ಇಂದು ನನ್ನಲ್ಲಿ ಮಾತಾಡಿಯೇ ಮಾತಾಡುತ್ತಾನೆ ಎಂದು ನಾನು ಅಂದುಕೊಳ್ಳುತ್ತೇನೆ. ಆದ್ರೆ ನೀನು...ಅದೇ ಮುಗುಳ್ನಗು ಕೊಟ್ಟು ಮತ್ತೆ ಮತ್ತೆ ನನ್ನನ್ನು ಚಡಪಡಿಸುವಂತೆ ಮಾಡ್ತಿಯಾ... ನಿಜ ಹೇಳಲಾ? ನಿನ್ನ ಆ ನಗುವಿನಲ್ಲಿ ಅದೇನು ಜಾದೂ ಇದೆಯಂತ ನಂಗೊತ್ತಿಲ್ಲ ಕಣೋ. ನಿನ್ನ ನಗುವಿನ ಮುಂದೆ ನಾನಂತೂ ಕ್ಲೀನ್ ಬೌಲ್ಡ್ ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾ ಬರೆದ ಮೊದಲ ಪ್ರೇಮಪತ್ರಕ್ಕೆ ಬಂದಿತ್ತು ಬಹುಮಾನ!

ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ನಡೆದ ಘಟನೆಯಿದು. ನನ್ನ ಆಪ್ತ ಸ್ನೇಹಿತನೊಬ್ಬ ನನ್ನ ಗೆಳತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಆಕೆ ಕನ್ನಡದ ಹುಡುಗಿ ಮತ್ತು ಇವ ಮಲಯಾಳಿ. ಅವರಿಬ್ಬರು ಮನಸ್ಸಲ್ಲೇ ಪ್ರೀತಿಸುತ್ತಿರುವುದು ನಮ್ಮ ಗುಂಪಿನ ಎಲ್ಲಾ ಸ್ನೇಹಿತರಿಗೆ ಗೊತ್ತು.

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಪ್ರೇಮಪತ್ರ