ಬಡತನ

ಬಡತನದ ಸುಖ ಅಂದ್ರೆ....

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್ ಹಾಕಿಕೊಳ್ಳಲಿ? ಎಂದು ಕನ್್ಫ್ಯೂಸ್ ಆಗಿ ಕುಳಿತುಕೊಂಡಿರುವಾಗ ಅಪ್ಪ ಹೇಳಿದ ಮಾತುಗಳಿವು. ನಿಜ, ಈವಾಗ ನಾವು ಈ ಎಲ್ಲಾ ಸುಖಗಳನ್ನು ಅನುಭವಿಸಬೇಕಾದರೆ ನಮ್ಮ ಅಪ್ಪ ಅಮ್ಮ ಎಷ್ಟು ಕಷ್ಟ ಪಟ್ಟಿರಬೇಕು ಅಲ್ವಾ? ನನ್ನ ಅಪ್ಪ ನಗರದಲ್ಲಿ ಓದಿ ಬೆಳೆದವರು. ಆದರೆ ಮನೆಯಲ್ಲಿ ಬಡತನ. ಅಪ್ಪ ಹೇಳುವಂತೆ ಆ ಬಡತನದಲ್ಲೂ ಒಂದು ಸುಖವಿತ್ತು. ನಮ್ಮಜ್ಜಿಗೆ 6 ಜನ ಮಕ್ಕಳು. ತುಂಬು ಸಂಸಾರ. ಕೂಲಿ ಕೆಲಸ ಮಾಡಿಯೇ ಸಂಸಾರ ಸಾಗಬೇಕಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (13 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬಡತನ