ಬಾಲ್ಯ

ಮರಳಿ ನೆನಪಿಗೆ..

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ ನನ್ನ ಕೆಲಸದ ರೀತಿ ರಿವಾಜುಗಳನ್ನರಿತ ನನ್ನ ಮ್ಯಾನೇಜರ್ ನನಗೆ ರಜೆ ಅಂತ ಕೊಡದಿದ್ದರೂ, ಇಂಟರ್ನೆಟ್ ನೆಟ್ವರ್ಕ್ ಇರುವಂಥ ಜಾಗದಿಂದ ಕುಳಿತು ಕೆಲಸ ಮಾಡಲು ಅನುಮತಿ ನೀಡಿದ್ದಳು. ಒಂದೇ ವಾರದಲ್ಲಿ ಮೂರು ಮದುವೆ ಇದ್ದ ಕಾರಣ ನಾಲ್ಕು ದಿನಗಳ ಮುಂಚೆಯೇ ನಮ್ಮೂರ ಕಡೆ ಧಾವಿಸಿದ್ದೆ. ಮಾವನ ಮನೆ ಇರುವುದು ತೀರ್ಥಹಳ್ಳಿಯಲ್ಲಿ. ಅಲ್ಲೇ ಕುಳಿತು ಸಂಜೆಯ ನಂತರ ಅಮೇರಿಕ ಕಚೇರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅರ್ಹತೆ

ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡು ಹಿತ್ತಲಿನಿಂದ ತಂದ ಬಾಳೆಯ ಎಲೆ ಎಷ್ಟು ಸ್ವಚ್ಚವಾಗಿತ್ತೋ ಅಷ್ಟೇ ಸ್ವಚ್ಛವಾಗಿ ಊಟ ಮಾಡಿದ ಅನಂತರವೂ ಸಹ ಮಡಿಚಿ ಎಸೆದು ನೆಲ ಸಾರಿಸಿ ಒರೆಸಿ ಹೋಗುತ್ತಿದ್ದ ಅವರ ಶಿಸ್ತನ್ನು ಅಮ್ಮ ನನಗೆ ಕರೆದು ತೋರಿಸುತ್ತಿದ್ದಳು. ನೋಡು, ಊಟ ಎಷ್ಟು ಚೆಂದ ಮಾಡುತ್ತಾನೆ ಈ ಹುಡುಗ, ನೀನೋ ಇದ್ದೀಯಾ.. ತಟ್ಟೆಯಲ್ಲಿ ಅನ್ನ ಬಿಡುತ್ತೀಯಾ. ಬೆಲೆ ಇಲ್ಲ ಅನ್ನದ್ದು.. ಅದರ ಕಷ್ಟ ನಿನಗೆ ಗೊತ್ತಿಲ್ಲ. ಆವಾಗಿಂದ ನಾನು ಸಹ ಎಷ್ಟು ಬೇಕೋ ಅಷ್ಟೇ ಹಾಕಿಸಿಕೊಂಡು ಊಟ ಮಾಡಿ, ತಿಂದ ತಟ್ಟೆಯನ್ನು ತೊಳೆದಿಡಲು ಶುರು ಮಾಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಣ್ಣಾಮುಚ್ಚಾಲೆ ಆಟ.

ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಹೇಳುತ್ತಿದ್ದ ಸಾಹಿತ್ಯ ಹೀಗಿದೆ: 

ಕಣ್ಣಾಮುಚ್ಚೆ 
ಕಾಡೆಗೂಡೆ 
ಉದ್ದಿನ ಮೂಟೆ 
ಉರುಳೇಹೋಯ್ತು 
ನಮ್ಮಯ ಹಕ್ಕಿ 
ನಿಮ್ಮಯ ಹಕ್ಕಿ 
ಬಿಟ್ಟೆನೋ ಬಿಟ್ಟೆ. 

ಈ ಸಾಹಿತ್ಯ ಈಗ ನೆನಪಾಯ್ತು. ಏಕೆಂದರೆ, ನೆರೆಹೊರೆಯ ಮಕ್ಕಳು ಕಣ್ಣಾಮುಚ್ಚಾಲೆ ಆಟವನ್ನು ಆಡ್ತಿದ್ರು. ಅವರು ಒಂದು, ಎರಡು, ಮೂರು ಎಂದು ನೂರರವರೆಗೂ ಎಣಿಸುತ್ತಾ ಆಡುತ್ತಿದ್ದರು. ನನ್ನ ಬಾಲ್ಯವನ್ನು ನೆನೆದಾಗ ಈ ಸಾಹಿತ್ಯ ನೆನಪಾಯ್ತು. 

-ಅನಿಲ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನಾನು ಸೈಕಲ್ ಕಲಿತದ್ದು (ಪ್ರಬಂಧ)

"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ"


 "ಎಂತಕೆ, ನೀ ಸೈಕಲ್ ಕಲಿಲ್ಲೆ?"


 "ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?"


ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ ಕೇಳಿಸಿಕೊಂಡೆನೋ, ಲೆಕ್ಕವೇ ಸಿಗದು. ಸಹಪಾಠಿಗಳೆಲ್ಲ ಸೈಕಲ್ ಮೇಲೆ ಹೋಗುವಾಗ, ನನಗೆ ಸೈಕಲ್ ಬಿಡಲು ಬರುವುದೇ ಇಲ್ಲ ಎಂದು ಹೇಳಿಕೊಳ್ಳಬೇಕಾದ ಅನಿವಾರ್ಯತೆ. "ತಕೊ, ಈ ಸೈಕಲ್ ತಕೊಂಡು ಹೋಗಿ, ಆ ಅಂಗಡಿಯಿಂದ ಇದೇನನ್ನೋ ತಕಂಡ್ ಬಾ" ಎಂದು ಅಧ್ಯಾಪಕರೋ,ಬೇರಾರೋ ಹೇಳಿದರೆ, ಇಲ್ಲಪ್ಪ, ಸೈಕಲ್ ಹೊಡೆಯಲು ಬರುವುದಿಲ್ಲ ಎಂದು ಹೇಳಿ, ಅವರನ್ನು ಅಚ್ಚರಿಪಡಿಸಿದ್ದೂ ಉಂಟು. ಕಾಲೇಜಿಗೆ ಹೋಗುವಾಗಲೂ, ಸೈಕಲ್ ಸವಾರಿ ಬಾರದವನು ಇಡೀ ಕ್ಲಾಸಿಗೆ ನಾನೊಬ್ಬನೇ ಇರಬಹುದೇನೊ! ನನ್ನ ಸಹಪಾಠಿಗಳಲ್ಲಿ ಒಂದಿಬ್ಬರು ಮೋಟರ್ ಬೈಕ್ ಓಡಿಸುವಲ್ಲಿಗೆ ಮುಂದುವರಿದಿದ್ದರೂ, ನಾನ್ಯಾವಾಗ ಸೈಕಲ್ ಕಲಿಯುವುದೆಂಬ ಅಳುಕು ಮನದ ಮೂಲೆಯಲ್ಲಿ!.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕಾಡುವ ಭೂಮಿ ಹುಣ್ಣಿಮೆಯ ನೆನಪುಗಳು...!

ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ  ಅತ್ತೆ  ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ  ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿಸುತ್ತಿರಲಿಲ್ಲ. ಆದರೆ ಇದಕ್ಕೆ ಭೂಮಿ ಹುಣ್ಣಿಮೆ ಮತ್ತು ದೀಪಾವಳಿ ಮಾತ್ರ ಹೊರತಾಗಿತ್ತು. ಈ ಎರಡು ಹಬ್ಬಗಳು ತಪ್ಪದೇ  ನಮ್ಮ ಮನೆಯಲ್ಲಿ ನೆಡೆಯುತ್ತಿತ್ತು. ನಮಗೆ ಕಾರಣ ಮಾತ್ರ  ಆಗ ತಿಳಿದಿರಲಿಲ್ಲ. ಆದರೆ ನಾವು  ಕೃಷಿಕರಾಗಿದ್ದೇ ಈ ಹಬ್ಬದ ಬಗ್ಗೆ  ಹೆಚ್ಚಿನ ಒಲವಿಗೆ ಕಾರಣ ಎಂಬುದು ಈಗ ಅರ್ಥವಾಗಿದೆ. ಹಾಗೆ ನನಗೂ  ಈ ಎರಡು ಹಬ್ಬಗಳು  ಬೇರೆ ಕಾರಣಗಳಿಗೆ ಇಂದಿಗೂ ಅತೀ ಪ್ರಿಯವಾದವು. ಇವುಗಳು ನನ್ನ ಬಾಲ್ಯದ ಮಧುರ ನೆನೆಪುಗಳೊಂದಿಗೆ ಬೆಸೆದು ಕೊಂಡಿವೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಜೀವನ ದರ್ಶನ..

ಈ ದಿನ ಒಬ್ಬೊಬ್ಬರೇ ನನ್ನ ಮು೦ದೆ ಬೆತ್ತಲಾಗುತ್ತಿದ್ದಾರೆ,


ಹೇಳಿದ್ದೆಲ್ಲವನ್ನೂ ಮರೆತು, ನಾ ಅ೦ದುಕೊ೦ಡಿದ್ದೆಲ್ಲವನ್ನೂ


ಒಮ್ಮೆಲೇ ಸುಳ್ಳಾಗಿಸುವ೦ತೆ!


ಕ೦ಡೂ ಕಾಣದ೦ತೆ ಇರಬೇಕೆ೦ದಿದ್ದರೂ


 ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ


ತಮ್ಮದೇ ಸರಿ ಎ೦ಬ೦ತೆ ಸಮರ್ಥಿಸಿಕೊಳ್ಳುವ


ರೀತಿಯೋ ನನ್ನನ್ನೇ ತಬ್ಬಿಬ್ಬುಗೊಳಿಸುತ್ತಿದೆ!


ಒಳ್ಳೆಯದಾಯಿತು! ಇದು ಮು೦ದೆ೦ದಾದರೂ


ಆಗಲೇ ಬೇಕಿತ್ತು, ಅದು ಈ ದಿನವೇ ಆಯಿತು!


 


ಒಬ್ಬೊಬ್ಬರಿ೦ದ ಒ೦ದೊ೦ದು ರೀತಿಯಲ್ಲಿ


ಜೀವನ ದರ್ಶನವಾಗುತ್ತಿದೆ.


ಜೀವನವೇ ಇಷ್ಟೇನೇ? ಇಲ್ಲ!


ಇನ್ನೂ ಏನೇನಿದೆ ಇಲ್ಲಿ!ನಾನು ಅರಿಯುವ೦ಥದ್ದು?


ಇದೆ. ಕೆಡುಕಿನ ಹಿ೦ದೆಯೇ ಕಾಣುತ್ತಿರುವ ಬೆಳ್ಳಿ ಬೆಳಕು


ನನ್ನದೇ ಎ೦ಬ ಸ೦ಪೂರ್ಣ ವಿಶ್ವಾಸವಿದ್ದರೂ


ಅಕಸ್ಮಾತ್ ಮು೦ದಿನ ಅನುಭವವೂ


ಹಿ೦ದಿನದೇ ಆದರೆ ಎ೦ಬ ಅಳುಕಿಲ್ಲದಿಲ್ಲ.


ಆದರೂ ಹೆಜ್ಜೆ ಹಾಕುತ್ತಿರುವೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೇಸಿಗೆ ರಜಾ ಮಸ್ತ್ ಮಜಾ....

ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಎರಡು ತಿಂಗಳು ರಜಾ. ಏಪ್ರಿಲ್, ಮೇ ತಿಂಗಳಲ್ಲಿ ಸಿಗುವ ಬೇಸಿಗೆ ಕಾಲದ ರಜೆಯಾದರೂ ಆ ರಜೆಯಲ್ಲಿನ ಗಮ್ಮತ್ತೇ ಬೇರೆ. ರಜೆಯ ಮಜಾ ಸವಿಬೇಕಾದರೆ ಹಳ್ಳಿಯಲ್ಲಿ ಹುಟ್ಟಬೇಕು ಎಂಬುದು ನನ್ನ ಅಭಿಪ್ರಾಯ. ಹಳ್ಳಿಯಲ್ಲಿ ರಜಾ ಕಾಲ ಕಳೆದವರಿಗೇ ಗೊತ್ತು ಅದರ ಮಜಾ ಏನೆಂದು. ನಗರದಲ್ಲಿ ಬೆಳೆದ ಸಂಬಂಧಿಕರ ಮಕ್ಕಳು ಈ ರಜಾ ಬಂದ ಕೂಡಲೇ ಸ್ವಿಮಿಂಗ್ ಕ್ಲಾಸು, ಕರಾಟೆ ಕ್ಲಾಸು ಅಂತಾ ಬ್ಯುಸಿಯಾಗಿರುವುದನ್ನು ನೋಡಿದಾಗ ನನ್ನ ಬಾಲ್ಯ ಅದೆಷ್ಟು ಸುಂದರವಾಗಿತ್ತು ಅಂತಾ ಅನಿಸಿ ಬಿಡುತ್ತದೆ. ಶಾಲೆಯ ಹೋಂ ವರ್ಕ್, ಕಾಪಿ ಬರೆಯುವ ತಲೆಬಿಸಿ ಇಲ್ಲ. ಅಂದಿನ ಬೇಸಿಗೆ ರಜಾ ದಿನಗಳೇ ಅಂತದ್ದು. ಏಪ್ರಿಲ್ ಮೇ ತಿಂಗಳಲ್ಲಿ ಸುಡು ಬಿಸಿಲಾದರೂ ನಾವದನ್ನು ಕ್ಯಾರೇ ಮಾಡುತ್ತಿರಲಿಲ್ಲ. ಬೆಳಿಗ್ಗೆ ಎದ್ದು ಅಣ್ಣನ ಜೊತೆ ಸೈಕಲ್ ಸವಾರಿ ಎಷ್ಟು ಮಜಾ ಕೊಡ್ತಿತ್ತು ಗೊತ್ತಾ? ಮನೆಯ ಮುಂದಿರುವ ಮಾವಿನ ಮರದಲ್ಲಿ ಜೋಕಾಲಿ ಆಡಲು, ಮರ ಹತ್ತಿ ಮಂಗನಾಟ ಆಡುವುದು ...ಪೊಟರೆಯಲ್ಲಿ ಇಣುಕಿ ಹಕ್ಕಿ ಮೊಟ್ಟೆ ಇದೆಯಾ ಅಂತಾ ನೋಡುವುದು ಹೀಗೆ ಏನೆಲ್ಲಾ ಕಿತಾಪತಿಗಳು! 

ಆ ಬಾಲ್ಯ ಎಷ್ಟು ಸುಂದರವಾಗಿತ್ತು. ನನ್ನ ಅಣ್ಣ ಓರಗೆಯ ಹುಡುಗರ ಜೊತೆ ಕ್ರಿಕೆಟ್ ಆಡುವಾಗ ಬಾಲ್ ಎಲ್ಲಿ ಯಾವ ಹಿತ್ತಿಲಿಗೆ ಬೀಳುತ್ತದೆ ಎಂದು ನೋಡಿಕೊಳ್ಳುವುದು ನನ್ನ ಕೆಲಸ. ಅಲ್ಲಿ ತಂದಿಟ್ಟ ನೀರಿನ ಕೊಡದ ಪಕ್ಕ ನಾಯಿಯೋ ಕಾಗೆಯೋ ಬಂದರೆ ಅದನ್ನು ಓಡಿಸಬೇಕು, ಕೆಲವೊಮ್ಮೆ ಥರ್ಡ್ ಅಂಪೈರ್ ಥರಾ ಔಟ್ ಹೌದೋ ಅಲ್ಲವೋ ಅಂತಾ ಹೇಳ್ಬೇಕು. ಆದ್ರೂ ಹುಡುಗರೆಲ್ಲ ಕ್ರಿಕೆಟ್ ಆಡುವಾಗ ನಾನು ಹುಡುಗ ಆಗಿರುತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಅನಿಸಿ ಬಿಡ್ತಿತ್ತು. ಇನ್ನೇನು ಕೇವಲ ಬ್ಯಾಟ್್ನಷ್ಟೇ ಉದ್ದವಿರುವ ನೀನು ಹೇಗೆ ಬ್ಯಾಟಿಂಗ್ ಮಾಡ್ತೀಯಾ ಅಂತಾ ಅಣ್ಣ ತಮಾಷೆ ಮಾಡಿದಾಗ ಅಪ್ಪ ನನಗಾಗಿಯೇ ಕೊತ್ತಳಿಗೆಯ ಬ್ಯಾಟ್ ಮಾಡಿಕೊಟ್ಟಿದ್ರು. ಹಾಗೆ ನಾನು ಮತ್ತು ಅಪ್ಪ ನಮ್ಮ ಅಂಗಳದಲ್ಲೇ ಕ್ರಿಕೆಟ್ ಆಡ್ತಾ ಇರ್ಬೇರಾದ್ರೆ, ಸೆಗಣಿ ಸಾರಿಸಿದ ಅಂಗಳ ಹಾಳು ಮಾಡ್ಬೇಡಿ ಎಂದು ಅಮ್ಮ ಬೊಬ್ಬೆ ಹಾಕ್ತಿದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾಲ್ಯದಲ್ಲಿ ಕಂಡ ಗ್ರಹಣ

ಸೂರ್ಯನಿಗೂ ಅಡ್ಡಗಟ್ಟುವವರಿದ್ದಾರಲ್ಲಾ…!! ಕಣ್ಣು ಹಾಗೆಯೇ ಕ್ಯಾಲೆಂಡರ್ ನೋಡಿತು.. ಮನಸ್ಸು ಹಾಗೆಯೇ.., ಈ ಸೂರ್ಯಗ್ರಹಣದ ಯೋಚನಾ ಲಹರಿಯ ಸುತ್ತ ಸುತ್ತ ತೊಡಗಿತು. ಬಾಲ್ಯದಲ್ಲಿ ಇದೇ ರೀತಿ.. (ಮೂರನೆಯೋ, ಐದನೆಯೋ ಕ್ಲಾಸ್ನಲ್ಲಿದ್ದಾಗ)ಮಧ್ಯಾಹ್ನ ಹೊತ್ತಲ್ಲೆ ಗ್ರಹಣ ಕಾಲವಿತ್ತು.ರಜಾ ದಿನವೇ ಬಂದಿತ್ತು. ನಾವೆಲ್ಲರೂ ನನ್ನ ಅಜ್ಜನ ಮನೆಯಲ್ಲಿದ್ದೆವು. ಹೆಚ್ಚಿನ ಮೊಮ್ಮಕ್ಕಳೆಲ್ಲರೂ ಸೇರಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಕ್ಕಳ ದಿನಾಚರಣೆಯ ಶುಭಾಶಯಗಳು

ನಮ್ಮ ಮನೆಯಲ್ಲಿ, ಸುತ್ತಮುತ್ತಲು ಇರುವ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ ಹಿರಿಯರಿಗೆ ಆ ಮಕ್ಕಳ ದಿನವನ್ನು ನೆನಪು ಮಾಡಿಕೊಳ್ಳುವ ಎನ್ನುತಾ, ನಮ್ಮ ನೆನಪುಗಳಲ್ಲಿ ಉಳಿದಿರುವ ಮಕ್ಕಳ ದಿನಾಚರಣೆಯ ಸಂಭ್ರಾಮಾಚರಣೆಯ ಹಂಚಿಕೊಳ್ಳೋಣ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಅನಾಥ ನಾಳೆಗಳು

ಮಕ್ಕಳಿಲ್ಲದೆ ಪರಿತಪಿಸುವ
ಕುಟುಂಬಗಳೆಷ್ಟೋ ನಮ್ಮೆಡೆ
ಒಂದೆಡೆ, ಬಂಧು ಬಳಗವಿಲ್ಲದೆ
ಅಲೆಯುತ್ತಿವೆ ಅದೆಷ್ಟೊ ಕಂದಮ್ಮಗಳು

ಪುಟ್ಟ ಕೈಗಳಲ್ಲಿ ಭಿಕ್ಷಾ ಪಾತ್ರೆ
ಹರಿದ ಅಂಗಿ, ತುಂಡು ಲಂಗ
ಯಾರೋ ಉಂಡು ಮಿಕ್ಕಿದ್ದೇ
ಇವರಿಗೆ ಮೃಷ್ಟಾನ್ನ

ಯಾರು ಹೆತ್ತರೋ ಇವರನ್ನು
ಅವರಿಗೇ ತಿಳಿದಲ್ಲ...ಆದರೂ
ಬದುಕುತ್ತವೆ ಈ ಎಳೆ ಜೀವಗಳು
ಏನೋ ನಿರೀಕ್ಷೆಯಲ್ಲಿ...

ಯಾವನೋ ತನ್ನ ಮೈ ಸುಖದ ತವಕದಲಿ
ಹುಟ್ಟಿದ ಎಳೆ ಕಂದಮ್ಮಗಳನು
ಲೋಕ ಕಾಣುವ ಮುನ್ನ
ಚಿವುಟಿ ಬಿಡುವರು ಕೆಲವರು

ಈ ಲೋಕದಲಿ ಹುಟ್ಟಿದ್ದೇನೋ
'ಪಾಪ' ಎಂಬಂತೆ ಇನ್ನೂ ಕೆಲವರು
ಎಸೆಯುತ್ತಾರೆ ಮುಗ್ದ ಮಗುವನ್ನು
ಕಸದ ತೊಟ್ಟಿಗಳಲ್ಲಿ...

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಬಾಲ್ಯ