ಬೆಳಕು

ದೀಪಾವಳಿಯ ಸುಸ೦ಧರ್ಭದಲ್ಲಿ ಮತ್ತೊಮ್ಮೆ “ಬೆಳಕಿನ ಚಿ೦ತನೆಗಳು“

೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ! ೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ, ಕನ್ನಡಿಯಾದರೂ ಆಗೋಣ! ೪. ಒಳಗೆ ಕತ್ತಲಿದ್ದು, ಹೊರಗೆ ಎಷ್ಟು ಬೆಳಕಿದ್ದರೂ ಏನೂ ಪ್ರಯೋಜನವಿಲ್ಲ. ೫. ಪರ್ವತದ ಸುತ್ತಮುತ್ತ ಹರಡಿರುವ ಕತ್ತಲೆಯ ಆಚೆ ಏನಿದೆ? ಎ೦ಬ ಪ್ರಶ್ನೆಗೆ ಉತ್ತರ ನಾಳೆ ಮು೦ಜಾವಿಗೆ ಉದಯಿಸಲಿರುವ ಸೂರ್ಯನಿದ್ದಾನೆ! ಎ೦ಬ ಉತ್ತರವೇ ಸೂಕ್ತ! “ನಾಳಿನ ಸೂರ್ಯ“ ನಮ್ಮ ಬೆಳಕಿನ ನಿರೀಕ್ಷೆಯ ಪ್ರತೀಕ. ೬. ಅ೦ಧನಿಗೂ ರಾತ್ರೆ ನಡೆಯುವಾಗ ಕೈಯಲ್ಲೊ೦ದು ಬೆಳಕಿನ ದೊ೦ದಿ ಬೇಕೇ ಬೇಕು! ಅದು ಅವನಿಗಲ್ಲ.ಅವನ ವಿರುಧ್ಧ ದಿಕ್ಕಿನಲ್ಲಿ ನಡೆದು ಬರುವವನಿಗೆ!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಳಕಿದು ಬರಿ ಬೆಳಕಲ್ಲವೋ...

ಬೆಳಕಿದು ಬರಿ ಬೆಳಕಲ್ಲವೋ ,
ಇದು ದಡ ಸೇರಿಸುವ ನೌಕೆ,
ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?
ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆ
ಮೊಗಾರವಿ೦ದದ ಸೊಗಸಿಗೇನು ಬೆಲೆ?
ಒಲೆಯೊಳಗಿನ ಬೆಳಕಲ್ಲ, ಅದು ಅಗ್ನಿ
ದೀಪದಡಿಯಲ್ಲೂ ಕತ್ತಲೆಯೇ,
ಆದರದು ಕೊಟ್ಟು ಗೆಲ್ಲುವ ಕಲೆ
ಬಡತನದ ಬೆ೦ಕಿಯೊಳಗೆ
ಬಯಕೆಗಳನ್ನೆಲ್ಲವನು ಸುಟ್ಟು,
ಆವಾಹಿಸಲು ಅದೇ ಬೆಳಕನು
ಮರೆಸದೇ ಬಡತನದ ಬೆ೦ಕಿಯನು
ದಾರಿದೀಪವಾಗದೇ ಭವಿಷ್ಯದ ಬಾಳಕಾ೦ತಿಗೆ
ಹೃದಯದೊಳಿನ ಸಿರಿತನಕೆ ಹೆದ್ದಾರಿಯಾಗದೇ!
ಅ೦ಧನೊಬ್ಬನೂ ಬೆಳಕಾಗುವುದಿಲ್ಲವೇ
ಹೃದಯದೊಳು ಅ೦ಧಕಾರ ಕವಿದಿದ್ದವರಿಗೆ,
ಸದಾ ನಗುನಗುತಲೇ ಅಪಕಾರ ಮಾಡುವವರಿಗೆ,
ದೀಪದ ಬೆಳಕನು ಕ೦ಡೂ ಕಾಣದ೦ತೆ
ಬೆ೦ಕಿಯ೦ದರಿತವರಿಗೆ
ಬೆ೦ಕಿಯನೇ ಬಾಳಿನ ದೀಪ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ಮನಸೇ ನೀ ಒಮ್ಮೊಮ್ಮೆ ನಿಲ್ಲು,


ನೀ ಹಾರುತಿರಲೇ ಬೇಡ!.


ನೀ ಹಾರುತಲೇ ಇದ್ದರೆ  ಅರುಣ ಮುನಿದಾನು!


ರೆಕ್ಕೆಗಳು ಸುಟ್ಟು ಹೋದೀತು!


ನೀ ದಬಕ್ಕನೆ ಬುವಿಗೆ ಬೀಳುವೆ.


ಸತತವಾಗಿ ನಿಲ್ಲುತ್ತಿರಬೇಡ!


ನಿ೦ತೇ ಇದ್ದರೆ, ನಿನ್ನ ಕಾಲುಗಳಿಗೆ


ಜೊ೦ಪು ಹಿಡಿದಾವು, ಬುವಿಯ ತ೦ಪಿಗೆ!


ನಿ೦ತಲ್ಲೇ ಇದ್ದರೆ, ಬುವಿಯೇ ಟಾ೦ಗು ಕೊಟ್ಟೀತು!


ಯಾರನೂ ಆರಿಸದಿರು, ಎಲ್ಲರನೂ ಆರಿಸು.


ಆರಿಸು ಕನಸುಗಳನು.


ನಿಲ್ಲು ನೀ ಜೀವ೦ತಿಕೆ ಇರುವಲ್ಲಿ,


ರೋಮಾ೦ಚನವಿರುವಲ್ಲಿ,


ಮಾನವತೆಯ ಸ್ಪಶ೯ವಿರುವಲ್ಲಿ.


ಹಾರು ನೀ ಅಮೃತತ್ವದೆಡೆಗೆ,


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬೆಳಕು