ಬ್ಲಾಗ್ ಬರಹಗಳು

ಆಕೆಗೆ ಥ್ಯಾಂಕ್ಸ್ ಹೇಳಿ...ಅಷ್ಟು ಸಾಕು..

ಟಾಮ್್ಬಾಯ್ ಅಂದ್ರೆ ನಿಮಗೆ ಗೊತ್ತು ತಾನೆ? ಗೊತ್ತಿಲ್ಲದಿದ್ದರೆ 'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿ ಅಂಜಲಿ (ಕಾಜೋಲ್) ಕಥಾಪಾತ್ರವನ್ನು ಒಮ್ಮೆ ನೆನಪಿಸಿಕೊಳ್ಳಿ. ಹುಡುಗಿಯಾಗಿದ್ದರೂ ಹುಡುಗನಿಂತಿರುವ ಚೆಲ್ಲಾಟದ ಹುಡುಗಿ. ಅಂದ್ರೆ 'ಟಾಮ್್ಬಾಯ್್'. ಗಂಡಿನ ತರಾನೇ ವೇಷ ಭೂಷಣ...ಕೂದಲು ಟ್ರಿಮ್ ಮಾಡಿಸಿ, ಜೀನ್ಸ್ ,ಟೀ ಶರ್ಟ್ ಹಾಕಿ ಥೇಟ್ ಹುಡುಗನ ಥರಾನೇ, ಕೆಲವೊಮ್ಮೆ ಹುಡುಗನೋ ಹುಡುಗಿಯೋ ಎಂದು ಸಂಶಯ ಬರುವಷ್ಟರ ಮಟ್ಟಿಗೆ ಡ್ರೆಸ್ ಮಾಡುವ ಹುಡುಗಿಯರನ್ನು 'ಟಾಮ್್ಬಾಯ್್' ಅಂತಾ ಕರೆಯುವುದು ರೂಢಿ. ಕೇವಲ ಹುಡುಗನ ತರಾ ಡ್ರೆಸ್ ಮಾಡುವುದು ಮಾತ್ರವಲ್ಲದೆ ಹುಡುಗರು ಮಾಡುವ ಎಲ್ಲಾ ಸ್ಟಂಟ್್ಗಳನ್ನು ಮಾಡುವ ಮೂಲಕವೂ ಓರ್ವ ಹುಡುಗಿ 'ಹುಡುಗ'ಅಂತಾ ಕರೆಸಿಕೊಳ್ಳುತ್ತಾಳೆ.

field_vote: 
Average: 4.5 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು....!!

ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ ಸಲಭವಾಗಿ ಅಲ್ಲಿ ಕೆಲಸ ಪೂರೈಸಿಕೊಳ್ಳಲು ಸಾಧ್ಯವಾಗಿತ್ತಲ್ಲ..! ಅದರಲಿ, ಆ ಕಛೇರಿ ಹೇಗಿತ್ತೂಂತೀರಾ... ಹಾಯಾಗಿ ಎಲ್ಲರೊಂದಿಗೂ(ನಮ್ಮೊಂದಿಗೂ) ಹರಟೆ ಹೊಡೆಯುತ್ತಾ ಸರಾಗವಾಗಿ ಕೆಲಸ ಮಾಡಿ ಕೊಡುತ್ತಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬ್ಲಾಗ್ ಬರಹಗಳು