ಬ್ಲಾಗ್ ಬರಹ

ಕಳೆದು ಹೋದ ಬೀಗದ ಕೀ

ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪಕ್ಕ ಒಂದು ಪುಟ್ಟ ಬೀಗದ ಕೀ ಬಿದ್ದಿತ್ತು. ಅಂಥದ್ದೇ ಕೀ ನನ್ನಲ್ಲಿಯೂ ಇತ್ತು. ಆದರೆ ನನ್ನ ಕೀ ಯಾವತ್ತೂ ಪರ್ಸ್‌ನಲ್ಲೇ ಇರುತ್ತೆ. ಅದು ಬಿದ್ದರೂ ನನ್ನ ರೂಂನಲ್ಲೇ ಬೀಳಬೇಕು. ಐದನೇ ಮಹಡಿಯಲ್ಲಿ ಬೀಳೋಕೆ ಹೇಗೆ ಸಾಧ್ಯ? ಎಂದು ನನ್ನನ್ನ ನಾನೇ ಸಮಧಾನಿಸುತ್ತಾ ಬಟ್ಟೆ ಒಗೆಯಲು ಹೋದೆ. ಬಟ್ಟೆ ಒಗೆಯುವಾಗಲೂ ಆ ಕೀ ತುಂಬಾನೇ ಕಾಡುತ್ತಿತ್ತು. ಯಾರ ಕೀ ಆಗಿರಬಹುದು? ಯಾವ ಹುಡುಗಿಯ ಕೈಯಿಂದ ಬಿತ್ತೇನೋ...ಕೀ ಕಳೆದುಕೊಂಡ ಹುಡುಗಿಯ ಸ್ಥಿತಿ ಹೇಗಿರುತ್ತದೋ ಏನೋ? ಮನಸ್ಸಲ್ಲಿ ಸಾಲು ಸಾಲು ಪ್ರಶ್ನೆಗಳು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

' ಸಾವಿರದ ಗಡಿ ದಾಟಿದ ಹಾಯ್ ಪಯಣ ’

ಹಾಯ್ ಬೆಂಗಳೂರು ಕನ್ನಡ ವಾರ ಪತ್ರಿಕೆಯ ಸಾವಿರ ಗಡಿ ಮುಟ್ಟಿದ ಸಂಚಿಕೆ ನನ್ನ ಮುಂದಿದೆ. ಪತ್ರಿಕೆಯ ಈ ಧೀರ್ಘ ಪಯಣ ಅದು ಸಾಗಿ ಬಂದ ದಾರಿಯ ದಾಖಲೆಯ ಒಂದು ಮೈಲಿಗಲ್ಲು. ಪತ್ರಿಕೆ ಯಾವುದೇ ಇರಲಿ ಆ ಪತ್ರಿಕೆಯ ಸಂಪಾದಕ, ಪತ್ರಿಕಾ ಬಳಗ ಮತ್ತು ಅದರ ಓದುಗರ ಪಾಲಿಗೆ ಅದೊಂದು ಅಭೂತಪೂರ್ವ ಕ್ಷಣ. ಎಲ್ಲ ಅಡೆತಡೆ ಮತ್ತು ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ಪತ್ರಿಕೆಯೊಂದನ್ನು ಹುಟ್ಟು ಹಾಕಿ ಯಶಸ್ಸಿನೆಡೆಗೆ ಅದನ್ನು ತೆಗೆದುಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಓದುಗರನ ಮನ ತಲುಪಬೇಕು ಅವರು ಪತ್ರಿಕೆಯನ್ನು ಕೊಂಡೋದುವಂತೆ ಮಾಡಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಕಾಲಾತೀತ ಕಾಲ

ಕಾಲ ಗರ್ಭದಲಿ ಉಹೆಗೆ
ನಿಲುಕದ ಅನೇಕ ರಹಸ್ಯಗಳಿವೆ
ಅದರ ನಿಗೂಢತೆ ಅಪಾರ
ಉಪ್ಪರಿಗೆ ತಿಪ್ಪೆಯಾಗುವುದು
ತಿಪ್ಪೆ ಉಪ್ಪರಿಗೆಯಾಗುವುದು
ಇವೆಲ್ಲ ಜಗನ್ನಿಯಾಮಕನ
ಕಾಲದ ಆಟಗಳು

ಕಾಲ ಬರಿ ಹಸನ್ಮುಖಿ ಮಾತ್ರವಲ್ಲ
ಹಲವು ಸಲ ಕೆರಳುತ್ತದೆ ಕೂಡ
ಬಡವ ಬಲ್ಲಿದ ತತ್ವಜ್ಞಾನಿ ಸಾಧಕ
ಸಾಹಿತಿ ಕಲಾವಿದ ಜನನಾಯಕ
ಜನಸಾಮಾನ್ಯ ಯಾರೇ ಇರಲಿ
ಅದಕೆ ಎಲ್ಲರೂ ಒಂದೇ
ಮುನಿಕಸು ಬಂದರೆ ಎಲ್ಲವನು
ನುಂಗಿ ನೊಣೆದು ಬಿಡುತ್ತದೆ
ಒಲಿದರೆ ಶಿಖರದ ತುತ್ತ ತುದಿಗೆ
ಒಯ್ದು ಕೂರಿಸಿ ಬಿಡುತ್ತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ಗಗನಮುಖಿ ವಿಮಾನಗಳು'

ಗಗನಮುಖಿ ವಿಮಾನಗಳು

ನಾವೆಲ್ಲ
ಗಗನಮುಖಿ ವಿಮಾನಗಳು
ಆದಿ ಅಂತ್ಯಗಳಿಲ್ಲದ
ಅನಂತ ಆಕಾಶವನು
ಅಳೆವ ದಿಮಾಕು ನಮಗೆ

ಆದರೆ
ನಮ್ಮೊಳಗಿನದು
ಸೀಮಿತ ಇಂಧನ
ಅದು ಮುಗಿಯಿತೋ
ಮತ್ತೆ
ವಾಸ್ತವದ ಭೂಮಿಗೆ
ಮರಳಲೇ ಬೇಕು
ಇಲ್ಲದಿರೆ
ದುರಂತ ಕಟ್ಟಿಟ್ಟ ಬುತ್ತಿ

ತಪ್ಪು
ಆಕಾಶದ್ದೂ ಅಲ್ಲ
ಭೂಮಿಯದೂ ಅಲ್ಲ
ನಮ್ಮ ಮಿತಿಯ
ಅರಿವಿಲ್ಲದ ನಮ್ಮದು

***

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

' ಸತ್ತುಹೋದ ಸಂಬಂಧಗಳು '

'ಸತ್ತುಹೋದ ಸಂಬಂಧಗಳು'

ಸತ್ತುಹೋದ ಸಂಬಂಧಗಳ
ಮುಂದೆ
ಅಳುತ ಕೂಡಲಾಗುವುದಿಲ್ಲ
ಏಕೆಂದರೆ ಅಲ್ಲಿ
ಪುನರುಜ್ಜೀವನ ಸಾಧ್ಯವಿಲ್ಲ
ಹೀಗಾಗಿ
ಅವುಗಳು ಸಾಗಿಬಂದ ಪಥವ
ನೆನಪಿಸಿಕೊಂಡು
ಒಂದು ಹೃತ್ಪೂರ್ವಕ ವಿದಾಯ
ಹೇಳಿ ಮುಂದುವರಿಯಬೇಕು
ಏಕೆಂದರೆ ಚಲನೆ
ಕಾಲ ಮತ್ತು ಜಗದ ನಿಯಮ

*

' ಉದಯ ರವಿ'

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚುಟುಕುಗಳು

ಸಂಪಾದನೆ
'ಸಂಪಾದನೆ' ಹಾಗಂದರೇನು?
ದ್ರವ್ಯ ವಿಶ್ವಾಸ ಪ್ರೀತಿ
ಮಾನವೀಯತೆ ಯಾವುದರ ಸಂಪಾದನೆ?
ಇಲ್ಲವೆ ಇದಕೊಂದು
ಬೇರೆಯದೇ ಆದ ಅರ್ಥವಿದೆಯೆ?

ಜೀವನದ ಕೊನೆಯ ಗಳಿಗೆಯಲಿ
ಬಾಳಿದ ಬದುಕಿನ ಖಾತೆ ಕಿರ್ದಿಗಳ
ವಹಿಗಳ ತೆಗೆದು ನೋಡೆ
ಸಂಪಾಧಿಸಿದವುಗಳು
ಬೆರಳೆಣಿಕೆಯ ಕೆಲವಾದರೆ
ಸಂಪಾದಿಸಲಾಗದೆ ಉಳಿದವು ಅನೇಕ
*

ಅಪನಂಬಿಕೆ
ಶತಮಾನಗಳ ಕಾಲದಿಂದಲೂ
ನಾವು ಬರಿ ಅಪನಂಬಿಕೆಯ
ಪಥದಲೇ ಸಾಗಿ ಬಂದಿದ್ದೇವೆ
ನಂಬಿಕೆ ಎನ್ನುವುದು ಬಲು
ಅಪರೂಪದ ಒಂದು ವಸ್ತು
ಎಲ್ಲೋ ಸಾವಿರಕ್ಕೊ ಲಕ್ಷಕ್ಕೋ
ಮಾದರಿಗಾಗಿ ದೊರಕುವಂತಹುದು
*

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗುಪ್ತ ಗಾಮಿನಿ ( ಕವನ )

ತುಂಬು ನೀರಿನ ಕೊಳಕೆ
ತೂತು ಬಿದ್ದಿದೆ
ತಡೆಯ ಕಳಚಿದ ಗಂಗೆ
ಹರಿದಳು
ಅತಳ ವಿತಳ ಪಾತಾಳ
ರಸಾತಳದ ಆಚೆ ಈಚೆ


ಆಳ ಅಗಲ ಉದ್ದ ವಿಸ್ತಾರಗಳ
ಅಳತೆಗೆ ಸಿಕ್ಕದ
ಯಾರಿಗೂ ಸಂಪೂರ್ಣ ದಕ್ಕದ
'ಮೃಗನಯನೆ'
ಹರಿಯುತ್ತ ಬಂದಿದ್ದಾಳೆ
ಅನಾದಿ ಕಾಲದಿಂದ


ದಾಹವಿದ್ದರೆ ಮನಸಿದ್ದರೆ
ಬೊಗಸೆಗೆ ದಕ್ಕುತ್ತಾಳೆ
ಅಮೃತ ಸಿಂಚನ ವೀಯುತ್ತಾಳೆ
ಇಂಗದ ದಾಹವನು
ಹಿಂಗಿಸಿ ತಣಿಸುತ್ತಾಳೆ


ಪಾರ್ಥನ ಶರ ನಮನಕೆ
ಕೋರಿಕೆಗೆ ಕರಗಿದ 'ಗಂಗೆ '
ಸ್ಥಳದಲೆ ಉದ್ಭವಿಸಿ ತಣಿಸಿದ್ದಾಳೆ
ಶರಶಯ್ಯೆಯ ಮೇಲೆ ಮಲಗಿದ
ಕುರು ಕುಲೋತ್ತಮ
ವೃದ್ಧ ಪಿತಾಮಹ ಇಚ್ಛಾಮರಣಿ
ಭೀಷ್ಮನ ದಾಹ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?

ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ, ಅಬಲೆಯಲ್ಲ ಸಬಲೆ ಎಂದು ನಾನೂ ಸೇರಿದಂತೆ ಮಹಿಳೆಯರೆಲ್ಲಾ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದೇವೆ. ಹೆಣ್ಣು ಅಬಲೆಯಿಂದ ಸಬಲೆಯಾಗಿ ಬಡ್ತಿ ಪಡೆದಿದ್ದರೂ ದೌರ್ಜನ್ಯ , ಕಿರುಕುಳಗಳು ಮಾತ್ರ ಅವಳ ನೆರಳಂತೆ ಹಿಂಬಾಲಿಸುತ್ತಿವೆ. ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮಹಿಳೆ ದೌರ್ಜನ್ಯಕ್ಕೊಳಗಾಗುವುದು ತಪ್ಪಿಲ್ಲ. ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು ಎಂದು ಎಂಬ ವರದಿಗಳನ್ನೋದಿದಾಗ ಅಯ್ಯೋ ಪಾಪ ಎಂದು ಎನಿಸುತ್ತದೆ. ಆದರೆ ಇದಕ್ಕೆ ಪರಿಹಾರ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (15 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಪ್ಪನ ಮನದಲ್ಲೊಮ್ಮೆ ಇಣುಕಿ...

ಮಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೊಡ್ಡವರಾಗುವುದೆಂದರೆ....?

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ  ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬ್ಲಾಗ್ ಬರಹ