ಮಲೆನಾಡು

ಮರಳಿ ನೆನಪಿಗೆ..

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ ನನ್ನ ಕೆಲಸದ ರೀತಿ ರಿವಾಜುಗಳನ್ನರಿತ ನನ್ನ ಮ್ಯಾನೇಜರ್ ನನಗೆ ರಜೆ ಅಂತ ಕೊಡದಿದ್ದರೂ, ಇಂಟರ್ನೆಟ್ ನೆಟ್ವರ್ಕ್ ಇರುವಂಥ ಜಾಗದಿಂದ ಕುಳಿತು ಕೆಲಸ ಮಾಡಲು ಅನುಮತಿ ನೀಡಿದ್ದಳು. ಒಂದೇ ವಾರದಲ್ಲಿ ಮೂರು ಮದುವೆ ಇದ್ದ ಕಾರಣ ನಾಲ್ಕು ದಿನಗಳ ಮುಂಚೆಯೇ ನಮ್ಮೂರ ಕಡೆ ಧಾವಿಸಿದ್ದೆ. ಮಾವನ ಮನೆ ಇರುವುದು ತೀರ್ಥಹಳ್ಳಿಯಲ್ಲಿ. ಅಲ್ಲೇ ಕುಳಿತು ಸಂಜೆಯ ನಂತರ ಅಮೇರಿಕ ಕಚೇರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹುರುಳಿಸಾರು+ಸ್ವಲ್ಪ ಬೆಣ್ಣೆ+ಒಂದು ಹಪ್ಪಳ= ಅದ್ಭುತ ರುಚಿ!

ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ  ತೊಂದರೆಯಾಗದಿರಲಿ ಎಂಬುದೇ ಹುರುಳಿ ನೀಡುವ ಉದ್ದೇಶ. ಹಾಗೆ ಹುರುಳಿಯನ್ನು  ಬೇಯಿಸುವಾಗ ಸಿಗುವ ಕಂದು ರಸವೇ ಈ ಹುರುಳಿ ಕಟ್ಟು. ದಿನವಿಡೀ ತಣ್ಣನೆಯ ನೀರಿನಲ್ಲಿರುವ ಎತ್ತುಗಳ ಪಾದ ಮೆದುವಾಗಿರುತ್ತದೆ ಎಂಬ ಕಾರಣಕ್ಕಾಗಿ ಬಿಸಿಯಾಗಿರುವ ಹುರುಳಿಕಟ್ಟನ್ನು ಎತ್ತುಗಳ ಕಾಲಿಗೆ ಹೊಯ್ಯುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಹುರುಳಿಕಟ್ಟು ಸಾರು ಮಾಡುವುದಕ್ಕೆ ಬಳಕೆಯಾಗುತ್ತದೆ.

field_vote: 
Average: 4 (3 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಮಲೆನಾಡು