ಸಂತೋಷ

ಎಲ್ಲಿದೆ ನಮ್ಮೆಲ್ಲರ ಸಂತೋಷ... ?ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು

ಸಂತೋಷ ನಾವಿಲ್ಲದ ದಿನಗಳಲ್ಲಿಲ್ಲ
ನಾವಿರದ ಕಾರ್ಯಗಳಲ್ಲೂ ಇಲ್ಲ
ಅದಿರುವುದು ನಾವಿರುವಲ್ಲಿ ಮಾತ್ರ
ಪ್ರೀತಿಸೆ ಎಲ್ಲವನ್ನ
ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ, ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

ನಿನ್ನೆಯೋ ಮುಗಿದ ಕಥೆ
ನಾಳೆಯ ನೋಡಿದವರ್ಯಾರು
ಇಂದು ಮಾತ್ರವೇ ನಮ್ಮದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೧

ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....?


ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.


ಒಮ್ಮೆ ಒಬ್ಬ ಪತ್ರಕರ್ತರು ಅವರ ಬೇಸಾಯದ ಯಶಸ್ಸಿನ ಹಿಂದಿನ ಕಾರಣ ತಿಳಿಯಲು ಸಂದರ್ಶಿಸಿದಾಗ ಒಂದು ಕೂತುಹಲಕಾರಿ ಅಂಶ ಆ ಪತ್ರಕರ್ತರಿಗೆ ತಿಳಿಯಿತು... ಅದೆನೆಂದರೆ ಈ ರೈತರು ತನ್ನ ಅಕ್ಕ ಪಕ್ಕದ ರೈತರೊಡನೆ ಆ ಬೆಳೆಯ ಉತ್ತಮ ಕಾಳುಗಳನ್ನು ಹಂಚಿಕೊಳ್ಳುತ್ತಿದದ್ದು....!


"ನೀವು ನಿಮ್ಮ ಉತ್ತಮ ಕಾಳುಗಳನ್ನು ಅವರೊಡನೆ ಏನೋ ಹಂಚಿಕೊಳ್ಳುತ್ತಿದ್ದೀರಿ, ಆದರೆ ಅವರು ನಿಮ್ಮ ಪ್ರತಿಸ್ಪರ್ಧಿಗಳಾಗಿ ನಿಮ್ಮೆದುರಿಗೆ ಪ್ರತಿ ವರ್ಷ ನಿಲ್ಲುತ್ತಾರಲ್ಲಾ...! ಅದಕ್ಕೆ ನೀವೇನು ಹೇಳುತ್ತೀರಿ...?" ಎಂದು ಆ ಪತ್ರಕರ್ತರು ಕೇಳಲು, ಇವರು:

field_vote: 
Average: 4.5 (4 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಸಂತೋಷ