ಹಾಗೇ ಸುಮ್ಮನೆ

ಕನ್ನಡಿಗರು ಮರೆತ ಮಹಾನುಭಾವ

ಆಗಸ್ಫ್ಕ್ 12 ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು ನಿಧನರಾದ ದಿನ..ಅಂದು ಯಾವ ವಾಹಿನಿಯಲ್ಲೂ ಅವರ ಬಗ್ಗೆ ಒಂದು ವಿಚಾರವನ್ನೂ ಪ್ರಸ್ತಾಪಿಸಲಿಲ್ಲ..ಸರ್ಕಾರ..ಅದೆಲ್ಲಿದೆಯೋ? ನಮ್ಮ ಕನ್ನಡಿಗರಿಗೇನಾಗಿದೆ..?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಮತ್ತೆ ಬಂದಿದೆ ನಾಟಕ ಚೈತ್ರ!

 ಚಿಗುರು ತುಂಬಿರೆ ಸುತ್ತ ಮುತ್ತಲು

 

ಮುಗುಳು ತುಂಬಿರೆ ಸಾಲುಮರ ಮ-

 

ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ

 

ನಗುವ ತಾರಲು ಮುದವ ತೋರಲು

 

ಸೊಗವ ತೋರುತ ಮನವನೊಮ್ಮೆಲೆ

 

ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!

 

ಚಿತ್ರ ಕೃಪೆ: ಪೂರ್ಣಿಮಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ.
ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಮನ ಸ್ವರ್ಗಾರೋಹಣ

ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್ರಾವಸ್ತಿ, ಕುಶಾವತಿ, ಲಕ್ಷ್ಮಣಾವತಿ, ಮಿಥಿಲೆ ಹೀಗೆ ಹಲವು ಸ್ಥಳಗಳ ಬಗ್ಗೆ ಟ್ವಿಟರಿನಲ್ಲಿ ಒಂದಷ್ಟು ಚಿಲಿಪಿಲಿಗುಟ್ಟಿಯೂ ಆಯ್ತು.

 

ಆಗಲೇ, ಹಿಂದೊಮ್ಮೆ ಇಲ್ಲೇ ಸಂಪದದಲ್ಲೇ ಇನ್ನಾವುದೋ ಬರಹಕ್ಕೆ ಹಾಕಿದ್ದ ರಾಮನ ಸ್ವರ್ಗಾರೋಹಣದ ಬಗ್ಗೆ ಟಿಪ್ಪಣಿಯೊಂದು ನೆನಪಾಗಿ, ಇಲ್ಲಿ ಮತ್ತೆ ಅದನ್ನು ಸ್ವಲ್ಪ ಹಿಗ್ಗಿಸಿ ಹಾಕ್ತಿದೀನಿ.

 

ರಾಮನ ಸ್ವರ್ಗಾರೋಹಣದ ಪ್ರಸಂಗ ಉತ್ತರಕಾಂಡದ ೧೦೦ ನೇ ಅಧ್ಯಾಯದಲ್ಲಿನ ಬರುತ್ತೆ. ಇದೇ ಉತ್ತರ ಕಾಂಡದ ಕೊನೆಯ ಅಧ್ಯಾಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ದೊಡ್ಡವರಾಗುವುದೆಂದರೆ....?

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ  ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು -  ನನ್ನ ಮಾತು ನನ್ನದು - ನನ್ನ ನೋಟ ನನ್ನದು - ನನ್ನ ಧಾಟಿ ನನ್ನದು ಅಂತ ಅಂದ್ಕೊಳೋದಪ್ಪ! ಆದ್ರೆ ಯಾಕೋ ಕೃಷ್ಣನಿಗೆ ಅದರ ಮೇಲೆ ಮನಸ್ಸಿಲ್ಲ ಅನ್ಸತ್ತೆ. ಯಾಕಂದ್ರೆ ಎಂತೆಂತಹವರೋ ಅವನ ಬಗ್ಗೆ ಹಾಡಿಬಿಟ್ಟಿರೋವಾಗ ನನ್ನ ನಾಕು ಸಾಲು ಇದ್ರೇನಂತೆ ಇಲ್ದಿದ್ರೇನಂತೆ ಅಂತಲೇ ಇರಬೇಕು, ಎರಡು ಮೂರು ವರ್ಷದಿಂದ ನೋಡ್ತಿದೀನಿ, ಈ ಗೋಕುಲಾಷ್ಟಮಿ ಬರೋ ಹೊತ್ತಿಗೇ ಇನ್ನೇನೋ ಜರೂರಾದ ಕೆಲಸವೋ ಮತ್ತೊಂದೋ ಅಂಟ್ಕೊಳತ್ತೆ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ತರಹ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

ಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡುಗಿ ಈವರೆಗೆ ಯಾವುದೂ ಸಿಕ್ಕಿಲ್ಲಂತೆ. ಹೆಣ್ಣು ನೋಡೋಕೆ ಹೋಗೋದರಲ್ಲೇ ಇವನು ಆನಂದ ಕಂಡುಕೊಂಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ತಾಳಿ ಕಟ್ಟಲು ಯೋಗ್ಯವಾದ ಹುಡುಗಿ ಬೇಕೂಂತಾ ಇವ ಅಲೆಯದ ಊರಿಲ್ಲ. ಕುಡಿಯದ ಬಾವಿ, ಬೋರ್್ವೆಲ್, ಬಾಟಲಿ ನೀರಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹುಟ್ಟು ಹಬ್ಬದ ದಿನ

ಇವತ್ತು ಏಟಿಎಮ್ ಗೆ ದುಡ್ಡು ತೆಗೆಯಲು ಹೋದರೆ ಕಿಸೆಯಲ್ಲಿ ಎಟಿಎಮ್ ಕಾರ್ಡೇ ಕಾಣಲಿಲ್ಲ. ಎಲ್ಲಿ ಮರೆತಿರುವೆ ಗೊತ್ತಾಗದೆ ಒಂದು ಸಲ ಮನೆಯಲ್ಲೂ ಹುಡುಕಿದ್ದಾಯ್ತು. ಅಲ್ಲೂ ಕಾಣಲಿಲ್ಲ. ನೆನ್ನೆ-ಮೊನ್ನೆ ತಾನೇ ಉಪಯೋಗಿಸಿದ್ದೂ ನೆನಪಿಗೆ ಬಂತು. ಕೂಡಲೆ ಆನ್-ಲೈನ್ ರೆಕಾರ್ಡ್ ನೋಡಿದರೆ, ದೇವರ ದಯ, ಯಾವುದೇ ಅನುಮಾನ ಹುಟ್ಟುವಂತಹ ಎಂಟ್ರೀ ಕಾಣಲಿಲ್ಲ. ಹೇಗೇ ಇರಲಿ, ಒಮ್ಮೆ ಬ್ಯಾಂಕಿಗೆ ಹೋಗಿ ಹೊಸ ಎಟಿಎಮ್ ಕಾರ್ಡ್ ತೆಗೆದುಕೊಳ್ಳೋಣ ಅಂತ ಹೋದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಮನಸ್ಸನ್ನು ಕಾಡಿದ ಆ ನಗು..

ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ ಪುಳಕ. ಆಫೀಸಿನಲ್ಲಿ ನೀನು ಏನೋ ನೆಪ ಮಾಡಿಕೊಂಡು ನನ್ನ ಕ್ಯಾಬಿನ್ ಪಕ್ಕ ಬರುವಾಗ ಇವ ಇಂದು ನನ್ನಲ್ಲಿ ಮಾತಾಡಿಯೇ ಮಾತಾಡುತ್ತಾನೆ ಎಂದು ನಾನು ಅಂದುಕೊಳ್ಳುತ್ತೇನೆ. ಆದ್ರೆ ನೀನು...ಅದೇ ಮುಗುಳ್ನಗು ಕೊಟ್ಟು ಮತ್ತೆ ಮತ್ತೆ ನನ್ನನ್ನು ಚಡಪಡಿಸುವಂತೆ ಮಾಡ್ತಿಯಾ... ನಿಜ ಹೇಳಲಾ? ನಿನ್ನ ಆ ನಗುವಿನಲ್ಲಿ ಅದೇನು ಜಾದೂ ಇದೆಯಂತ ನಂಗೊತ್ತಿಲ್ಲ ಕಣೋ. ನಿನ್ನ ನಗುವಿನ ಮುಂದೆ ನಾನಂತೂ ಕ್ಲೀನ್ ಬೌಲ್ಡ್ ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವ್ಯಾಕೆ ತಪ್ಪು ಮಾಡುತ್ತೇವೆ?

ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ ಮಾಡುತ್ತಾನೆ. ಇಲ್ಲಿ ತಪ್ಪು ಯಾರು ಹೇಗೆ ಮಾಡಿದ್ದಾರೆ ಎಂಬುದು ಪ್ರಶ್ನೆಯಲ್ಲ ಯಾಕಾಗಿ ಆ ತಪ್ಪು ಆಗಿ ಹೋಯಿತು? ಅದನ್ನು ತಿದ್ದುವುದಾದರೂ ಹೇಗೆ ಎಂಬುದು ಚಿಂತಿಸಬೇಕಾದ ವಿಷಯ. ಚಿಕ್ಕವರಿರುವಾಗ ನಾವು ಅದೆಷ್ಟೋ ತಪ್ಪುಗಳನ್ನು ಮಾಡುತ್ತೇವೆ. ಆವಾಗ ನಮ್ಮ ಹೆತ್ತವರು, ಹಿರಿಯರು, ಟೀಚರ್್ಗಳು ಕೆಲವೊಮ್ಮೆ ಗುದ್ದು ನೀಡಿ ಮತ್ತೊಮ್ಮೆ ಮುದ್ದು ಮಾಡಿ ಆ ತಪ್ಪುಗಳನ್ನು ತಿದ್ದಲು ಸಹಕರಿಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (12 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವು ಕನ್ನಡ ಎಷ್ಟು ಕಲ್ತಿದ್ದೀವಿ?


                 ಇದು ಹದುಳ ಇದು ಕುಶಲ
              ಇದು ಕಳಶ ಕುಂಭಗಳ ಮಂಗಳ ಮೇಳ
 
ಈ ರೀತಿಯಾಗಿ, ಪ್ರಾರಂಭವಾಗೋ ಈ ಕವಿತೆಯನ್ನು ಇತ್ತೀಚಿಗೆ ಓದಿದೆ.
’ಹದುಳ’ ಅನ್ನೋದು ಅರ್ಥ ಆಗಲಿಲ್ಲ. ’ಸಂಧರ್ಭಕ್ಕೆ ತಕ್ಕಂತೆ ಹೊಂದಿಸಿ’ ಮಾಡಿದೆನಾದರೂ ಸಮಾಧಾನವಾಗಲಿಲ್ಲ. ಅದೃಷ್ಟವಶಾತ್ ಆ ಸಂಕಲನದ ಮುನ್ನುಡಿಯಲ್ಲಿ ಇದೇ ಕವಿತೆಯ ವಿಷಯ ಬರೋದರಿಂದ ಮತ್ತು ಹದುಳದ ಬಗ್ಗೆ ವಿವರಿಸಿರೋದರಿಂದ ಅರ್ಥ ಆಯ್ತು.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರಾಜ್ಯೋತ್ಸವದ ಹೊತ್ತಿಗೆ ಬಂದ ಒಂದು ಒಳ್ಳೇ ಸುದ್ದಿ

ಕೆಲವು ದಿನಗಳಿಂದ ಮನಸ್ಸಿನ ಒಂದು ಮೂಲೆಯೇ ಖಾಲಿಯಾದಂತಾಗಿತ್ತು. ಸಂಪದದ ಬೀಟಾ ಆವೃತ್ತಿಯನ್ನು ನೋಡಿ ಎಷ್ಟು ಸಂತೋಷ ಆಯ್ತೆಂದರೆ, ಹೇಳೋದಕ್ಕೇ ಆಗೋದಿಲ್ಲ.

ಅದು ಹೇಗೋ ಇಲ್ಲಿರೋ ಕಡೇ ಬ್ಲಾಗ್ ಎಂಟ್ರೀ - ವಸಂತಪುರಿ, ಕ್ಯಾಲಿಫೋರ್ನಿಯ - ದಲ್ಲಿ ಇರೋ ಲಿವರ್ ಮೋರ್ ದೇವಾಲಯಕ್ಕೆ ಇವತ್ತು ಹೋಗಿ ಬರುತ್ತಿರುವ ಹಾಗೇ ಈ ಒಳ್ಳೇ ಸುದ್ದಿಯನ್ನೂ ನೋಡಿ, ಶಮ್ಮಿ ಕಪೂರ್ ತರಹ ಯಾಹೂ....ಅಂತ ಕೂಗಲೇ? ಅನ್ನಿಸ್ತಿದೆ!

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರು ಹೊಸೆದ ಪ್ರೇಮದ ದಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...?

ಹೃದಯ: ಹಾಗೇ ಸುಮ್ಮನೆ ಇದ್ದೇನೆ.

ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ?

ಹೃದಯ: ಏನಿಲ್ಲಾ ಬಿಡು...

ನಾನು: ಹೇಳೇ...

ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ..

ನಾನು: ಹೌದು

ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ..

ನಾನು: ಮತ್ತೆ (?)

ಹೃದಯ: ಪ್ರೇಮಿಗಳು!

ನಾನು: ಹೂಂ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಹಾಗೇ ಸುಮ್ಮನೆ