kannada kavana

ಅನುಭವ

ಇಲ್ಲ
ಬದಲಾಗಿಲ್ಲ
ದಾರಿ
ಗಮ್ಯವೂ
ಬದಲಾಗಿಲ್ಲ
ಇಕ್ಕೆಲಗಳು
ಪಕ್ಕದ
ಜನರು
ಸುತ್ತಲಿನ
ಪರಿಸರ
ಇಲ್ಲವೇ
ಇಲ್ಲ


ಆದರೂ
ಬದಲಾಗಿದ್ದು
ನಿಜ
ದೃಷ್ಟಿ
ಮತ್ತು
....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಅಪ್ಪಯ್ಯತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನು
ಶಾಖವನು ಜತೆಗೇ ಕೂಡಿಸಿದ ಬೇಸಗೆಯ
ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನು
ಸಾಗರದ ವೈಶಾಲ್ಯ ಮತ್ತು ಶಾಂತತೆಯ

ಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ
ಮತ್ತೆ ಕದಡಿದ ಅದನು ಸೇರಿಸುತ ಅದನೂ
ಗರುಡನಾ ಶಕ್ತಿಯನು, ವಯಸ್ಸಿನಾ ಜ್ಞಾನವ,
ಮುಗಿದಿಲ್ಲ  ಉಳಿದಿವೆ ಹಲಕೆಲವು  ಇನ್ನೂ

ಮುಂಜಾವಿನ ವಸಂತದ ಖುಷಿಯನ್ನೂ
ಆ ಸಾಸಿವೆ ಬೀಜದ ನಂಬುಗೆಯನೂ
ಮತ್ತೆ ಅನಂತತೆಯ ತಾಳ್ಮೆಯನ್ನೂ
ಕುಟುಂಬದ ಅಗತ್ಯತೆಯ ಆಳವನೂ

ಎಲ್ಲಾ ಗುಣ ಲಕ್ಷಣಗಳನೆ ಒಂದೆಡೆಗೆ
ಸೇರಿಸುತ ಪರಮಾತ್ಮ ರೂಪಿಸಿದ
ಮೇರು ಕೃತಿ  ಕಳುಹಿಸುತ ನಮ್ಮೆಡೆಗೆ
ಅದಕೆ ಹೆಸರಿಟ್ಟು  "ತಂದೆ" ಯೆಂದ

 

 

 

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಸ್ಪರ್ಶ - ನೋಟ

ಆ ಮಂಜಿನ ಹನಿಯೂ ಕೂಡ ನಾಚಿ ನಕ್ಕಿತ್ತು ನಿನ್ನ ನೋಡಿ
ಅದಕ್ಕೇನು ಮಾಡಿದ್ದೆ ನೀ ಮೋಡಿ

ಆ ಇಬ್ಬನಿಯು ತಾಕಿತ್ತು ನಿನ್ನ ಮೈಯನ್ನ
ಅದು ತೀರಿಸಿತ್ತು ನಿನ್ನ ಸ್ಪರ್ಶಿಸುವ ಹಂಬಲವನ್ನ

ಆ ದಿನ ನಾ ನೋಡಿದ್ದೇ ನಿನ್ನನು
ನೋಡಬೇಕೆಂದೆನಿಸಲಿಲ್ಲ ನಿನ ಬಿಟ್ಟು ಇನ್ಯಾರನು

field_vote: 
Average: 3.9 (7 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಪ್ರಕೃತಿ

ಎತ್ತ ನೋಡಿದರತ್ತ ನಿನದೇ ಚೆಲುವು
ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು

ಪರ್ವತದ ಮೇಲೆ ಮಂಜಿನ ತೋರಣ
ಅದರ ಮೇಲೆ ರವಿಯ ಹೊನ್ನಿನ ಕಿರಣ

ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ
ಆ ಸಪ್ತವರ್ಣಗಳ ನೋಡುವುದೇ ಸಡಗರ

ಆಗಸದಲ್ಲಿ ಕಾರ್ಮೋಡದ ಆರ್ಭಟ
ಇನ್ನೇನು ಶುರುವಾಗಲಿದೆ ಧರೆಯ ಮೇಲೆ ಅದರಾಟ

ಇಳೆಯ ಮೇಲೆ ಮಳೆಯ ನರ್ತನ
ಎಲೆಯ ಮೇಲೆ ಹನಿಯ ಸಿಂಚನ

ಎಲ್ಲೆಲ್ಲೂ ಹಸಿರ ಹೊದಿಕೆ
ಸಾಲುವುದಿಲ್ಲ ಎರಡೂ ನಯನ ಅದಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನನ್ನ ಹೆತ್ತವಳು

ಕಣ್ತೆರೆದೊಡನೆ ತಬ್ಬಿ ಆಶ್ರಯಿಸಿದಳು,
ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು,
ನಗುತ್ತ ಕೇಕೆ ಹಾಕುವಾಗ ನಲಿದವಳು
ನನ್ನ ಹೆತ್ತವಳು.

ತೆವಳುತ್ತಾ ಬರುವಾಗ ’ಬಾ’ ಎಂದು ಕೈ ಚಾಚಿದವಳು,
ತೊದಲುತ್ತಾ ನುಡಿದಾಗ ತಿದ್ದಿ ಮಾತು ಕಲಿಸಿದವಳು,
ಉಣ್ಣಲು ಅತ್ತಾಗ ಚಂದದಾ ಕಥೆಕಟ್ಟಿ ಹಸಿವ ತೊರೆಸಿದವಳು,
ನನ್ನ ಹೆತ್ತವಳು

ಕಲಿಕೆಗೆ ಸ್ಪೂರ್ತಿಯಾಗಿ ಕಲಿಯಲು ಪ್ರೇರೇಪಿಸಿದವಳು
ಕಲಿತೊಡನೆ ಮೆಚ್ಚಿ ಬಿರುದುಗಳ ಮಳೆ ಸುರಿದವಳು
ಕುಣಿಯೆಂದು ಹೇಳಿ ಕುಣಿಯದಿದ್ದಾಗ ತಾನೂ ಕುಣಿದವಳು
ನನ್ನ ಹೆತ್ತವಳು

ನನ್ಹೆತ್ತು ಹೊತ್ತು,ಹೊತ್ತೊತ್ತಿಗೆ ಆರೋಗ್ಯ ಮಾಡಿದವಳು
ಎಂದೂ ಬಾರದ ಜ್ವರಬಂದಾಗ ಕಂಬನಿಯಿಟ್ಟು ಮದ್ದು ನೀಡಿದವಳು
ನೂರೂರ ಚಂದಮಾಡಿ ನೀನೆ ಚಂದವೆಂದು ಹೊಗಳಿದವಳು
ನನ್ನ ಹೆತ್ತವಳು

field_vote: 
Average: 3.4 (8 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಏಕಾಂಗಿ......ಆ ದಿನ ನೀನಿದ್ದೆ ಬಾಳಿನಲಿ
ಮುಂಜಾನೆಯ ಎಳೆ ಕಿರಣದಂತೆ,
ಹುಣ್ಣಿಮೆ ಬೆಳದಿಂಗಳಿನಂತೆ,
ನೆತ್ತಿಗೆ ನೆರಳಿನಂತೆ,
ಹಣೆಗೆ ಸಿಂಧೂರದಂತೆ.....

ಮರುಭೂಮಿಯಂತಿದ್ದ ಈ ಬಾಳಿನಲಿ
ಕಲ್ಪನೆಯ ನೆಪದಲ್ಲಿ
ನೀನಿದ್ದೆ ನನ್ನೊಡನೆ,
ನನ್ನಂತೆ,ಆ ಮುಂಗಾರಿನಂತೆ ,
ಚಿಗುರೊಡೆದ ಮರದಂತೆ,
ಅದರಲ್ಲಿನ ಹಕ್ಕಿಯಂತೆ...

ನನ್ನ ಮನದ ಏರಿಳಿತವ ತಿಳಿದು ನೀನಿದ್ದೆ,ಅಂದು,
ಮಲ್ಲಿಗೆಯಂತೆ ,ಮುದನೀಡುವ ಸಂಗೀತದಂತೆ,
ಜಟಿಹಿಡಿದ ಮಳೆಯಂತೆ...

ಆದರೆ,,,,
ಇಂದು ,
ಕಾಣೆಯಾಗಿರುವೆ ಮಾಯಾಜಿಂಕೆಯಂತೆ.
ಬೇಡದ ಆಸೆಗಳ ಮನದಲ್ಲಿ ಬಿತ್ತಿ,
ಅದು ಚಿಗುರೊಡೆವ ಮುನ್ನ
ಸನಿಹ ತೊರೆದು ಸರಿದೆ ಸಹಿಸಲಾರದಷ್ಟು ದೂರಕ್ಕೆ.

ಇಂದು ..
ನೀನಿಲ್ಲದೆ, ನೀನಿಲ್ಲದೆ,
ನನ್ನ ಬಾಳು,

field_vote: 
Average: 4.4 (5 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಕಾಲದ ನದಿಯ ಹರಿವು

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

field_vote: 
Average: 3.8 (20 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to kannada kavana