ಸಹೋದರಿ

4

ಸಹನೆಯಲಿ ನೀನಾದೆ ಎಲ್ಲರಿಗೂ ಮಾದರಿ
ನೋವ ನುಂಗಿ ಪ್ರೀತಿ ಹಂಚುವ ಉದಾರಿ
ತೋರಿದೆ ನಮಗೆಲ್ಲ ಬಾಳಲಿ ಸರಳತೆಯ ದಾರಿ
ನೂರು ಕಾಲ ನಗುತಾ ಬಾಳು ಎನ್ನ ಸಹೋದರಿ

ನಾ ಎಲ್ಲಿ ಸೋಲುವೆನೋ ಎಂಬ ಆತಂಕ ನಿನ್ನ ಕಣ್ಣಲ್ಲಿ
ಕಂಡಾಗ ಇಮ್ಮಡಿಸಿದೆ ನಿನ್ನ ಮೇಲಿನ ಗೌರವ ನನ್ನಲ್ಲಿ
ನನ್ನ ಬುದ್ಧಿವಾದದ ನುಡಿ ಗುಂಯ್ ಗುಟ್ಟಿ ಕಿವಿಯಲ್ಲಿ
ಹುರಿದುಂಬಿಸಿ ಗರಿಗೆದರಿಸಿದೆ ಧೈರ್ಯ ಮನದಲ್ಲಿ

ಅಮ್ಮನಾ ಪ್ರೀತಿಯಾ ಅನುಕರಣೆ ಮಾಡುವವಳು
ಅಕ್ಕರೆಯ ಹಂಚುವಲ್ಲಿ ಅವಳನ್ನೇ ಮೀರಿಸುವವಳು
ಈ ಸಂಬಂಧ ಬೆಸೆದ ದೇವರಿಗೆ ನನ್ನ ನಮನಗಳು
ಅಕ್ಕ ನಿನಗಿದೋ ಜನುಮ ದಿನದ ಶುಭಾಶಯಗಳು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.