ಸು೦ದರಿಯ ಕರೆ

4

ಕದ್ದು ಕದ್ದು ಕರೆಯುತಿಹಳು
ಎನ್ನ ಮುದ್ದು ಸು೦ದರಿ||
ಮೂಗ ಮುರಿದು ಕಾಲು ತೀಡಿ
ಕಣ್ಣ ರೆಪ್ಪೆಇ೦ದ ಸನ್ನೆ ಮಾಡಿ
ಕದ್ದು ಕದ್ದು ಕರೆಯುತಿಹಳು
ಎನ್ನ ಮುದ್ದು ಸು೦ದರಿ ||
 
ಯಾರೋ ನಮ್ಮ ನೋಡಿಯಾರು
ಏನು ಎ೦ದು ಕೇಳಿಯಾರೋ
ಎ೦ಬ ಭಯದ ನಡುವೆಯೂ
ಕದ್ದು ಕದ್ದು ಕರೆಯುತಿಹಳು
ಎನ್ನ ಮುದ್ದು ಸು೦ದರಿ||
 
ಬ೦ದರೇನು ಮಾಡಿಯಾನೋ
ಎ೦ದು ನೆನೆದು ನಾಚಿ 
ಮುದುಡಿದರೂನು
ಕದ್ದು ಕದ್ದು ಕರೆಯುತಿಹಳು
ಎನ್ನ ಮುದ್ದು ಸು೦ದರಿ||
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.