ಸೌಪರ್ಣಿಕಾ

4.5

ಬಯಸಿದಾತ! ಎಲ್ಲರಂತೆ
ತಂಪು ನೆರಳ ಕೊಡುವ ಚಪ್ಪರ
ಹಗಲಿರುಳು ಬೆಂಬತ್ತಿದ ಕನಸಿಗೆ
ತನ್ನ ತಾ ಅಡವಿಟ್ಟಿದ್ದ
 
ಸವಿಭಾವಗಳಿಗೆ ಲಯ ಬದ್ದದಿ
ಜೊತೆಗೂಡಿ ಹೆಜ್ಜೆಹಾಕಿದಳು ಅವನೊಡತಿ
ಅಳಿಲು ಸೇವೆ ತಮ್ಮದು ಇರಲೆಂದು
ನೀರೆರೆದು ತಂಪು ಮಾಡಿದ
ಹುಡುಗಾಟದ ಆ ಕನಸಿನ(ಮನೆ) ಮಕ್ಕಳು
 
ಕಷ್ಟಸುಖದಿ ಒಬ್ಬರನ್ನೊಬ್ಬರರಿತು
ಪುಡಿಗಾಸನ್ನ ಜೋಪಾನ ಮಾಡಿ
ನಿರ್ಮಿಸಿದ ಕನಸಿನ ಗೋಪುರ
ಸೌಪರ್ಣಿಕಾ!!!
 
ನೆಲದಾಳಕೆ ಬೇರೂರಿ
ಹೊಸ ಚಿಗುರೊಡೆದಿದೆ
ಕಣ್ಣಿಗೆ ಹೊಸ ಹೊಳಪು ಮೂಡಿದೆ
ಮನೆ- ಮನದಿ ಸಂತಸ ನೆಲೆನಿಂತಿದೆ
 
ಸ್ಪೊಟಿಸಿದೆ ಮಿಂಚೊಂದು ಫಳ್ಳನೆ ಹೊಡೆದು
ಹೀಗೇಕೆ ಕುಸಿದು ಬಿದ್ದಿದೆ ಕನಸು
ಗಟ್ಟಿಯಾಗಿ ನೆಲೆವೂರುವ ವೇಳೆಗೆ
ಯಾವ ದಾಳಿಗೆ? ಯಾರ ಕಣ್ಣಿಗೆ?
 
ಜೀವಕ್ಕಿಲ್ಲಿ ಯಾವ ನೆಲೆ?
ದು ಃಖ ಅದುಮಿ ಅಡಗಿಸಿ
ನೋವನ್ನ ಮರೆಮಾಚಿ
ತನ್ನ ಕನಸನ್ನ ಇನ್ಯಾರಿಗೋ ಅರ್ಪಿಸಿ
 
ತನ್ನದೆ ಕುಡಿಯ ಭರವಸೆಯೊಂದಿಗೆ
ಹೊಸ ಕನಸ ಬೆರೆಸಿ
ತನ್ನ ಕನಸ ಅಲ್ಲೆ ತೊರೆದು, ಬೇರೆಡೆ
ನೆಲವೂರಲು ಅಲೆದಾಡಿದ ಅಲೆಮಾರಿ!!!!
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.