ಸ್ವತಂತ್ರ ಭಾರತ....

4

                    ಸ್ವತಂತ್ರ ಭಾರತ....
 
ಸಾಗರದಾಚೆಯ ಭಾರತದ ಅಪಾರ ಐಸಿರಿಗೆ ಬೆರಗಾದರು
ವ್ಯಾಪಾರಕ್ಕಾಗಿ ಬಂದ ಪರಕೀಯರು 
ಹಿಂದೂಸ್ತಾನದ ರಾಜರನ್ನು ಕುಹಕದಿಂದ ಗೆದ್ದರು
ಸಿರಿ ಸಂಪತ್ತು ಸಂಸ್ಕೃತಿಯನ್ನು ದೋಚಿದರು
ಎಲ್ಲೆಡೆ ವ್ಯಾಪಿಸಿ ಒಡೆಯರಾದರು 
ಪರಂಗಿ ಪಡೆಯ ಅಡಿಯಾಳಗದೆ ಭಾರತೀಯರು ರೊಚ್ಚಿಗೆದ್ದರು 
ಕೆಚ್ಚಿನ ದೇಶ ಪ್ರೇಮಿಗಳು ಫಿರಂಗಿಗೆ ತುತ್ತಾದರು
ಅಸಹಾಯಕತೆಯಲಿ ನಿಟ್ಟುಸಿರು ಬಿಟ್ಟರು ಹಲವರು
ರೋಷವಿರುವರು ಉಗ್ರಗಾಮಿಗಳಾಗಿ ಗುಡುಗಿದರು
ಶಾಂತಿ ಅಹಿಂಸೆಯ ನಂಬುವರು ಮಂದಗಾಮಿಗಳಾದರು
ಭಾರತೀಯರ ದೇಶಪ್ರೇಮ ಜಾಗೃತಿಗೆ ವಿದೇಶಿಯರು ನಡುಗಿದರು
ರವಿ ಮುಳುಗದ ನಾಡೆಂದು ಕೊಚ್ಚಿ ಕೊಂಡವರು 
ಬಾಯಿ ಮುಚ್ಚಿಕೊಂಡು ತಮ್ಮ ದೇಶದೆಡೆಗೆ ಓಡಿದರು.
ಭಾರತೀಯ ನೆಲದಲಿ ತಿರಂಗಾ ಗರಿಮೆಯಲಿ ರಾರಾಜಿಸಿತು 
ಕೇಸರಿಯು ಶೌರ್ಯ ಬಿಳಿಯು ಶಾಂತಿಯನು 
ಹಸಿರು ಸಮೃದ್ಧಿಯನು ಚಕ್ರವು ಪ್ರಗತಿಯನು 
ಬಿಂಬಿಸಿ ಸ್ವತಂತ್ರವಾಗಿ ಹಿರಿಮೆಯಲಿ ಹಾರಾಡಿತು 
—-Rukku 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.