ಹಾಗೇ ಸುಮ್ಮನೇ

5

1.ಆತ್ಮಸಾಕ್ಷಿಯಾಗಿ ಹೇಳ್ತೀನಿ, ನಂಗೆ ದೇವರ ಮೇಲೆ ನಂಬಿಕೆ ಇಲ್ಲಾ, ಆದರೆ ದೇವರ ಕಲ್ಪನೆ ಬಗ್ಗೆ ಅತೀವ ನಂಬಿಕೆಯಿದೆ.

2.ಒಂದು ದಿನ ಸ್ನಾನ ಮಾಡ್ತಿದ್ದೆ, ತುಂಬಾ ಚಳಿ ಆಯ್ತು, ಆಮೇಲೆ ಸ್ವೆಟರ್ ಹಾಕ್ಕೊಂಡು ಸ್ನಾನ ಮಾಡಿದೆ.

3.ನೀರು ಹಿಡಿದ ನಿನ್ನ ಕೈಗಳ ಹಾಗೆ, ಈ ಜೀವದ ಹೃದಯ ಬಡಿಯುತಿದೆ ನಿನಗಾಗಿ, ಸದಾ ಆ ಮೊದಲ ನೋಟದೊಳಗಿನ ಚುಂಬನಕೆ, ಆ ಅಧರ ಚುಂಬನದ ಸಿಹಿ ಮತ್ತೊಮ್ಮೆ  ನಿನಗಾಗಿ ಬೇಕೆಂಬುದು ಈ ಹೈದನ ಹೃದಯದ ಸವಿನಯ ಮನವಿ.

4.ನೋಟವೂ ನನದೂ ಅಲ್ಲ, ನಿನದೂ ಅಲ್ಲ.........ಎಲ್ಲಾ ಆ ಕ್ಷಣಗಳದೂ .......ಏನಂತೀಯಾ.....! ನಿಜಾನಾ.......ಹೇಳು ನೀ ನನಗಾಗಿ ಬಂದವಳೇ, ಈ ದಿನದಲಿ ಆ ದಿನವೂ ಲೀನವಾಗಲಿ ಏನಂತೀಯಾ.....!

5.ಅಕ್ಷರಗಳ ಹುಡುಕಾಡದ ಗೋಜಿನಲಿ ಸಾಕ್ಷರನೆಂಬುದ ಮರೆತು ಟೀ ಎಂದು ನೀರು ಕುಡಿದೆ.

6.ದಿನವಿಡಿಯ ಕತ್ತಲ ನೋಡಿ ಎಚ್ಚರನಾದೆ, ಮತ್ತೇ ರಾತ್ರಿಯಾಯಿತೆಂದು ಮಲಗಿದೆ.

7.ನನ್ನ ರಟ್ಟೆ ನಮ್ಮೂರ ಕೆರೆ ಕಟ್ಟೆ ತರ, ಬೇಕಾದ್ರೆ ಮುಟ್ಟಿ ನೋಡಿ ತಟ್ಟಿ ನೋಡಿ ಆ ಕಲ್ಲಿನಷ್ಟೆ ಗಟ್ಟಿ.

8.ಡಬ್ಬಾ ಹೃದಯದಲಿ ಏನೂ ಇಲ್ಲಾ, ಕಣ್ಣಿನಲೇ ಎಲ್ಲಾ ಹೇಳುವೆನು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ.

9.ನೋಡಪ್ಪ ದೊಡ್ಡಪ್ಪ ನಾನು ಕುರಿ ಅಂತವನು, ನೆಗಡಿ ಬಂದ್ರೆ ಕುರಿ ಒರೆಸಿಕ್ಕೊಳ್ಳಕ್ಕಾಗಲ್ಲ ನಾನು ಒರೆಸ್ಕೋತಿನಿ ಅಷ್ಟೇ ವ್ಯತ್ಯಾಸ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):