ಹೆಮ್ಮೆ

ಹೆಮ್ಮೆ

ಕವನ
ಸೂರ್ಯನ ಕೃಪೆಗೆ ಭುವಿಯು ತಾ ಬೆಳಕಾದಂತೇ ತಾಯಿಯ ಮಾತಿಗೆ ಮಗುವು ತಾ ನಗುವಂತೆ ಕಾರ್ಮೋಡವ ಕಂಡು ನವಿಲು ತಾ ಕುಣಿವಂತೆ ಕನ್ನಡ ಎಂದೊಡೆ ಮೈಮನ ನಲಿವುದು ಕರ್ನಾಟಕವೆಂದೊಡೆ ಗತವೈಭವ ಕಾಣ್ವುದು. ಕನ್ನಡಿಗನೆನಲ್ಲೂ ಮನವದು ಬೀಗುತ್ತಾ ನಲಿವುದು ಕಣ ಕಣ ಕನ್ನಡ ಎನ್ನುತ್ತಾ ಮಿಡಿವುದು ಹೃದಯದ ಬಡಿತವೂ ಕನ್ನಡ ಎನುವುದು ಕನ್ನಡ ಎಂದಿಗೂ ಉಸಿರಲ್ಲಿ ಉಸಿರಾಗಿರುವುದು ಕೂಲಿಯೇ ಇರಲಿ,ಮಾಲಿಯೇ ಆಗಲಿ ಕನ್ನಡಭಿಮಾನವು ಎದೆಯಲ್ಲಿ ಬೆಳಗುತಿಹುದು